ಚಾಮರಾಜನಗರ

ಗ್ರಾಪಂ ಅಧಿಕಾರಿಗಳಿಗೆ ರಾಷ್ಟ್ರಧ್ವಜದ ಮಾಹಿತಿ, ಅರಿವು ಶಿಬಿರ ರಾಷ್ಟ್ರಧ್ವಜ ಭಾರತೀಯರ ಸಂಕೇತ
ಚಾಮರಾಜನಗರ

ಗ್ರಾಪಂ ಅಧಿಕಾರಿಗಳಿಗೆ ರಾಷ್ಟ್ರಧ್ವಜದ ಮಾಹಿತಿ, ಅರಿವು ಶಿಬಿರ ರಾಷ್ಟ್ರಧ್ವಜ ಭಾರತೀಯರ ಸಂಕೇತ

July 14, 2018

ಚಾಮರಾಜನಗರ:  ‘ರಾಷ್ಟ್ರಧ್ವಜ ಗೌರವಿಸುವುದು, ರಕ್ಷಣೆ ಮಾಡುವುದು ಭಾರತೀಯರ ಕರ್ತವ್ಯವಾಗಿದೆ’ ಎಂದು ಭಾರತ ಸೇವಾ ದಳದ ಸಂಪನ್ಮೂಲ ವ್ಯಕ್ತಿ ಶೇಷಾಚಲ ಹೇಳಿದರು. ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಭಾರತ ಸೇವಾದಳ ತಾಲೂಕು ಘಟಕ ವತಿಯಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳಿಗೆ ಹಮ್ಮಿಕೊಂಡಿದ್ದ ರಾಷ್ಟ್ರಧ್ವಜ ಮಾಹಿತಿ ಕುರಿತ ಅರಿವು ಕಾರ್ಯ ಕ್ರಮದಲ್ಲಿ ಅವರು ರಾಷ್ಟ್ರಧ್ವಜ ಕುರಿತು ಮಾತನಾಡಿದರು. ಭಾರತ ಸೇವಾದಳ ನಾ.ಸು.ಹರ್ಡೀಕರ್‍ರವರ ಕನಸಿನ ಕೂಸು. ಗಾಂಧೀಜಿ ಅವರ ತತ್ವ, ಆದರ್ಶದಂತೆ ಸೇವೆಗಾಗಿ ಬಾಳು ಎಂಬ ವಾಕ್ಯದಡಿ ಕಾರ್ಯನಿರ್ವಹಿಸುತ್ತಿದೆ….

ನೋಡ ಬನ್ನಿರೋ… ಜಿಲ್ಲೆಯ ನಯಾಗರ ಸೊಬಗು ಭರಚುಕ್ಕಿಯಲ್ಲಿ ಧುಮ್ಮಿಕ್ಕುತ್ತಿದೆ ಜಲರಾಶಿ…
ಚಾಮರಾಜನಗರ

ನೋಡ ಬನ್ನಿರೋ… ಜಿಲ್ಲೆಯ ನಯಾಗರ ಸೊಬಗು ಭರಚುಕ್ಕಿಯಲ್ಲಿ ಧುಮ್ಮಿಕ್ಕುತ್ತಿದೆ ಜಲರಾಶಿ…

July 14, 2018

ಕಣ್ಣಿಗೆ ಕಂಪು, ಕಿವಿಗೆ ಇಂಪು ಜಲ ಝೇಂಕಾರ ಚಾಮರಾಜನಗರ: ಜಿಲ್ಲೆಯ ನಯಾಗರ ಎಂದೇ ಪ್ರಸಿದ್ಧವಾಗಿರುವ ಭರಚುಕ್ಕಿ, ಮಂಡ್ಯ ಜಿಲ್ಲೆಯ ಗಗನಚುಕ್ಕಿ ಜಲಪಾತ ಭೋರ್ಗರೆಯುತ್ತಿದ್ದು, ಈ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳು ವುದೇ ಒಂದು ಸೊಬಗು. ಸುಮಾರು 100 ಅಡಿ ಎತ್ತರದಿಂದ ಧುಮ್ಮಿಕ್ಕುವ ನೀರಿನ ಭೋರ್ಗರೆತ, ಅದರಿಂದ ತೇಲಿ ಬರುತ್ತಿರುವ ತಂಗಾಳಿಯ ಸ್ವಾದವನ್ನು ವರ್ಣಿಸಲು ಪದಗಳೇ ಸಾಲದು. ಕಬಿನಿಯಿಂದ ಸುಮಾರು 50 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವಳಿ ಜಲಪಾತಗಳೆಂದೇ ವಿಶ್ವ ಪ್ರಸಿದ್ಧವಾಗಿರುವ ಭರಚುಕ್ಕಿ, ಗಗನಚುಕ್ಕಿ ಜಲಪಾತಗಳು…

ಮೇಲ್ಸೇತುವೆ ತಡೆಗೋಡೆಗೆ ಬೈಕ್ ಡಿಕ್ಕಿ ಸೇತುವೆಯಿಂದ ಕೆಳಭಾಗಕ್ಕೆ ಬಿದ್ದು ಯುವಕ ಸಾವು
ಚಾಮರಾಜನಗರ

ಮೇಲ್ಸೇತುವೆ ತಡೆಗೋಡೆಗೆ ಬೈಕ್ ಡಿಕ್ಕಿ ಸೇತುವೆಯಿಂದ ಕೆಳಭಾಗಕ್ಕೆ ಬಿದ್ದು ಯುವಕ ಸಾವು

July 14, 2018

ಚಾಮರಾಜನಗರ: ಮೇಲ್ಸೇತುವೆಯ ತಡೆಗೋಡೆಗೆ ಬೈಕ್ ಸವಾರನೋರ್ವ ಡಿಕ್ಕಿ ಹೊಡೆಸಿ ಸುಮಾರು 60 ಅಡಿಯಿಂದ ಕೆಳಕ್ಕೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಮರಿಯಾಲ ಗ್ರಾಮದ ಮೇಲ್ಸೇತುವೆಯಲ್ಲಿ ಶುಕ್ರವಾರ ನಡೆದಿದೆ. ನಂಜನಗೂಡು ತಾಲೂಕಿನ ಕೋಣನೂರು ಪಾಳ್ಯದ ರಮೇಶ್ (24) ಮೃತಪಟ್ಟ ಬೈಕ್ ಸವಾರ. ರಮೇಶ್ ಬೈಕ್‍ನಲ್ಲಿ ಚಾಮರಾಜನಗರದಿಂದ ಕೋಣನೂರು ಪಾಳ್ಯಕ್ಕೆ ತೆರಳುತ್ತಿದ್ದರು. ಈ ವೇಳೆ ಮರಿಯಾಲ ಗ್ರಾಮದ ಬಳಿ ಇರುವ ರೈಲು ಮೇಲ್ಸೇತುವೆ ಮಧ್ಯಭಾಗ ದಲ್ಲಿ ಸೇತುವೆಯ ತಡೆಗೋಡೆಗೆ ಬೈಕನ್ನು ಡಿಕ್ಕಿ ಹೊಡೆಸಿದ್ದಾರೆ. ಇದರ ರಭಸಕ್ಕೆ ಸೇತು ವೆಯ…

ನಾಳೆ ಉಚಿತ ಶಸ್ತ್ರ ಚಿಕಿತ್ಸೆ, ಪರೀಕ್ಷಾ ಶಿಬಿರ
ಚಾಮರಾಜನಗರ

ನಾಳೆ ಉಚಿತ ಶಸ್ತ್ರ ಚಿಕಿತ್ಸೆ, ಪರೀಕ್ಷಾ ಶಿಬಿರ

July 14, 2018

ಚಾಮರಾಜನಗರ:  ನಗರದ ರೋಟರಿ ಭವನದಲ್ಲಿ ಜುಲೈ 15ರಂದು ಬೆಳಿಗ್ಗೆ 10 ಗಂಟೆಯಿಂದಜ ಮಧ್ಯಾಹ್ನ 1ರವರೆಗೆ ಸಿಳು ತುಟಿ, ಬೀಳು ಅಂಗಳ, ಸೀಳು ಮುಖ, ಮುಖಾಂಗ ಫೇಕಲ್ಸ್ ಮತ್ತು ಮುಖದ ಮೂಳೆಗಳಿಗೆ ಸಂಬಂಧಿಸಿದಂತೆ ನ್ಯೂನತೆಗಳಿರುವವರಿಗೆ ಉಚಿತ ಶಸ್ತ್ರ ಚಿಕಿತ್ಸೆ ಹಾಗೂ ಪರೀಕ್ಷಾ ಶಿಬಿರ ಆಯೋಜಿಸಲಾಗಿದೆ. ನಗರದ ರೋಟರಿ ಸಂಸ್ಥೆ, ಮೈಸೂರಿನ ಸ್ವಾಸ್ತ್ಯ ಫೌಂಡೇಷನ್, ಸಂತ ಜೋಸೆಫರ ಆಸ್ಪತ್ರೆಯ ಸಹಯೋಗದಲ್ಲಿ ಶಿಬಿರವನ್ನು ಏರ್ಪಡಿಸಲಾಗಿದೆ. ಸಾರ್ವಜನಿಕರು ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ರೋಟರಿ ಅಧ್ಯಕ್ಷ ಡಿ.ನಾಗರಾಜ, ಮಾಜಿ ಅಧ್ಯಕ್ಷ ಸಿ.ಎ.ನಾರಾಯಣ ಕೋರಿದ್ದಾರೆ.

ಲೈನ್‍ಮೆನ್ ಮೇಲೆ ಹಲ್ಲೆ ಪ್ರಕರಣ: ಓರ್ವನ ಬಂಧನ
ಚಾಮರಾಜನಗರ

ಲೈನ್‍ಮೆನ್ ಮೇಲೆ ಹಲ್ಲೆ ಪ್ರಕರಣ: ಓರ್ವನ ಬಂಧನ

July 14, 2018

ಚಾಮರಾಜನಗರ:  ಮನೆಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದರಿಂದ ಅದನ್ನು ಕಡಿತಗೊಳಿಸಿದ ಲೈನ್‍ಮೆನ್ ಮೇಲೆ ಹಲ್ಲೆ ನಡೆಸಿದ್ದ ಇಬ್ಬರು ಆರೋಪಿತರ ಪೈಕಿ ಓರ್ವನನ್ನು ಬಂಧಿಸುವಲ್ಲಿ ರಾಮಸಮುದ್ರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಚಾಮರಾಜನಗರ ತಾಲೂಕಿನ ನಲ್ಲೂರು ಗ್ರಾಮದ ಶಿವಣ್ಣ ಬಂಧಿತ. ನಲ್ಲೂರು ಗ್ರಾಮದ ಲೈನ್‍ಮೆನ್ ಆನಂದರಾಜು ಮೇಲೆ ಅದೇ ಗ್ರಾಮದ ಶಿವಣ್ಣ ಮತ್ತು ಪರಶಿವ ಮೂರ್ತಿ ಮಂಗಳವಾರ ಹಲ್ಲೆ ನಡೆ ಸಿದ್ದರು. ಈ ಬಗ್ಗೆ ರಾಮಸಮುದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿತರ ಪೈಕಿ ಶಿವಣ್ಣ ಮೈಸೂರಿನಲ್ಲಿ ಇದ್ದಾನೆ ಎಂಬ…

ಕಾಡಾನೆ ದಾಳಿಗೆ ಜೋಳದ ಬೆಳೆ ನಾಶ: ಸಂಕಷ್ಟದಲ್ಲಿ ರೈತರು
ಚಾಮರಾಜನಗರ

ಕಾಡಾನೆ ದಾಳಿಗೆ ಜೋಳದ ಬೆಳೆ ನಾಶ: ಸಂಕಷ್ಟದಲ್ಲಿ ರೈತರು

July 14, 2018

ಗುಂಡ್ಲುಪೇಟೆ: ತಾಲೂಕಿನ ಕಾಡಂಚಿನ ಗ್ರಾಮಗಳ ರೈತರ ಜಮೀನಿನಲ್ಲಿ ಕಾಡಾನೆಗಳ ದಾಳಿ ನಿರಂತರ ವಾಗಿ ನಡೆಯುತ್ತಿದೆ. ಕಾಡಾನೆ ದಾಳಿ ಯಿಂದ ಬೆಳೆ ನಾಶವಾಗುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ವಿರುದ್ದ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂಡೀಪುರ ರಾಷ್ಟ್ರೀಯ ಉದ್ಯಾನವ ನದ ವ್ಯಾಪ್ತಿಯಲ್ಲಿನ ಕಾಡಂಚಿನ ಗ್ರಾಮ ವಾದ ಹಂಗಳ ಗ್ರಾಮದ ಮಹೇಶ್ ಎಂಬುವರ ಜಮೀನಿಗೆ ದಾಳಿ ಮಾಡಿದ ಕಾಡಾನೆಗಳು ಬೆಳೆದಿದ್ದ ಜೋಳವನ್ನು ತಿಂದು, ತುಳಿದು ನಾಶಪಡಿಸಿವೆ. ಕಳೆದ ಕೆಲವು ದಿನಗಳಿಂದ ಕಾಡಂಚಿನ ದೇವರ ಹಳ್ಳಿ, ಹಂಗಳ, ಗೋಪಾಲಪುರ…

ಆರೋಗ್ಯ ಕಾಳಜಿಗೆ ಜಿಲ್ಲಾ ನ್ಯಾಯಾಧೀಶರ ಸಲಹೆ
ಚಾಮರಾಜನಗರ

ಆರೋಗ್ಯ ಕಾಳಜಿಗೆ ಜಿಲ್ಲಾ ನ್ಯಾಯಾಧೀಶರ ಸಲಹೆ

July 13, 2018

ಚಾಮರಾಜನಗರ: ಜೀವನದಲ್ಲಿ ಆರೋಗ್ಯವೇ ಸಂಪತ್ತಾಗಿದ್ದು, ಇದನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಕಾಳಜಿ ವಹಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಿ.ಬಸವ ರಾಜ ಸಲಹೆ ಮಾಡಿದರು. ನಗರದ ಜಿಲ್ಲಾ ಕಾರಾಗೃಹದಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ವೈದ್ಯಕೀಯ ವಿಜ್ಞಾನ ಸಂಸ್ಥೆ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸಂಯುಕ್ತಾಶ್ರಯದಲ್ಲಿ ವಿಚಾರಣಾಧೀನ ಕೈದಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯನಿಗೆ ಆರೋಗ್ಯಕ್ಕೆ ಮಿಗಿಲಾದ ಭಾಗ್ಯವಿಲ್ಲ. ಉತ್ತಮ ಆರೋಗ್ಯ ಹೊಂದಿ ದ್ದರೆ ನೆಮ್ಮದಿ ಜೀವನ…

ಬಸ್ ಸೌಲಭ್ಯಕ್ಕಾಗಿ ಮಲ್ಲಯ್ಯನಪುರ ಗ್ರಾಮಸ್ಥರ ಪ್ರತಿಭಟನೆ
ಚಾಮರಾಜನಗರ

ಬಸ್ ಸೌಲಭ್ಯಕ್ಕಾಗಿ ಮಲ್ಲಯ್ಯನಪುರ ಗ್ರಾಮಸ್ಥರ ಪ್ರತಿಭಟನೆ

July 13, 2018

ಗುಂಡ್ಲುಪೇಟೆ:  ತಮ್ಮ ಗ್ರಾಮಕ್ಕೆ ಸಮರ್ಪಕವಾಗಿ ಬಸ್ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಮಲ್ಲಯ್ಯನಪುರ ಗ್ರಾಮಸ್ಥರು ಪಟ್ಟಣದ ಸಾರಿಗೆ ಡಿಪೋಗೆ ಮುತ್ತಿಗೆ ಹಾಕಿ ಒತ್ತಾಯಿಸಿದರು. ನಾಲ್ಕೈದು ಆಟೋಗಳಲ್ಲಿ ಆಗಮಿಸಿದ ಮಲ್ಲಯ್ಯನಪುರ ಗ್ರಾಮದ ವಿದ್ಯಾರ್ಥಿಗಳು ಹಾಗೂ ಪಾಲಕರು ಸಾರಿಗೆ ಡಿಪೋ ಎದುರು ಒಗ್ಗೂಡಿ ಸ್ಥಳಕ್ಕೆ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿ ಗಳು ಬರುವಂತೆ ಪಟ್ಟು ಹಿಡಿದರು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಡಿಪೋ ಮ್ಯಾನೇಜರ್ ಎಂ.ಜಿ.ಜಯಕುಮಾರ್ ಗ್ರಾಮಸ್ಥರ ಮನವಿಯನ್ನು ಆಲಿಸಿದರು. ಗ್ರಾಮದಿಂದ ಪ್ರತಿ ದಿನವೂ ನೂರಾರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ…

ಗಮನ ಸೆಳೆದ ಡೆಂಗ್ಯೂ ಜಾಗೃತಿ ಜಾಥಾ
ಚಾಮರಾಜನಗರ

ಗಮನ ಸೆಳೆದ ಡೆಂಗ್ಯೂ ಜಾಗೃತಿ ಜಾಥಾ

July 13, 2018

ಚಾಮರಾಜನಗರ: ಜನರನ್ನು ಕಾಡುವ ಡೆಂಗ್ಯೂ ಜ್ವರ ಹಾಗೂ ಇದರ ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಮುಂಜಾ ಗರೂಕತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ನಗರದಲ್ಲಿ ನಡೆಸಿದ ಜಾಥಾ ಜನರ ಗಮನ ಸೆಳೆಯಿತು. ನಗರದ ಜಿಲ್ಲಾಡಳಿತ ಭವನದ ಆವರ ಣದಲ್ಲಿ ಮೊದಲಿಗೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಡೆಂಗ್ಯೂ ವಿರೋಧಿ ಮಾಸಾಚರಣೆ ಹಿನ್ನೆಲೆಯಲ್ಲಿ ನಡೆದ ಜನಜಾಗೃತಿ ಜಾಥಾಗೆ ಹಸಿರು ನಿಶಾನೆ ತೋರಿ ಚಾಲನೆ ಕೊಟ್ಟರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ…

ಸಂಚಾರಿ ನಿಯಮ ಪಾಲಿಸಲು ಕರೆ
ಚಾಮರಾಜನಗರ

ಸಂಚಾರಿ ನಿಯಮ ಪಾಲಿಸಲು ಕರೆ

July 13, 2018

ಚಾಮರಾಜನಗರ: – ಸಂಚಾರಿ ನಿಯಮಗಳನ್ನು ಪ್ರತಿಯೊಬ್ಬರು ಪಾಲಿ ಸುವ ಮೂಲಕ ಅಪಘಾತವನ್ನು ತಡೆಗಟ್ಟಿ ಅಮೂಲ್ಯ ಜೀವಗಳನ್ನು ಉಳಿಸಬೇಕು ಎಂದು ಸಂಚಾರ ಠಾಣೆ ಸಬ್ ಇನ್ಸ್ ಪೆಕ್ಟರ್ ದೀಪಕ್ ಕರೆ ನೀಡಿದರು. ಅವರು ತಾಲೂಕಿನ ವೆಂಕಟಯ್ಯನ ಛತ್ರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಸಂಚಾರಿ ಠಾಣೆಯಿಂದ ಏರ್ಪಡಿಸಿದ್ದ ಸಂಚಾರಿ ನಿರ್ವಹಣೆ ಮತ್ತು ರಸ್ತೆ ಸುರ್ಷತಾ ಸಪ್ತಾಹ ಅರಿವು ಕಾರ್ಯಕ್ರಮ ದಲ್ಲಿ ಮಾತನಾಡಿದರು. ಪ್ರತಿಯೊಬ್ಬ ಬೈಕ್ ಸವಾರರು ಚಾಲನಾ ಪರವಾನಗಿ, ಬೈಕ್ ದಾಖಲಾತಿಗಳು, ವಾಹನ ವಿಮೆಗಳನ್ನು ಕಡ್ಡಾಯವಾಗಿ ಹೊಂದಬೇಕು ಮತ್ತು…

1 108 109 110 111 112 141
Translate »