ಮೈಸೂರಲ್ಲಿ ಶಾಲಾ ಮಕ್ಕಳ ಸಾಗಿಸುವ ವಾಹನ ಚಾಲಕರ ಪ್ರತಿಭಟನೆ
ಮೈಸೂರು

ಮೈಸೂರಲ್ಲಿ ಶಾಲಾ ಮಕ್ಕಳ ಸಾಗಿಸುವ ವಾಹನ ಚಾಲಕರ ಪ್ರತಿಭಟನೆ

June 27, 2019

ಮೈಸೂರು: ನಿಗದಿಗಿಂತ ಹೆಚ್ಚು ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳ ವಿರುದ್ಧ ತಪಾಸಣೆ ಮಾಡುತ್ತಿರುವ ಸಂಚಾರ ಪೊಲೀಸರ ಕ್ರಮ ಖಂಡಿಸಿ 500ಕ್ಕೂ ಹೆಚ್ಚು ಚಾಲಕರು ಇಂದು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿಯ ಓವಲ್ ಮೈದಾನದಲ್ಲಿ ಪ್ರತಿಭಟನೆ ನಡೆಸಿದರು.

ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅಪಘಾತಗಳು ಹಾಗೂ ಸಾವು-ನೋವುಗಳನ್ನು ನಿಯಂತ್ರಿಸಲು ಸಂಚಾರ ಪೊಲೀಸರು ಕಳೆದ ಒಂದು ವಾರ ದಿಂದ ಮೈಸೂರು ನಗರದಾದ್ಯಂತ ಕಾರ್ಯಾ ಚರಣೆ ನಡೆಸಿ ಸಾಮಥ್ರ್ಯಕ್ಕಿಂತ ಹೆಚ್ಚಿನ ಸಂಖ್ಯೆ ಯಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಆಟೋ ಹಾಗೂ ಮಾರುತಿ ಓಮ್ನಿ ವ್ಯಾನ್ ಗಳ ವಿರುದ್ಧ ಪ್ರಕರಣ ದಾಖಲಿಸುತ್ತಿರು ವುದರಿಂದ ಕೆರಳಿರುವ ವಾಹನಗಳ ಚಾಲಕರು ಮತ್ತು ಮಾಲೀಕರು ಪ್ರತಿರೋಧ ವ್ಯಕ್ತಪಡಿ ಸಿದರು. ಮೈಸೂರು ನಗರ ಶಾಲಾ ವಾಹನ ಗಳ ಚಾಲಕರು ಮತ್ತು ಮಾಲೀಕರ ಅಭ್ಯುದಯ ಸಹಕಾರ ಸಂಘದ ಅಧ್ಯಕ್ಷ ಲಕ್ಷ್ಮೀ ನಾರಾಯಣ ನೇತೃತ್ವದಲ್ಲಿ ಓವಲ್ ಮೈದಾನದಲ್ಲಿ ಜಮಾಯಿಸಿದ ಚಾಲಕರು, ಶಾಲಾ ಮಕ್ಕಳನ್ನು ಕರೆದೊಯ್ದು ಜೀವನ ನಡೆಸುತ್ತಿರುವ ನಮಗೆ ತಪಾಸಣೆ ಹೆಸರಲ್ಲಿ ಪೊಲೀಸರು ತೊಂದರೆ ನೀಡುತ್ತಿದ್ದಾರೆ. ನಿರುದ್ಯೋಗಿಗಳಾದ ನಮಗೆ ಬೇರೆ ಕಸುಬು ಗೊತ್ತಿರದ ಕಾರಣ ಸಾಲ ಮಾಡಿ ವಾಹನ ಖರೀದಿಸಿ ಈ ವೃತ್ತಿ ಮಾಡುತ್ತಿದ್ದೇವೆ ಎಂದು ಅವರು ತಮ್ಮ ಅಳಲು ತೋಡಿಕೊಂಡರು.

ನಿಯಮದಂತೆ ನಿಗದಿತ ಸಂಖ್ಯೆಯ ಮಕ್ಕಳನ್ನು ಕರೆದೊಯ್ದರೆ ವಾಹನದ ಖರ್ಚನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ ಹಾಗೂ ಅಷ್ಟೊಂದು ದುಬಾರಿ ಶುಲ್ಕವನ್ನು ಪೋಷಕರು ಕೊಡಲು ನಿರಾಕರಿಸು ತ್ತಾರೆ. ಆಟೋದಲ್ಲಿ ಕನಿಷ್ಟ 8 ಮಕ್ಕಳನ್ನು ಕರೆದೊಯ್ಯುವುದು ಅನಿವಾರ್ಯ ವಾಗಿದೆ ಎಂದು ಚಾಲಕರು ತಿಳಿಸಿದರು. ಶಾಲೆಗಳಿಗೆ ಸಮಯಕ್ಕೆ ಸರಿಯಾಗಿ ಸುರಕ್ಷತೆಯಿಂದ ಮಕ್ಕಳನ್ನು ಕರೆದೊಯ್ದು ಮನೆಗೆ ಬಿಡುತ್ತಿದ್ದೇವೆ. ನಮ್ಮಿಂದ ಬೇರೆ ಯಾರಿಗೂ ತೊಂದರೆ ಆಗುವುದಿಲ್ಲ. ವಾಹನಗಳ ದಾಖಲಾತಿ, ಇನ್‍ಷೂರೆನ್ಸ್, ಡಿಎಲ್ ಎಲ್ಲವನ್ನೂ ಇರಿಸಿಕೊಂಡು ಕಾರ್ಯನಿರ್ವಹಿಸು ತ್ತಿರುವ ನಮಗೆ ಕೇಸ್ ಹಾಕಿ ಡಿಎಲ್ ರದ್ದು ಮಾಡುವುದಾಗಿ ಸಂಚಾರ ಪೊಲೀಸರು ಹೇಳುತ್ತಿರುವುದರಿಂದ ನಮಗೆ ತೊಂದರೆಯಾಗಿದೆ ಎಂದೂ ಪ್ರತಿಭಟನಾ ನಿರತರು ಹೇಳುತ್ತಿದ್ದರು. ವೈಟ್ ಬೋರ್ಡ್ ಅನ್ನು ಯಲ್ಲೋ ಬೋರ್ಡ್‍ಗೆ ಪರಿವರ್ತಿಸದೇ ಶುಲ್ಕ ಪಡೆದು ಮಕ್ಕಳನ್ನು ಶಾಲೆಗಳಿಗೆ ಕರೆದೊಯ್ಯುತ್ತಿರುವ ಮಾರುತಿ ಓಮ್ನಿ ವ್ಯಾನ್ ಮಾಲೀಕರು, 15ಕ್ಕಿಂತಲೂ ಹೆಚ್ಚು ಮಕ್ಕಳನ್ನು ಕರೆದೊಯ್ಯುತ್ತಿದ್ದು, ಅವರ ಬ್ಯಾಗುಗಳನ್ನು ಸ್ಥಳವಿಲ್ಲದಿದ್ದರೂ ಬೇಕಾಬಿಟ್ಟಿ ತುಂಬಿಕೊಂಡು ಹೋಗುತ್ತಿರುವುದರಿಂದ ಚಾಲಕರ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸುತ್ತದೆ ಎಂಬ ಕಾರಣಕ್ಕೆ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ. ಆಟೋದಲ್ಲಿ 8 ಹಾಗೂ ವ್ಯಾನುಗಳಲ್ಲಿ 12 ಮಕ್ಕಳನ್ನು ಕರೆದೊಯ್ಯಲು ಅನುಮತಿ ನೀಡಬೇಕು. ಅನಗತ್ಯವಾಗಿ ತಪಾಸಣೆ ಮಾಡಿ ಪ್ರಕರಣ ದಾಖಲಿಸುವ ಕ್ರಮವನ್ನು ಕೈಬಿಡ ಬೇಕೆಂದು ಚಾಲಕರು ಆಗ್ರಹಿಸಿದರು. ನಂತರ ನಜರ್‍ಬಾದ್‍ನಲ್ಲಿರುವ ಪೊಲೀಸ್ ಆಯಕ್ತರ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಸಭೆ ಆಟೋ ಚಾಲಕರ ಸಂಘದ ಕೆಲ ಪದಾಧಿಕಾರಿಗಳು ಪ್ರತಿಭಟನಾ ಸ್ಥಳದಿಂದ ತೆರಳಿದರು.

Translate »