ವಿದ್ಯಾರ್ಥಿಗಳಿಗೆ ಸಂಸತ್ತಿನ ತಿಳುವಳಿಕೆ ಅಗತ್ಯ
ಹಾಸನ

ವಿದ್ಯಾರ್ಥಿಗಳಿಗೆ ಸಂಸತ್ತಿನ ತಿಳುವಳಿಕೆ ಅಗತ್ಯ

February 20, 2019

ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ತಿಮ್ಮಣ್ಣಾಚಾರ್ ಅಭಿಮತ
ಹಾಸನ: ವಿದ್ಯಾರ್ಥಿಗಳಿಗೆ ಪಠ್ಯದ ಶಿಕ್ಷಣದ ಜೊತೆಗೆ ಶಾಲೆ ಹಂತದಲ್ಲೇ ಸಂಸತ್ತಿನ ಹಾಗೂ ರಾಜಕೀಯದ ಬಗ್ಗೆ ತಿಳುವಳಿಕೆ ನೀಡಬೇಕು ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಕೆ.ಎಸ್.ತಿಮ್ಮಣ್ಣಾಚಾರ್ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಗ್ರಾಸ್ ರೂಟ್ಸ್ ರಿಸರ್ಚ್ ಅಂಡ್ ಅಡ್ವೊಕೆಸಿ ಮೂವ್‍ಮೆಂಟ್, ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಲಾಗಿದ್ದ ಮಕ್ಕಳ ಸಂಸತ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನದಡಿ ಸಂಸದೀಯ ವ್ಯವಸ್ಥೆ ಉಲ್ಲೇಖಿಸಲಾಗಿದೆ. ಲೋಕಸಭೆ ಮತ್ತು ರಾಜ್ಯ ಸಭೆಯ ವಿಧಾನಸಭೆ, ವಿಧಾನ ಪರಿಷತ್ ಗಳಿಗೆ ಆಯ್ಕೆಯ ವಿಧಾನ ಮಕ್ಕಳು ತಿಳಿದಿರ ಬೇಕು. ಅದರ ಕಾರ್ಯ ಸ್ವರೂಪದ ಅರಿವಿರ ಬೇಕು ಎಂಬ ಕಾರಣಕ್ಕಾಗಿ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಗ್ರಾಮೀಣ ಜನರಿಗೂ ನಮ್ಮ ರಾಜಕೀಯದ ಆಡ ಳಿತದ ಬಗ್ಗೆ ಜಾಗೃತಿ ಇರಬೇಕು ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಅರಿವಿರ ಬೇಕÉಂಬ ಉದ್ದೇಶಕ್ಕಾಗಿ ಗ್ರಾಸ್ ರೂಟ್ ರಿಸರ್ಚ್ ಅಂಡ್ ಅಡ್ವೊಕೆಸಿ ಮೂವ್ ಮೆಂಟ್ ಅನ್ನು ನಡೆಸಲಾಗುತ್ತಿದೆ ಎಂದರು.

ಗ್ರಾಸ್ ರೂಟ್ಸ್ ರಿಸರ್ಚ್ ಅಂಡ್ ಅಡ್ವೊ ಕೆಸಿ ಮೂವ್‍ಮೆಂಟ್‍ನ ಕಾರ್ಯನಿರ್ವಾ ಹಕ ನಿರ್ದೇಶಕ ಬಸವರಾಜು ಮಾತ ನಾಡಿ, ಪ್ರಜಾಪ್ರಭುತ್ವ ಒಂದು ಸಾರ್ವತ್ರಿಕ ವೇದಿಕೆ. ದೇಶದ ಈ ವ್ಯವಸ್ಥೆಯ ಬಗ್ಗೆ ಆಡಳಿತ ನಾಯಕನ ಜೊತೆಗೆ ಪ್ರಜೆಯ ಪಾತ್ರ ಏನು ಎಂಬುದನ್ನು ಸಾರ್ವಜನಿಕರು ತಿಳಿದಿರಬೇಕು. ಪ್ರತಿ ಪ್ರಜೆಯೂ ರಾಜ ಕೀಯ, ಕಾನೂನು ಹಾಗೂ ನ್ಯಾಯಾಂಗ ವ್ಯವಸ್ಥೆಯನ್ನು ಸಂಪೂರ್ಣವಾಗಿ ತಿಳಿದು ಕೊಂಡು ಉತ್ತಮ ನಾಯಕರನ್ನು ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದರು.

ಸುಗಮ ಶಿಕ್ಷ್ಯಾ ಮುಖ್ಯಸ್ಥೆ ಉಷಾ ಮಾತ ನಾಡಿ, ಗ್ರಾಸ್ ರೂಟ್ ರಿಸರ್ಚ್ ಅಂಡ್ ಅಡ್ವೊಕೆಸಿ ಮೂವ್‍ಮೆಂಟ್‍ನ ಉದ್ದೇಶ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳಿಗೆ ಪ್ರಜಾ ಪ್ರಭುತ್ವದ ಬಗ್ಗೆ ತಿಳಿಸುವಂತದಾಗಿದ್ದು ಹಾಸನ, ಬೆಂಗಳೂರು, ಮೈಸೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿನ 22 ಸರ್ಕಾರಿ ಶಾಲೆಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾ ನಕ್ಕೆ ತರಲಾಗಿದೆ ಎಂದು ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಭಾಷೆ ಹಾಗೂ ತಾಂತ್ರಿಕ ಶಿಕ್ಷಣ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಆಗ ಮಾತ್ರ ಸರ್ಕಾರಿ ಶಾಲೆಗಳ ಮೇಲೆ ಆಸಕ್ತಿ ಸಾರ್ವಜನಿಕ ಅಥವಾ ಗ್ರಾಮೀಣ ಪ್ರದೇಶದ ಜನರಿಗೆ ಆಸಕ್ತಿ ಮೂಡುವುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿ.ಕೆ.ಬಸವರಾಜ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಎನ್. ಪ್ರಕಾಶ್‍ಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಉಪ ವಿಭಾಗಾಧಿ ಕಾರಿ ಡಾ.ಹೆಚ್.ಎಲ್.ನಾಗರಾಜು, ಸಾರ್ವ ಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇ ಶಕ ಹೆಚ್.ಮಂಜುನಾಥ್, ವಕೀಲರ ಸಂಘದ ಅಧ್ಯಕ್ಷ ಜಿ.ಪಿ.ಶಂಕರ್ ಸೇರಿ ದಂತೆ ಮತ್ತಿತರರು ಭಾಗವಹಿಸಿದ್ದರು.

ನಗರದ ಜಿಪಂ ಹೊಯ್ಸಳ ಸಭಾಂಗಣದಲ್ಲಿ ನಡೆದ ಮಕ್ಕಳ ಸಂಸತ್ ಅಧಿವೇಶನ ಎಲ್ಲರ ಗಮನ ಸೆಳೆಯಿತು. ಬಿ.ಕಾಟೀಹಳ್ಳಿ, ಬೂವನಹಳ್ಳಿ, ದೇವೇಗೌಡನಗರ, ಹನುಮಂತಪುರ, ದೊಡ್ಡ ಮಂಡಿ ಗನಹಳ್ಳಿ ಹಾಗೂ ಸಿದ್ದಯ್ಯನಗರ 7 ಶಾಲೆಗಳಿಂದ ಸುಮಾರು 140 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಅಧಿವೇಶನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯೊಬ್ಬರು ಸ್ಪೀಕರ್ ಆಗಿ ಸಭೆಯನ್ನು ನಿರ್ವಹಿಸಿದರೆ. ಯುವ ಪ್ರತಿಭಾವಂತ ವಿದ್ಯಾರ್ಥಿ ಗಳು ಮುಖ್ಯಮಂತ್ರಿಗಳಾಗಿ, ವಿವಿಧ ಸಚಿವರಾಗಿ ಪಾಲ್ಗೊಂಡು ತಮ್ಮ ಇಲಾಖೆಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳಿಗೆ ಉತ್ತರಿಸಿ ಅಭಿಪ್ರಾಯ ಮಂಡಿಸಿದರು. ಸರ್ಕಾರಿ ಪ್ರಾಥಮಿಕ ಶಾಲೆಯ ಗ್ರಂಥಾಲಯ ಕೊರತೆ, ಮಕ್ಕಳ ಮೇಲಿನ ಲೈಂಗಿಕ ಸಮಸ್ಯೆ, ಶಿಕ್ಷಕರ ನೇಮಕಾತಿ, ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ‘ಡಿ’ ಗ್ರೂಪ್ ನೌಕರರ ಸೇರ್ಪಡೆ. ಕಲೆ, ಸಂಸ್ಕøತಿ, ಖಾಸಗಿ ಶಾಲೆಗಳಲ್ಲಿ ನಡೆಯುವಂತಹ ಬೇಸಿಗೆ ಶಿಬಿರಕ್ಕೆ ಸಂಬಂಧಿಸಿದಂತೆ ವಿಷಯಗಳು ಚರ್ಚಿಸಲಾಯಿತು. ಇದಕ್ಕೆ ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳು ಉತ್ತರವನ್ನು ನೀಡಿದರು.

Translate »