ದಲಿತ ಉದ್ಯಮಿಗಳಿಗಾಗಿ ಹಾಸನ್ದಲಿತ್ ಕಾಮರ್ಸ್ ಯೂನಿಯನ್
ಹಾಸನ

ದಲಿತ ಉದ್ಯಮಿಗಳಿಗಾಗಿ ಹಾಸನ್ದಲಿತ್ ಕಾಮರ್ಸ್ ಯೂನಿಯನ್

July 28, 2019

ಹಾಸನ,ಜು.27- ಜಿಲ್ಲೆಯಲ್ಲಿರುವ ದಲಿತ ಸಮುದಾಯದ ಉದ್ಯಮಿಗಳನ್ನು ಒಂದೆಡೆ ಸಂಘಟಿಸುವ ಹಾಗೂ ಉದ್ಯಮ ಕ್ಷೇತ್ರ ಪ್ರವೇಶಿಸಲು ಆಸಕ್ತಿ ಹೊಂದಿರುವವರನ್ನು ಉತ್ತೇಜಿಸುವ ಉದ್ದೇಶದಿಂದ ಜಿಲ್ಲೆಯ ಉದ್ಯಮಿಗಳು ಒಗ್ಗೂಡಿ `ಹಾಸನ್ ದಲಿತ ಆಫ್ ಕಾಮರ್ಸ್ ಯೂನಿಯನ್’ ಸಂಸ್ಥೆ ಆರಂಭಿಸಿದ್ದಾರೆ.

ನಗರದ ಖಾಸಗಿ ಹೋಟೆಲ್‍ನಲ್ಲಿ ದಲಿತ ಉದ್ಯಮಿಗಳು ಶನಿವಾರ ಪೂರ್ವ ಭಾವಿ ಸಭೆ ನಡೆಸಿ ನೂತನ ಸಂಘ ಸ್ಥಾಪನೆ ಮಾಡಿದರು. ಸಂಘದ ಅಧ್ಯಕ್ಷ ರಾಗಿ ಉದ್ಯಮಿ ಕೆ.ಪಿ.ಪ್ರಮೋದ್, ಉಪಾ ಧ್ಯಕ್ಷರಾಗಿ ಶಿವಪ್ಪನಾಯಕ್, ನಿಟ್ಟೂರು ಸ್ವಾಮಿ, ನಾಗರಾಜ್ ಹೆತ್ತೂರ್, ಪ್ರಸನ್ನ, ಕಾರ್ಯದರ್ಶಿಯಾಗಿ ನಾಗೇಂದ್ರಪ್ಪ ಅವರನ್ನು ಆಯ್ಕೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಪ್ರಮೋದ್, ಸರ್ಕಾರ ಕೊಡು ತ್ತಿರುವ ಹಲವು ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ದಲಿತ ಯುವಕರನ್ನು ಉದ್ದಿಮೆದಾರರನ್ನಾಗಿ ಮಾಡುವುದು ಸಂಘದ ಮುಖ್ಯ ಉದ್ದೇಶ. ಅನೇಕ ದಲಿತ ಯುವಕರು ವಿದ್ಯಾವಂತರಿದ್ದಾರೆ. ಸರಿಯಾದ ಅವಕಾಶ, ಮಾರ್ಗದರ್ಶನ ಇಲ್ಲದೇ ದಾರಿ ತಪ್ಪುತ್ತಿದ್ದಾರೆ. ಅವರನ್ನು ಸರಿ ದಾರಿಗೆ ತರುವ ಉದ್ದೇಶ ಸಂಘ ದ್ದಾಗಿದೆ. ಯುವಕರ ವಿದ್ಯಾರ್ಹತೆಗೆ ಅನು ಗುಣವಾಗಿ ಉದ್ಯೋಗ ಹಾಗೂ ಉದ್ದಿಮೆ ಮಾಡಲು ಸಂಘ ಸದಾ ಮಾರ್ಗದರ್ಶನ ನೀಡಲಿದೆ ಎಂದರು.

ನಾಗೇಂದ್ರಪ್ಪ ಮಾತನಾಡಿ, ಜಿಲ್ಲೆಯಲ್ಲಿ ದಲಿತ ಇಂಡಸ್ಟ್ರೀಸ್ ಪುನರ್ ಚೇತನ ಗೊಳಿಸಲು ಸಂಘ ಸಹಕಾರಿಯಾಗಲಿದೆ. ಸಂಘ ಇತರೆ ಜನಾಂಗದ ಸಂಘಟನೆಗೆ ಮಾದರಿಯಾಗುವಂತೆ ಪ್ರತಿಯೊಬ್ಬರೂ ಸಹಕರಿಸಿ ಶ್ರಮಿಸಬೇಕು ಎಂದರು.

ಈ ಸಂದರ್ಭ ಗ್ಯಾಸ್ ಉದ್ಯಮಿ ಶ್ರೀನಿವಾಸ್, ಆರ್‍ಪಿಐ ಸತೀಶ್, ಅನು, ಕುಮಾರ್, ಬೂದೇಶ್, ಪ್ರಸನ್ನ, ಬ್ಯಾಕರವಳ್ಳಿ ವೆಂಕಟೇಶ್, ಚೌಡಹಳ್ಳಿ ಜಗದೀಶ್, ದಿವಾಕರ್ ಮತ್ತಿತರರಿದ್ದರು.