ಗ್ರಾಪಂ ಅಧಿಕಾರಿಗಳಿಗೆ ರಾಷ್ಟ್ರಧ್ವಜದ ಮಾಹಿತಿ, ಅರಿವು ಶಿಬಿರ ರಾಷ್ಟ್ರಧ್ವಜ ಭಾರತೀಯರ ಸಂಕೇತ
ಚಾಮರಾಜನಗರ

ಗ್ರಾಪಂ ಅಧಿಕಾರಿಗಳಿಗೆ ರಾಷ್ಟ್ರಧ್ವಜದ ಮಾಹಿತಿ, ಅರಿವು ಶಿಬಿರ ರಾಷ್ಟ್ರಧ್ವಜ ಭಾರತೀಯರ ಸಂಕೇತ

July 14, 2018

ಚಾಮರಾಜನಗರ:  ‘ರಾಷ್ಟ್ರಧ್ವಜ ಗೌರವಿಸುವುದು, ರಕ್ಷಣೆ ಮಾಡುವುದು ಭಾರತೀಯರ ಕರ್ತವ್ಯವಾಗಿದೆ’ ಎಂದು ಭಾರತ ಸೇವಾ ದಳದ ಸಂಪನ್ಮೂಲ ವ್ಯಕ್ತಿ ಶೇಷಾಚಲ ಹೇಳಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಭಾರತ ಸೇವಾದಳ ತಾಲೂಕು ಘಟಕ ವತಿಯಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳಿಗೆ ಹಮ್ಮಿಕೊಂಡಿದ್ದ ರಾಷ್ಟ್ರಧ್ವಜ ಮಾಹಿತಿ ಕುರಿತ ಅರಿವು ಕಾರ್ಯ ಕ್ರಮದಲ್ಲಿ ಅವರು ರಾಷ್ಟ್ರಧ್ವಜ ಕುರಿತು ಮಾತನಾಡಿದರು.

ಭಾರತ ಸೇವಾದಳ ನಾ.ಸು.ಹರ್ಡೀಕರ್‍ರವರ ಕನಸಿನ ಕೂಸು. ಗಾಂಧೀಜಿ ಅವರ ತತ್ವ, ಆದರ್ಶದಂತೆ ಸೇವೆಗಾಗಿ ಬಾಳು ಎಂಬ ವಾಕ್ಯದಡಿ ಕಾರ್ಯನಿರ್ವಹಿಸುತ್ತಿದೆ. 1942 ಜು. 24ರಂದು ರಾಷ್ಟ್ರ ಧ್ವಜ ಅಸ್ತಿತ್ವಕ್ಕೆ ಬಂತು. ರಾಷ್ಟ್ರಧ್ವಜಕ್ಕೆ ಸಂವಿಧಾನದಲ್ಲಿ ನಿಯಮ, ನಿಬಂಧನೆಗಳಿವೆ. ರಾಷ್ಟ್ರಧ್ವಜಕ್ಕೆ ಅಗೌರವ ತೋರಿಸಿದರೆ 2 ಲಕ್ಷ ರೂ. ದಂಡ, 5 ವರ್ಷ ಕಠಿಣ ಶಿಕ್ಷೆ ಇದೆ. ರಾಷ್ಟ್ರಧ್ವಜ ದೇಶದಲ್ಲಿ ರುವ 125 ಕೋಟಿ ಜನರ ಸಂಕೇತವಾಗಿದೆ. ರಾಷ್ಟ್ರಧ್ವಜ ಸೇವಾ ಭಾವನೆ, ರಾಷ್ಟ್ರಪ್ರೇಮ ಮೂಡಿಸುತ್ತದೆ ಎಂದು ಹೇಳಿದರು.

ರಾಷ್ಟ್ರಧ್ವಜ ಕೇಸರಿ, ಬಿಳಿ, ಹಸಿರು ಬಣ್ಣಗಳಿಂದ ಕೂಡಿದ್ದು, ಮಧ್ಯ ಅಶೋಕ ಚಕ್ರ ಇದೆ. ಕೇಸರಿ-ತ್ಯಾಗ, ಬಲಿದಾನ, ಬಿಳಿ-ಶಾಂತಿ, ಹಸಿರು ಸಮೃದ್ಧಿ ಸೂಚಿಸುತ್ತದೆ. ಗ್ರಾಮ ಪಂಚಾಯಿತಿ ಕಚೇರಿಯ ಬಲಭಾಗದಲ್ಲಿ ಧ್ವಜಕಂಬ ಇರಬೇಕು. ಖಾದಿಯಿಂದ ತಯಾರಿಸಿದ ರಾಷ್ಟ್ರಧ್ವಜ ಬಳಸಬೇಕು. ರಾಷ್ಟ್ರೀಯ ದಿನಗಳಲ್ಲಿ ರಾಷ್ಟ್ರಧ್ವಜಾರೋಹಣ ಮಾಡಬೇಕು. ವ್ಯಕ್ತಿಗೆ ಗೌರವ ಸೂಚಿಸಲು ರಾಷ್ಟ್ರಧ್ವಜ ಬಳಸಬಾ ರದು. ಅರ್ಧ ಮಟ್ಟದಲ್ಲಿ ರಾಷ್ಟ್ರಧ್ವಜ ಹಾರಿಸುವ ಸಂದರ್ಭಗಳಲ್ಲಿ ಧ್ವಜ ವನ್ನು ಮೇಲೇರಿಸಿ ಮತ್ತೆ ಕೆಳಗಿಸಬೇಕು. ಖಾಸಗಿ ಕಾರ್ಯಕ್ರಮ ಗಳಿಗೆ ಧ್ವಜ ಬಳಸಬಾರದು. ಸರ್ಕಾರದ ಅಧಿಸೂಚನೆ ಇಲ್ಲದೆ ಮೃತಪಟ್ಟ ಗಣ್ಯವ್ಯಕ್ತಿಗಳ ದೇಹಕ್ಕೆ ಹೊದಿಸಬಾರದು ಮತ್ತು ಯಾವುದೇ ಪ್ರತಿಮೆಗೆ ಹೊದಿಸಬಾರದು ಎಂದು ವಿವರಿಸಿದರು.

ರಾಷ್ಟ್ರಧ್ವಜ ಬಗ್ಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಭಾರತ ಸೇವಾದಳ ಗ್ರಾಪಂ ಅಧಿಕಾರಿಗಳಿಗೆ ರಾಷ್ಟ್ರಧ್ವಜ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಪ್ರಸ್ತುತ ದಿನಗಳಲ್ಲಿ ವಿದ್ಯಾವಂತರಲ್ಲಿ ರಾಷ್ಟ್ರಪ್ರೇಮ ಕ್ಷೀಣಿಸುತ್ತಿರುವುದು ದೇಶದ ದುರಂತವಾಗಿದೆ. ದೇಶದ ಆಗು-ಹೋಗುಗಳ ಬಗ್ಗೆ ಚಿಂತನ-ಮಂಥನ ಮಾಡುವುದು ಅಗತ್ಯವಾಗಿದೆ. ಭಾರತ ದೇಶಕ್ಕೆ ಸಮಾನವಾದದ್ದು ಬೇರೊಂದು ದೇಶ ಇಲ್ಲ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ತಾಪಂ ಕಾರ್ಯ ನಿರ್ವಹಣಾ ಧಿಕಾರಿ ಎಂ.ಎಸ್.ರಮೇಶ್ ಮಾತನಾಡಿ, ರಾಷ್ಟ್ರಧ್ವಜದ ಪ್ರಾಮುಖ್ಯತೆ ಎಲ್ಲರಿಗೂ ಅತ್ಯಗತ್ಯ. ಭಾರತ ಸೇವಾದಳ ಗ್ರಾಮ ಪಂಚಾಯಿತಿ ಅಧಿಕಾರಿ, ಕಾರ್ಯದರ್ಶಿಗಳಿಗೆ ರಾಷ್ಟ್ರಧ್ವಜ ಕುರಿತ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ. ತರಬೇತಿಯಲ್ಲಿ ಭಾಗವಹಿಸಿರುವ ಪಂಚಾಯಿತಿ ಅಧಿಕಾರಿಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಾಲಾ ಮಕ್ಕಳನ್ನೂ ಒಳಗೊಂಡು, ಆಶಾ ಕಾರ್ಯಕರ್ತರು, ಜನಪ್ರತಿನಿಧಿಗಳು, ಅಂಗನವಾಡಿ ಕಾರ್ಯಕರ್ತರ ಜೊತೆಯಲ್ಲಿ ಜನಸಾಮಾನ್ಯರಿಗೆ ದೇಶ ಪ್ರೇಮ ಮೂಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಭಾರತ ಸೇವಾದಳದ ತಾಲೂಕು ಅಧ್ಯಕ್ಷ ಸಿ.ಎಂ.ನರ ಸಿಂಹಮೂರ್ತಿ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾರತಸೇವಾದಳ ತಾಲೂಕು ಕಾರ್ಯದರ್ಶಿ ನಾಗರಾಜು, ಅಧಿನಾಯಕ ನಾಗಣ್ಣ, ಜಿಲ್ಲಾ ಸಂಘಟಕ ಕೆ.ಈರಯ್ಯ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯ ದರ್ಶಿಗಳು ಸೇರಿದಂತೆ ಇತರರು ಹಾಜರಿದ್ದರು.

Translate »