ಹರ್ಡೀಕರ್‍ರ ತತ್ವಾದರ್ಶ ಪಾಲಿಸಿ
ಹಾಸನ

ಹರ್ಡೀಕರ್‍ರ ತತ್ವಾದರ್ಶ ಪಾಲಿಸಿ

May 7, 2019

ಬೇಲೂರು: ದೇಶದ ಸ್ವಾತಂತ್ರ್ಯದಲ್ಲಿ ಸಂಘಟನೆಯ ಶಿಸ್ತು, ಸಂಯಮ, ಬದ್ಧತೆಗಳಂತಹ ಗುಣಗಳನ್ನು ಬೆಳೆಸುವಲ್ಲಿ ನಾ.ಸು.ಹರ್ಡಿಕರ್ ಅವರ ಪಾತ್ರ ಮಹತ್ವದಾಗಿದ್ದು, ಅವರ ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಸಾಗಿ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸೈಯದ್ ತೌಫಿಕ್ ಸಲಹೆ ನೀಡಿದರು.

ನಾ.ಸು.ಹರ್ಡಿಕರ್ ಅವರ 130ನೇ ಜನ್ಮದಿನಾಚರಣೆ ಅಂಗವಾಗಿ ಪಟ್ಟಣದ ಹರ್ಡೀಕರ್ ವೃತ್ತದ ಬಳಿ ನಡೆದ ನಡೆದ ಕಾರ್ಯಕ್ರಮದಲ್ಲಿ ಹರ್ಡಿಕರ್ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಬಾಲ್ಯದಿಂದಲೂ ದೇಶಪ್ರೇಮ, ತ್ಯಾಗಗಳಂತಹ ಗುಣ ಮೈಗೂಡಿಸಿಕೊಂಡಿದ್ದ ಹರ್ಡಿಕರ್ ಅವರು, ಭಾರತದ ಸೇವಾದಳವನ್ನು ಕಟ್ಟಿ ಯುವ ಶಕ್ತಿಯನ್ನು ಜಾಗೃತಿಗೊಳಿಸಿದರು. ದೇಶಕ್ಕಾಗಿ ಹೋರಾಡುವಂತಹ ಸದ್ಗುಣಗಳನ್ನು ಬೆಳೆಸಿದರು ಎಂದರು. ನಾ.ಸು.ಹರ್ಡಿಕರ್ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಇದರಿಂದ ಭಾರತವು ಜಗತ್ತಿನಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ಹೇಳಿದರು.

ಸೇವಾದಳ ಹೋರಾಟಗಾರ ಮತ್ತು ಸಾಹಿತಿಗಳಾದ ಬೇಲೂರು ಕೃಷ್ಣಮೂರ್ತಿ ಮಾತನಾಡಿ, ಹರ್ಡಿಕರ್ ಅವರ ಜನ್ಮದಿನದ ಸಂದರ್ಭದಲ್ಲಿ ಎಲ್ಲರೂ ಅವರ ಧೆÉ್ಯಯೋದ್ದೇಶ ಹಾಗೂ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು. ಆಗÀ ಮಾತ್ರ ಅವರ ಜನ್ಮ ದಿನಾಚರಣೆಗೆ ಅರ್ಥ ಬರುತ್ತದೆ. ಹರ್ಡೀಕರ್ ಅವರ ಸ್ವಾತಂತ್ರ್ಯ ಹೋರಾಟ ಅವರ ದೇಶಪ್ರೇಮ ಕುರಿತು ಶಾಲಾ ಕಾಲೇಜುಗಳಲ್ಲಿ ಬೋಧಿಸುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಸೇವಾದಳ ಅಧÀ್ಯಕ್ಷ ಕರದಾಳು ಮಂಜಪ್ಪ, ಹಿರಿಯ ಹೋರಾಟಗಾರ ಶಿವಣ್ಣ, ಹಾಗೂ ಜಿಲ್ಲಾ ಸೇವಾದಳ ಸಂಚಾಲಕಿ ರಾಣಿ ಮತ್ತು ಶಾಲೆಯ ವಿದ್ಯಾರ್ಥಿಗಳು ಇದ್ದರು.

Translate »