ವ್ಯಾಸಂಗ ವೇಳೆಯೇ ದೇಶಪ್ರೇಮ ರೂಢಿಸಿಕೊಳ್ಳಿ: ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉತ್ತೇಜನ
ಹಾಸನ

ವ್ಯಾಸಂಗ ವೇಳೆಯೇ ದೇಶಪ್ರೇಮ ರೂಢಿಸಿಕೊಳ್ಳಿ: ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉತ್ತೇಜನ

July 28, 2019

ಅರಸೀಕೆರೆ, ಜು.27- ವಿದ್ಯಾರ್ಥಿಗಳು ಶಿಕ್ಷಣದ ಸಮಯದಲ್ಲಿ ದೇಶ ಮತ್ತು ದೇಶ ಕಾಯುವ ಸೈನಿಕರ ಬಗ್ಗೆ ಮಾಹಿತಿ ಪಡೆದು ಕೊಳ್ಳುವ ಮೂಲಕ ದೇಶಪ್ರೇಮ ಹೆಚ್ಚಿಸಿ ಕೊಳ್ಳಬೇಕು. ಅವಕಾಶ ದೊರೆತರೆ ಸೈನಿಕ ರಾಗಿ ತಾಯಿ ನಾಡಿಗೆ ಸೇವೆ ಸಲ್ಲಿಸಲು ಯತ್ನಿಸಬೇಕು ಎಂದು ಅನಂತ್ ಇಂಟರ್ ನ್ಯಾಷನಲ್ ಶಾಲೆ ಸಂಸ್ಥಾಪಕ ಅಧ್ಯಕ್ಷ ಆರ್.ಆನಂತ್ ಕುಮಾರ್ ಕರೆ ನೀಡಿದರು.

ನಗರದ ಅನಂತ್ ಇಂಟರ್‍ನ್ಯಾಷನಲ್ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿನ ದಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದ ಜನರು ಹೆಚ್ಚಿನ ಸಂಖ್ಯೆ ಯಲ್ಲಿ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಡಿಕೇರಿ, ಉತ್ತರ ಕರ್ನಾಟಕ ಸೇರಿದಂತೆ ವಿವಿಧ ಜಿಲ್ಲೆಗಳ ದೇಶಾಭಿಮಾನಿ ಯುವ ಕರು ಸೈನ್ಯಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಕಾರ್ಗಿಲ್ ಯುದ್ದದಲ್ಲಿ ವೀರಾವೇಶದಿಂದ ಹೋರಾಡಿ ಹುತಾತ್ಮರಾದ ನಮ್ಮ ಸೈನಿಕ ರನ್ನು ಸ್ಮರಿಸಿ ಗೌರವಿಸುವುದು ಎಲ್ಲರ ಕರ್ತವ್ಯ. ವಿದ್ಯಾರ್ಥಿಗಳು ಸೈನಿಕರ ಬಗ್ಗೆ ಅಭಿಮಾನ ಹೊಂದಬೇಕು ಎಂದರು.

ಪ್ರಾಶಂಪಾಲ ವಿವೇಕಾನಂದ, ಸೈನಿಕ ಎಂಬ ಪದವೇ ರೋಮಾಂಚನಗೊಳಿಸು ತ್ತದೆ. ನಮ್ಮ ಸೈನಿಕರ ಸೇವೆಗೆ ಬೆಲೆ ಕಟ್ಟಲಾ ಗುವುದಿಲ್ಲ. ಕಾರ್ಗಿಲ್ ವಿಜಯದ ಹಿಂದೆ ಹುತ್ತಾತ್ಮ ಯೋಧರ ತ್ಯಾಗ ಬಲಿದಾನಗಳಿವೆ ಎಂದರು. ಶಾಲೆಯ ಬೋಧಕ ವರ್ಗ ದವರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

Translate »