ಜಿಲ್ಲೆಯ ವಿವಿಧೆಡೆ ವಿಶ್ವ ಜಲ ದಿನಾಚರಣೆ
ಹಾಸನ

ಜಿಲ್ಲೆಯ ವಿವಿಧೆಡೆ ವಿಶ್ವ ಜಲ ದಿನಾಚರಣೆ

March 24, 2019

ಹಾಸನ: ಜಿಲ್ಲೆಯ ವಿವಿಧೆಡೆ ವಿಶ್ವ ನೀರು ದಿನಾಚರಣೆಯನ್ನು ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಆಚರಿಸಲಾಯಿತು.ನೀರು ಅಮೂಲ್ಯ ಪ್ರಾಕೃತಿಕ ಸಂಪತ್ತು. ಇದು ಪ್ರತಿಯೊಂದು ಜೀವಿಯು ಬದುಕುಳಿಯಲು ವಿಕಾಸ ಹೊಂದಲು ಜೀವಾಮೃತವಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಧಿಕಾರಿ ಕೆ.ಸಿ.ದೇವರಾಜೇಗೌಡ ತಿಳಿಸಿದರು. ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಶುಕ್ರ ವಾರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಯಿಂದ ನಡೆದ ವಿಶ್ವಜಲ ದಿನಾ ಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾಗರಿಕತೆ ಬೆಳೆದಂತೆಲ್ಲಾ ಅರಣ್ಯ ಅಭಿವೃದ್ಧಿ ಹೆಸರಿನಲ್ಲಿ ನಾಶವಾಗುತ್ತಿದೆ. ನೀರಿನ ಬಳಕೆ ಬಗ್ಗೆ ಸಾಕ್ಷರತೆ ಇಲ್ಲದಿರುವುದು. ಅಲ್ಲದೇ ನೀರಿನ ಬಳಕೆಯ ಸಾಮಾನ್ಯ ಜ್ಞಾನದ ಕೊರತೆ ಯಿಂದ ಇಂದು ಜೀವ ಸಂಕುಲದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹಾಗಾಗಿ, ಆಪತ್ತು ಎದುರಾಗಿದೆ ಎಂದರು.

ಇಂದಿನ ದಿನಗಳಲ್ಲಿ ಮಕ್ಕಳಿಂದ ವೃದ್ಧರವರೆಗೂ ಮರಗಳನ್ನು ಬೆಳೆಸುವುದು ಅತ್ಯಂತ ಜವಾಬ್ದಾರಿ ಯಾಗಿದೆ. ವಿಶ್ವ ಮಟ್ಟದಲ್ಲಿ ಜಾಗತಿಕ ತಾಪಮಾನ ತೀವ್ರ ರೀತಿಯಲ್ಲಿ ಏರಿಕೆಯಾಗುತ್ತಿದೆ. ಹಿಮಾಲ ಯದ ನಿರ್ಗಲ್ಲುಗಳು ಕರಗುತ್ತಿವೆ. ಉತ್ತರ ಹಾಗೂ ಉತ್ತರ ಧ್ರುವಗಳಲ್ಲಿರುವ ಹಿಮಪರ್ವತಗಳು ಸಡಿಲ ಗೊಳ್ಳುತ್ತಿದ್ದು, ಸಮುದ್ರದ ಮಟ್ಟ ಜಾಸ್ತಿಯಾಗು ತ್ತಿದೆ. ಇದರಿಂದಾಗಿ ಒಂದಲ್ಲ ಒಂದು ಪ್ರಾಕೃತಿಕ ವಿಕೋಪ ಸಂಭವಿಸುತ್ತಿವೆ ಎಂದು ತಿಳಿಸಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಭಾನು ಪ್ರಕಾಶ್ ಮಾತನಾಡಿ, ನೀರಿನ ಸಂರಕ್ಷಣೆ, ಬದು ಗಳ ನಿರ್ಮಾಣ, ಜಲ ಮರುಪೂರಣ, ಕೃಷಿ ಹೊಂಡಗಳ ನಿರ್ಮಾಣ ಮಾಡುವ ಬಗ್ಗೆ ವಿವ ರಿಸಿದರು. ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರವಿಕುಮಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸುಂದರ್, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಹರೀಶ್ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೂಪಾ ಇದ್ದರು.

ವೇದಿಕೆ ಕಾರ್ಯಕ್ರಮದ ನಂತರ ತಾಲೂಕು ಪಂಚಾಯಿತಿಯಿಂದ ಬಾಲಮಂದಿರದ ಆವರಣ ದಲ್ಲಿ ಸಾಂಕೇತಿಕವಾಗಿ 25 ಗಿಡಗಳನ್ನು ನೆಡಲಾಯಿತು.

ಆಲೂರು ವರದಿ: ನೀರು ಜಗತ್ತಿನ ಸಕಲ ಜೀವ ರಾಶಿಗಳಿಗೂ ಅಮೂಲ್ಯವಾದ ಸಂಪತ್ತು. ಏಕೆಂ ದರೆ ಜೀವಿಗಳ ದೇಹ ಬಹುತೇಕ ನೀರಿನಿಂದಲೇ ಸಕ್ರಿಯವಾಗಿದೆ. ದೇಹದಲ್ಲಿ ನೀರು ಕಡಿಮೆಯಾ ದರೆ ನಿರ್ಜಲೀಕರಣ ಉಂಟಾಗಿ ಜೀವಕೋಶಗಳ ಕಾರ್ಯ ಸ್ಥಗಿತಗೊಂಡು ಅವಸಾನಕ್ಕೆ ತುತ್ತಾಗ ಬೇಕಾಗುತ್ತದೆ ಎಂದು ಆಲೂರು ತಾಲೂಕು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ರುದ್ರೇಶ್ ಹೇಳಿದರು.

ಅವರು ತಾಲೂಕಿನ ಹುಣಸವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಭಾರತ್ ಅವರು, ಸ್ಕೌಟ್ಸ್ & ಗೈಡ್ಸ್‍ನಿಂದ ನಡೆದ ‘ವಿಶ್ವ ಜಲ ದಿನಾಚರಣೆ’ ಕಾರ್ಯಕ್ರಮದಲ್ಲಿ ಭಾಗವ ಹಿಸಿ ಮಾತನಾಡಿ, ಊಟವಿಲ್ಲದೇ ದಿನಗಟ್ಟಲೇ ಬದುಕಬಹುದು ಆದರೆ ನೀರಿಲ್ಲದೆ ಬದುಕಲು ಅಸಾಧ್ಯ. ನಮ್ಮ ಜೀವನದುದ್ದಕ್ಕೂ ನೀರು ಹಾಸು ಹೊಕ್ಕಾಗಿದೆ. ಯಾವುದೇ ನೀತಿಯನ್ನು ಹೇಳುವ ಮುನ್ನ ನಾವು ಹೇಳಲು ಯೋಗ್ಯವಾಗಿದ್ದೀವಾ? ಎಂದು ಪ್ರಶ್ನಿಸಿಕೊಳ್ಳಬೇಕು ಎಂದರು.

ನೀರಿನ ಸಂರಕ್ಷಣೆಯ ಬಗ್ಗೆ ಹೇಳಬೇಕಾದರೆ ನಾವೂ ಆ ನಿಟ್ಟಿನಲ್ಲಿ ಕಾರ್ಯ ಮಾಡಿರಬೇಕು. ನೀರನ್ನು ಎಚ್ಚರಿಕೆಯಿಂದ ಬಳಸಿಕೊಳ್ಳುವುದನ್ನು ಪ್ರತಿಯೊಬ್ಬ ನಾಗರಿಕನೂ ಕಲಿಯಬೇಕಾಗಿದೆ. ವಿದೇಶಗಳಲ್ಲಿ ಕುಡಿಯುವ ನೀರಿಗೂ ಹಣ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶೌಚಕ್ಕೆ ನೀರಿಲ್ಲದೇ ಪ್ಯಾಡ್‍ಗಳನ್ನು ಬಳಸುವುದನ್ನು ಕಾಣುತ್ತೇವೆ. ನೀರು ಹಾಗೂ ಆಹಾರ ಬಳಕೆ ಮಾಡುವ ಮುನ್ನ ಮಾನವೀಯ ಕಳಕಳಿಯಿಂದ ಯೋಚಿಸಬೇಕು. ಎಷ್ಟು ಅವಶ್ಯಕತೆಯಿದೆಯೋ ಅಷ್ಟನ್ನೇ ಬಳಸಬೇಕು ಎಂದು ಸಲಹೆ ನೀಡಿದರು.

ತಾಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್.ಉಪ್ಪಾರ್ ಮಾತನಾಡಿ, ಭಾರತ್ ಸ್ಕೌಟ್ಸ್ & ಗೈಡ್ಸ್ ಮೂಲ ಸಂಪನ್ಮೂಲಗಳ ಉಳಿಕೆ ಮತ್ತು ಮಿತ ಬಳಕೆಯ ನಿಟ್ಟಿನಲ್ಲಿ ತನ್ನದೇಯಾದ ಮಹತ್ವದ ಕಾರ್ಯ ಗಳನ್ನು ಮಾಡುತ್ತಿದೆ. ಸುಮಾರು 215 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ಕೊಂಡಿರುವ ಭಾರತ್ ಸ್ಕೌಟ್ಸ್ & ಗೈಡ್ಸ್ ಸಂಸ್ಥೆ ಕೋಟ್ಯಾನುಕೋಟಿ ಸ್ವಯಂ ಸೇವಕರನ್ನು ಹೊಂದಿದ್ದು, ಸಾಮಾಜಿಕ ಜಾಗೃತಿ ಕಾರ್ಯಗಳನ್ನು ಮಾಡುತ್ತಾ ಸ್ವತಃ ಸೇವಾ ಕಾರ್ಯಗಳಲ್ಲಿ ತೊಡಗಿದೆ.

ಇಂತಹ ಜಾಗೃತಿ ಕಾರ್ಯಕ್ರಮಗಳು ಕೇವಲ ವೇದಿಕೆಗಳಿಗೆ ಮಾತ್ರ ಸೀಮಿತವಾಗಿರದೇ ಅನು ಷ್ಠಾನಕ್ಕೆ ಬರಬೇಕು. ಪ್ರತಿಯೊಬ್ಬ ನಾಗರಿಕನೂ ಜಲ ಸಂರಕ್ಷಣೆಯ ಬಗ್ಗೆ ಅರಿವನ್ನು ಹೊಂದ ಬೇಕು. ಭೂಮಿಯಲ್ಲಿ ಶೇ.70ಕ್ಕಿಂತ ಅಧಿಕ ನೀರಿ ದ್ದರೂ ಕುಡಿಯಲು ಯೋಗ್ಯವಾದ ಸಿಹಿನೀರು ದೊರೆಯುವುದು ಶೇ.3 ರಷ್ಟು ಮಾತ್ರ ಇದೆ. ಅರಣ್ಯ ನಾಶದಿಂದಾಗಿ ವಾತಾವರಣದಲ್ಲಿ ಇಂಗಾ ಲದ ಪ್ರಮಾಣ ಅಧಿಕಗೊಂಡು ತಾಪಮಾನ ಹೆಚ್ಚಾದಂತೆ ನೀರಿನ ಬಳಕೆ ದ್ವಿಗುಣಗೊಳ್ಳುತ್ತಿರುವು ದರಿಂದ ಈ ಹಿಂದೆ 15 ರಿಂದ 20 ಅಡಿಗೆ ದೊರೆ ಯುತ್ತಿದ್ದ ನೀರು ಇಂದು ನಾಲ್ಕೈದು ನೂರು ಅಡಿ ಗಳು ಆಳಕ್ಕೆ ಬೋರ್‍ವೆಲ್ ಕೊರೆಯಿಸಿದರೂ ನೀರು ದೊರೆಯುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಮುಖ್ಯ ಶಿಕ್ಷಕಿ ಎಂ.ಆರ್.ಚಂದ್ರಮ್ಮ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಕಾರ್ಯಕ್ರಮದಿಂದಾಗಿ ನಮ್ಮ ಮಕ್ಕಳಿಗೆ ಹಾಗೂ ಭಾಗವಹಿಸಿದ ಎಲ್ಲರಿಗೂ ವಿಶ್ವ ಜಲದಿನಾಚರ ಣೆಯ ಮಹತ್ವ, ಸಂರಕ್ಷಣೆಯ ಅಂಶಗಳ ಬಗ್ಗೆ ತಿಳಿಯಿತು. ಜಾಗೃತಿ ಕಾರ್ಯಕ್ರಮಗಳು ಹೆಚ್ಚಿ ದಂತೆಲ್ಲಾ ಸಮಾಜ ಸುಧಾರಣೆಯಾಗಲು ಅನು ಕೂಲವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಶಾಲೆಯ ಸ್ಕೌಟ್ಸ್ & ಗೈಡ್ಸ್ ದಳಗಳು ಸಾಮಾಜಿಕ ಚಿಂತನೆಯ ಯಾವುದೇ ಕಾರ್ಯಕ್ರಮಗಳನ್ನು ಮಾಡಿದರೂ ಸಂಪೂರ್ಣ ಸಹಕಾರ ನೀಡುವುದರ ಜೊತೆಗೆ ನಾವೂ ಕೈಜೋಡಿಸುತ್ತೇವೆ ಎಂದರು.

ಜಿಲ್ಲಾ ಜಂಟಿ ಕಾರ್ಯದರ್ಶಿ ಎಚ್.ಜಿ.ಕಾಂಚನ ಮಾಲ ಮಾತನಾಡಿ, ನೀರು ಎಂದರೆ ಜೀವ. ನೀರಿ ಲ್ಲದೇ ಜೀವವಿಲ್ಲ. ಆದ್ದರಿಂದಲೇ ನೀರನ್ನು ಜೀವಜಲ ಎನ್ನುತ್ತೇವೆ. ನೀರನ್ನು ಅಮೂಲ್ಯವಾಗಿ ಬಳಕೆ ಮಾಡಬೇಕು. ಎಷ್ಟು ಅವಶ್ಯಕವೋ ಅಷ್ಟನ್ನು ಮಾತ್ರ ಬಳಸಬೇಕು. ಸಾರ್ವಜನಿಕ ಸ್ಥಳಗಳಲ್ಲಿನ ನೀರಿನ ಮೂಲಗಳು, ಬೀದಿ ನಲ್ಲಿಗಳು ಮುಂತಾದ ಜಾಗ ಗಳಲ್ಲಿ ನೀರು ಪೋಲಾಗುತ್ತಿದ್ದರೆ ಅದನ್ನು ಕೂಡಲೇ ನಿಲ್ಲಿಸಬೇಕು. ಇತರರಿಗೂ ಈ ಕುರಿತು ಜಾಗೃತಿ ಮೂಡಿಸಬೇಕು ಎಂದರು.

ಹುಣಸವಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಚ್.ವಿ.ಸಹನ, ಹುಣಸವಳ್ಳಿ ಗೈಡ್ ಕ್ಯಾಪ್ಟನ್ ಬಿ.ಎಸ್.ದಾಕ್ಷಾಯಣಿ, ಸ್ಕೌಟ್ ಮಾಸ್ಟರ್ ಡಿ.ಧರ್ಮೇಶ್, ವಾಟೆಹೊಳೆ ಶಾಲೆಯ ಗೈಡ್ ಕ್ಯಾಪ್ಟನ್ ಮಹೇರಾಬಾನು, ಶಾಲಾ ಶಿಕ್ಷಕಿ ನಸಿ ಮುನ್ನೀಸಾ, ಸಹ ಶಿಕ್ಷಕ ಲೋಕೇಶ್ ಮಾತ ನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾ ಯಿತಿ ಕಾರ್ಯದರ್ಶಿ ಸೋಮೇಗೌಡ, ಪತ್ರಕರ್ತ ಟಿ.ಎಂ.ಸತೀಶ್ ಇತರರು ಹಾಜರಿದ್ದರು.

ನೆಮ್ಮದಿಯ ಜೀವನಕ್ಕೆ ಪರಿಸರದ ಕೊಡುಗೆ ಅನನ್ಯ
ಅರಸೀಕೆರೆ: ನಮ್ಮ ಮುಂದಿನ ಪೀಳಿಗೆ ಸುಖ ನೆಮ್ಮದಿಯ ಜೀವನ ನಡೆಸಬೇಕಾದರೆ ಹಣ ಮತ್ತು ಸಂಪತ್ತು ಮಾಡುವುದಕ್ಕಿಂತ ಗಿಡ, ಮರ ಹಾಗೂ ಜಲದ ಉತ್ತಮ ಪರಿಸರದ ಕೊಡುಗೆ ನೀಡಬೇಕು ಎಂದು ತಾಲೂಕು ಪಂಚಾಯಿತಿ ಇಓ ಕೃಷ್ಣಮೂರ್ತಿ ಕರೆ ನೀಡಿದರು.

ನಗರದಲ್ಲಿ ತಾಲೂಕು ಪಂಚಾಯಿತಿ ವತಿಯಿಂದ ಅರಣ್ಯ ಇಲಾಖೆ, ಶಿಕ್ಷಣ, ಸಿಡಿಪಿಒ, ಪೊಲೀಸ್ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಸಹಯೋಗದೊಂದಿಗೆ ವಿಶ್ವ ಜಲ ಸಂರಕ್ಷಣಾ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ತಮ ಪರಿಸರ ಉಳಿಸಿ ಕೊಳ್ಳುವ ನಿಟ್ಟಿನಲ್ಲಿ ಇಂದು ಮಾನವ ಚಿಂತಿಸುತ್ತಿಲ್ಲ. ಕೇವಲ ತನ್ನ ಬಯಕೆಗಳ ಪೂರೈಸಿಕೊಳ್ಳುವ ದುರಾಸೆಯಿಂದ ನಿಸರ್ಗದ ಉಳಿವಿನೆಡೆಗೆ ಒತ್ತು ನೀಡದಿರುವುದು ದುರದೃಷ್ಟಕರ ಎಂದರು.

ತಹಸೀಲ್ದಾರ್ ಸಂತೋಷ ಕುಮಾರ್ ಮಾತನಾಡಿ, ಪ್ರತಿ ಮನೆಗಳಲ್ಲಿ ಅನವಶ್ಯಕವಾಗಿ ವ್ಯರ್ಥ ಮಾಡುತ್ತಿರುವ ನೀರಿನ ಬಗ್ಗೆ ಎಲ್ಲರೂ ಗಮನ ಹರಿಸಬೇಕು. ಒಮ್ಮೆ ಅಂತರ್ಜಲವನ್ನು ನಾವು ಹೊರ ತೆಗೆದಲ್ಲಿ ಮತ್ತೆ ಅದನ್ನು ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಇದರ ಅರಿವು ಪ್ರತಿಯೊಬ್ಬರಿಗೂ ಇರಬೇಕು. ನಮ್ಮ ಬಳಕೆಯ ನೀರಿನ ಪ್ರಮಾಣವನ್ನು ಇತಿಮಿತಿಯಲ್ಲಿ ಬಳಸಿ ಉಳಿಸಬೇಕು. ಜಗತ್ತಿನಲ್ಲಿ ನಾವು ಪುನಃ ಉತ್ಪಾದಿಸಲಾಗದ ಗಾಳಿ ನೀರನ್ನು ನಾವು ಹೆಚ್ಚು ಸ್ವಚ್ಛವಾಗಿಟ್ಟು ಸಂರಕ್ಷಿಸಿದರೆ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ಬದುಕು ನೀಡಲು ಸಾಧÀ್ಯವಾಗುತ್ತದೆ ಎಂದರು
ಪೊಲೀಸ್ ನಿರೀಕ್ಷಕ ರಂಗಸ್ವಾಮಿ, ಸಾಮಾಜಿಕ ಅರಣ್ಯ ವಲಯಾಧಿಕಾರಿ ಶ್ರೀಲಕ್ಷ್ಮಿ, ಇಸಿಒ ಶಿವಣ್ಣ, ಸಿಡಿಪಿಒ ಶಂಕರಮೂರ್ತಿ, ಸ್ವೀಪ್ ನೋಡಲ್ ಅಧಿಕಾರಿ ಮಂಜುನಾಥ್, ಅಕ್ಷರ ದಾಸೋಹ ಅಧಿಕಾರಿ ಜಗದೀಶ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ತಾ.ಪಂ ಆವರಣದಲ್ಲಿ ಕೆಲವು ಸಸಿಗಳನ್ನು ನೆಟ್ಟು ಜಲ ಸಂರಕ್ಷಣೆಯ ಬಗ್ಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.

Translate »