ಗಮನ ಸೆಳೆದ ಡೆಂಗ್ಯೂ ಜಾಗೃತಿ ಜಾಥಾ
ಚಾಮರಾಜನಗರ

ಗಮನ ಸೆಳೆದ ಡೆಂಗ್ಯೂ ಜಾಗೃತಿ ಜಾಥಾ

July 13, 2018

ಚಾಮರಾಜನಗರ: ಜನರನ್ನು ಕಾಡುವ ಡೆಂಗ್ಯೂ ಜ್ವರ ಹಾಗೂ ಇದರ ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಮುಂಜಾ ಗರೂಕತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು ನಗರದಲ್ಲಿ ನಡೆಸಿದ ಜಾಥಾ ಜನರ ಗಮನ ಸೆಳೆಯಿತು.

ನಗರದ ಜಿಲ್ಲಾಡಳಿತ ಭವನದ ಆವರ ಣದಲ್ಲಿ ಮೊದಲಿಗೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಡೆಂಗ್ಯೂ ವಿರೋಧಿ ಮಾಸಾಚರಣೆ ಹಿನ್ನೆಲೆಯಲ್ಲಿ ನಡೆದ ಜನಜಾಗೃತಿ ಜಾಥಾಗೆ ಹಸಿರು ನಿಶಾನೆ ತೋರಿ ಚಾಲನೆ ಕೊಟ್ಟರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಹರೀಶ್ ಕುಮಾರ್, ಉಪವಿಭಾ ಗಾಧಿಕಾರಿ ಫೌಜಿಯಾ ತರನುಮ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ. ಕೆ.ಎಚ್. ಪ್ರಸಾದ್ ಜಾಗೃತಿ ಜಾಥಾಗೆ ಶುಭ ಹಾರೈಸಿದರು.

ಜಿಲ್ಲಾಡಳಿತ ಭವನದ ಆವರಣದಿಂದ ಹೊರಟ ಜಾಥಾದಲ್ಲಿ ಸರ್ಕಾರಿ ನರ್ಸಿಂಗ್ ಶಾಲೆ, ಮನೋನಿಧಿ ಹಾಗೂ ಜೆಎಸ್‍ಎಸ್ ನರ್ಸಿಂಗ್ ಶಾಲೆಗಳ ಶುಶ್ರೂಷಕ ವಿದ್ಯಾ ರ್ಥಿಗಳು, ಆರೋಗ್ಯ ಇಲಾಖೆ ವೈದ್ಯಾಧಿ ಕಾರಿಗಳು, ಸಿಬ್ಬಂದಿ ಸಹ ಪಾಲ್ಗೊಂಡರು.

ಬಿ.ರಾಚಯ್ಯ ಜೋಡಿ ರಸ್ತೆ, ಜಗಜೀವ ನರಾಮ್ ನಗರ ಬಡಾವಣೆ, ನ್ಯಾಯಾ ಲಯ ರಸ್ತೆ, ಹೌಸಿಂಗ್ ಬೋರ್ಡ್ ಕಾಲೋ ನಿಗಳಲ್ಲಿ ಸಂಚರಿಸಿದ ಜಾಥಾದಲ್ಲಿ ‘ಸ್ವಚ್ಚತೆ ಕಾಪಾಡಿ ಡೆಂಗ್ಯೂ ಹೋಗಲಾಡಿಸಿ’, ಶೇಖರಿಸಿದ ನೀರನ್ನು ಮುಚ್ಚಿಡಿ, ವಾರಕ್ಕೆ ಎರಡು ಬಾರಿ ನೀರು ಸಂಗ್ರಹಣಾ ತಾಣಗಳನ್ನು ಸ್ಚಚ್ಚಗೊಳಿಸಿ, ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಲು ಮುಂಜಾಗರೂಕತಾ ಕ್ರಮ ವಹಿಸಿ ಎಂಬ ಆರೋಗ್ಯ ಜಾಗೃತಿಯ ಭಿತ್ತಿ ಫಲಕಗಳನ್ನು ಪ್ರದರ್ಶಿಸಲಾಯಿತು.

ಅಂತಿಮವಾಗಿ ಡಾ.ಬಿ.ಆರ್. ಅಂಬೇ ಡ್ಕರ್ ಉದ್ಯಾನವನದಲ್ಲಿ ಡೆಂಗ್ಯೂ ವಿರೋಧಿ ಅರಿವು ಜಾಥಾ ಸಮಾವೇಶಗೊಂಡಿತು.
ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಅನಿಲ್ ಕುಮಾರ್, ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ರಾಜು, ಡಾ. ನಾಗರಾಜು, ಡಾ. ವಿಶ್ವೇಶ್ವರಯ್ಯ ಇತರರು ಭಾಗವಹಿಸಿದ್ದರು.

Translate »