ವರುಣಾದಲ್ಲಿ ಬಿ.ವೈ ವಿಜಯೇಂದ್ರಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆ ಮನನೊಂದ ಬಿಜೆಪಿ ಕಾರ್ಯಕರ್ತರ ಆತ್ಮಹತ್ಯೆ
ಮೈಸೂರು

ವರುಣಾದಲ್ಲಿ ಬಿ.ವೈ ವಿಜಯೇಂದ್ರಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆ ಮನನೊಂದ ಬಿಜೆಪಿ ಕಾರ್ಯಕರ್ತರ ಆತ್ಮಹತ್ಯೆ

April 27, 2018

ನಂಜನಗೂಡು, ಏ.26(ಆರ್‍ಕೆ, ರಶಂ)- ವರುಣಾ ಕ್ಷೇತ್ರದಲ್ಲಿ ಬಿ.ವೈ. ವಿಜಯೇಂದ್ರಗೆ ಟಿಕೆಟ್ ಕೈತಪ್ಪಿದ್ದರಿಂದ ಮನನೊಂದ ಅವರ ಅಭಿಮಾನಿಗಳು ಹಾಗೂ ನಿಷ್ಟಾ ವಂತ ಇಬ್ಬರು ಬಿಜೆಪಿ ಕಾರ್ಯಕರ್ತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾಲೂಕಿನ ಸರಗೂರು ಗ್ರಾಮದ ನಿವಾಸಿ, 35 ವರ್ಷದ ಗವಿಯಪ್ಪ (ಗುರುಸ್ವಾಮಿ) ಮತ್ತು ಗರ್ಗೇಶ್ವರಿ ಸಮೀಪದ ಯಳವರ ಹುಂಡಿಯ ಗೋಳಪ್ಪ ಆತ್ಮಹತ್ಯೆಗೆ ಶರಣಾ ಗಿದ್ದಾರೆ ಎಂದು ಹದಿನಾರು ಜಿಪಂ ಕ್ಷೇತ್ರದ ಸದಸ್ಯ ಗುರುಸ್ವಾಮಿ ತಿಳಿಸಿದ್ದಾರೆ. ಸರಗೂರಿನ ಗುರುಸ್ವಾಮಿ ಕಳೆದ ಹಲವು ವರ್ಷಗಳಿಂದ ಬಿಜೆಪಿ ಕಾರ್ಯಕರ್ತನಾಗಿ ದುಡಿದಿದ್ದ ಗುರುಸ್ವಾಮಿ, ತಗಡೂರು ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಸದಸ್ಯರಾದ ಸದಾನಂದ ಅವರೊಂದಿಗೆ ಗುರುತಿಸಿ ಕೊಂಡಿದ್ದರು. ಇತ್ತೀಚೆಗೆ ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂದು ಬಿಂಬಿಸಿಕೊಂಡು, ಕ್ಷೇತ್ರದಾದ್ಯಂತ ಚುನಾ ವಣಾ ಪ್ರಚಾರ ನಡೆಸಿದ್ಧ ಬಿ.ವೈ. ವಿಜಯೇಂದ್ರ ಜೊತೆ ಸದಾನಂದ ರೊಂದಿಗೆ ಸೇರಿ ಕೆಲಸ ಮಾಡುತ್ತಿದ್ಧ ಗುರು ಸ್ವಾಮಿ ಅವರು, ವಿಜ ಯೇಂದ್ರ ರಿಗೆ ಕಡೇ ಗಳಿಗೆಯಲ್ಲಿ ಟಿಕೆಟ್ ಕೈತಪ್ಪಿದ್ದರಿಂದ ವಿಚಲಿತರಾಗಿ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಬುಧ ವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿ ದ್ದಾರೆಂದು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಜಯೇಂದ್ರ ಬದಲು ಸಾಮಾನ್ಯ ಕಾರ್ಯಕರ್ತನನ್ನು ವರುಣಾ ಕ್ಷೇತ್ರದಲ್ಲಿ ಸ್ಪರ್ಧೆಗಿಳಿಸಲಾಗುತ್ತಿದೆ, ನೀವೆಲ್ಲರೂ ಕೆಲಸ ಮಾಡಿ ಗೆಲ್ಲಿಸಬೇಕೆಂದು ನಂಜನ ಗೂಡಿನ ಬಿಜೆಪಿ ಕಾರ್ಯಕರ್ತರ ಸಮಾ ವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಅವರು ಘೋಷಿಸುತ್ತಿದ್ದಂತೆಯೇ ಗುರುಸ್ವಾಮಿ ಎದ್ದು ನಿಂತು ಬಹಿರಂಗವಾಗಿ ಛೀಮಾರಿ ಹಾಕಿದ್ದರು ಎಂದು ಹೇಳಲಾಗಿದೆ.

ವಿಜಯೇಂದ್ರಗೆ ಟಿಕೆಟ್ ತಪ್ಪಿಸಿ ತೋಟ ದಪ್ಪ ಬಸವರಾಜು ಅವರನ್ನು ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಕಣ ಕ್ಕಿಳಿಸಿದ್ದರಿಂದಾಗಿ ತೀವ್ರ ಮನನೊಂದು ಅವರು, ಕಳೆದ ರಾತ್ರಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ ಎಂದು ಪ್ರಕರಣ ದಾಖಲಿಸಿ ಕೊಂಡಿರುವ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದರು.

Translate »