ಹವಾಲ ಸುಳಿಯಲ್ಲಿ ಡಿಕೆಶಿ
ಮೈಸೂರು

ಹವಾಲ ಸುಳಿಯಲ್ಲಿ ಡಿಕೆಶಿ

June 21, 2018
  •  ಕಾಂಗ್ರೆಸ್ ಹೈಕಮಾಂಡ್‍ಗೆ ಕೋಟಿ ಕೋಟಿ ಸಾಗಿಸಿದ ಆರೋಪ
  • ಡಿಕೆಶಿ ಸೇರಿ ಐವರ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹವಾಲ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿರುವುದನ್ನು ಆದಾಯ ತೆರಿಗೆ ಇಲಾಖೆ ಪತ್ತೆ ಹಚ್ಚಿದೆ.

ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ 25 ಪುಟಗಳ ಆರೋಪ ಪಟ್ಟಿ ಸಲ್ಲಿಸಲಾ ಗಿದೆ. ಈ ಹಣವನ್ನು ಕಾಂಗ್ರೆಸ್ ವರಿಷ್ಠರಿಗೆ ಹವಾಲ ಮೂಲಕ ರವಾನಿಸಲಾಗಿದೆ ಎಂದು ಆರೋಪಿಸಲಾಗಿದೆ. ಮುಂದಿನ ದಿನಗಳಲ್ಲಿ ಅವರ ವಿರೋಧಿಗಳು ಈ ಪ್ರಕರಣವನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಹಿಂದೆ ಬೆಂಗಳೂರಿನಲ್ಲಿ ನಡೆದ ಐಟಿ ದಾಳಿ ಸಂದರ್ಭದಲ್ಲಿ ದೆಹಲಿ ಯಲ್ಲೂ ದಾಳಿ ನಡೆದಿತ್ತು. ಇದೇ ವಿಚಾರ ವಾಗಿ ಸಲ್ಲಿಸಿದ ದೂರಿನ ವಿಚಾರಣೆ ಇದಾ ಗಿದ್ದು, ರಾಜೇಂದ್ರ, ಸುನಿಲ್ ಶರ್ಮಾ, ಆಂಜ ನೇಯ ಮುಂತಾದವರು ವಿಭಿನ್ನ ಹೇಳಿಕೆ ನೀಡಿದ್ದರು. ಆದರೆ 7 ತಿಂಗಳ ಬಳಿಕ ಐಟಿಗೆ ಪತ್ರ ಬರೆದಿರುವ ಆರೋಪಿ ಗಳು ತಾವು ಆತಂಕದಲ್ಲಿ ಹೇಳಿಕೆ ನೀಡಿದ್ದಾಗಿ ಉಲ್ಟಾ ಹೊಡೆದಿರುವುದಲ್ಲದೆ, ಕೆ.ಜಿ ಎಂದರೆ ಲಕ್ಷ ಎಂದು ಕೋಡ್ ವರ್ಡ್ ಎಂದು ಸ್ಪಷ್ಟಪಡಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಅವರ ಅಘೋಷಿತ ನಗದು ವ್ಯವಹಾರ ನೋಡಿಕೊಳ್ಳುತ್ತಿದ್ದ ಕರ್ನಾಟಕ ಭವನದ ಸಂಪರ್ಕಾಧಿಕಾರಿ ಆಂಜನೇಯ ಶಾಕಿಂಗ್ ಹೇಳಿಕೆ ನೀಡಿದ್ದು, ತನ್ನ ಮನೆ ಮೇಲೆ ನಡೆದಿದ್ದ ಐಟಿ ದಾಳಿ ವೇಳೆ ಸಿಕ್ಕಿದ್ದ ಸುಮಾರು 12.44 ಲಕ್ಷ ರೂಪಾಯಿ ಡಿ.ಕೆ.ಶಿವಕುಮಾರ್ ಅವರಿಗೆ ಸೇರಿದ್ದು ಎಂದು ಹೇಳಿಕೆ ನೀಡಿದ್ದರು.

ಜೀವನ್ ನೀಲರಗಿ ಎಂಬ ವಕೀಲರು ಬೆಂಗಳೂರಿನ ಆರ್ಥಿಕ ಅಪರಾಧಗಳ ನ್ಯಾಯಾ ಲಯಕ್ಕೆ ನೀಡಿರುವ ದೂರಿನಲ್ಲಿ ಡಿ.ಕೆ. ಶಿವಕುಮಾರ್ ಕಾನೂನುಬಾಹಿರ ವಾಗಿ ಆರ್ಥಿಕ ವ್ಯವಹಾರ ನಡೆಸಿರುವುದು ಮತ್ತು ಹವಾಲ ದಂಧೆಯಲ್ಲೂ ತೊಡಗಿದ್ದಾರೆ ಎಂದು ದಾಖಲೆ ಸಮೇತ ನ್ಯಾಯಾ ಲಯದ ಗಮನಕ್ಕೆ ತಂದಿದ್ದಾರೆ. ಹವಾಲ ಮೂಲಕ ಅಕ್ರಮ ಹಣರವಾನೆ ಮೇಲೆ ಕಣ್ಣಿಟ್ಟಿರುವ ಐಟಿ ಇಲಾಖೆ ಲಭ್ಯವಾದ ಮಾಹಿತಿ ಅನ್ವಯ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಮಂಗಳವಾರವಷ್ಟೇ ವರದಿ ನೀಡಿದೆ.
ಇದರ ಜೊತೆಗೆ ದಕ್ಷಿಣ ಕರ್ನಾಟಕ ಆದಾಯ ತೆರಿಗೆ ಇಲಾಖೆ ಉಪ ನಿರ್ದೇ ಶಕ ಟಿ.ಸುನಿಲ್ ಗೌತಮ್, ನ್ಯಾಯಾಲಯಕ್ಕೆ ಮತ್ತೊಂದು ಪ್ರತ್ಯೇಕ ದೂರು ನೀಡಿದ್ದಾರೆ.

ದೂರಿನ ಪ್ರಕಾರ ಆದಾಯ ಇಲಾಖೆಗೆ ಸುಳ್ಳು ಮಾಹಿತಿ ನೀಡಿ ತೆರಿಗೆ ವಂಚನೆ ಮಾಡಿರುವ ಪ್ರಕರಣದಲ್ಲಿ ಶಿವಕುಮಾರ್ ಮೊದಲನೇ ಆರೋಪಿಯಾಗಿದ್ದಾರೆ. ಸಚಿನ್ ನಾರಾಯಣ(2), ಸುನಿಲ್ ಶರ್ಮ(3), ಆಂಜನೇಯ(4) ಹಾಗೂ ರಾಜೇಂದ್ರ ಎಂಬುವವರನ್ನು 5ನೇ ಆರೋಪಿ ಮಾಡಲಾಗಿದೆ. ಇಲಾಖೆಗೆ ಸುಳ್ಳು ಮಾಹಿತಿ ನೀಡಿದ ಆರೋಪದಡಿ ಐಟಿ ಇಲಾಖೆ ಹಿರಿಯ ಅಧಿಕಾರಿಗಳು ಆರ್ಥಿಕ ಅಪರಾಧ ನ್ಯಾಯಾ ಲಯಕ್ಕೆ ಸೋಮವಾರ ದೂರು ಸಲ್ಲಿಸಿದ್ದರು. ಐಟಿ ಕಾಯಿದೆ ಸೆಕ್ಷನ್ 277, 278, 193, 199 ಹಾಗೂ 120(ಬಿ) ಅಡಿ ಪ್ರಕರಣ ದಾಖಲಾಗಿತ್ತು. ಆದಾಯ ತೆರಿಗೆ ಇಲಾಖೆಯ ದಾಳಿ ವೇಳೆ ಸಿಕ್ಕ ಮಾಹಿತಿ ಆಧರಿಸಿ ನೀಡಿ ರುವ ದೂರಿನಲ್ಲಿ ಹವಾಲ ಹಣದ ವಿವರ ವನ್ನು ಉಲ್ಲೇಖಿಸಿದ್ದಾರೆ. ಹವಾಲ ಮೂಲಕ ಕೋಟಿಕೋಟಿ ಹಣವನ್ನು ಕಾಂಗ್ರೆಸ್ ಹೈಕಮಾಂಡ್‍ಗೆ ಶಿವಕುಮಾರ್ ಕಳುಹಿಸಿ ಕೊಟ್ಟಿದ್ದಾರೆ ಎಂಬ ಆರೋಪಗಳನ್ನು ಮಾಡ ಲಾಗಿದೆ ಎಂಬ ಮಾಹಿತಿ ಲಭಿಸಿದೆ.

ಒಂದು ವೇಳೆ ಆರೋಪ ಸಾಬೀತಾದರೆ 3 ವರ್ಷ ದಿಂದ 7 ವರ್ಷದವರೆಗೆ ಜೈಲು ಶಿಕ್ಷೆಯಾಗ ಲಿದೆ. ಮಂಗಳವಾರವಷ್ಟೇ ಬೆಂಗಳೂರಿನ ಆರ್ಥಿಕ ಅಪರಾಧ ನ್ಯಾಯಾಲಯ ಆಗಸ್ಟ್ 2ರಂದು ಹಾಜರಾಗುವಂತೆ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಅವರ ಆಪ್ತರಾದ ಸಚಿನ್ ನಾರಾಯಣ್, ಆಂಜನೇಯ, ಸುನೀಲ್ ಕುಮಾರ್ ಶರ್ಮ ವಿರುದ್ಧ ಐಟಿ ಕಾಯ್ದೆ ಸೆಕ್ಷನ್ 277, 278, 193, 199 ಹಾಗೂ 120/ಬಿ ಅಡಿ ದೂರು ದಾಖ ಲಿಸಿ ವಿಚಾರಣೆಗೆ ಹಾಜರಾಗಬೇಕೆಂದು ನ್ಯಾಯಮೂರ್ತಿ ಎಂ.ಎಸ್.ಆಳ್ವ ಸಮನ್ಸ್ ಜಾರಿ ಮಾಡಿದ್ದರು. ಈ ಬೆಳವಣ ಗೆಗಳ ನಡು ವೆಯೇ ಐಟಿ ಅಧಿಕಾರಿಗಳು ಡಿ.ಕೆ.ಶಿವ ಕುಮಾರ್ ಅವರ ವ್ಯಾಪಾರ ವಹಿವಾಟು ಗಳನ್ನು ನೋಡಿಕೊಳ್ಳುತ್ತಿದ್ದ ರಾಜೇಂದ್ರ ಎಂಬುವರ ಮನೆಯಲ್ಲಿ ಸಿಕ್ಕಿದ್ದ ಡೈರಿ ಹಾಗೂ ಕೆಲವು ದಾಖಲೆಗಳನ್ನು ವಶಪಡಿಸಿ ಕೊಂಡ ಸಂದರ್ಭದಲ್ಲಿ ಕೆಲ ಸ್ಫೋಟಕ ಮಾಹಿತಿಗಳು ಬಹಿರಂಗಗೊಂಡಿವೆ. ರಾಜೇಂದ್ರ ಅವರ ಡೈರಿಯಲ್ಲಿ ಉಲ್ಲೇಖ ವಾಗಿರುವಂತೆ
ಈ ಹಿಂದೆ ದೆಹಲಿಯ ಸಫ್ತರ್‍ಜಂಗ್ ಬಳಿಯ ನಾಲ್ಕು ಫ್ಲಾಟ್‍ಗಳಲ್ಲಿ ಸಿಕ್ಕಿದ್ದ 8.68 ಕೋಟಿ ನಗದು ಶಿವಕುಮಾರ್ ಅವರಿಗೆ ಸೇರಿದ್ದು ಎಂಬ ಮಾಹಿತಿಯನ್ನು ಐಟಿ ಅಧಿಕಾರಿಗಳಿಗೆ ನೀಡಿದ್ದಾರೆ.

ಆರೋಪಗಳು: ದೆಹಲಿಯ 4 ಫ್ಲಾಟ್‍ಗಳ ಮೇಲೆ ನಡೆದ ದಾಳಿಯಲ್ಲಿ 8.59 ಕೋಟಿ ರೂ. ಹಣ ಪತ್ತೆಯಾಗಿದೆ. ಶರ್ಮಾ ಟ್ರಾನ್ಸ್ ಪೋರ್ಟ್ ವ್ಯವಹಾರ ನೋಡಿಕೊಳ್ಳುವ ರಾಜೇಂದ್ರ ಮನೆ ಮೇಲೆ ನಡೆದ ದಾಳಿಯಲ್ಲಿ ಡೈರಿ, ಟಿಪ್ಪಣಿಗಳು ಸಿಕ್ಕಿವೆ. ಎಷ್ಟು ಲಕ್ಷ ರೂ.ಗಳನ್ನು ನೀಡಲಾಗಿದೆ ಎನ್ನುವ ಲೆಕ್ಕದ ವಿಚಾರವನ್ನು ಕೆಜಿಗಳ ಲೆಕ್ಕದಲ್ಲಿ ಡೈರಿಯಲ್ಲಿ ನಮೂದಿಸ ಲಾಗಿದೆ.

ಮನೆಯಲ್ಲಿಟ್ಟಿದ್ದ ಹಣವನ್ನು ಎಐಸಿಸಿಗೆ ಕೊಡುವಂತೆ ವಿ.ಮುಳ್‍ಗುಂದ್‍ಗೆ 5 ಕೋಟಿ ರೂ. ಹಣವನ್ನು ರವಾನಿಸಿದ್ದ ಬಗ್ಗೆ ಡೈರಿಯಲ್ಲಿ ಉಲ್ಲೇಖಿಸಿದೆ. ಈ ಹಣವನ್ನು ಡಿಕೆ ಶಿವಕುಮಾರ್ ಸೂಚನೆ ಮೇರೆಗೆ 3.24 ಕೋಟಿ ರೂ. ಹಣವನ್ನು ಆಂಜನೇಯ ಪಾವತಿಸಿದ್ದಾರೆ. ಸಫ್ದರ್ ಜಂಗ್‍ನ 3 ಫ್ಲಾಟ್‍ಗಳು ಅಘೋಷಿತ ಹಣ ಸಂಗ್ರಹಣೆಗೆ ಬಳಕೆಯಾಗಿವೆ ಎಂದು ಐಟಿ ತನ್ನ ದೂರಿನಲ್ಲಿ ಉಲ್ಲೇಖಿಸಿದೆ. ಐಟಿ ದಾಳಿಯಾದ ಬಳಿಕ ಪತ್ತೆಯಾದ ಡೈರಿಯಲ್ಲಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಡಿಕೆ ಶಿವಕುಮಾರ್ ಮತ್ತು ಆರೋಪಿಗಳನ್ನು ವಿಚಾರಣೆ ನಡೆಸಿದ್ದರು. ಕೆಜಿ ಎಂಬ ಕೋಡ್ ವರ್ಡ್ ಬಳಸಿ ನಗದು ವ್ಯವಹಾರ ನಡೆಸುತ್ತಿದ್ದಾರೆ ಎನ್ನುವ ಅನುಮಾನದ ಮೇರೆಗೆ ಅಧಿಕಾರಿಗಳು ಆರೋಪಿಗಳಿಗೆ ಪ್ರಶ್ನೆ ಕೇಳಿದ್ದಾರೆ. ಆದರೆ ಈ ಪ್ರಶ್ನೆಗಳಿಗೆ ಆರೋಪಿಗಳಿಂದ ಸರಿಯಾದ ಉತ್ತರ ಸಿಕ್ಕಿಲ್ಲ ಎಂದು ಮೂಲಗಳು ತಿಳಿಸಿವೆ. ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಆರ್ಥಿಕ ಅಪರಾಧ ನ್ಯಾಯಾಲಯದ ನ್ಯಾ.ಎಂ.ಎಸ್. ಆಳ್ವಾ ಅವರು ಡಿಕೆ ಶಿವಕುಮಾರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದಾರೆ. ಆಗಸ್ಟ್ 2 ರಂದು ಡಿಕೆಶಿ ಸೇರಿ ಎಲ್ಲಾ ಆರೋಪಿಗಳು ಖುದ್ದು ವಿಚಾ ರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಯಾಗಿದೆ. ಈ ಹಿಂದೆ ಡಿ.ಕೆ.ಶಿವಕುಮಾರ್ ಐಟಿ ಇಲಾಖೆ ದಾಖಲಿಸಿದ್ದ ದೂರಿಗೆ ಜಾಮೀನು ಪಡೆದಿದ್ದರು. ಡಿ.ಕೆ.ಶಿವಕುಮಾರ್ ಜೊತೆ ಸಚಿನ್ ನಾರಾಯಣ್, ಸುನಿಲ್ ಕುಮಾರ್ ಶರ್ಮಾ, ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ವಿರುದ್ಧವೂ ಸಮನ್ಸ್ ಜಾರಿಯಾಗಿದೆ.

ದೂರಿನ ವಿವರ

ದೆಹಲಿಯ 4 ಫ್ಲಾಟ್‍ಗಳ ಮೇಲೆ ನಡೆದ ದಾಳಿಯಲ್ಲಿ 8.59 ಕೋಟಿ ರೂ. ಹಣ ಪತ್ತೆಯಾಗಿದೆ. ಶರ್ಮಾ ಟ್ರಾನ್ಸ್ ಪೋರ್ಟ್ ವ್ಯವಹಾರ ನೋಡಿಕೊಳ್ಳುವ ರಾಜೇಂದ್ರ ಮನೆ ಮೇಲೆ ನಡೆದ ದಾಳಿಯಲ್ಲಿ ಡೈರಿ, ಟಿಪ್ಪಣ ಗಳು ಸಿಕ್ಕಿವೆ. ಎಷ್ಟು ಲಕ್ಷ ರೂ.ಗಳನ್ನು ನೀಡಲಾಗಿದೆ ಎನ್ನುವ ಲೆಕ್ಕದ ವಿಚಾರವನ್ನು ಕೆಜಿಗಳ ಲೆಕ್ಕದಲ್ಲಿ ಡೈರಿಯಲ್ಲಿ ನಮೂದಿಸಲಾಗಿದೆ. ಮನೆಯಲ್ಲಿಟ್ಟಿದ್ದ ಹಣವನ್ನು ಎಐಸಿಸಿಗೆ ಕೊಡುವಂತೆ ವಿ.ಮುಳ್‍ಗುಂದ್‍ಗೆ 5 ಕೋಟಿ ರೂ. ಹಣವನ್ನು ರವಾನಿಸಿದ್ದ ಬಗ್ಗೆ ಡೈರಿಯಲ್ಲಿ ಉಲ್ಲೇಖಿಸಿದೆ. ಈ ಹಣವನ್ನು ಡಿಕೆ ಶಿವಕುಮಾರ್ ಸೂಚನೆ ಮೇರೆಗೆ 3.24 ಕೋಟಿ ರೂ. ಹಣವನ್ನು ಆಂಜನೇಯ ಪಾವತಿಸಿದ್ದಾರೆ. ಸಫ್ದರ್‍ಜಂಗ್‍ನ 3 ಫ್ಲಾಟ್‍ಗಳು ಅಘೋಷಿತ ಹಣ ಸಂಗ್ರಹಣೆಗೆ ಬಳಕೆಯಾಗಿವೆ ಎಂದು ಐಟಿ ತನ್ನ ದೂರಿನಲ್ಲಿ ಉಲ್ಲೇಖಿಸಿದೆ.

ಹೀಗೆ ಐಟಿ ಕಿರುಕುಳ ಮುಂದುವರೆಸಿದರೆ  ಬಿಜೆಪಿ ನಾಯಕರ ಬಣ್ಣ ಬಯಲು ಮಾಡ್ತೇನೆ…

ಬೆಂಗಳೂರು: ಕೇಂದ್ರ ಆದಾಯ ತೆರಿಗೆ ಇಲಾಖೆ ತಮಗೆ ಇದೇ ರೀತಿ ಕಿರುಕುಳ ನೀಡುತ್ತಿದ್ದರೆ, ಬಿಜೆಪಿ ನಾಯಕರ ಬಣ್ಣ ಬಯಲು ಮಾಡಬೇಕಾಗುತ್ತದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ. ಆದಾಯಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ತಮಗೆ ನೋಟಿಸ್ ಬಂದಿದೆ. ಆದರೆ ಸಮನ್ಸ್ ಬಂದಿಲ್ಲ. ನನಗಷ್ಟೇ ಅಲ್ಲ ನನ್ನ ತಾಯಿ ಸೇರಿದಂತೆ ನಮ್ಮ ಕುಟುಂಬ ಮತ್ತು ಸ್ನೇಹಿತರಿಗೂ ಇಲಾಖೆ ನೋಟಿಸ್ ಜಾರಿ ಮಾಡಿದೆ. ನನಗಂತೂ ಒಂದಲ್ಲಾ ಒಂದು ರೀತಿಯಲ್ಲಿ ಕಿರುಕುಳ ನೀಡುತ್ತಾ ಬಂದಿದ್ದಾರೆ. ನನಗಿರಲಿ, ನನ್ನ ಒಡನಾಡಿಗಳಿಗೂ ಕಿರುಕುಳ ತಪ್ಪಿಲ್ಲ.

ಬೇರೆ ರಾಜಕಾರಣಿಗಳ ನಿವಾಸದಿಂದ ದಿನಚರಿ ಪುಸ್ತಕಗಳು ದೊರೆತಿವೆ, ಇದಕ್ಕೆ ಸಂಬಂಧಪಟ್ಟವರಿಗೆ ಏಕೆ ಆದಾಯ ಇಲಾಖೆ ನೋಟಿಸ್ ನೀಡುತ್ತಿಲ್ಲ ಎಂದರು. ನಾನು ಬಹಳಷ್ಟು ಸಹಿಸಿಕೊಂಡಿದ್ದೇನೆ. ಇದೇ ರೀತಿ ಮುಂದುವರೆದರೆ, ನನ್ನಲ್ಲಿರುವ ದಾಖಲೆ ಮತ್ತು ಅಸ್ತ್ರ ಬಿಡಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆಗೆ ಒತ್ತಾಯಿಸಲಿ ನೋಡೋಣ, ಅವರ ಬಣ್ಣ ಬೀದಿಯಲ್ಲಿ ಬಯಲು ಮಾಡುತ್ತೇನೆ. ಈಗ ನಾನು ಮಾತ ನಾಡುವುದಿಲ್ಲ. ಸಮಯ ಬಂದಾಗ ಮಾತನಾಡುತ್ತೇನೆ. ಎಲ್ಲವನ್ನೂ ಕಾನೂನು ಮೂಲಕವೇ ಎದುರಿಸುತ್ತೇನೆ.

Translate »