ಜಿಲ್ಲಾದ್ಯಂತ ಬಸವ ಜಯಂತಿ ಸಂಭ್ರಮ
ಹಾಸನ

ಜಿಲ್ಲಾದ್ಯಂತ ಬಸವ ಜಯಂತಿ ಸಂಭ್ರಮ

May 7, 2019

ವಿವಿಧ ಸಂಘ-ಸಂಸ್ಥೆಗಳಿಂದ ಕಾಯಕಯೋಗಿಗೆ ನಮನ, ಬಸವೇಶ್ವರರ ಪುತ್ಥಳಿಗೆ ಪುಷ್ಪಾರ್ಚನೆ
ಹಾಸನ: ಜಿಲ್ಲಾದ್ಯಂತ ಮಂಗಳ ವಾರ ಬಸವ ಜಯಂತಿಯನ್ನು ಶ್ರದ್ಧೆ, ಗೌರವದಿಂದ ಆಚರಿಸಲಾಯಿತು. ಕಾಯಕ ಯೋಗಿ, ಸಮಾನತೆಯ ಹರಿಕಾರನ ಆದರ್ಶ, ತತ್ತ್ವಗಳನ್ನು ಜೀವನದಲ್ಲಿ ಅಳ ವಡಿಸಿಕೊಳ್ಳಲು ತಿಳಿಸಲಾಯಿತು.

ಹಾಸನ, ಆಲೂರು, ಅರಸೀಕೆರೆ, ಬೇಲೂರು, ಸಕಲೇಶಪುರ, ಅರಕಲಗೂಡು, ಶ್ರವಣ ಬೆಳಗೊಳ, ರಾಮನಾಥಪುರ, ಹೊಳೆನರ ಸೀಪುರ, ಚನ್ನರಾಯಪಟ್ಟಣ ತಾಲೂಕು ಗಳ ವ್ಯಾಪ್ತಿಯಲ್ಲಿ ವಿವಿಧ ಸಂಘ-ಸಂಸ್ಥೆ ಗಳು ಹಾಗೂ ಜಿಲ್ಲಾ-ತಾಲೂಕು ಆಡಳಿತ ದಿಂದ ಬಸವೇಶ್ವರರ 886ನೇ ಜಯಂತಿ ಯನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಿ ಕಾಯಕ ಯೋಗಿಯ ಭಾವಚಿತ್ರ ಹಾಗೂ ಪುತ್ಥಳಿಗೆ ಪುಷ್ಪಾರ್ಚನೆ ನಡೆಸಲಾಯಿತು.

ಬೇಲೂರು ವರದಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ತಾಲೂಕು ಆಡಳಿತ ಹಾಗೂ ವೀರಶೈವ ಮಹಾಸಭಾದಿಂದ ಬಸವ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಬಸವಣ್ಣ ಅವರ ಭಾವಚಿತ್ರಕ್ಕೆ ಶಾಸಕ ಕೆ.ಎಸ್. ಲಿಂಗೇಶ್ ಪುಷ್ಪನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಜಾತಿಯ ಸಂಕೋಲೆಯಿಂದ ನರಳುತ್ತಿದ್ದವರಿಗೆ ನವ ಚೇತನ ಎಂಬಂತೆ ಬಸವಣ್ಣ ನೂತನ ಧರ್ಮ ಸ್ಥಾಪಿಸಿ ಭಕ್ತಿಯ ಮಾರ್ಗ ತೋರಿಸಿ ದರು. ವಚನ ಸಾಹಿತ್ಯಕ್ಕೆ ತಳಪಾಯ ಹಾಕಿ ದರು. ವಚನಗಳ ಮೂಲಕವೇ ಜನರನ್ನು ಬೆಳಕಿನೆಡೆಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದರು ಎಂದು ಬಣ್ಣಿಸಿದರು.

ವೀರಶೈವ ಮಹಾಸಭಾದ ಅಧÀ್ಯಕ್ಷ ರವಿ ಕುಮಾರ್ ಮಾತನಾಡಿ, ಸಮಾಜದಲ್ಲಿ ಬೇರೂರಿದ್ದ ಅಸಮಾನತೆಯ ಬೇರನ್ನು ಕಿತ್ತೆಸೆದು ಸಾಮಾಜಿಕ ನ್ಯಾಯ ಕೊಡಿಸಲು ಬದುಕನ್ನು ಅರ್ಪಿಸಿಕೊಂಡು ವಿಶ್ವಕೋಶ ದಂತಿರುವ ಬಸವೇಶ್ವರರ ಜಯಂತಿ ಕೇವಲ ಉತ್ಸವಗಳಿಗೆ ಸೀಮಿತವಾಗದೇ ತತ್ವಗಳ ಅನುಸರಣೆ ಮಾಡಬೇಕು. ಬಹು ದೊಡ್ಡ ವ್ಯಕ್ತಿತ್ವ ಹೊಂದಿದ್ದ ಬಸವಣ್ಣ ಪ್ರತಿ ಯೊಬ್ಬರಿಗೂ ಸ್ವಾಭಿಮಾನ ಮತ್ತು ಘನತೆ ಯಿಂದ ಬದುಕುವುದನ್ನು ಕಲಿಸಿಕೊಟ್ಟ ವರು ಎಂದರು.

ಕಾರ್ಯಕ್ರಮದಲ್ಲಿ ವೀರಶೈವ ಮುಖಂಡ ರಾದ ಚೇತನ್‍ಕುಮಾರ್, ವಿರೂಪಾಕ್ಷ, ವಿಜಯಲಕ್ಷ್ಮಿ, ವಕೀಲ ನಿಂಗರಾಜು, ಶೋಭಾ, ಗಣೇಶ್, ತಾಲೂಕು ಪಂಚಾಯಿತಿ ಅಧ್ಯಕ್ಷ ರಂಗೇಗೌಡ ಸೇರಿದಂತೆ ಸಮಾಜ ಬಾಂಧವರು ಇದ್ದರು.

ಸಕಲೇಶಪುರ ವರದಿ: ಆಧ್ಯಾತ್ಮಿಕ ಚಿಂತನೆ ಗಳನ್ನು ಅಳವಡಿಸಿಕೊಂಡಾಗ ಮಾತ್ರ ಬದು ಕಿಗೆ ಅರ್ಥ ಬರಲಿದೆ ಎಂದು ಕಲ್ಮಠದ ಶ್ರೀಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಳ್ಳ ಲಾಗಿದ್ದ 886ನೇ ಬಸವ ಜಯಂತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಅಧ್ಯಾತ್ಮ ರಹಿತವಾದ ಬದುಕು ಪ್ರಾಣಿಗಳಿಗಿಂತ ಭಿನ್ನವಲ್ಲ ಎಂದರು.

ಪ್ರಸ್ತುತ ಆರ್ಥಿಕವಾಗಿ ಶ್ರೀಮಂತರಾಗು ತ್ತಿರುವ ಜನರು ಆಂತರಿಕವಾಗಿ ಬರಿ ದಾಗುತ್ತಿದ್ದಾರೆ. ಯುವ ಪೀಳಿಗೆಯನ್ನು ಧರ್ಮದತ್ತ ಸೆಳೆಯುವ ಕೆಲಸವಾಗ ಬೇಕಿದೆ. ಧರ್ಮದ ಸಾರವಿಲ್ಲದೆ ಬದುಕಿಲ್ಲ ಎಂಬುದನ್ನು ಅವರಿಗೆ ತಿಳಿಸಬೇಕಿದೆ ಎಂದು ನುಡಿದರು.

ಧರ್ಮಗುರು ಇಬ್ರಾಹಿಂ ಮುಸ್ಲಿಯರ್, ಹಾಸನ ಎವಿಕೆ ಕಾಲೇಜಿನ ಪ್ರಾಂಶುಪಾಲ ಯತೀಶ್ವರ್ ಮಾತನಾಡಿದರು. ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ಕಲ್ಲಹಳ್ಳಿ ಬಸವರಾಜು, ಕಾರ್ಯದರ್ಶಿ ಮೂಗಲಿ ಧರ್ಮಣ್ಣ, ಅಕ್ಕಮಹಾದೇವಿ ಸಂಘದ ಅಧ್ಯಕ್ಷೆ ರೇಖಾ ಸುರೇಶ್, ಗುರುವೇಗೌಡ ಕಲ್ಯಾಣ ಮಂಟಪ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಡಿ.ಬಸವಣ್ಣ, ಯತೀಶ್ ಇತರರಿದ್ದರು.

ರಾಮನಾಥಪುರ ವರದಿ: 12ನೇ ಶತ ಮಾನದ ಶ್ರೇಷ್ಠ ವಚನಕಾರ ಜಗಜ್ಯೋತಿ ಬಸವಣ್ಣ ಅವರು ವಚನಗಳ ಮೂಲಕವೇ ಸಾಮಾಜಿಕ ನ್ಯಾಯ, ಸಮಾನತೆ, ಸಹ ಜೀವನದ ಸೊಬಗು, ಕಾಯಕ ತತ್ವ ಮುಂತಾದ ಮೌಲ್ಯಗಳನ್ನು ಸಾರಿದರು ಎಂದು ಶಾಸಕ ಡಾ.ಎ.ಟಿ.ರಾಮಸ್ವಾಮಿ ಹೇಳಿದರು.

ಸಮೀಪದ ದೊಡ್ಡಮಗ್ಗೆ ಹೋಬಳಿ ನಿಲುವಾಗಿಲು ಗ್ರಾಮದಲ್ಲಿ ಮಂಗಳವಾರ ಅಕ್ಷಯ ತೃತೀಯ ಹಾಗೂ ಬಸವೇಶ್ವರ ಜಯಂತಿ ಹಬ್ಬದ ಪ್ರಯುಕ್ತ ಅರಣ್ಯ ಇಲಾಖೆಯಿಂದ ರಸ್ತೆ ಬದಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಯವಿಲ್ಲದ ಧರ್ಮ ಯಾವುದಯ್ಯ, ದಯ ಬೇಕು ಸಕಲ ಪ್ರಾಣಿಗಳಲ್ಲಿ ದಯವೇ ಧರ್ಮದ ಮೂಲವಯ್ಯ, ಎನ್ನುವ ಬಸವಣ್ಣನವರು ಎಲ್ಲಾ ಧರ್ಮ ಗಳ ಮೂಲ ದ್ರವ್ಯ ದಯೆ ಎಂದು ಸ್ಪಷ್ಟ ಪಡಿಸಿದರು. ಇಂತಹ ಅಸಂಖ್ಯಾತ ವಚನಗಳು ಇಂದಿಗೂ ಶ್ರೇಷ್ಠತೆಯ ಸಾರದಿಂದಾಗಿ ಪ್ರಸ್ತುತವಾಗಿವೆ ಎಂದರು.

ಈ ಸಂದರ್ಭದಲ್ಲಿ ಕೆಸವತ್ತೂರು ಮಠ ಶ್ರೀಬಸವರಾಜೇಂದ್ರ ಸ್ವಾಮೀಜಿ, ಶಿರದನ ಹಳ್ಳಿ ಮಠ ಶ್ರೀಸಿದ್ದಲಿಂಗ ಸ್ವಾಮೀಜಿ, ಸಮಾಜ ಸೇವಕ ದೊಡ್ಡಮಗ್ಗೆ ರಂಗಸ್ವಾಮಿ, ಮುಖಂಡರಾದ ಮಹಾಸಭಾ ಅಧ್ಯಕ್ಷ ರವಿ ಕುಮಾರ್, ಗೋವಿಂದೇಗೌಡ, ಈರೇಗೌಡ, ಕೃಷ್ಣ, ದಿನೇಶ್, ರಾಜಣ್ಣ, ಪ್ರಸಾದ್, ವಲಯಾ ರಣ್ಯಾಧಿಕಾರಿ ವಿನಯ್ ಚಂದ್ರ, ಉಪ ವಲಯಾಧಿಕಾರಿ ರಘು ಮತ್ತಿತರರಿದ್ದರು.

Translate »