ಚಾಮರಾಜನಗರ

ಪೂರ್ಣ ಸಾಲ ಮನ್ನಾ ಭರವಸೆ  ಭಗ್ನ: ಇಬ್ಬರು ರೈತರ ಆತ್ಮಹತ್ಯೆ
ಚಾಮರಾಜನಗರ, ಮಂಡ್ಯ

ಪೂರ್ಣ ಸಾಲ ಮನ್ನಾ ಭರವಸೆ  ಭಗ್ನ: ಇಬ್ಬರು ರೈತರ ಆತ್ಮಹತ್ಯೆ

July 7, 2018

ಮಂಡ್ಯ, ಚಾಮರಾಜನಗರ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂಡಿಸಿದ ಬಜೆಟ್ ನಲ್ಲಿ ಪೂರ್ಣ ಸಾಲ ಮನ್ನಾ ಆಗಲಿಲ್ಲ ಎಂದು ಮನ ನೊಂದು ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ದೇಮಹಳ್ಳಿ ಹಾಗೂ ಮಂಡ್ಯ ಜಿಲ್ಲೆ ಕಚ್ಚಿಗೆರೆ ಗ್ರಾಮದಲ್ಲಿ ನಡೆದಿದೆ. ಚಾಮರಾಜನಗರ ವರದಿ: ಚಾಮರಾಜ ನಗರ ತಾಲೂಕಿನ ದೇಮಹಳ್ಳಿ ಗ್ರಾಮದ ನಂಜುಂಡಪ್ಪನವರ ಮಗ ಚಿಕ್ಕಸ್ವಾಮಿ ಉ. ಬೆಳ್ಳಪ್ಪ (42) ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಸ್ವಾಮಿ ತಮಗಿದ್ದ ಎರಡೂ ವರೆ ಎಕರೆ ಜಮೀನಿನಲ್ಲಿ ಬಾಳೆ ಮತ್ತು ಉದ್ದು…

ಪ್ರವಾಸದಿಂದ ವಿದ್ಯಾರ್ಥಿಗಳ ಜ್ಞಾನ ಹೆಚ್ಚಳ: ಆರ್.ಎಂ.ರಾಜಪ್ಪ
ಚಾಮರಾಜನಗರ

ಪ್ರವಾಸದಿಂದ ವಿದ್ಯಾರ್ಥಿಗಳ ಜ್ಞಾನ ಹೆಚ್ಚಳ: ಆರ್.ಎಂ.ರಾಜಪ್ಪ

July 7, 2018

ಚಾಮರಾಜನಗರ: ಪ್ರವಾಸಗಳ ಮೂಲಕ ಮಕ್ಕಳಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಹೊರಗಿನ ಪ್ರಪಂಚದ ಜ್ಞಾನ ಮತ್ತು ಅರಿವು ಹೆಚ್ಚಾಗುತ್ತದೆ ಎಂದು ನಗರಸಭೆ ಉಪಾಧ್ಯಕ್ಷ ಆರ್.ಎಂ. ರಾಜಪ್ಪ ಅಭಿಪ್ರಾಯಪಟ್ಟರು. ತಾಲೂಕು ಭಾರತ ಸೇವಾದಳ, ಸಾರ್ವಜನಿಕ ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ ಸಹಯೋಗದಲ್ಲಿ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬದನಗುಪ್ಪೆಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಗಳಿಗಾಗಿ ಆಯೋಜಿಸಿದ್ದ ಒಂದು ದಿನದ ಅರಣ್ಯ ವೀಕ್ಷಣೆ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಅರಣ್ಯ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು ಪ್ರವಾಸ ಕೈಗೊಳ್ಳುವುದರಿಂದ ವನ್ಯಜೀವಿಗಳ ಕುರಿತು…

ಪಿಎಫ್‍ಐನಿಂದ ಈದ್‍ಮಿಲನ್ ಕ್ರೀಡೆ
ಚಾಮರಾಜನಗರ

ಪಿಎಫ್‍ಐನಿಂದ ಈದ್‍ಮಿಲನ್ ಕ್ರೀಡೆ

July 7, 2018

ಚಾಮರಾಜನಗರ: ರಂಜಾನ್ ಹಬ್ಬದ ಪ್ರಯುಕ್ತ ನಗರದ ಗಾಳೀಪುರದಲ್ಲಿ ಪಾಪ್ಯು ಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ವತಿಯಿಂದ ಈದ್ ಮಿಲನ್ ಕ್ರೀಡೆ ನಡೆಯಿತು. ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರ ವೇರಿಸಿದ ಸಂಘಟನೆಯ ಜಿಲ್ಲಾಧ್ಯಕ್ಷ ಅಜೀಂ ಷರೀಫ್ ಮಾತನಾಡಿ, ರಂಜಾನ್ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಸಂಘಟನೆಯ ವತಿಯಿಂದ ಈದ್ ಮಿಲನ್ ಕ್ರೀಡಾ ಕಾರ್ಯಕ್ರಮವನ್ನು ಅಯೋಜನೆ ಮಾಡಲಾಗುತ್ತದೆ. ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿ ದೈಹಿಕ, ಮಾನಸಿಕ ಸದೃಢರಾಗು ವಂತೆ ಮಾಡಲಾಗುವುದು. ಕ್ರೀಡೆಯಲ್ಲಿ ವಿದ್ಯಾ ರ್ಥಿಗಳು, ಸಂಘಟನೆಯ ಕಾರ್ಯಕರ್ತರು ಭಾಗವಹಿಸುತ್ತಾರೆ….

ಸಿದ್ದಗಂಗಾ ಮಠಕ್ಕೆ ಶಾಸಕ ನಿರಂಜನ್ ಭೇಟಿ
ಚಾಮರಾಜನಗರ

ಸಿದ್ದಗಂಗಾ ಮಠಕ್ಕೆ ಶಾಸಕ ನಿರಂಜನ್ ಭೇಟಿ

July 7, 2018

ಗುಂಡ್ಲುಪೇಟೆ: ಕ್ಷೇತ್ರದ ಶಾಸಕ ಸಿ.ಎಸ್.ನಿರಂಜನ ಕುಮಾರ್ ಶುಕ್ರವಾರ ಮುಂಜಾನೆ ತುಮ ಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶಿವಕುಮಾರಸ್ವಾಮಿಗಳಿಂದ ಆಶೀ ರ್ವಾದ ಪಡೆದರು. ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನ ಸಭಾ ಅಧಿವೇಶನದಲ್ಲಿ ಭಾಗವಹಿಸಿದ್ದ ಶಾಸಕ ಸಿ.ಎಸ್.ನಿರಂಜನ್‍ಕುಮಾರ್ ಮುಂಜಾನೆ ಸಿದ್ದಗಂಗಾ ಮಠಕ್ಕೆ ತೆರಳಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ನಂತರ ಶ್ರೀಗಳನ್ನು ಭೇಟಿ ಮಾಡಿ ಆಶೀ ರ್ವಾದ ಪಡೆದುಕೊಂಡರು.

ಹಕ್ಕೋತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಪ್ರತಿಭಟನೆ
ಚಾಮರಾಜನಗರ

ಹಕ್ಕೋತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಪ್ರತಿಭಟನೆ

July 7, 2018

ಚಾಮರಾಜನಗರ:  2018 ಜುಲೈ 1ರವರೆಗಿನ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದು ಸೇರಿದಂತೆ ಇತರ ಹಕ್ಕೋತ್ತಾಯಗಳನ್ನು ಈಡೇರಿಸು ವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ಚಳವಳಿ ನಡೆಸಿದರು. ನಗರ-ಸಂತೇಮರಹಳ್ಳಿಯ ಜಾಲಹಳ್ಳಿ ಹುಂಡಿ ಮುಂಭಾಗ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-209 ನಲ್ಲಿ ರೈತರು ರಸ್ತೆ ತಡೆ ನಡೆಸಿದರು. ತಮ್ಮ ನ್ಯಾಯ ಯುತವಾದ ಹಕ್ಕೋತ್ತಾಯಗಳನ್ನು ಈಡೇರಿಸುವಂತೆ ಅವರು ಆಗ್ರಹಿಸಿದರು. ಹೆಚ್.ಡಿ.ಕುಮಾರಸ್ವಾಮಿ ಅವರು ಚುನಾವಣಾ ಪೂರ್ವದಲ್ಲಿ ನಾನು ಮುಖ್ಯಮಂತ್ರಿ ಯಾದ…

ಫೋಟೋ ತೆಗೆಯುತ್ತಿದ್ದ ಯುವಕರ ಮೇಲೆ ಸಲಗ ದಾಳಿ
ಚಾಮರಾಜನಗರ

ಫೋಟೋ ತೆಗೆಯುತ್ತಿದ್ದ ಯುವಕರ ಮೇಲೆ ಸಲಗ ದಾಳಿ

July 7, 2018

ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ಮದ್ದೂರು ಅರಣ್ಯ ಪ್ರದೇಶದಲ್ಲಿ ಕಾಡಾನೆ ಮುಂದೆ ಫೋಟೋ ತೆಗೆಯಲು ಮುಂದಾದ ಯುವಕರ ಗುಂಪಿನ ಮೇಲೆ ಆನೆ ದಾಳಿ ನಡೆಸಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಮದ್ದೂರು ವಲಯದ ಅರಣ್ಯ ಪ್ರದೇಶದ ರಸ್ತೆ ಬದಿಯಲ್ಲಿ ಒಂಟಿ ಸಲಗವೊಂದು ಸಂಚರಿಸುತ್ತಿದ್ದು, ಇದರ ಫೋಟೋ ತೆಗೆಯಲು ಪ್ರವಾಸಕ್ಕೆ ಬಂದಿದ್ದ ಕೆಲವು ಯುವಕರ ಮುಂದಾಗಿದ್ದಾರೆ. ಈ ವೇಳೆ ಆನೆ ಯುವಕರ ಮೇಲೆ ದಾಳಿ ನಡೆಸಿದೆ. ಅದೃಷ್ಟವಶಾತ್ ದಾಳಿಯಿಂದ ಯುವಕರು ತಪ್ಪಿಸಿಕೊಂಡಿದ್ದಾರೆ. ಮದ್ದೂರು ಅರಣ್ಯ ಪ್ರದೇಶದಲ್ಲಿ ಹಾದು…

ದೇಮಹಳ್ಳಿ ರೈತ ಚಿಕ್ಕಸ್ವಾಮಿ ಆತ್ಮಹತ್ಯೆ ಪ್ರಕರಣ: ಮೃತನ ಕುಟುಂಬಕ್ಕೆ 25 ಲಕ್ಷ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ
ಚಾಮರಾಜನಗರ

ದೇಮಹಳ್ಳಿ ರೈತ ಚಿಕ್ಕಸ್ವಾಮಿ ಆತ್ಮಹತ್ಯೆ ಪ್ರಕರಣ: ಮೃತನ ಕುಟುಂಬಕ್ಕೆ 25 ಲಕ್ಷ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

July 6, 2018

ಚಾಮರಾಜನಗರ: ತನ್ನ ಸಾಲಮನ್ನಾ ಆಗಲಿಲ್ಲ ಎಂದು ತಾಲೂಕಿನ ದೇಮಹಳ್ಳಿ ಗ್ರಾಮದ ರೈತನೋರ್ವ ಆತ್ಮಹತ್ಯೆಗೆ ಶರಣಾದ ಹಿನ್ನೆಲೆಯಲ್ಲಿ ಮೃತ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿ ರೈತ ಸಮುದಾಯ ಇಂದು ಸಂಜೆ ಹೆದ್ದಾರಿಯಲ್ಲಿ ಶವವಿಟ್ಟು ಬೃಹತ್ ಪ್ರತಿಭಟನೆ ನಡೆಸಿತು. ದೇಮಹಳ್ಳಿ ಗ್ರಾಮದ ರೈತ ಚಿಕ್ಕಸ್ವಾಮಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿ ಸಿದ ಸಾಲಮನ್ನಾ ಯೋಜನೆಯಲ್ಲಿ ತನ್ನ ಸಾಲ ಮನ್ನಾ ಆಗುವುದಿಲ್ಲ ಎಂದು ತಿಳಿದು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿ ಸಿದ್ದರು. ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ…

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಬಜೆಟ್: ಜಿಲ್ಲೆಗೆ 450 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆ ಸ್ಥಾಪನೆಗೆ  50 ಕೋಟಿ ಅನುದಾನ
ಚಾಮರಾಜನಗರ

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಬಜೆಟ್: ಜಿಲ್ಲೆಗೆ 450 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆ ಸ್ಥಾಪನೆಗೆ  50 ಕೋಟಿ ಅನುದಾನ

July 6, 2018

ಚಾಮರಾಜನಗರ:  ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಮಂಡಿಸಿದ 2018-19ನೇ ಸಾಲಿನ ಬಜೆಟ್‍ನಲ್ಲಿ ಜಿಲ್ಲೆಗೆ ಎರಡು ಕೊಡುಗೆಗಳನ್ನು ಪ್ರಕಟಿಸಿದ್ದಾರೆ. ಚಾಮರಾಜನಗರ, ಗದಗ, ಕೊಪ್ಪಳ ಮತ್ತು ಹಾಸನ ನಗರಗಳ ವೈದ್ಯಕೀಯ ಕಾಲೇ ಜುಗಳಲ್ಲಿ 450 ಹಾಸಿಗೆ ಸಾಮಥ್ರ್ಯದ ಹೊಸ ಆಸ್ಪತ್ರೆ ಸ್ಥಾಪಿಸಿಲಾಗುವುದು. ಇದ ಕ್ಕಾಗಿ 200 ಕೋಟಿ ರೂ. ಅನುದಾನ ನೀಡು ವುದಾಗಿ ಪ್ರಕಟಿಸಲಾಗಿದೆ. ನಾಲ್ಕು ಜಿಲ್ಲೆಗ ಳಿಂದ ಒಟ್ಟು 200 ಕೋಟಿ ರೂ. ಅನುದಾನ ನೀಡಿರುವುದರಿಂದ ಒಂದೊಂದು ಜಿಲ್ಲೆಗೆ 50 ಕೋಟಿ ರೂ. ಅನುದಾನ ಲಭ್ಯವಾಗಿದೆ. ಚಾಮರಾಜನಗರ…

ಮಹಿಳಾ, ಮಕ್ಕಳ ಸುರಕ್ಷತೆಗೆ ಪೊಲೀಸ್ ಆ್ಯಪ್
ಚಾಮರಾಜನಗರ

ಮಹಿಳಾ, ಮಕ್ಕಳ ಸುರಕ್ಷತೆಗೆ ಪೊಲೀಸ್ ಆ್ಯಪ್

July 6, 2018

ಚಾಮರಾಜನಗರ:  ಮಹಿಳಾ ಮತ್ತು ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ಹಾಗು ಇನ್ನಿತರ ಘಟನೆಗಳು ಸಂಭವಿಸುವ ಸಂದರ್ಭಗಳಲ್ಲಿ ತುರ್ತಾಗಿ ಸ್ಪಂದಿಸಲು ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ಹೊಸದಾದ ಕೆಎಸ್‍ಪಿ ಮೊಬೈಲ್ ಆ್ಯಪ್‍ನ್ನು ಅಭಿವೃದ್ಧಿಪಡಿಸಲಾಗಿರುತ್ತದೆ. ಈ ಮೊಬೈಲ್ ಆ್ಯಪ್‍ನ ಆವೃತ್ತಿಯನ್ನು ಗೂಗಲ್ ಪ್ಲೇಸ್ಟೋರ್‍ನಲ್ಲಿ ಹಾಗೂ ಆ್ಯಪಲ್ ಆ್ಯಪ್ ಸ್ಟೋರ್‍ನಲ್ಲಿ ಅಪ್ ಲೋಡ್ ಮಾಡಲಾಗಿದ್ದು, ಪ್ರಾಯೋಗಿಕವಾಗಿ ಸಾರ್ವ ಜನಿಕರು ಉಪಯೋಗಿಸಬಹುದಾಗಿದೆ. ಯಾವುದೇ Android and IOS ತಂತ್ರಾಂಶ ಹೊಂದಿರುವ ಮೊಬೈಲ್ ಫೋನ್‍ಗಳಲ್ಲಿ ಸದರಿ ಆ್ಯಪ್‍ನ್ನು ಬಳಸಬಹುದಾಗಿದ್ದು ಸುಲಲಿತವಾದ ಬಳಕೆಗೆ ಮೊಬೈಲ್ ಫೋನಿನಲ್ಲಿ ಇಂಟರ್‍ನೆಟ್…

ಐನೂರು ಮಾರಿಗುಡಿ ಜಾತ್ರೆ: ನಿಯಮ ಪಾಲಿಸಲು ಅರಣ್ಯ ಸಿಬ್ಬಂದಿಗೆ ಜಿಲ್ಲಾಧಿಕಾರಿ ಸೂಚನೆ
ಚಾಮರಾಜನಗರ

ಐನೂರು ಮಾರಿಗುಡಿ ಜಾತ್ರೆ: ನಿಯಮ ಪಾಲಿಸಲು ಅರಣ್ಯ ಸಿಬ್ಬಂದಿಗೆ ಜಿಲ್ಲಾಧಿಕಾರಿ ಸೂಚನೆ

July 6, 2018

ಚಾಮರಾಜನಗರ:  ಬಂಡೀ ಪುರ ಹುಲಿ ಸಂರಕ್ಷಿತ ಪ್ರದೇಶದ ಎ.ಎಂ. ಗುಡಿ ವಲಯದ ಐನೂರು ಮಾರಿಗುಡಿ ಜಾತ್ರೆ ಮಹೋತ್ಸವಕ್ಕೆ ನಿಗದಿಪಡಿಸಿರುವ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿ ಸುವಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಾತ್ರಾ ಮಹೋತ್ಸವ ಸಂಬಂಧ ಅಧಿ ಕಾರಿಗಳು ಹಾಗೂ ಜಾತ್ರೆ ಆಚರಣೆಯ ಸಮುದಾಯ ಪ್ರತಿನಿಧಿಗಳೊಂದಿಗೆ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಾತ್ರಾ ಮಹೋತ್ಸವವನ್ನು ಹಲವು ನಿಬಂಧನೆಗೆ ಒಳಪಟ್ಟು ಜುಲೈ 9ರಂದು ಮಾತ್ರ ಆಚರಿಸಲು ಅವಕಾಶ ಕಲ್ಪಿಸ ಲಾಗಿದೆ. ಅರಣ್ಯ…

1 112 113 114 115 116 141
Translate »