ಮೇಲ್ಸೇತುವೆ ತಡೆಗೋಡೆಗೆ ಬೈಕ್ ಡಿಕ್ಕಿ ಸೇತುವೆಯಿಂದ ಕೆಳಭಾಗಕ್ಕೆ ಬಿದ್ದು ಯುವಕ ಸಾವು
ಚಾಮರಾಜನಗರ

ಮೇಲ್ಸೇತುವೆ ತಡೆಗೋಡೆಗೆ ಬೈಕ್ ಡಿಕ್ಕಿ ಸೇತುವೆಯಿಂದ ಕೆಳಭಾಗಕ್ಕೆ ಬಿದ್ದು ಯುವಕ ಸಾವು

July 14, 2018

ಚಾಮರಾಜನಗರ: ಮೇಲ್ಸೇತುವೆಯ ತಡೆಗೋಡೆಗೆ ಬೈಕ್ ಸವಾರನೋರ್ವ ಡಿಕ್ಕಿ ಹೊಡೆಸಿ ಸುಮಾರು 60 ಅಡಿಯಿಂದ ಕೆಳಕ್ಕೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಮರಿಯಾಲ ಗ್ರಾಮದ ಮೇಲ್ಸೇತುವೆಯಲ್ಲಿ ಶುಕ್ರವಾರ ನಡೆದಿದೆ.

ನಂಜನಗೂಡು ತಾಲೂಕಿನ ಕೋಣನೂರು ಪಾಳ್ಯದ ರಮೇಶ್ (24) ಮೃತಪಟ್ಟ ಬೈಕ್ ಸವಾರ.

ರಮೇಶ್ ಬೈಕ್‍ನಲ್ಲಿ ಚಾಮರಾಜನಗರದಿಂದ ಕೋಣನೂರು ಪಾಳ್ಯಕ್ಕೆ ತೆರಳುತ್ತಿದ್ದರು. ಈ ವೇಳೆ ಮರಿಯಾಲ ಗ್ರಾಮದ ಬಳಿ ಇರುವ ರೈಲು ಮೇಲ್ಸೇತುವೆ ಮಧ್ಯಭಾಗ ದಲ್ಲಿ ಸೇತುವೆಯ ತಡೆಗೋಡೆಗೆ ಬೈಕನ್ನು ಡಿಕ್ಕಿ ಹೊಡೆಸಿದ್ದಾರೆ. ಇದರ ರಭಸಕ್ಕೆ ಸೇತು ವೆಯ ಮೇಲ್‍ಭಾಗದಿಂದ ಕೆಳಕ್ಕೆ ಬಿದ್ದು ದಾರುಣವಾಗಿ ಮೃತಪಟ್ಟಿದ್ದಾರೆ.

ಸೇತುವೆಗೂ ಹಾಗೂ ಕೆಳಭಾಗಕ್ಕೂ ಸುಮಾರು 50 ರಿಂದ 60 ಅಡಿ ಅಂತರ ಇದೆ. ಮೃತ ರಮೇಶ್ ಡಿಸ್ಕ್ ಬ್ರೇಕ್ ಬಳಿಸಿದ್ದರಿಂದ ಈ ಅನಾಹುತ ಸಂಭವಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ಡಿವೈಎಸ್ಪಿ ಜಯಕುಮಾರ್, ಸಂಚಾರ ಠಾಣೆ ಸಬ್‍ಇನ್ಸ್‍ಪೆಕ್ಟರ್ ದೀಪಕ್, ಪಟ್ಟಣ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‍ಪೆಕ್ಟರ್ ಮಹದೇವಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಶವ ಪರೀಕ್ಷೆ ನಡೆಸಿದ ನಂತರ ಕುಟುಂಬಸ್ಥರಿಗೆ ಒಪ್ಪಿಸಲಾಯಿತು.

Translate »