ಬಿಎಸ್‍ವೈ ಪ್ರಮಾಣ; ಅರಸೀಕೆರೆಯಲ್ಲಿ ಸಂಭ್ರಮ
ಹಾಸನ

ಬಿಎಸ್‍ವೈ ಪ್ರಮಾಣ; ಅರಸೀಕೆರೆಯಲ್ಲಿ ಸಂಭ್ರಮ

July 28, 2019

ಅರಸೀಕೆರೆ,ಜು.27-ಬಿ.ಎಸ್.ಯಡಿಯೂರಪ್ಪ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರಿಂದ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಸಂಜೆ 6ರ ವೇಳೆ ನಗರದ ಪಿಪಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಬಿಎಸ್‍ವೈಗೆ ಜೈಕಾರ ಹಾಕಿ ವಿಜಯೋ ತ್ಸವ ಆಚರಿಸಿದರು.

ಈ ಸಂದರ್ಭ ಬಿಜೆಪಿ ನಗರಾಧ್ಯಕ್ಷ ಮನೋಜ್‍ಕುಮಾರ್ ಮಾತನಾಡಿ, ರಾಜಕೀಯ ಧರ್ಮಕ್ಕೆ ಜಯ ಸಿಕ್ಕಿದೆ. ಕಳೆದ 14 ತಿಂಗಳು ಮೈತ್ರಿ ಸರಕಾರದ ದೌರ್ಜನ್ಯದಿಂದ ತತ್ತರಿಸಿದ ಜನತೆ ಮುಂದಿನ ದಿನಗಳಲ್ಲಿ ನೆಮ್ಮದಿ ಕಾಣ ಬಹುದಾಗಿದೆ. ಬಿಜೆಪಿಯ ಸರಕಾರ ರಚನೆಯಾಗಿರುವುದರಿಂದ ರಾಜ್ಯ ಅಭಿ ವೃದ್ದಿ ಕಾಣಲಿದೆ. ರೈತರ ನಾಯಕರಾದ ಯಡಿಯೂರಪ್ಪ ಅವರಿಂದ ಅನ್ನದಾತ ರಿಗೆ ಇನ್ನು ಮುಂದೆ ಸಿಹಿಯೇ ಸಿಗುಲಿದೆ. ರೈತ ಪರ ಕಾರ್ಯಕ್ರಮಗಳು ಮತ್ತು ಶಾಶ್ವತ ಯೋಜನೆಗಳು ಅನುಷ್ಠಾನಗೊಳ್ಳುತ್ತಾ ಕರ್ನಾಟಕ ಸಮೃದ್ದವಾಗಲಿದೆ ಎಂದರು.

ಈ ಸಂದರ್ಭ ಶಿವನ್‍ರಾಜ್, ರಮೇಶ್ ನಾಯ್ಡು, ಎಸ್‍ಎಲ್‍ಎನ್ ವಿಜಿ, ನವರ ತನ್ ಜೈನ್, ನಾಗೇಶ್, ರಾಜಕುಮಾರ್, ವಿನೋದ್ ಕುಟ್ಟಿ, ರವಿ, ಶಿಲ್ಪಾ, ಕಾಟಿಕೆರೆ ಬಾಬು, ರಘು, ದಿನೇಶ್, ಸುಭಾಷ್, ಪ್ರಭಾ ಕರ್, ಅವಿನಾಶ್ ನಾಯ್ಡು, ವಿನೋದ್, ನಾಗೇಶ್, ಅನಸೂಯಮ್ಮ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.