ಸಂಚಾರಿ ನಿಯಮ ಪಾಲಿಸಲು ಕರೆ
ಚಾಮರಾಜನಗರ

ಸಂಚಾರಿ ನಿಯಮ ಪಾಲಿಸಲು ಕರೆ

July 13, 2018

ಚಾಮರಾಜನಗರ: – ಸಂಚಾರಿ ನಿಯಮಗಳನ್ನು ಪ್ರತಿಯೊಬ್ಬರು ಪಾಲಿ ಸುವ ಮೂಲಕ ಅಪಘಾತವನ್ನು ತಡೆಗಟ್ಟಿ ಅಮೂಲ್ಯ ಜೀವಗಳನ್ನು ಉಳಿಸಬೇಕು ಎಂದು ಸಂಚಾರ ಠಾಣೆ ಸಬ್ ಇನ್ಸ್ ಪೆಕ್ಟರ್ ದೀಪಕ್ ಕರೆ ನೀಡಿದರು.

ಅವರು ತಾಲೂಕಿನ ವೆಂಕಟಯ್ಯನ ಛತ್ರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಸಂಚಾರಿ ಠಾಣೆಯಿಂದ ಏರ್ಪಡಿಸಿದ್ದ ಸಂಚಾರಿ ನಿರ್ವಹಣೆ ಮತ್ತು ರಸ್ತೆ ಸುರ್ಷತಾ ಸಪ್ತಾಹ ಅರಿವು ಕಾರ್ಯಕ್ರಮ ದಲ್ಲಿ ಮಾತನಾಡಿದರು.

ಪ್ರತಿಯೊಬ್ಬ ಬೈಕ್ ಸವಾರರು ಚಾಲನಾ ಪರವಾನಗಿ, ಬೈಕ್ ದಾಖಲಾತಿಗಳು, ವಾಹನ ವಿಮೆಗಳನ್ನು ಕಡ್ಡಾಯವಾಗಿ ಹೊಂದಬೇಕು ಮತ್ತು ಬೈಕ್ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸುವುದರಿಂದ ಅಪಘಾತಗಳು ಸಂಭವಿಸಿದಾಗ ತಲೆ ಪೆಟ್ಟಾಗುವುದನ್ನು ತಪ್ಪಿಸಿ ಸಾವನ್ನು ತಡೆಗ ಟ್ಟುತ್ತದೆ. ಸಂಚಾರಿ ನಿಯಮಗಳನ್ನು ಪಾಲಿ ಸಿದಾಗ ಅಪಘಾತಗಳನ್ನು ತಡೆಗಟ್ಟಲು ಸಹ ಕಾರಿಯಾಗುತ್ತದೆ ಎಂದರು.

ಬಹುತೇಕ ಅಪಘಾತಗಳು ಚಾಲಕನ ಅಜಾಗರೂಕತೆಯಿಂದ ಸಂಭವಿಸುತ್ತದೆ. ಇದರಿಂದ ಬೈಕ್ ಚಾಲನೆ ಮಾಡುವಾಗ ಮೊಬೈಲ್‍ನಲ್ಲಿ ಮಾತನಾಡಬೇಡಿ. ಮೊಬೈಲ್ ನಲ್ಲಿ ಮಾತನಾಡಬೇಕಾದರೆ ಬೈಕ್ ಅನ್ನು ರಸ್ತೆ ಬದಿ ನಿಲ್ಲಿಸಿ ಮಾತನಾಡಿ ನಂತರ ಬೈಕ್ ಚಾಲನೆ ಮಾಡಿ ಎಂದು ಸಲಹೆ ನೀಡಿದರು.

ಒಂದು ಸಮೀಕ್ಷೆ ಪ್ರಕಾರ ದೇಶದಲ್ಲಿ ಪ್ರತಿವರ್ಷ 1.50 ಲಕ್ಷ ಜನರು ಅಪಘಾತ ದಿಂದ ಸಾವನ್ನುಪ್ಪುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಆದ್ದರಿಂದ ಪ್ರತಿಯೊ ಬ್ಬರು ಸಹ ಸಂಚಾರಿ ನಿಯಮಗಳನ್ನು ಪಾಲಿ ಸುವ ಮೂಲಕ ಅಪಘಾತಗಳ ತಡೆಗೆ ಪೋಲಿಸ್ ಇಲಾಖೆಗೆ ಸಹಕಾರ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿ ದರು. ವಿದ್ಯಾರ್ಥಿಗಳು ಈ ಬಗ್ಗೆ ತಮ್ಮ ಪೋಷ ಕರು ಮತ್ತು ತಮ್ಮ ಸುತ್ತಮುತ್ತಲಿನವರಿಗೆ ಅರಿವು ಮೂಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ವೆಂಕಟಯ್ಯನಛತ್ರ ಗ್ರಾಮಪಂಚಾಯಿತಿ ಅಧ್ಯಕ್ಷ ಸೋಮಣ್ಣ, ವೆಂಕಟಯ್ಯನ ಛತ್ರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೋಮಣ್ಣ, ಸಂಚಾರಿ ಠಾಣೆ ಎಎಸ್‍ಐ ವೆಂಕಟೇಶ್, ಸಿಬ್ಬಂದಿಗಳಾದ ಕುಮಾರ್, ಮಂಜು, ನವೀನ್. ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

Translate »