ದೇಶದ ಭದ್ರತೆಗಾಗಿ ಬಿಜೆಪಿ ಬೆಂಬಲಿಸಿ: ಎ.ಮಂಜು
ಹಾಸನ

ದೇಶದ ಭದ್ರತೆಗಾಗಿ ಬಿಜೆಪಿ ಬೆಂಬಲಿಸಿ: ಎ.ಮಂಜು

March 24, 2019

ಬೇಲೂರು: 2019ರ ಲೋಕಸಭಾ ಚುನಾವಣೆ ದೇಶದ ಭದ್ರತೆಯ ಚುನಾವಣೆಯಾಗಿದೆ ಹೊರತು ಎ.ಮಂಜು ಪರವಾದ ಚುನಾವಣೆಯಲ್ಲ ಎಂದು ಬಿಜೆಪಿ ಅಭ್ಯರ್ಥಿ ಎ.ಮಂಜು ಹೇಳಿದರು.

ಬೇಲೂರು ಪಟ್ಟಣದ ಶ್ರೀ ಮಂಜು ನಾಥೇಶ್ವರ ಕಲ್ಯಾಣ ಮಂಟಪದಲ್ಲಿ ಕಾರ್ಯ ಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಮತದಾರರು ಚುನಾ ವಣೆಯಲ್ಲಿ ರಾಜಕೀಯ ವಿಶ್ಲೇಷಣೆ ಅರಿಯ ಬೇಕಾಗಿದೆ. ದೇಶದ ಸುಭದ್ರತೆ ಹಾಗೂ ರಕ್ಷಣೆಗಾಗಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕಾಗಿದೆ. ಈ ಕಾರಣ ಜಿಲ್ಲೆಯ ಮತ್ತು ತಾಲೂಕಿನ ಪ್ರತಿಯೊಬ್ಬ ಮತದಾ ರರು ಭಾರತೀಯ ಜನತಾ ಪಕ್ಷಕ್ಕೆ ಮತ ನೀಡಬೇಕು ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ತವರು ಜಿಲ್ಲೆಯಲ್ಲಿ ಯಾವುದೇ ಅಭಿವೃದ್ದಿ ಕೆಲಸ ಗಳು ನಡೆದಿಲ್ಲ. ನಾನು ಮಂತ್ರಿಯಾಗಿದ್ದಾಗ ಎತ್ತಿನಹೊಳೆ ಯೋಜನೆಗೆ ನೀಡಿದ ಅನು ದಾನಕ್ಕೆ ಅವರು ಪೂಜೆ ಮಾಡಿದ್ದಾರೆ. ಅದು ಜೆಡಿಎಸ್ ಸರ್ಕಾರದಲ್ಲಿ ನೀಡಿದ ಅನು ದಾನವಲ್ಲ ಎಂದು ಟೀಕಿಸಿದರು.

ಜಿಲ್ಲೆಯಲ್ಲಿ ಶೇ. 70ರಷ್ಟು ಮತದಾರರು ಜೆಡಿಎಸ್ ವಿರುದ್ಧ ಇದ್ದಾರೆ. ಇದರಿಂದ ಭಯ ಗೊಂಡು ಇಂದು ದೇವೇಗೌಡರು ಮತ್ತು ಅವರ ಕುಟುಂಬದವರು ಕಾಂಗ್ರೆಸ್‍ನ ಎಲ್ಲಾ ಮುಖಂಡರ ಮನೆಗೆ ಹೋಗಿ ಸಹಕಾರ ಕೇಳುತ್ತಿದ್ದಾರೆ. ಇದನ್ನು ನೋಡಿದರೆ ನಾನು ದೇವೇಗೌಡರ ವಿರುದ್ಧ ಜಯಗಳಿಸಿ ದಂತಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಪ್ರಾಣೇಶ್ ಮಾತನಾಡಿ, ದೇಶದ ಮತದಾರರ ಅಭಿ ಪ್ರಾಯ ನರೇಂದ್ರ ಮೋದಿಯವರ ಮೇಲಿದೆ. ಏಕೆಂದರೆ ನರೇಂದ್ರ ಮೋದಿ ಅವರು ಕುಟುಂಬ ರಾಜಕಾರಣ ಮಾಡಬೇಕೆ ನ್ನುವ ಅವಶ್ಯಕತೆ ಇಲ್ಲ. ದೇಶಕ್ಕಾಗಿ ಏನಾ ದರೂ ಸಾಧಿಸುವುದೇ ಅವರ ಗುರಿ ಎಂದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹುಲ್ಲಳ್ಳಿ ಸುರೇಶ್ ಮಾತನಾಡಿದರು. ಕಾರ್ಯಕ್ರಮ ಪ್ರಾರಂಭಕ್ಕೂ ಮೊದಲು ವೇದಿಕೆಯ ಫ್ಲೆಕ್ಸ್ ನಲ್ಲಿ ಹುಲ್ಲಳ್ಳಿ ಸುರೇಶ್ ಅವರ ಭಾವಚಿತ್ರ ವಿಲ್ಲ. ಕೊರಟಗೆರೆ ಪ್ರಕಾಶ್ ಫೆÇೀಟೋ ಹಾಕಿದ್ದಾರೆ ಎಂದು ಸುರೇಶ್ ಬೆಂಬಲಿ ಗರು ಪ್ರತಿಭಟನೆ ನಡೆಸಿದರು. ಈ ಸಂದರ್ಭ ಸುರೇಶ್ ಹಾಗೂ ಬಿಜೆಪಿ ತಾಲೂಕು ಅಧ್ಯಕ್ಷ ಕೊರಟಗೆರೆ ಪ್ರಕಾಶ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ಜೋರಾಗಿ ನಡೆದು ಸುರೇಶ್ ವೇದಿಕೆ ಮೇಲೆ ಬರುವು ದಿಲ್ಲ ಎಂದು ಹಠ ಹಿಡಿದಿದ್ದರು ಈ ಸಂದರ್ಭ ಬಿಜೆಪಿ ಅಭ್ಯರ್ಥಿ ಎ.ಮಂಜು ಮತ್ತು ವಿಧಾನ ಪರಿಷತ್ ಸದಸ್ಯ ಪ್ರಾಣೇಶ್, ಪ್ರಕಾಶ್ ಸುರೇಶ್ ಅವರ ಮನವೊಲಿಸಿ ವೇದಿಕೆಗೆ ಕರೆತಂದರು ನಂತರ ಕಾರ್ಯ ಕರ್ತರು ಪ್ರತಿಭಟನೆ ನಿಲ್ಲಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ರೇಣು ಕುಮಾರ್ ಸಕಲೇಶ ಪುರ ಮಾಜಿ ಶಾಸಕ ಗುರುದೇವ್ ಮತ್ತೋರ್ವ ಮಾಜಿ ಶಾಸಕ ಬಸವರಾಜ ರಾಜ್ಯ ಹಿಂದುಳಿದವರ ಪ್ರಧಾನ ಕಾರ್ಯ ದರ್ಶಿ ಲಕ್ಷ್ಮಣ್ ತಾಲೂಕು ಪಂಚಾಯಿತಿ ಸದಸ್ಯ ಶಶಿಕುಮಾರ್ ತಾಲೂಕು ಮಹಿಳಾ ಅಧ್ಯಕ್ಷೆ ಶೋಭಾ ಗಣೇಶ್ ಶ್ರೀಮತಿ ಚಂದ್ರಕಲಾ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮಿತ್ ಶೆಟ್ಟಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನಾಗೇಶ್ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಪರ್ವ ತಯ್ಯ ಎಚ್ ಎನ್ ಗೋವಿಂದಪ್ಪ ಜಿಲ್ಲಾ ಉಪಾಧ್ಯಕ್ಷ ಶಿವಕುಮಾರ್ ಉಮಾ ಶಂಕರ್ ಸಿದ್ದೇಶ್ ಸೋಮಣ್ಣ ಹಾಗೂ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಗೌಡರಿಗೆ 9ರ ಗಂಡಾಂತರ
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ 9ರ ಗಂಡಾಂತರವಿದೆ. ಹಾಗಾಗಿ, ಅವರಿಗೆ ಸೋಲಿನ ಸೂಚನೆಯಿದೆ ಎಂದು ಬಿಜೆಪಿ ಅಭ್ಯರ್ಥಿ ಎ.ಮಂಜು ವ್ಯಂಗ್ಯ ವಾಡಿದರು. ಸಭೆಯಲ್ಲಿ ಮಾತನಾಡಿದ ಅವರು, ದೇವೇಗೌಡರು ಚುನಾವಣೆಯಲ್ಲಿ ಎದುರಿಸಿದ ಇತಿಹಾಸ ಗಮನಿಸಿದಾಗ ಅವರು 1989, 1999ರಲ್ಲಿ ಸೋಲು ಅನು ಭವಿಸಿದ್ದರು. ಈಗ 2019ರ ಚುನಾವಣೆಯಲ್ಲಿಯೂ 9ರ ಕಂಟಕದಿಂದ ಸೋಲಿನ ಸೂಚನೆ ಗೌಡರ ಕುಟುಂಬ ರಾಜಕಾರಣಕ್ಕೆ ತಟ್ಟಲಿದೆ ಎಂದರು.

9 ಕಂಟಕದ ಭಯದಿಂದ ಇಂದು ದೇವೇಗೌಡರು ಟಿಕೆಟ್ ಎಲ್ಲಿಗೆ ಎಂದು ಕಂಡಕ್ಟರ್ ಕೇಳಿದಂತೆ ರಾಜ್ಯದಲ್ಲಿ ಎಲ್ಲಿ ನಿಲ್ಲೋಣ ಎಂದು ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ಇದನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ. ಈ ಬಾರಿ ಕುಟುಂಬ ರಾಜಕಾರಣಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

Translate »