ಚಾಮರಾಜನಗರ

ರಾಜ್ಯ ಹಣಕಾಸು ಸಂಸ್ಥೆಯಿಂದ 1000 ಲಕ್ಷ ರೂ. ಸಾಲ ವಿತರಣೆ ಗುರಿ
ಚಾಮರಾಜನಗರ

ರಾಜ್ಯ ಹಣಕಾಸು ಸಂಸ್ಥೆಯಿಂದ 1000 ಲಕ್ಷ ರೂ. ಸಾಲ ವಿತರಣೆ ಗುರಿ

July 9, 2018

ಚಾಮರಾಜನಗರ: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಚಾಮರಾಜನಗರ ಶಾಖೆಯು 2018-19ನೇ ಸಾಲಿನಲ್ಲಿ ವಿವಿಧ ಉದ್ಯಮಗಳಿಗೆ 1200 ಲಕ್ಷ ರೂ. ಸಾಲ ಮಂಜೂರಾತಿ ಮತ್ತು 1000 ಲಕ್ಷ ರೂ. ಸಾಲ ವಿತರಣೆ ಗುರಿಯನ್ನು ಹೊಂದಿದೆ. ಮೊದಲನೇ ಪೀಳಿಗೆಯ ಉದ್ಯಮಿಗಳಿಗೆ ಕೇವಲ ಶೇ. 8 ಬಡ್ಡಿ ದರದಲ್ಲಿ ಸಾಲವನ್ನು ಮಂಜೂರು ಮಾಡಲಿದೆ. 2017-18ನೇ ಹಣಕಾಸು ವರ್ಷದಲ್ಲಿ ಜಿಲ್ಲೆಯಲ್ಲಿ ವಿವಿಧ ಕೈಗಾರಿಕೆ ಉದ್ಯಮಗಳ ಸ್ಥಾಪನೆ ಹಾಗೂ ಸೇವಾವಲಯಗಳ ಅಭಿ ವೃದ್ಧಿಗಾಗಿ 1079 ಲಕ್ಷ ರೂ. ಸಾಲ ಮಂಜೂ ರಾತಿ ಮಾಡಿದೆ. ಒಟ್ಟು…

ಅಕ್ರಮ ಮದ್ಯ ಮಾರಾಟ; ಆರೋಪಿ ಬಂಧನ
ಚಾಮರಾಜನಗರ

ಅಕ್ರಮ ಮದ್ಯ ಮಾರಾಟ; ಆರೋಪಿ ಬಂಧನ

July 9, 2018

ಹನೂರು: ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಣೆ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಮ.ಬೆಟ್ಟ ಪೊಲೀಸರು ಮಾಲು ಸಮೇತ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಮಂಡ್ಯ ನಿವಾಸಿ ರಾಜು ಅನ್ನು ಬಂಧಿಸಿದ್ದು, ಇಂಡಿಕಾ ಕಾರನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ವಿವರ: ಖಚಿತ ಮಾಹಿತಿ ಮೇರೆಗೆ ಮಲೈಮಹದೇಶ್ವರ ಬೆಟ್ಟದ ಇನ್ಸ್‍ಪೆಕ್ಟರ್ ದೇವ ರಾಜು, ಮುಖ್ಯಪೇದೆ ನಾಗರಾಜು, ಪೇದೆಗಳಾದ ಸಿದ್ದರಾಜು, ಶಂಕರ್, ಪ್ರಭು ದಾಳಿ ನಡೆಸಿದರು….

ವಾಟಾಳು ಶ್ರೀಗಳು, ಡಾ.ಆರ್.ರಾಜುಗೆ ಸನ್ಮಾನ
ಚಾಮರಾಜನಗರ

ವಾಟಾಳು ಶ್ರೀಗಳು, ಡಾ.ಆರ್.ರಾಜುಗೆ ಸನ್ಮಾನ

July 9, 2018

ಚಾಮರಾಜನಗರ: ನಗರದ ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ವಾಟಾಳು ಸೂರ್ಯ ಸಿಂಹಾಸನ ಮಠದ ಡಾ.ಶ್ರೀಸಿದ್ಧಲಿಂಗ ಶಿವಾಚಾರ್ಯಸ್ವಾಮೀಜಿ ಹಾಗೂ ನಿವೃತ್ತ ಅರಣ್ಯಾಧಿಕಾರಿ ಡಾ.ಆರ್.ರಾಜು ಅವರಿಗೆ ಗೌರವ ಸಮರ್ಪಣಾ ಕಾರ್ಯಕ್ರಮ ನಡೆಯಿತು. ನಗರದ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ವನ್ನು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರತಿಯೊಬ್ಬ ಅಧಿಕಾರಿಯು ಕಾನೂನಿನ ಚೌಕಟ್ಟಿನೊಳಗೆ ಕರ್ತವ್ಯ ನಿರ್ವಹಿಸಬೇಕಾಗಿದೆ. ಈ ವೇಳೆ ಜನಪರ ಕಾರ್ಯ ಯೋಜನೆಗೆ ಒತ್ತು ನೀಡಿದರೆ ಒಳಿತು ಎಂದು ಅಭಿಪ್ರಾಯಪಟ್ಟರು. ಗೌರವ ಸ್ವೀಕರಿಸಿ ಮಾತನಾಡಿದ…

ಚಾಮರಾಜನಗರ ಸೇರಿ 5 ಸರ್ಕಾರಿ ನರ್ಸಿಂಗ್ ಶಾಲೆಗೆ ಪ್ರವೇಶಾತಿ ಬೇಡ
ಚಾಮರಾಜನಗರ

ಚಾಮರಾಜನಗರ ಸೇರಿ 5 ಸರ್ಕಾರಿ ನರ್ಸಿಂಗ್ ಶಾಲೆಗೆ ಪ್ರವೇಶಾತಿ ಬೇಡ

July 9, 2018

ಚಾಮರಾಜನಗರ:  ಚಾಮರಾಜನಗರದ ಸರ್ಕಾರಿ ನರ್ಸಿಂಗ್ ಶಾಲೆಗೆ ಪ್ರಸ್ತುತ 2018-19ನೇ ಸಾಲಿಗೆ ಪ್ರವೇಶ ಪ್ರಕ್ರಿಯೆಯನ್ನು ತಡೆಹಿಡಿಯುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ವೈದ್ಯ ಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಈ ಪತ್ರ ‘ಮೈಸೂರು ಮಿತ್ರ’ನಿಗೆ ಲಭ್ಯ ವಾಗಿದ್ದು, ಜಿಲ್ಲಾ ಕೇಂದ್ರವಾದ ಚಾಮ ರಾಜನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಹಿಂಭಾಗದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ನರ್ಸಿಂಗ್ ಶಾಲೆಯಲ್ಲಿ ಖಾಯಂ ಬೋಧಕರು ಇಲ್ಲದಿರುವುದು ಹಾಗೂ ಶಾಲೆಯಲ್ಲಿ ಮೂಲ ಭೂತ ಸೌಲಭ್ಯಗಳ ಕೊರತೆ ಇರುವುದು ಕಂಡು…

ಶಾಸಕ ನಿರಂಜನಕುಮಾರ್ ಗೆ ಗ್ರಾಪಂ ನೌಕರರ ಸನ್ಮಾನ
ಚಾಮರಾಜನಗರ

ಶಾಸಕ ನಿರಂಜನಕುಮಾರ್ ಗೆ ಗ್ರಾಪಂ ನೌಕರರ ಸನ್ಮಾನ

July 9, 2018

ಗುಂಡ್ಲುಪೇಟೆ:  ಇಲ್ಲಿನ ತಾಲೂಕು ಗ್ರಾಪಂ ನೌಕರರ ಸಂಘದ ವತಿಯಿಂದ ಶಾಸಕ ಸಿ.ಎಸ್.ನಿರಂಜನ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸ ಕರನ್ನು ಭೇಟಿ ಮಾಡಿದ ಸಂಘದ ಪದಾಧಿಕಾರಿಗಳು ತಾವು ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಪಂಗಳಲ್ಲಿ ನೌಕರರನ್ನು ಖಾಯಂ ಮಾಡಲು ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾಗಿರಬೇಕು ಎಂದು ಸರ್ಕಾರ ಷರತ್ತು ವಿಧಿಸುತ್ತಿರುವುದರಿಂದ ಕಳೆದ 20 ವರ್ಷ ಗಳಿಂದಲೂ ಸೇವೆ ಸಲ್ಲಿಸುತ್ತಿರುವ ಹಲವು ನೌಕರರು ತೊಂದರೆಗೊಳಗಾಗಲಿದ್ದಾರೆ. ಹಲವಾರು ವರ್ಷಗಳಿಂದಲೂ ನೌಕರರು ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸು ತ್ತಿದ್ದು, ಇವುಗಳ ಈಡೇರಿಕೆಗೆ ಕ್ರಮಕೈಗೊಳ್ಳ ಬೇಕು…

ಸವಲತ್ತು ಸದುಪಯೋಗಕ್ಕೆ ಸಲಹೆ
ಚಾಮರಾಜನಗರ

ಸವಲತ್ತು ಸದುಪಯೋಗಕ್ಕೆ ಸಲಹೆ

July 9, 2018

ಗುಂಡ್ಲುಪೇಟೆ: ಸರ್ಕಾರದ ಸವಲತ್ತುಗಳನ್ನು ಸಮರ್ಪಕ ವಾಗಿ ಬಳಸಿಕೊಂಡು ಮಕ್ಕಳ ಆರೋಗ್ಯ ಮತ್ತು ಶಿಕ್ಷಣ ಮಟ್ಟವನ್ನು ಹೆಚ್ಚಿಸಿಕೊಳ್ಳಿ ಎಂದು ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಹೇಳಿದರು. ತಾಲೂಕಿನ ಬೇಗೂರು ಹೋಬಳಿಯ ಯಡವನಹಳ್ಳಿ ಹಾಗೂ ಕೋಟೆಕೆರೆ ಗ್ರಾಮಗಳಲ್ಲಿ ತಲಾ 9.17 ಲಕ್ಷ ರೂ. ವೆಚ್ಚ ದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ನೂತನ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಮಕ್ಕಳ ಶೈಕ್ಷಣಿಕ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರವು ವಿವಿಧ ಯೋಜನೆಗಳನ್ನು ಜಾರಿ ಗೊಳಿಸುತ್ತಿದೆ. ಬಾಣಂತಿಯರು ಹಾಗೂ ಮಕ್ಕಳಲ್ಲಿ ಉಂಟಾಗುವ ತೊಂದರೆಗಳನ್ನು ತಪ್ಪಿಸಲು…

2.20 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ
ಚಾಮರಾಜನಗರ

2.20 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ

July 9, 2018

ಚಾಮರಾಜನಗರ:  ತಾಲೂಕಿನ ಬಿಸಲವಾಡಿ, ಕೊತ್ತಲವಾಡಿ ಹಾಗೂ ಕಿಲಗೆರೆ ಗ್ರಾಮಗಳಲ್ಲಿ ವಿವಿಧ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ 2.20 ಕೋಟಿ ವೆಚ್ಚದ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿ ಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಸಿ.ಪುಟ್ಟರಂಗಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು. ಸಚಿವರಾಗಿ ಮೊದಲ ಬಾರಿಗೆ ಬಿಸಲ ವಾಡಿ ಗ್ರಾಮಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಗ್ರಾಮಸ್ಥರು ಪಟಾಕಿ ಸಿಡಿಸಿ ಅದ್ದೂರಿ ಸ್ವಾಗತ ನೀಡಿ ಸನ್ಮಾನಿಸಿದರು. ಗ್ರಾಮದ ಲಕ್ಷ್ಮಿ ದೇವಸ್ಥಾನಕ್ಕೂ ತೆರಳಿ ಸಚಿವರು ವಿಶೇಷ ಪೂಜೆ ಸಲ್ಲಿಸಿದರು. ನಂತರ ಬಿಸಲವಾಡಿ ಗ್ರಾಮದ ಮುಖ್ಯ ರಸ್ತೆಯಿಂದ…

ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ
ಚಾಮರಾಜನಗರ

ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ

July 8, 2018

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಬಗ್ಗೆ ವ್ಯಾಪಕ ಚರ್ಚೆ ರಸ್ತೆ ಅಭಿವೃದ್ಧಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ತಾಕೀತು ಅಧಿಕಾರಿಗಳನ್ನು ತೀವ್ರ ತರಾಟೆ ತೆಗೆದುಕೊಂಡ ಸಂಸದ ಧ್ರುವನಾರಾಯಣ ಚಾಮರಾಜನಗರ: ಚಾಮರಾಜನಗರದಿಂದ ಸಂತೇಮರಹಳ್ಳಿ ವರೆಗೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಈ ಮಾರ್ಗದಲ್ಲಿ ಸೃಷ್ಟಿಯಾ ಗಿದ್ದ ಹಳ್ಳಕ್ಕೆ ಬಿದ್ದು ಇಬ್ಬರು ಪ್ರಾಣ ಕಳೆದು ಕೊಂಡಿದ್ದಾರೆ. ಇದಕ್ಕೆ ಹೊಣೆ ಯಾರು? ಮನುಷ್ಯನ ಪ್ರಾಣಕ್ಕೆ ಬೆಲೆ ಇಲ್ಲವೇ? ಎಂದು ಸಂಸದ ಆರ್.ಧ್ರುವನಾರಾಯಣ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು….

ಕಾಗದದಲ್ಲೇ ಮುಗಿದ ನವೀಕರಣ ಕಾಮಗಾರಿ
ಚಾಮರಾಜನಗರ

ಕಾಗದದಲ್ಲೇ ಮುಗಿದ ನವೀಕರಣ ಕಾಮಗಾರಿ

July 8, 2018

ಜಿಪಂ ಆಡಳಿತಾತ್ಮಕ ಮಂಜೂರಾತಿಯೂ ಇಲ್ಲ. ಇಓ ಕಚೇರಿ ನವೀಕರಣವೂ ಇಲ್ಲ, ಆದರೂ 2.26ಲಕ್ಷ ಹಣ ಪಾವತಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ, ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಲು ಆಗ್ರಹ ಕೊಳ್ಳೇಗಾಲ: ಬೇಲಿಯೇ ಎದ್ದು ಹೂಲ ಮೇಯ್ದಿ ಹಾಗೇ ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಯಳಂದೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿ ಕಾರಿಗಳ ಕಚೇರಿ ನವೀಕರಣ ಕಾಮಗಾರಿ ಮಾಡದೆ ಗುತ್ತಿಗೆದಾರನಿಗೆ 2,26,375 ರೂ. ಬಿಲ್ ಪಾವತಿ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 2017-18ನೇ ಸಾಲಿನ ಮಾರ್ಚ್…

ನಗರಸಭೆ ಕಚೇರಿಗೆ ಲೋಕಾಯುಕ್ತ ದಾಳಿ: ದಾಖಲೆ ಪರಿಶೀಲನೆ
ಚಾಮರಾಜನಗರ

ನಗರಸಭೆ ಕಚೇರಿಗೆ ಲೋಕಾಯುಕ್ತ ದಾಳಿ: ದಾಖಲೆ ಪರಿಶೀಲನೆ

July 8, 2018

ಚಾಮರಾಜನಗರ:  ದೂರೊಂದಕ್ಕೆ ಸಂಬಂಧಿಸಿದಂತೆ ಮೈಸೂರು ಲೋಕಾಯುಕ್ತ ಎಸ್‍ಪಿ ಜಿ.ರಶ್ಮಿ ಅವರ ನೇತೃತ್ವದ ತಂಡ ಶನಿವಾರ ನಗರದ ನಗರಸಭೆ ಕಾರ್ಯಾಲ ಯಕ್ಕೆ ದಿಢೀರ್ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದರು. ಕುಡಿಯುವ ನೀರಿನ ಯೋಜನೆ, ಒಳಚರಂಡಿ ಕಾಮಗಾರಿ ಬಗ್ಗೆ ಸಾರ್ವಜನಿಕರಿಂದ ಲೋಕಾಯುಕ್ತರಿಗೆ ದೂರು ಸಲ್ಲಿಕೆ ಆಗಿತ್ತು. ಈ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಕಚೇರಿಯಿಂದ ಮಾಹಿತಿ ನೀಡುವಂತೆ ನಗರಸಭೆಗೆ ಹಲವು ಬಾರಿ ನೋಟಿಸ್ ನೀಡಲಾಗಿತ್ತು. ಆದರೆ, ಅಧಿಕಾರಿಗಳು ಇದಕ್ಕೆ ಉತ್ತರಿಸಿರಲಿಲ್ಲ. ಹಾಗಾಗಿ, ಲೋಕಾಯುಕ್ತ ಅಧಿಕಾರಿಗಳ ತಂಡ ಭೇಟಿ ನೀಡಿ ಕೆಲವು…

1 111 112 113 114 115 141
Translate »