ಮತದಾರರ ಜಾಗೃತಿ ಚಟುವಟಿಕೆ ಚುರುಕುಗೊಳಿಸಲು ಸಿಇಓ ಸೂಚನೆ
ಹಾಸನ

ಮತದಾರರ ಜಾಗೃತಿ ಚಟುವಟಿಕೆ ಚುರುಕುಗೊಳಿಸಲು ಸಿಇಓ ಸೂಚನೆ

February 20, 2019

ಹಾಸನ: ಲೋಕಸಭಾ ಚುನಾ ವಣೆ ಸಮೀಪಿಸುತ್ತಿದ್ದು, ಮತದಾರರ ಜಾಗೃತಿ ಚಟುವಟಿಕೆಗಳನ್ನು ಇನ್ನಷ್ಟು ಚುರುಕು ಗೊಳಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುಟ್ಟಸ್ವಾಮಿ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಹೇಮಾ ವತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಸ್ವೀಪ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 18 ವರ್ಷ ತುಂಬಿದ ಯುವ ಮತದಾರರು ಹಾಗೂ ಮತದಾರರ ಪಟ್ಟಿಯಿಂದ ಹೊರಗುಳಿದಿ ರುವವರನ್ನು ಸೇರ್ಪಡೆಗೊಳಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿರುವ ವಿಕಲಚೇತನ ಮತ ದಾರರ ಪಟ್ಟಿಯನ್ನು ನಿಖರವಾಗಿ ಸಿದ್ಧಪಡಿ ಸಿಕೊಂಡು ಮತದಾನದ ದಿನದಂದು ಅವ ರನ್ನು ಮತಗಟ್ಟೆಗೆ ಕರೆ ತಂದು ವಾಪಸ್ ಕರೆ ದೊಯ್ಯಲು ನೆರವು ನೀಡಬೇಕು. ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಇಲಾಖೆ ಅಧಿಕಾರಿ ಗಳ ಪರಸ್ಪರ ಸಮನ್ವಯತೆಯಿಂದ ವಿವರ ಗಳನ್ನು ಸಮೀಕರಿಸಿ ನೀಡಬೇಕು ಎಂದರು.

ಪ್ರತಿಯೊಂದು ಇಲಾಖೆಯಲ್ಲಿ ಮತ ದಾರರ ಜಾಗೃತಿ ಚಟುವಟಿಕೆಗಳಲ್ಲಿ ಸಕ್ರಿ ಯವಾಗಿ ಪಾಲ್ಗೊಳ್ಳಬೇಕು. ಶಾಲಾ- ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಪೋಷಕರನ್ನು ಜಾಗೃತಿಗೊಳಿಸಲು ಪ್ರೇರೇಪಿಸಬೇಕು. ನಗರ ಪ್ರದೇಶದ ವ್ಯಾಪ್ತಿಯಲ್ಲಿ ಮತದಾನದ ಪ್ರಮಾಣ ಕಡಿಮೆಯಾ ಗುತ್ತಿದ್ದು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಅರುಣ್‍ಕುಮಾರ್ ಮಾತ ನಾಡಿ, ಚುನಾವಣಾ ಆಯೋಗದ ನಿರ್ದೇ ಶನಗಳು, ಸ್ವೀಪ್ ಸಮಿತಿಯ ಯೋಜನೆ ಗಳ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಸದಸ್ಯ ಕಾರ್ಯದರ್ಶಿ ವಿನೋದ್ ಚಂದ್ರ, ಜಿಪಂ ಎ.ಪಿ.ಓ ಸುದರ್ಶನ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು.

Translate »