ಹಗ್ಗ ಜಗ್ಗಾಟದಲ್ಲಿ ಹಾನಗಲ್ ಶೆಟ್ಟಳ್ಳಿ ತಂಡಕ್ಕೆ ಪ್ರಶಸ್ತಿ
ಕೊಡಗು

ಹಗ್ಗ ಜಗ್ಗಾಟದಲ್ಲಿ ಹಾನಗಲ್ ಶೆಟ್ಟಳ್ಳಿ ತಂಡಕ್ಕೆ ಪ್ರಶಸ್ತಿ

July 24, 2018

ಸೋಮವಾರಪೇಟೆ:  ತಾಲೂಕು ಒಕ್ಕಲಿಗರ ಯುವ ವೇದಿಕೆ ವತಿಯಿಂದ ನಡೆದ ತಾಕೇರಿಯಲ್ಲಿ ನಡೆದ 5ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟದ ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಹಾನಗಲ್ ಶೆಟ್ಟಳ್ಳಿ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಅರೆಯೂರು ಈಶ್ವರಿ ಮಹಿಳಾ ತಂಡ ದ್ವಿತೀಯ ಸ್ಥಾನ ಪಡೆಯಿತು. ಥ್ರೋಬಾಲ್‍ನಲ್ಲಿ ತಾಕೇರಿ ಮಲ್ಲಾ ಜಿರ ಪ್ರಥಮ, ಪ್ರಕೃತಿ ಯುವತಿ ಮಂಡಳಿ ಕಿರಗಂದೂರು ದ್ವಿತೀಯ, ಪುರುಷರ ವಾಲಿಬಾಲ್ ಪಂದ್ಯದಲ್ಲಿ ತಾಕೇರಿ(ಪಥಮ), ತಾಕೇರಿ ಯಂಗ್‍ಸ್ಟಾರ್(ಬಿ) ದ್ವಿತೀಯ, ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಅಬ್ಬೂರುಕಟ್ಟೆ ಒಕ್ಕಲಿಗರ ತಂಡ ಪ್ರಥಮ ಸ್ಥಾನ ಪಡೆಯಿತು. ತಾಕೇರಿಯ ತಂಡ ದ್ವಿತೀಯ ಸ್ಥಾನ ಪಡೆಯಿತು. ಬಾಲಕರ ಓಟದ ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಕ್ರಮವಾಗಿ ವಿಶ್ವಾಸ್, ಅವಿನಾಶ್ ಮತ್ತು ಸುಜನ್ ಪ್ರಥಮ ಸ್ಥಾನ ಗಳಿಸಿದರು. ಸುರತ್, ಪ್ರತೀಕ್ ಹಾಗೂ ಸಂಜಯ್ ದ್ವಿತೀಯ ಸ್ಥಾನ ಗಳಿಸಿದರು. ಬಾಲಕಿಯರ ವಿವಿಧ ವಿಭಾಗ ಗಳಲ್ಲಿ ಸಿಂಚನ, ಶಿಲ್ಪ ಪ್ರಥಮ ಸ್ಥಾನ ಪಡೆದರೆ, ಪ್ರಾರ್ಥನ ಮತ್ತು ಮೌಲ್ಯ ದ್ವಿತೀಯ ಸ್ಥಾನ ಪಡೆದರು. ಬಾಲಕರ ಹಗ್ಗ ಜಗ್ಗಾಟ ಸ್ಪರ್ಧೆ ಯಲ್ಲಿ ತಾಕೇರಿ ಬಾಯ್ಸ್ ಪ್ರಥಮ, ಕೂರ್ಗ್ ಬಾಯ್ಸ್ ದ್ವಿತೀಯ ಪಡೆದರು. ಮಹಿಳೆ ಯರ ಓಟದ ಸ್ಪರ್ಧೆಯಲ್ಲಿ ಶೃತಿವರ್ಧನ್ ಪ್ರಥಮ ಸ್ಥಾನ, ಕಿರಗಂದೂರು ಗ್ರಾಮದ ಪ್ರಮೀಳ ದ್ವಿತೀಯ ಸ್ಥಾನ ಪಡೆದರು. ಪತ್ನಿಯನ್ನು ಹೊತ್ತು ಓಡುವ ಸ್ಪರ್ಧೆಯಲ್ಲಿ ತಾಕೇರಿ ಧುರೀಣ್ ಪ್ರಥಮ, ಪ್ರವೀಣ್ ದ್ವಿತೀಯ ಸ್ಥಾನ ಪಡೆದರು.

ಈ ಸಂದರ್ಭ ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ಬಿ.ಜೆ.ದೀಪಕ್, ಉದ್ಯಮಿ ಗಳಾದ ಹರಪಳ್ಳಿ ರವೀಂದ್ರ, ಕೊತ್ನಳ್ಳಿ ಅರುಣ್‍ಕುಮಾರ್, ಗಿರೀಶ್ ಮಲ್ಲಪ್ಪ, ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಗ್ರಾಮಾಧ್ಯಕ್ಷ ಎಸ್.ಪಿ.ಪೊನ್ನಪ್ಪ ಬಹು ಮಾನ ವಿತರಿಸಿದರು. ಯುವ ವೇದಿಕೆಯ ಹೆಚ್.ಕೆ.ಪ್ರಸಿ, ಮಸಗೋಡು ದಯಾ ನಂದ್, ಪ್ರಥ್ವಿ, ಚಕ್ರವರ್ತಿ ಸುರೇಶ್, ಎಸ್.ಕೆ. ರಘು, ಎಂ.ಪಿ.ರವಿ,ನತೀಶ್ ಮಂದಣ್ಣ ಮತ್ತಿತರರು ಕಾರ್ಯನಿರ್ವಹಿಸಿದರು.

Translate »