ಆಟೋಗಳಲ್ಲಿ 5 ಶಾಲಾ ಮಕ್ಕಳಿಗೆ ಮಾತ್ರ ಅವಕಾಶ
ಮೈಸೂರು

ಆಟೋಗಳಲ್ಲಿ 5 ಶಾಲಾ ಮಕ್ಕಳಿಗೆ ಮಾತ್ರ ಅವಕಾಶ

June 27, 2019

ಮೈಸೂರು: ಮಕ್ಕಳನ್ನು ಶಾಲೆಗಳಿಗೆ ಕರೆದೊಯ್ಯುವ ಆಟೋರಿಕ್ಷಾ ಮತ್ತು ವ್ಯಾನ್‍ಗಳ ಚಾಲ ಕರು ಸುಪ್ರೀಂ ಕೋರ್ಟ್ ಮಾರ್ಗಸೂಚಿಯನ್ನು ಪಾಲಿಸುವ ಮೂಲಕ ಮಕ್ಕಳನ್ನು ಸುರಕ್ಷಿತ ವಾಗಿ ಕರೆದೊಯ್ಯಬೇಕು. 5ಕ್ಕಿಂತ ಹೆಚ್ಚು ಮಕ್ಕಳನ್ನು ಆಟೋಗಳಲ್ಲಿ ಕರೆದೊಯ್ಯುವಂತಿಲ್ಲ. ನಿಗದಿಗಿಂತ ಹೆಚ್ಚಿನ ಮಕ್ಕಳನ್ನು ಕರೆದೊಯ್ದು ಕಾನೂನು ಉಲ್ಲಂಘಿಸುವ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ, ದಂಡದ ಜೊತೆಗೆ ಚಾಲಕರ ಚಾಲನಾ ಪರವಾನಗಿ ಪತ್ರವನ್ನು ಅಮಾನತುಗೊಳಿಸಲಾಗುವುದು ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಆಟೋ ಚಾಲಕರಿಗೆ ಎಚ್ಚರಿಸಿದರು.

ಮೈಸೂರು ನಗರ ಪೊಲೀಸ್ ಆಯು ಕ್ತರ ಕಚೇರಿಯಲ್ಲಿ ಬುಧವಾರ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಆಟೋರಿಕ್ಷಾ ಮತ್ತು ವ್ಯಾನ್ ಚಾಲಕರ ಸಭೆಯಲ್ಲಿ ಮಾತನಾಡಿದ ಅವರು, ಶಾಲಾ ಮಕ್ಕಳ ಹಿತದೃಷ್ಟಿಯಿಂದ ಎಲ್ಲರೂ ಕಡ್ಡಾಯವಾಗಿ ಕಾನೂನು ಪಾಲಿಸಬೇಕು. ಮುಗ್ಧ ಶಾಲಾ ಮಕ್ಕಳ ಸುರಕ್ಷತೆ ನಿಮ್ಮ ಹೊಣೆಯಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು. ಸರ್ಕಾರದ ಅಧಿಸೂಚನೆ ನಿಯಮ-6(4)ರ ಪ್ರಕಾರ ಆಟೋರಿಕ್ಷಾಗಳಲ್ಲಿ ವಯಸ್ಕರನ್ನು ಕರೆದೊಯ್ಯುವ ನಿಗಧಿತ ಸಂಖ್ಯೆಗೆ ಒಂದೂವರೆ ಪಟ್ಟು ಶಾಲಾ ಮಕ್ಕಳನ್ನು ಕರೆದೊಯ್ಯಲು ಮಾತ್ರ ಅವಕಾಶವಿದೆ. ಅಂದರೆ ಆಟೋರಿಕ್ಷಾಗಳಲ್ಲಿ 3+1 ಕರೆದೊ ಯ್ಯಲು ಮಿತಿ ಇದ್ದು, 5 ಶಾಲಾ ಮಕ್ಕಳನ್ನು (12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು) ಕರೆದೊಯ್ಯಲು ಅವಕಾಶವಿದೆ ಎಂದರು. ಈ ವೇಳೆ ಚಾಲಕರು 6 ಮಕ್ಕಳನ್ನು ಕರೆದೊಯ್ಯಲು ಅವಕಾಶ ನೀಡುವಂತೆ ಮಾಡಿದ ಮನವಿಯನ್ನು ಆಯುಕ್ತರು ತಿರಸ್ಕರಿಸಿದರು.

ಶಾಲಾ ಮಕ್ಕಳು ಆಟೋರಿಕ್ಷಾಗಳಲ್ಲಿರುವ ಆಸನದಲ್ಲಿಯೇ ಆಸೀನರಾಗಿ ರಬೇಕು. ಕಂಬಿಗಳ ಮೇಲೆ ಕೂರಿಸಬಾರದು. ಶಾಲಾ ಬ್ಯಾಗ್‍ಗಳನ್ನು ಹೊರ ಚಾಚುವಂತೆ ಇಡಬಾರದು. ಚಾಲಕರು ಕೇವಲ ತೋರಿಕೆಗೆ ಖಾಕಿ ಶರ್ಟ್ ಧರಿಸಿದೆ, ಕಡ್ಡಾಯವಾಗಿ ನಿಗದಿತ ಖಾಕಿ ಪ್ಯಾಂಟ್, ಶರ್ಟ್ ಸಮವಸ್ತ್ರ ಧರಿಸಿರಬೇಕು. ಶಾಲಾ ಮಕ್ಕಳ ಮುಗ್ಧ ಮನಸ್ಸಿಗೆ ಸೂಕ್ತ ರೀತಿಯಲ್ಲಿ ವರ್ತಿಸಬೇಕು. ಕಡ್ಡಾಯವಾಗಿ ಚಾಲನಾ ಪತ್ರ, ಜೊತೆಗೆ ವಾಹನದ ದಾಖಲಾತಿಗಳಾದ ಆರ್‍ಸಿ, ಎಫ್‍ಸಿ, ರಹದಾರಿ, ವಾಹನ ವಿಮೆ, ಮಾಲಿನ್ಯ ಪ್ರಮಾಣ ಪತ್ರ ಇತ್ಯಾದಿಗಳನ್ನು ಜೊತೆಯಲ್ಲಿ ಇಟ್ಟುಕೊಡಿರಬೇಕು. ಸುಸ್ಥಿತಿಯಲ್ಲಿರುವ ಪ್ರಥಮ ಚಿಕಿತ್ಸಾ ಕಿಟ್ ಇಟ್ಟಿರಬೇಕು ಎಂದು ಚಾಲಕರಿಗೆ ಕಾನೂನು ಪಾಠ ಹೇಳಿದರು. ಶಾಲಾ ಮಕ್ಕಳನ್ನು ಕರೆದೊಯ್ಯುವ ಸಮಯದಲ್ಲಿ ಆಟೋರಿಕ್ಷಾ ವಾಹನಗಳಿಗೆ `ಆನ್ ಸ್ಕೂಲ್ ಡ್ಯೂಟಿ’ ಎಂದು ಹಿಂಭಾಗದಲ್ಲಿ ಕಡ್ಡಾಯ ವಾಗಿ ನಮೂದಿಸಬೇಕು. ಎಲ್‍ಪಿಜಿ ಕಿಟ್ ಅಳವಡಿಸಿದ ವಾಹನಗಳು ಕಡ್ಡಾಯವಾಗಿ ಆರ್‍ಟಿಓ ಪ್ರಮಾಣಪತ್ರ ಪಡೆದಿರಬೇಕು. ವಾಹನ ತರಾರಿಕಾ ಕಂಪನಿ ನೀಡಿರುವ ಸೀಟಿಂಗ್ ಸಾಮಥ್ರ್ಯವನ್ನು ಬದಲಾವಣೆ ಮಾಡುವಂತಿಲ್ಲ. ನೊಂದಣಿಯಾಗಿ 15 ವರ್ಷ ಮಿರಿದ ವಾಹನಗಳನ್ನು ಶಾಲಾ ಮಕ್ಕಳ ಕರೆದೊಯ್ಯಲು ಉಪಯೋಗಿಸುವಂತಿಲ್ಲ. ಅಲ್ಲದೆ ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳಲ್ಲಿ ಶಾಲಾ ಮಕ್ಕಳ ಹೆಸರು, ಶಾಲೆ, ತರಗತಿ, ಮನೆಯ ವಿಳಾಸ, ಫೋನ್ ನಂಬರ್, ರಕ್ತದ ಗುಂಪು ಇನ್ನಿತರ ವಿವರಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ತಿಳುವಳಿಕೆ ನೀಡಿದರು.

ಮಾನ್ಯತೆ ಪಡೆದ ವಿಮಾ ಕಂಪನಿಗಳ ಬಗ್ಗೆ ಮಾಹಿತಿ ತಿಳಿದು ವಿಮೆ ಪಡೆಯಬೇಕು. ಅನಧಿಕೃತ ಅಥವಾ ಗುರುತಿಸಲಾಗದ ಕಂಪನಿಗಳಿಂದ ವಿಮೆ ಪಡೆಯದಂತೆಯೂ ತಿಳುವಳಿಕೆ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಆಟೋ ಮತ್ತು ವ್ಯಾನ್ ಚಾಲಕರ ಸಂಘದ ಪದಾಧಿಕಾರಿಗಳು ಸೇರಿದಂತೆ ನೂರಾರು ಚಾಲಕರು ಸಭೆಯಲ್ಲಿ ಭಾಗವಹಿಸಿದ್ದರು.

Translate »