2023ಕ್ಕೆ ಏಡ್ಸ್ ಮುಕ್ತ ಮೈಸೂರು ಜಿಲ್ಲೆ ಗುರಿ
ಮೈಸೂರು

2023ಕ್ಕೆ ಏಡ್ಸ್ ಮುಕ್ತ ಮೈಸೂರು ಜಿಲ್ಲೆ ಗುರಿ

December 3, 2019

ಮೈಸೂರು,ಡಿ.2(ಆರ್‍ಕೆಬಿ)- ಮೈಸೂರು ಜಿಲ್ಲೆಯಲ್ಲಿ 2019-20ರಲ್ಲಿ 548 ಹೆಚ್‍ಐವಿ /ಏಡ್ಸ್ ಪ್ರಕರಣಗಳು ಪತ್ತೆಯಾಗಿದ್ದು, 2023ರ ವೇಳೆಗೆ ಏಡ್ಸ್ ಮುಕ್ತ ಮೈಸೂರು ಜಿಲ್ಲೆ ಯಾಗಿಸಲು ಪಣ ತೊಟ್ಟಿರುವುದಾಗಿ ಮೈಸೂರು ಜಿಲ್ಲಾ ಏಡ್ಸ್ ನಿಯಂತ್ರಣಾ ಧಿಕಾರಿ ಡಾ.ಬಿ.ರವಿ ಇಂದಿಲ್ಲಿ ತಿಳಿಸಿದರು.

ಮೈಸೂರಿನಲ್ಲಿ ಫಾರೂಖಿಯಾ ಫಾರ್ಮಸಿ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರ, ಐಎಂಎ ಮೈಸೂರು ಇನ್ನಿತರ ಸಂಸ್ಥೆ ಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. 2005ರಿಂದ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮ ಆರಂಭಿ ಸಿದ್ದು, 2005ರಿಂದ ಇಲ್ಲಿಯವರೆಗೆ 15811 ಏಡ್ಸ್ ಪ್ರಕರಣಗಳು ಕಂಡು ಬಂದಿದ್ದು, ಅವ ರೆಲ್ಲರಿಗೂ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. 2019-20ರಲ್ಲಿ ಪತ್ತೆಯಾದ 548 ಪ್ರಕ ರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ 3 ಕಡೆಗಳಲ್ಲಿ ಅಂದರೆ ಕೆ.ಆರ್.ಆಸ್ಪತ್ರೆ, ಜೆಎಸ್‍ಎಸ್ ಆಸ್ಪತ್ರೆ ಮತ್ತು ಆಶಾಕಿರಣ ಆಸ್ಪತ್ರೆಗಳಲ್ಲಿರುವ ಎಆರ್‍ಟಿ ಘಟಕಗಳಲ್ಲಿ ಉಚಿತವಾಗಿ ಹೆಚ್‍ಐವಿ/ಏಡ್ಸ್ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳ ಜನರ ಅನುಕೂಲಕ್ಕಾಗಿ 10 ಕಡೆಗಳಲ್ಲಿ (ನಂಜನಗೂಡು, ಹುಣಸೂರು, ತಿ.ನರಸೀ ಪುರ, ಪಿರಿಯಾಪಟ್ಟಣ, ಕೆ.ಆರ್.ನಗರ, ಹೆಚ್.ಡಿ.ಕೋಟೆ, ಬನ್ನೂರು, ತಲಕಾಡು, ಹುಲ್ಲಹಳ್ಳಿ ಆಸ್ಪತ್ರೆಗಳಲ್ಲಿ ಹಾಗೂ ಸರಗೂರು ವಿವೇಕಾನಂದ ಮೂವ್‍ಮೆಂಟ್) ಸಂಪರ್ಕ ಎಆರ್‍ಟಿ ಘಟಕಗಳಲ್ಲಿಯೂ ಚಿಕಿತ್ಸೆ ನೀಡ ಲಾಗುತ್ತಿದೆ. ಜನರು ಮುಕ್ತ ಹಾಗೂ ಉಚಿತ ವಾಗಿ ಆಪ್ತ ಸಮಾಲೋಚನೆಗೆ ಒಳಗಾಗಿ ಪರೀಕ್ಷೆ ಮಾಡಿಸಿಕೊಳ್ಳಬಹುದಾಗಿದೆ. 304 ರೆಡ್ ರಿಬ್ಬನ್ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ. ಏಡ್ಸ್ ನಿಯಂತ್ರಣಕ್ಕಾಗಿ ಆನಂದಜ್ಯೋತಿ ನೆಟ್‍ವರ್ಕಿಂಗ್ ಸೇರಿದಂತೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳು ಶ್ರಮಿಸುತ್ತಿವೆ. ಒಟ್ಟಾರೆ 2023ರ ವೇಳೆಗೆ ಮೈಸೂರು ಜಿಲ್ಲೆಯನ್ನು ಏಡ್ಸ್ ಮುಕ್ತ ಜಿಲ್ಲೆಯಾಗಿಸಲು ಪಣ ತೊಟ್ಟಿದ್ದೇವೆ. ಇದರ ಯಶಸ್ಸಿಗೆ ಸಾರ್ವಜನಿಕರ ಸಂಪೂರ್ಣ ಸಹಕಾರ ಅಗತ್ಯ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆದ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಪಿ.ದೇವಮಾನೆ ಮಾತ ನಾಡಿ, ಇಂದು ಜನರ ಧಾವಂತದ ಬದುಕು ಅವರನ್ನು ಔಷಧಿ, ಮಾತ್ರೆಗಳತ್ತ ಕೊಂಡೊ ಯ್ಯುತ್ತಿದೆ. ಸ್ವಲ್ಪ ಸಮಾಧಾನ, ನೆಮ್ಮದಿ ಹಾಗೂ ನೆರೆಹೊರೆಯವರೊಂದಿಗೆ ಸ್ನೇಹ ಭಾವದಿಂದ ಇದ್ದರೆ, ಔಷಧಿ, ಮಾತ್ರೆಗಳಿಂದ ದೂರ ಉಳಿದು ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ಫಾರೂಖಿಯ ಫಾರ್ಮಸಿ ಕಾಲೇಜಿನ ಪ್ರಾಂಶು ಪಾಲ ಡಾ.ಮೊಹಮ್ಮದ್ ಸಲಾಹುದ್ದೀನ್ ಅಧ್ಯ ಕ್ಷತೆ ವಹಿಸಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ವಿಭಾಗೀಯ ಉಪ ನಿರ್ದೇ ಶಕ ಡಾ.ಹೆಚ್.ರಾಮಚಂದ್ರ, ಸಹ ನಿರ್ದೇ ಶಕಿ ಡಾ.ಬಿ.ಎಸ್.ಪುಷ್ಪಲತಾ, ಜೆಎಸ್‍ಎಸ್ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಎಂ.ಪ್ರಮೋದಕುಮಾರ್, ಐಎಂಎ ರಾಜ್ಯ ಉಪಾಧ್ಯಕ್ಷ ಡಾ.ಸುರೇಶ್‍ರುದ್ರಪ್ಪ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿರಾಜ್ ಅಹಮದ್, ಡಾ.ಸ್ವಾಮಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ್ ಉಪಸ್ಥಿತರಿದ್ದರು.

Translate »