ಬೇಲೂರು ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ವಿರುದ್ಧ ಆಕ್ರೋಶ
ಹಾಸನ

ಬೇಲೂರು ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ವಿರುದ್ಧ ಆಕ್ರೋಶ

June 20, 2018

ಬೇಲೂರು: ತಾಲೂಕಿನ ಸರ್ಕಾರಿ ಆಸ್ಪತ್ರೆಗಳು ಅವ್ಯವಸ್ಥೆ ಆಗರ ವಾಗಿದ್ದು, ಈ ಬಗ್ಗೆ ಗಮನ ಹರಿಸದೆ ಆರೋಗ್ಯಾಧಿಕಾರಿ ನಿರ್ಲಕ್ಷ್ಯ ತಾಳಿದ್ದಾರೆ ಎಂದು ತಾಪಂ ಸದಸ್ಯ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿಂದು ತಾಪಂ ಅಧ್ಯಕ್ಷ ಹರೀಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಯ ಆಂಬುಲೆನ್ಸ್ ವಾಹನ ಚಾಲಕ ಬೇಕಾಬಿಟ್ಟಿ ಕರ್ತವ್ಯ ನಿರ್ವಹಿ ಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಅಂಬುಲೆನ್ಸ್ ಚಾಲಕರು ರಾಜಕಾರಣ ಮಾಡುತ್ತಿದ್ದಾರೆ. ಆಸ್ಪತ್ರೆ ನೌಕರರನ್ನೇ ಹೆದರಿಸುವ ಮಟ್ಟಕ್ಕೆ ಚಾಲಕರು ಬೆಳೆದಿದ್ದಾರೆ. ರಾಜಕಾರಣಿಗಳಿ ಗಿಂತ ಇವರದೇ ರಾಜಕೀಯ ಹೆಚ್ಚಾಗಿದೆ. ಇವರಿಗೆ ಮೇಲಧಿಕಾರಿಗಳ ಕೃಪಾಕಟಾಕ್ಷ ಇರುವ ಶಂಕೆಯಿದೆ. ಆಸ್ಪತ್ರೆಯ ಹೊರ ಗುತ್ತಿಗೆ ಪಡೆದಿರುವವರ ಕೈಗೊಂಬೆಯಾಗಿ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದಾ ರೆಂಬ ಆರೋಪ ಕೇಳಿ ಬರುತ್ತಿದೆ. ಆಸ್ಪತ್ರೆ ಯಲ್ಲಿನ ಕೆಲವು ಮಹಿಳಾ ನೌಕರರು ಆಂಬುಲೆನ್ಸ್ ಚಾಲಕನ ವಿರುದ್ಧ ವೈದ್ಯಾ ಧಿಕಾರಿಗಳಿಗೆ ದೂರು ನೀಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಆಂಬುಲೆನ್ಸ್ ಚಾಲಕರು ಸರಿಯಾಗಿ ಕೆಲಸ ಮಾಡಲು ಆಗದಿದ್ದರೆ ಕೆಲಸ ಬಿಟ್ಟು ರಾಜಕಾರಣವನ್ನೇ ಮಾಡಿ ಕೊಂಡಿರಲಿ. ಇಂತಹವರಿಗೆ ನಿಮ್ಮ ಕುಮ್ಮಕ್ಕೂ ಇದೆ ಎಂದು ತಾಲೂಕು ವೈದ್ಯಾಧಿಕಾರಿ ಯೋಗೇಶ್‍ಗೆ ತರಾಟೆ ತೆಗೆದುಕೊಂಡರು.

ಸದಸ್ಯ ಎಸ್.ಎನ್.ರವಿ ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿರುವ ಜನರಿಕ್ ಔಷಧಿ ಮಳಿಗೆಯಲ್ಲಿ ರೋಗಿಗಳಿಗೆ ಸರಿ ಯಾದ ಔಷಧಿ ಸಿಗುತ್ತಿಲ್ಲ. ರೋಗಿಗಳು ಖಾಸಗಿ ಅಂಗಡಿಗಳಿಂದ ಔಷಧಿ ಖರೀದಿ ಸುವಂತಾಗಿದೆ. ಅಲ್ಲದೆ ಆಸ್ಪತ್ರೆಯಲ್ಲಿ ಶುಚಿತ್ವವಿಲ್ಲ. ರೋಗವಾಸಿ ಮಾಡಿಕೊಳ್ಳಲು ಆಸ್ಪತ್ರೆಗೆ ಬಂದರೆ ರೋಗ ಹೆಚ್ಚು ಮಾಡಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಸ್ವಚ್ಛತೆ ನಿರ್ವಹಿಸುವವರು ಬೇರೆ ಕೆಲಸ ಮಾಡುತ್ತಿದ್ದಾರೆ. ರೋಗಿಗಳಿಗೆ ಇಂಜಕ್ಷನ್ ಕೊಡುವ ಹಂತಕ್ಕೂ ತಲುಪಿದ್ದಾರೆಂದು ಗೊತ್ತಾಗಿದೆ. ಈ ರೀತಿಯಾದರೇ ಗತಿಯೇನು ಎಂದು ಆಕ್ಷೇಪ ವ್ಯಕ್ತಪಡಿಸಿದರು.

ತಾಪಂ ಅಧ್ಯಕ್ಷ ಹರೀಶ್ ಮಾತನಾಡಿ, ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಇದ್ದರೂ ಸಮರ್ಪಕ ಬಳಕೆ ಆಗುತ್ತಿಲ್ಲ ಎಂಬ ದೂರು ಸಾರ್ವಜನಿಕರಿಂದ ಬರುತ್ತಿದೆ. ಏಕೆ ಹೀಗಾಗುತ್ತಿದೆ ಎಂದು ಪ್ರಶ್ನಿಸಿದರು.ಈ ವಿಷಯಕ್ಕೆ ಸ್ಪಷ್ಟನೆ ನೀಡಿದ ವೈದ್ಯಾಧಿಕಾರಿ ಯೋಗೇಶ್, ಪ್ರತಿನಿತ್ಯ 4 ಡಯಾಲಿಸಿಸ್ ರೋಗಿಗಳು ಬರುತ್ತಿದ್ದಾರೆ. ಸ್ವಚ್ಛತೆಗೆ ನಿಯೋಜನೆಗೊಂಡಿರುವ ನೌಕರರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದಕ್ಕೆ ಸಂಬಂಧಪಟ್ಟ ಗುತ್ತಿಗೆದಾರರೇ ಕಾರಣರಾಗಿದ್ದು, ಈ ಬಗ್ಗೆ ಡಿಹೆಚ್‍ಓ ಅವರಿಗೆ ಪತ್ರ ಬರೆಯುತ್ತೇನೆ ಎಂದರು.

ಸದಸ್ಯೆ ಸಂಗೀತಾ ಮಾತನಾಡಿ, ಹಗರೆ ಆಸ್ಪತ್ರೆಯಲ್ಲಿ ಲಂಚದ ಹಾವಳಿ ಹೆಚ್ಚಾಗಿದೆ. ಬಡ ರೋಗಿಗಳಿಂದ ಮನಬಂದಂತೆ ಹಣ ವಸೂಲಿ ಮಾಡುತ್ತಿದ್ದಾರೆ. ಸರ್ಕಾರಿ ಆಸ್ಪ ತ್ರೆಯೋ ಇಲ್ಲ ಖಾಸಗಿ ಆಸ್ಪತ್ರೆಯೊ ತಿಳಿ ಯುತ್ತಿಲ್ಲ. ತಕ್ಷಣ ಈ ಬಗ್ಗೆ ಕ್ರಮಕೈಗೊಳ್ಳ ಬೇಕೆಂದು ಆಗ್ರಹಿಸಿದರು.

ಸದಸ್ಯೆ ಜಮುನಾ ಅಣ್ಣಪ್ಪ ಮಾತನಾಡಿ, ಅರೇಹಳ್ಳಿ ಸಮುದಾಯ ಕೇಂದ್ರದಲ್ಲಿ ವೈದ್ಯಾಧಿಕಾರಿಗಳ ನಿರ್ಲಕ್ಷ್ಯ ಹೆಚ್ಚಾಗಿದೆ. ಗರ್ಭಿಣ ಯರು, ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲ ಎಂದು ದೂರಿದರು.

ಪ್ರಾಥಮಿಕ ಹಂತದ ವಿದ್ಯಾರ್ಥಿನಿಲಯಕ್ಕೆ ಮಕ್ಕಳನ್ನು ಸೇರಿಸಲು ಹೋದರೆ ವಾರ್ಡನ್ ಗಳು ಹಣ ಕೇಳುತ್ತಾರೆ. ಈ ಬಗ್ಗೆ ಪೋಷಕರು ದೂರು ಹೇಳಿದ್ದಾರೆಂದು ಸದಸ್ಯ ರವಿ ಆರೋಪಿಸಿದರು. ಲಿಖಿತವಾಗಿ ದೂರು ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಸಮಾಜ ಕಲ್ಯಾಣಾಧಿಕಾರಿ ಶಿವರಾಂ ಸದಸ್ಯರ ಗಮನಕ್ಕೆ ತಂದರು. ಹಾಸ್ಟೆಲ್‍ಗಳಲ್ಲಿ ಮಕ್ಕಳಿಗೆ ನೀಡುವ ವಸ್ತುಗಳನ್ನು ವಿತರಿಸುವ ಮುಂಚೆ ಸಂಬಂಧಿಸಿದ ಸದಸ್ಯರ ಗಮನಕ್ಕೆ ತರು ವಂತೆ ತಾಪಂ ಅಧ್ಯಕ್ಷ ಹರೀಶ್ ಸೂಚಿಸಿದರು.

ಸದಸ್ಯ ಮಂಜುನಾಥ್ ಮಾತನಾಡಿ, ಚಿಕ್ಕಬ್ಯಾಡಿಗೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 4 ಜನ ಶಿಕ್ಷಕರಿದ್ದು, ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುತ್ತಿಲ್ಲ. ಇದರಿಂದ ಗುಣಮಟ್ಟದ ಶಿಕ್ಷಣದಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ. ಇವರನ್ನು ಬೇರೆಡೆಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಉಪಾಧ್ಯಕ್ಷ ಕಮಲ ಚಿಕ್ಕಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಸೋಮಯ್ಯ, ಇಓ ಮಲ್ಲೇಶಪ್ಪ ಇದ್ದರು.

Translate »