ಕಾಡಂಚಿನ ಗ್ರಾಮದ ಬಡಗಲಪುರ ಸರ್ಕಾರಿ ಶಾಲೆಗೆ ಬ್ಯಾಂಡ್‍ಸೆಟ್ ಡ್ರಮ್
ಮೈಸೂರು

ಕಾಡಂಚಿನ ಗ್ರಾಮದ ಬಡಗಲಪುರ ಸರ್ಕಾರಿ ಶಾಲೆಗೆ ಬ್ಯಾಂಡ್‍ಸೆಟ್ ಡ್ರಮ್

August 13, 2018

ಮೈಸೂರು:  ಮೈಸೂರಿನ ರೋಟರಿ ಮಿಡ್‍ಟೌನ್ ಸಮುದಾಯ ಸೇವೆ ವಿಭಾಗದ ವತಿಯಿಂದ ಕಾಡಂಚಿನ ಗ್ರಾಮದ ಸರ್ಕಾರಿ ಶಾಲೆಯೊಂದಕ್ಕೆ ಬ್ಯಾಂಡ್‍ಸೆಟ್ ಡ್ರಮ್ ಹಾಗೂ ಇತರೆ ಪರಿಕರಗಳನ್ನು ಕೊಡುಗೆ ನೀಡಲಾಗಿದೆ. ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಕಾಡಂಚಿನ ಗ್ರಾಮವಾದ ಬಡಗಲಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಂದಾಜು 10 ಸಾವಿರ ರೂ.ಮೌಲ್ಯದ ಬ್ಯಾಂಡ್‍ಸೆಟ್‍ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ರೋಟರಿ ಮಿಡ್‍ಟೌನ್ ಸಮುದಾಯ ಸೇವೆ ವಿಭಾಗದ ನಿರ್ದೇ ಶಕರಾದ ರೋ.ಅಯ್ಯಣ್ಣ, ರೋ.ವೀರೇಶ್ ಅವರು, ಬಡಗಲಪುರ ಶಾಲಾ ಶಿಕ್ಷಕರಾದ ರೋಹಿತ್, ಬೀರೇಶ್ ಅವರಿಗೆ ಬ್ಯಾಂಡ್‍ಸೆಟ್ ಗಳನ್ನು ಹಸ್ತಾಂತರಿಸಿದ್ದಾರೆ. ಅಲ್ಲದೆ, ಮುಂದೆಯೂ ಸರ್ಕಾರಿ ಶಾಲಾ ಮಕ್ಕಳಿಗೆ ಕ್ರೀಡಾ ಚಟುವಟಿಕೆಗಳು ಉತ್ತಮಗೊಳ್ಳಲು ಸ್ಪೋಟ್ರ್ಸ್ ಸೆಟ್‍ಗಳನ್ನು ಕೊಡು ವುದಾಗಿ ಭರವಸೆ ನೀಡಿದ್ದಾರೆ.

Translate »