ಚಾಮರಾಜನಗರ

ಹಲ್ಲೆಗೈದ ವ್ಯಕ್ತಿಗೆ ಜೀವಾವಧಿ ಶಿಕ್ಷೆ
ಚಾಮರಾಜನಗರ

ಹಲ್ಲೆಗೈದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

July 13, 2018

ಚಾಮರಾಜನಗರ:  ಏಕಾಏಕಿ ಜಗಳ ತೆಗೆದು ವ್ಯಕ್ತಿಯೊಬ್ಬರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಸಾವಿಗೆ ಕಾರಣರಾಗಿದ್ದ ಉಮ್ಮತ್ತೂರು ಗ್ರಾಮದ ನಟರಾಜು ಎಂಬ ಆರೋಪಿಗೆ ಅಧಿಕ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದೆ. ಸಿದ್ದರಾಜು ಹಲ್ಲೆಗೆ ಒಳಗಾಗಿ ಸಾವಿಗೀಡಾದ ವ್ಯಕ್ತಿ. ಕಳೆದ 2013ರ ಜೂನ್ 20ರಂದು ಉಮ್ಮತ್ತೂರು ಗ್ರಾಮದಲ್ಲಿ ನಟರಾಜು ಸಿದ್ದರಾಜುವಿನೊಂದಿಗೆ ಜಗಳ ತೆಗೆದು ಎದೆಗೆ ಮತ್ತು ಹೊಟ್ಟೆಗೆ ಚಾಕುವಿನಿಂದ ಚುಚ್ಚಿ ಹಲ್ಲೆ ಮಾಡಿದ್ದ. ತೀವ್ರ ಗಾಯಗೊಂಡಿದ್ದ ಸಿದ್ದರಾಜುವನ್ನು ಆಸ್ಪತ್ರೆಗೆ…

ಕೊಳವೆ ಬಾವಿ ಕೊರೆಸುವ ಅನುಷ್ಠಾನ ವಿಳಂಬ ಕೆಡಿಪಿ ಸಭೆಯಲ್ಲಿ ಸಿಇಓ ಅಸಮಾಧಾನ
ಚಾಮರಾಜನಗರ

ಕೊಳವೆ ಬಾವಿ ಕೊರೆಸುವ ಅನುಷ್ಠಾನ ವಿಳಂಬ ಕೆಡಿಪಿ ಸಭೆಯಲ್ಲಿ ಸಿಇಓ ಅಸಮಾಧಾನ

July 12, 2018

ಚಾಮರಾಜನಗರ: ಗಂಗಾ ಕಲ್ಯಾಣ ಯೋಜನೆಯಡಿ ಫಲಾನುಭವಿಗಳಿಗೆ ವೈಯಕ್ತಿಕ ಕೊಳವೆ ಬಾವಿ ಕೊರೆಸುವ ಅನುಷ್ಠಾನ ವಿಳಂಬ ಆಗುತ್ತಿದೆ ಎಂದು ಜಿಪಂ ಉಪಾಧ್ಯಕ್ಷ ಜೆ.ಯೋಗೇಶ್ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅಸ ಮಾಧಾನ ವ್ಯಕ್ತಪಡಿಸಿದರು. ನಗರದ ಜಿಲ್ಲಾಡಳಿತ ಭವನದ ಆವ ಣದಲ್ಲಿ ಇರುವ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಜಿಲ್ಲಾ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರಿ ಬ್ಬರು ಅಸಮಾಧಾನ ತೋರ್ಪಡಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಡಿ.ದೇವರಾಜು ಅರಸು ಅಭಿವೃದ್ಧಿ ನಿಗಮ,…

ಸಹಕಾರಿ ಬ್ಯಾಂಕ್‍ನ 11 ಕೋಟಿ ರೂ. ಸಾಲ ಮನ್ನಾ
ಚಾಮರಾಜನಗರ

ಸಹಕಾರಿ ಬ್ಯಾಂಕ್‍ನ 11 ಕೋಟಿ ರೂ. ಸಾಲ ಮನ್ನಾ

July 12, 2018

ಚಾಮರಾಜನಗರ: ರಾಜ್ಯ ಸರ್ಕಾರದ ರೈತರ ಸುಸ್ತಿ ಮನ್ನಾ ಘೋಷಣೆಯಿಂದ ಜಿಲ್ಲೆಯ ಸಹಕಾರಿ ಬ್ಯಾಂಕ್ (ಎಂಡಿಸಿಸಿ)ನ ಒಟ್ಟು ಸಾಲದ ಪೈಕಿ 11 ಕೋಟಿ ರೂ. ಮನ್ನಾ ಆಗಲಿದೆ. ಇಂದಿಲ್ಲಿ ನಡೆದ ಜೆಪಂ ಕೆಡಿಪಿ ಸಭೆಯಲ್ಲಿ ಬ್ಯಾಂಕ್ ಅಧಿಕಾರಿ ಯೊಬ್ಬರು ಸಭೆಗೆ ಈ ಮಾಹಿತಿ ನೀಡಿದರು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಜೆಟ್ ಮಂಡಿಸುವಾಗ ರೈತರ ಸುಸ್ತಿ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. ಇದರ ಅನ್ವಯ ಜಿಲ್ಲೆಯ ಎಂಡಿಸಿಸಿ ಬ್ಯಾಂಕ್‍ನಿಂದ ರೈತರು ಪಡೆದಿದ್ದ 11 ಕೋಟಿ ರೂ. ಮನ್ನಾ ಆಗಲಿದೆ ಎಂದರು. ಚಾಮರಾಜನಗರ ವಲಯದಿಂದ…

ಕೃಷಿಯೊಂದಿಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಸಲಹೆ
ಚಾಮರಾಜನಗರ

ಕೃಷಿಯೊಂದಿಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಸಲಹೆ

July 12, 2018

ಗುಂಡ್ಲುಪೇಟೆ: ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿ ರುವ ರೈತರು ಹೈನುಗಾರಿಕೆಯನ್ನೂ ಉಪ ಕಸುಬಾಗಿ ಕೈಗೊಂಡರೆ ಉತ್ತಮವಾಗಿ ಲಾಭ ಗಳಿಸಬಹುದಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕು ಯೋಜನಾಧಿಕಾರಿ ಶಿವ ಪ್ರಸಾದ್ ಹೇಳಿದರು. ತಾಲೂಕಿನ ಭೋಗಯ್ಯನಹುಂಡಿ ಗ್ರಾಮ ದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಏರ್ಪಡಿಸಲಾ ಗಿದ್ದ ಹೈನುಗಾರಿಕೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ತಾಲೂಕಿನಲ್ಲಿ ಹಲವಾರು ರೈತರು ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದರೊಂದಿಗೆ ಹೈನುಗಾರಿಕೆಯನ್ನೂ ಉಪ ಕಸುಬಾಗಿ ಕೈಗೊಂಡರೆ ಉತ್ತಮ ಲಾಭ…

ಜಿಲ್ಲಾ ಕ್ರೀಡಾಂಗಣಕ್ಕೆ ಸಂಸದ ಧ್ರುವನಾರಾಯಣ್ ದಿಢೀರ್ ಭೇಟಿ
ಚಾಮರಾಜನಗರ

ಜಿಲ್ಲಾ ಕ್ರೀಡಾಂಗಣಕ್ಕೆ ಸಂಸದ ಧ್ರುವನಾರಾಯಣ್ ದಿಢೀರ್ ಭೇಟಿ

July 12, 2018

ಚಾಮರಾಜನಗರ: ನಗರದ ಜಿಲ್ಲಾ ಕ್ರೀಡಾಂಗಣಕ್ಕೆ ಮಂಗಳವಾರ ಸಂಜೆ ಸಂಸದ ಆರ್.ಧ್ರುವನಾರಾಯಣ್ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಕ್ರೀಡಾಂಗಣದಲ್ಲಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಸಿದ್ಧಪಡಿಸಿರುವ ಸಿಂಥೆಟಿಕ್ ಟ್ರ್ಯಾಕ್ ಶೀಘ್ರದಲ್ಲಿಯೇ ಉದ್ಘಾಟಿಸುವ ಬಗ್ಗೆ ಕ್ರಮಕೈಗೊಳ್ಳುವಂತೆ ಸ್ಥಳದಲ್ಲಿಯೇ ಇದ್ದ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಚೆಲುವಯ್ಯ ಅವರಿಗೆ ಸೂಚಿಸಿದರು. ಕ್ರೀಡಾಂಗಣದ ಸುತ್ತಲೂ ಆಡಿಟರ್ ಆಗಿರುವ ಸಿ.ಎಂ.ವೆಂಕಟೇಶ್ ಹಾಕಿರುವ ಗಿಡಗಳನ್ನು ಸಂರಕ್ಷಿಸುವಂತೆ ಹಾಗೂ ಸೂಕ್ತ ಭದ್ರತೆ ಕೈಗೊಳ್ಳುವಂತೆ ಸಂಸದರು ಇದೇ ವೇಳೆ ಸೂಚಿಸಿದರು. ಇದಲ್ಲದೇ ನಗರದ ಬಹುತೇಕ ಕಡೆ ಗಿಡಗಳನ್ನು…

ಕುಂತೂರು ಬಳಿ ಪ್ರೇಮಿಗಳ ಆತ್ಮಹತ್ಯೆ
ಚಾಮರಾಜನಗರ

ಕುಂತೂರು ಬಳಿ ಪ್ರೇಮಿಗಳ ಆತ್ಮಹತ್ಯೆ

July 12, 2018

ಕೊಳ್ಳೇಗಾಲ:  ತಾಲೂಕಿನ ಕುಂತೂರು ಬಳಿ ಇರುವ ಪ್ರಭುಲಿಂಗೇಶ್ವರ ಬೆಟ್ಟದಲ್ಲಿ ಯುವ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ಸಂಜೆ ನಡೆದಿದೆ. ಮೃತ ಪ್ರೇಮಿಗಳನ್ನು ತಾಲೂಕಿನ ಮುಳ್ಳೂರು ಗ್ರಾಮದ ರೋಹಿತ್ ಹಾಗೂ ಪ್ರಕೃತಿ ಎಂದು ಗುರುತಿಸಲಾಗಿದೆ. ರೋಹಿತ್ ಮತ್ತು ಪ್ರಕೃತಿ ಕಳೆದ ಕೆಲವು ತಿಂಗಳಿಂದ ಪ್ರೀತಿಸುತ್ತಿದ್ದರೆನ್ನಲಾಗಿದೆ. ಇಂದು ಬೆಳಿಗ್ಗೆ ಮನೆಯಲ್ಲಿ ಕಾಲೇಜಿಗೆ ತೆರಳುವುದಾಗಿ ಹೇಳಿ ಬಂದಿದ್ದು, ಕಾಲೇಜಿಗೂ ಹೋಗಿರಲಿಲ್ಲ ಎನ್ನಲಾಗಿದೆ. ಇಂದು ಸಂಜೆ ಬೆಟ್ಟದ ಬಂಡೆ ಯೊಂದರ ಬಳಿ ರೋಹಿತ್ ಹಾಗೂ ಪ್ರಕೃತಿ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ….

ತೆರಕಣಾಂಬಿಯಲ್ಲಿ ಮನೆಗೆ ಬೆಂಕಿ
ಚಾಮರಾಜನಗರ

ತೆರಕಣಾಂಬಿಯಲ್ಲಿ ಮನೆಗೆ ಬೆಂಕಿ

July 12, 2018

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟಿನಿಂದ ಮನೆಯೊಂದರಲ್ಲಿದ್ದ ಬಹುತೇಕ ಪದಾರ್ಥಗಳು ಸಂಪೂರ್ಣ ಸುಟ್ಟು ಹೋಗಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಗ್ರಾಮದ ನಾಗೇಶ್ ಎಂಬುವರ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟಿನಿಂದ ಬೆಂಕಿಹೊತ್ತಿಕೊಂಡಿದೆ. ಅಕ್ಕಪಕ್ಕದ ಮನೆಯವರು ನೀರು ಎರಚಿ ನಂದಿಸಲೆತ್ನಿಸಿದರೂ ಸಾಧ್ಯವಾಗಲಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಬರುವ ವೇಳೆಗೆ ಮನೆಯಲ್ಲಿದ್ದ ಟಿ.ವಿ., ಫ್ರಿಜ್ಡ್, ವಾಷಿಂಗ್ ಮಿಷನ್, ಎರಡು ಅಲ್ಮೇರಾಗಳು, ಬಟ್ಟೆ-ಬರೆಗಳು ಹಾಗೂ ಆಹಾರ ಪದಾರ್ಥಗಳು ಸಂಪೂರ್ಣ ಭಸ್ಮವಾಗಿದೆ. ಇದರಿಂದಾಗಿ ಲಕ್ಷಾಂತರ ರೂಪಾಯಿಗಳ…

ಗ್ರಾಮೀಣ ಮಹಿಳೆಯರು ಸಬಲರಾಗಲು ಕರೆ
ಚಾಮರಾಜನಗರ

ಗ್ರಾಮೀಣ ಮಹಿಳೆಯರು ಸಬಲರಾಗಲು ಕರೆ

July 12, 2018

ಚಾಮರಾಜನಗರ: ಗ್ರಾಮೀಣ ಪ್ರದೇಶದ ಮಹಿಳೆಯರು ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಸಬಲರಾಗಬೇಕು ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಹೇಮಲತಾ ಕರೆ ನೀಡಿದರು. ಗುರುವಾರ ಐಡಿಎಫ್‍ಸಿ ಭಾರತ್ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಮಹಿಳಾ ಒಕ್ಕೂ ಟದ ಸಭೆ ಉದ್ಘಾಟಿಸಿ ಅವರು ಮಾತನಾ ಡಿದರು. ಗ್ರಾಮೀಣ ಪ್ರದೇಶದ ಮಹಿಳೆಯ ರಿಗೆ ಶಿಕ್ಷಣದ ಕೊರತೆಯಿಂದ ಉದ್ಯೋ ಗದ ಅಭದ್ರತೆ ಕಾಡುತ್ತಿದೆ. ಇದರಿಂದ ಅವರ ಸ್ವಾವಲಂಭಿಗಳಾಗದೆ ಪುರುಷ ರನ್ನು ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆ ಎಂದರೆ ಹಿಂದಿನಿಂದಲೂ ಗಂಡನ ಸೇವೆ ಮತ್ತು…

ವ್ಯಕ್ತಿ ನಾಪತ್ತೆ
ಚಾಮರಾಜನಗರ

ವ್ಯಕ್ತಿ ನಾಪತ್ತೆ

July 12, 2018

ಹನೂರು: ಯುವಕನೊರ್ವ ಕಾಣೆಯಾಗಿರುವ ಬಗ್ಗೆ ಹನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹನೂರು ಸಮೀಪದ ಉದ್ದನೂರು ಗ್ರಾಮದ ಮಹೇಶ್ (25 ವರ್ಷ) ಕಾಣೆಯಾದ ಯುವಕ. ಈ ಬಗ್ಗೆ ಅವರ ತಂದೆ ಮಹದೇವಪ್ಪ ಹನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕಾಣೆಯಾದ ವ್ಯಕ್ತಿ ಬಗ್ಗೆ ತಿಳಿದು ಬಂದರೆ 08224-268803, 0821-2445168, ದೂರವಾಣಿ ಮೂಲಕ ಮಾಹಿತಿ ನೀಡುವಂತೆ ಇನ್ಸ್‍ಪೆಕ್ಟರ್ ಪರಶುರಾಮ್ ತಿಳಿಸಿದ್ದಾರೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ ಅಂಗನವಾಡಿ ನೌಕರರ ಭಾರೀ ಪ್ರತಿಭಟನೆ
ಚಾಮರಾಜನಗರ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ ಅಂಗನವಾಡಿ ನೌಕರರ ಭಾರೀ ಪ್ರತಿಭಟನೆ

July 11, 2018

ಚಾಮರಾಜನಗರ: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸು ವಂತೆ ಆಗ್ರಹಿಸಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವ ಹಿಸುತ್ತಿರುವ ಅಂಗನವಾಡಿ ನೌಕರರು ಹಾಗೂ ಸಹಾಯಕಿಯರು ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಇಲ್ಲಿನ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಸಾವಿರಾರು ಅಂಗನವಾಡಿ ನೌಕರರು ಹಾಗೂ ಸಹಾಯಕಿಯರು ಜಮಾಯಿಸಿದರು. ನಂತರ ಘೋಷಣೆಗಳನ್ನು ಕೂಗುತ್ತಾ, ಸಾಲಾಗಿ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವ…

1 109 110 111 112 113 141
Translate »