ಬೇಲೂರು: ಸಂತ ಸೇವಾಲಾಲ್, ಶಿವಾಜಿ, ಸರ್ವಜ್ಞ ಜಯಂತಿ ಆಚರಣೆ
ಹಾಸನ

ಬೇಲೂರು: ಸಂತ ಸೇವಾಲಾಲ್, ಶಿವಾಜಿ, ಸರ್ವಜ್ಞ ಜಯಂತಿ ಆಚರಣೆ

February 20, 2019

ಬೇಲೂರು: ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳ ವಾರ ತಾಲೂಕು ಆಡಳಿತದಿಂದ ಸಂತ ಸೇವಾಲಾಲ್, ಛತ್ರಪತಿ ಶಿವಾಜಿ ಹಾಗೂ ಸಂತಕವಿ ಸರ್ವಜ್ಞ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಸಮಾಜ ದಲ್ಲಿನ ಅಂಕು-ಡೊಂಕುಗಳನ್ನು ತಿದ್ದಲು ಮಹನೀಯರ ಕೊಡುಗೆ ಸ್ಮರಣೀಯ ವಾಗಿದ್ದು, ದೇಶದ ಅಭಿವೃದ್ಧಿಯ ದೃಷ್ಟಿ ಯಿಂದ ಪ್ರತಿಯೊಬ್ಬರು ಮಹನೀಯರ ತತ್ವಾದರ್ಶವನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.

ಶಿವಾಜಿ ಕೇವಲ ಐತಿಹಾಸಿಕವಾಗಿ ಮಹಾ ರಾಜ ಮಾತ್ರವಲ್ಲ. ಇಂದಿಗೂ ಸ್ಫೂರ್ತಿಯಾ ಗಿದ್ದಾರೆ. ಭಾರತೀಯ ಕಲ್ಪನೆಗೆ ಅರ್ಥ ತಂದ ವ್ಯಕ್ತಿ ಅವರು. ಕಡಿಮೆ ಅವಧಿಯಲ್ಲಿ ಇಡೀ ದೇಶ ಸಂಚರಿಸಿ, ಸಾಮ್ರಾಜ್ಯ ಕಟ್ಟಿದ ಮಹಾನ್ ಪರಾಕ್ರಮಿಯಾಗಿದ್ದರು. ಶಿವಾಜಿಯವರು ಸೈನ್ಯ ಸಂಘಟನೆಯಲ್ಲಿ ಚತುರರಾಗಿದ್ದರು. ಆರಂಭದಲ್ಲಿ 2 ಸಾವಿರ ಸೈನಿಕರನ್ನು ಹೊಂದಿದ್ದ ಅವರ ಸೈನ್ಯ ಕೊನೆಗೆ 10 ಸಾವಿರ ಮುಟ್ಟುವಂತಾಯಿತು. ಅವರ ಸೈನ್ಯದಲ್ಲಿ ಎಲ್ಲಾ ಜಾತಿ, ಮತ, ಧರ್ಮದವರಿದ್ದರು. ಅವರೆಂದಿಗೂ ಜಾತಿಗೆ ಅಂಟಿಕೊಂಡಿ ದ್ದವರಲ್ಲ ಎಂದು ಹೇಳಿದರು.

ಸಂತ ಶ್ರೀಸೇವಾಲಾಲ್ ಮಹಾರಾಜರ ತತ್ವಾದರ್ಶಗಳು ನಮ್ಮ ನಿತ್ಯದ ಬದುಕಿಗೆ ಮಾರ್ಗದರ್ಶಕಗಳಾಗಿವೆ. ಅವುಗಳನ್ನು ಅಳವಡಿಸಿಕೊಂಡು ನಮ್ಮ ಬದುಕನ್ನು ಬಂಗಾರ ಮಾಡಿಕೊಳ್ಳಬೇಕಾಗಿದೆ. ಎಷ್ಟೇ ಕಷ್ಟ ಬಂದರೂ ಮಕ್ಕಳನ್ನು ವಿದ್ಯೆಯಿಂದ ವಂಚನೆ ಮಾಡದೇ ಅವರಿಗೆ ಶಿಕ್ಷಣ ನೀಡುವ ಮೂಲಕ ಅವರನ್ನು ದೇಶದ ಆಸ್ತಿಯನ್ನಾಗಿಸಬೇಕು ಎಂದರು.

ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹಲವು ಸೌಲಭ್ಯ ನೀಡುತ್ತಿದ್ದು, ಇದನ್ನು ಸದ್ಬಳಕೆ ಮಾಡಿ ಕೊಂಡು ಸಮಾಜಮುಖಿ ಕೆಲಸಗಳಿಗೆ ಮುಂದೆ ಬರಬೇಕು. ಪಟ್ಟಣದಲ್ಲಿ ಸೇವಾ ಲಾಲ್, ಶಿವಾಜಿ ಭವನ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಸರ್ವಜ್ಞ ಸಾಮಾನ್ಯ ಭಾಷೆಯಲ್ಲಿ ತ್ರಿಪದಿ ಗಳನ್ನು ರಚಿಸುವ ಮೂಲಕ ಸಮಾಜ ದಲ್ಲಿನ ಮೂಢನಂಬಿಕೆ, ಜಾತಿ ಪದ್ಧತಿ, ಅಸ್ಪೃ ಶ್ಯತೆ ಸೇರಿದಂತೆ ಹಲವು ಅಂಕು ಡೊಂಕು ಗಳನ್ನು ತಿದ್ದುವಲ್ಲಿ ಶ್ರಮಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಪುರಸಭೆ ಅಧÀ್ಯಕ್ಷೆ ಭಾರತಿ ಅರುಣ್‍ಕುಮಾರ್, ತಾಲೂಕು ಪಂಚಾಯಿತಿ ಅಧÀ್ಯಕ್ಷ ಜಿ.ಬಿ.ರಂಗೇಗೌಡ, ಉಪಾಧ್ಯಕ್ಷೆ ಕಮಲ, ಸದಸ್ಯರಾದ ಸಂಗೀತ, ಲವ ಕುಮಾರ್, ಎಪಿಎಂಸಿ ಅಧ್ಯಕ್ಷ ಚೇತನ್ ಕುಮಾರ್ ಸೇರಿದಂತೆ ಸಮುದಾಯದ ಮುಖಂಡರು ಹಾಜರಿದ್ದರು.

Translate »