1 ಕಾಡಾನೆ ಸೆರೆಗೆ 5 ಸಾಕಾನೆ ಬಳಕೆ
ಹಾಸನ

1 ಕಾಡಾನೆ ಸೆರೆಗೆ 5 ಸಾಕಾನೆ ಬಳಕೆ

July 28, 2019

ಹಾಸನ,ಜು.27- ಒಂಟಿ ಸಲಗವೊಂದು ನಗರ ಪ್ರವೇಶಿಸಿ ಆತಂಕ ಉಂಟು ಮಾಡಿದ ಬಳಿಕ ಜನರ ದೂರಿನ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಲಗವನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸಲು ಮುಂದಾಗಿದ್ದಾರೆ.

ಕಾಡಾನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು 5 ಸಾಕಾನೆಗಳನ್ನು ಕರೆಸಿಕೊಂಡಿದ್ದಾರೆ. ಪಳಗಿದ ಈ 5 ಆನೆಗಳು ಶನಿವಾರ ಬೆಳಿಗ್ಗೆ ಲಾರಿಯಲ್ಲಿ ಬಂದಿಳಿದಿವೆ.

ಕಳೆದ ಜೂನ್‍ನಲ್ಲಿ ಕಾಡಾನೆಯೊಂದು ಹಾಸನ ನಗರದ ಹುಣಸಿನಕೆರೆಗೆ ಬಂದಿತ್ತು. ನಂತರ ಆ ಆನೆಯನ್ನು ಅರಣ್ಯ ಇಲಾಖೆಯವರು ಕಾಡಿಗೆ ಓಡಿಸಿದ್ದರು. ಮತ್ತೆ ಜುಲೈನÀಲ್ಲಿ ಒಂಟಿ ಸಲಗ ಮತ್ತೆ ನಗರದ ಪೆನ್ಷನ್ ಮೊಹಲ್ಲಾ, ಜವೇನಹಳ್ಳಿ ಮಠದ ಬಳಿ ಸುತ್ತಾಡಿದೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯವರು ಒಂಟಿ ಆನೆಯನ್ನು ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾದರು. ಮತ್ತೆ ಮತ್ತೆ ನಗರ ಪ್ರವೇಶಿಸು ತ್ತಿರುವ ಈ ಆನೆಯನ್ನು ಸೆರೆ ಹಿಡಿದು ಬೇರೆಡೆ ಸಾಗಿಸುವ ಸಲುವಾಗಿ ಮತ್ತಿಗೋಡುನಿಂದ 2 ಆನೆ, ದುಬಾರ ಕ್ಯಾಂಪಿನಿಂದ 3 ಆನೆಗಳನ್ನು ಕರೆಸಿಕೊಳ್ಳಲಾಗಿದೆ. 5 ಕಾಡಾನೆಗಳನ್ನು ತಾಲೂ ಕಿನ ವೀರಾಪುರ ಕ್ಯಾಂಪ್ ಜಾಗಕ್ಕೆ ಕರೆದೊಯ್ಯಲಾಗಿದೆ. ಇನ್ನೇನಿ ದ್ದರೂ ನಗರದ ಜನರಿಗೆ ತೊಂದರೆ ಕೊಡುತ್ತಿರುವ ಆ 1 ಕಾಡಾನೆಯನ್ನು ಹಿಡಿಯುವ ಕಾರ್ಯ ನಡೆಯಬೇಕಿದೆ.

Translate »