ಚಾಮರಾಜನಗರ

ವಿದ್ಯಾರ್ಥಿಯಿಂದಲೇ ಕಾನೂನಿನ ಅರಿವು ಅಗತ್ಯ
ಚಾಮರಾಜನಗರ

ವಿದ್ಯಾರ್ಥಿಯಿಂದಲೇ ಕಾನೂನಿನ ಅರಿವು ಅಗತ್ಯ

July 4, 2018

ಚಾಮರಾಜನಗರ: ವಿದ್ಯಾರ್ಥಿ ದೆಸೆಯಿಂದಲೇ ಕಾನೂನಿನ ಅರಿವು ಅಗತ್ಯ ವಾಗಿದ್ದು, ಇದರಿಂದ ಸಮಾಜದಲ್ಲಿ ಉತ್ತಮ ಜೀವನ ನಡೆಸಬಹುದು ಎಂದು ಚಾಮ ರಾಜನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿ ತಿಳಿಸಿದರು. ತಾಲೂಕಿನ ಅಮಚವಾಡಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಫಾಟಿಸಿ ಅವರು ಮಾತನಾಡುತ್ತಿದ್ದರು. ಸಂವಿಧಾನದಲ್ಲಿ ತಿಳಿಸಿರುವಂತೆ ಸಮಾಜ ದಲ್ಲಿರುವ ಪ್ರತಿಯೆÁಬ್ಬರು ಕಾನೂನಿ ನಡಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಮೂಲಭೂತ ಹಕ್ಕುಗಳನ್ನು ಅರಿತಿರುವ ನಾಗರಿಕರು ಸೇರಿದಂತೆ ಎಲ್ಲರು…

ಗುಂಡ್ಲುಪೇಟೆ ಸಾರಿಗೆ ಬಸ್ ನಿಲ್ದಾಣದಲ್ಲಿ ಕೊಳಚೆ ನೀರಿನ ಕಿರಿಕಿರಿ
ಚಾಮರಾಜನಗರ

ಗುಂಡ್ಲುಪೇಟೆ ಸಾರಿಗೆ ಬಸ್ ನಿಲ್ದಾಣದಲ್ಲಿ ಕೊಳಚೆ ನೀರಿನ ಕಿರಿಕಿರಿ

July 4, 2018

ಗುಂಡ್ಲುಪೇಟೆ: ಪಟ್ಟಣದ ವಿವಿಧ ಬಡಾವಣೆಗಳ ಒಳ ಚರಂಡಿಯ ಕೊಳಚೆ ನೀರು ಸಾರಿಗೆ ಬಸ್ ನಿಲ್ದಾಣ ದೊಳಗೆ ಹರಿದು ಬಂದು ಪ್ರಯಾಣಿಕರು ಕಿರಿಕಿರಿಯನ್ನು ಅನುಭವಿಸುವಂತಾಗಿದೆ. ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಸುವಾಗ ಚರಂಡಿ ಗಳನ್ನು ನಿರ್ಮಿಸದ ಪರಿಣಾಮ ಸ್ವಲ್ಪ ಮಳೆ ಬಿದ್ದರೂ ಒಳಚರಂಡಿಯ ನೀರೆಲ್ಲಾ ತಗ್ಗು ಪ್ರದೇಶದಲ್ಲಿರುವ ಸಾರಿಗೆ ಬಸ್ ನಿಲ್ದಾಣದೊಳಗೆ ಹರಿದುಬರುತ್ತಿದೆ. ಆದರೂ ಸಹ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಶ್ವೇತಾದ್ರಿಗಿರಿ ಬಡಾವಣೆಯ ಚರಂಡಿ ನೀರು ಹೆದ್ದಾರಿ…

ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ಧ ಪ್ರತಿಭಟನೆ
ಚಾಮರಾಜನಗರ

ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ಧ ಪ್ರತಿಭಟನೆ

July 4, 2018

ಚಾಮರಾಜನಗರ: ಕಾವೇರಿ ನೀರು ನಿರ್ವಹಣಾ ಮಂಡಳಿಯು ತಮಿಳು ನಾಡಿಗೆ ನೀರು ಹರಿಸುವಂತೆ ಆದೇಶ ಮಾಡಿರುವ ಕ್ರಮವನ್ನು ವಿರೋಧಿಸಿ ಕರ್ನಾಟಕ ಸೇನಾಪಡೆ ಕಾರ್ಯಕರ್ತರು ನಗರದಲ್ಲಿ ಕಣ್ಣಿಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ನಗರದ ಶ್ರೀಚಾಮರಾಜೇಶ್ವರ ಉದ್ಯಾನ ವನದ ಆವರಣದಲ್ಲಿ ಜಮಾಯಿಸಿದ ಕರ್ನಾ ಟಕ ಸೇನಾಪಡೆ ಕಾರ್ಯಕರ್ತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇ ಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ರಸ್ತೆತಡೆ ನಡೆಸಿ, ಕಾವೇರಿ ನೀರು ನಿರ್ವಹಣಾ ಮಂಡಳಿ ಹಾಗೂ ತಮಿಳುನಾಡು ಸರ್ಕಾರ, ಕರ್ನಾಟಕದ ಸಂಸದರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ…

ಕನಕ ಭವನ ಕಾಮಗಾರಿ ಅಪೂರ್ಣ: ಗ್ರಾಮಸ್ಥರ ಪ್ರತಿಭಟನೆ
ಚಾಮರಾಜನಗರ

ಕನಕ ಭವನ ಕಾಮಗಾರಿ ಅಪೂರ್ಣ: ಗ್ರಾಮಸ್ಥರ ಪ್ರತಿಭಟನೆ

July 4, 2018

ಗುಂಡ್ಲುಪೇಟೆ: ತಾಲೂಕಿನ ಮಲ್ಲಯ್ಯನ ಪುರ ಗ್ರಾಮದಲ್ಲಿ ಆರು ವರ್ಷಗಳಿಂದಲೂ ಪ್ರಗತಿಯಲ್ಲಿರುವ ಕನಕಭವನ ಕಾಮಗಾರಿಯನ್ನು ಪೂರ್ಣಗೊಳಿಸದೇ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದ ಕುರುಬರ ಸಂಘದ ಪದಾಧಿಕಾರಿಗಳು ಪಟ್ಟಣದ ಕೆಆರ್‍ಎಡಿಎಲ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. 2012ರಲ್ಲಿ ಮಲ್ಲಯ್ಯನಪುರ ಗ್ರಾಮವನ್ನು ಸುವರ್ಣ ಗ್ರಾಮವಾಗಿ ಅಭಿವೃದ್ಧಿಪಡಿಸಲಾಗಿತ್ತು. ಈ ಸಂದರ್ಭದಲ್ಲಿ 12ಲಕ್ಷ ರೂಪಾಯಿ ವೆಚ್ಚದಲ್ಲಿ ಕನಕ ಭವನ ನಿರ್ಮಾಣ ಕಾಮಗಾರಿ ಪ್ರಾರಂಭಿಸಿ ದ್ದರೂ ಸಹ ಅದು ಇನ್ನೂ ಪೂರ್ಣಗೊಂಡಿಲ್ಲ. ಜತೆಗೆ, ಈಗಾಗಲೇ, ಮಾಡಿರುವ ಕಾಮಗಾರಿಯೂ ಸಹ ಕಳಪೆಯಾಗಿದ್ದು, ಸ್ಥಳಕ್ಕೆ ಅಧಿಕಾರಿಗಳು…

ಕಾನೂನಿನ ಬಗ್ಗೆ ಅರಿವಿದ್ದರೆ ಒಳಿತು: ನ್ಯಾಯಾಧೀಶ ಚಂದ್ರಶೇಖರ ಪಿ.ದಿಡ್ಡಿ ಅಭಿಮತ
ಚಾಮರಾಜನಗರ

ಕಾನೂನಿನ ಬಗ್ಗೆ ಅರಿವಿದ್ದರೆ ಒಳಿತು: ನ್ಯಾಯಾಧೀಶ ಚಂದ್ರಶೇಖರ ಪಿ.ದಿಡ್ಡಿ ಅಭಿಮತ

July 4, 2018

ಗುಂಡ್ಲುಪೇಟೆ: ಪ್ರತಿನಿತ್ಯದ ವ್ಯವಹಾರಗಳಿಗೆ ಶ್ರೀಸಾಮಾ ನ್ಯನು ಕಾನೂನುಗಳ ಬಗ್ಗೆ ಕನಿಷ್ಟ ಅರಿವು ಹೊಂದುವ ಮೂಲಕ ಪ್ರತಿಯೊಬ್ಬರಿಗೂ ಎದುರಾಗುವ ತೊಂದರೆಗಳನ್ನು ತಪ್ಪಿಸಿ ಕೊಳ್ಳಬಹುದು ಎಂದು ಪಟ್ಟಣದ ಹಿರಿಯ ಸಿವಿಲ್ ಹಾಗೂ ಜೆಎಂಎಫ್‍ಸಿ ನ್ಯಾಯಾ ಧೀಶ ಚಂದ್ರಶೇಖರ ಪಿ.ದಿಡ್ಡಿ ಹೇಳಿದರು. ತಾಲೂಕಿನ ಬನ್ನಿತಾಳಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘವು ಆಯೋಜಿಸಿದ್ದ ಮೂಲ ಕಾನೂನುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಗು ಹುಟ್ಟಿದಾಗ ಜನನ ಹಾಗೂ ಕುಟುಂಬದ ಸದಸ್ಯರು…

ನಾಪತ್ತೆಯಾಗಿದ್ದ ಬಾಲಕಿ ಮೈಸೂರಿನಲ್ಲಿ ಪತ್ತೆ
ಚಾಮರಾಜನಗರ

ನಾಪತ್ತೆಯಾಗಿದ್ದ ಬಾಲಕಿ ಮೈಸೂರಿನಲ್ಲಿ ಪತ್ತೆ

July 4, 2018

ಹನೂರು: ತಾಲೂಕಿನ ಚಿಗತಾಪುರ ಗ್ರಾಮದಿಂದ ಜೂ. 30ರಂದು ಕಾಣೆಯಾಗಿದ್ದ ಬಾಲಕಿ ಮಂಗಳವಾರ ಮೈಸೂರಿನಲ್ಲಿ ಪತ್ತೆಯಾಗಿದ್ದಾಳೆ. ಸಮೀಪದ ಬಸಪ್ಪನದೊಡ್ಡಿ ಗ್ರಾಮದ ತನ್ವೀರ್‍ಪಾಷಾ ಹಾಗೂ ಚಿಗತಾಪುರ ಗ್ರಾಮ ಬಾಲಕಿಯೊಬ್ಬಳು ಒಟ್ಟಿಗೆ ಕಾಣೆಯಾಗಿದ್ದರು. ಈ ಸಂಬಂಧ ಬಾಲಕಿ ತಂದೆ ರಾಮಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಅಪಹರಣ ಪ್ರಕರಣದಡಿ ದೂರು ದಾಖಲಿಸಿಕೊಂಡಿದ್ದರು. ಕಾಣೆ ಯಾಗಿದ್ದ ಬಾಲಕಿ ಸಂಬಂಧಿಕರೊಬ್ಬರ ಮನೆಯಲ್ಲಿರುವುದು ಕಂಡು ಬಂದಿದೆ. ಈ ಸಂದರ್ಭದಲ್ಲಿ ತನ್ವೀರ್‍ಪಾಷಾ ಪರಾರಿಯಾಗಿದ್ದಾನೆ. ಬಾಲಕಿಯನ್ನು ವಶಕ್ಕೆ ಪಡೆದ ಪೊಲೀಸರು ಫೋಕ್ಸೋ ಪ್ರಕರಣ ದಾಖಲಿಸಿಕೊಂಡು ಬಾಲಮಂದಿರಕ್ಕೆ ಕಳುಹಿಸಿದ್ದಾರೆ.

ಉದ್ಘಾಟನೆಗೆ ಕೇಂದ್ರೀಯ ವಿದ್ಯಾಲಯ ಸಜ್ಜು
ಚಾಮರಾಜನಗರ

ಉದ್ಘಾಟನೆಗೆ ಕೇಂದ್ರೀಯ ವಿದ್ಯಾಲಯ ಸಜ್ಜು

July 3, 2018

7.5 ಎಕರೆ ಪ್ರದೇಶದಲ್ಲಿ 15 ಕೋಟಿ ವೆಚ್ಚದಡಿ ಕಟ್ಟಡ ನಿರ್ಮಾಣ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರಿಗೆ ಸಂತಸ ಚಾಮರಾಜನಗರ: ನಗರದ ಕೇಂದ್ರಿಯ ವಿದ್ಯಾಲಯ ಶಾಲೆಯ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರ ಆಸೆ ಈಡೇರುವ ಕಾಲ ಕೂಡಿ ಬಂದಿದ್ದು, ಈ ತಿಂಗಳ ಅಂತ್ಯದೊಳಗೆ ನೂತನ ಕಟ್ಟಡ ಉದ್ಘಾಟನೆಯಾಗುವ ಸಾಧ್ಯತೆಯಿದೆ. ಚಾಮರಾಜನಗರ ತಾಲೂಕಿನ ಮಾದಾಪುರ ಗ್ರಾಮದ ಬಳಿ 15 ಕೋಟಿ ವೆಚ್ಚದಡಿ ಉತ್ತಮ ಪರಿಸರದಲ್ಲಿ ಕೇಂದ್ರೀಯ ವಿದ್ಯಾಲಯ ಕಟ್ಟಡ ನಿರ್ಮಿಸಲಾಗಿದೆ. 7.5 ಎಕರೆ ಪ್ರದೇಶದಲ್ಲಿ ಶಾಲೆಯ ಬೃಹತ್ ಕಟ್ಟಡ ನಿರ್ಮಾವಾಗಿದ್ದು, ಪ್ರಾಂಶುಪಾಲರು…

ನಗರಸಭೆ ಪೌರಾಯುಕ್ತರಾಗಿ ರಾಜಣ್ಣ ಮರು ನೇಮಕ
ಚಾಮರಾಜನಗರ

ನಗರಸಭೆ ಪೌರಾಯುಕ್ತರಾಗಿ ರಾಜಣ್ಣ ಮರು ನೇಮಕ

July 3, 2018

ಚಾಮರಾಜನಗರ:  ಚಾಮರಾಜ ನಗರ ನಗರಸಭೆಯ ಪೌರಾಯುಕ್ತರಾಗಿ ಎಂ. ರಾಜಣ್ಣ ಮತ್ತೇ ಅಧಿಕಾರ ಸ್ವೀಕರಿಸಿದರು. ನಗರದ ನಗರಸಭೆ ಕಚೇರಿಯಲ್ಲಿ ಸೋಮವಾರ ಅವರು ಅಧಿಕಾರ ವಹಿಸಿ ಕೊಂಡರು. ಈ ವೇಳೆ ನಗರಸಭೆ ಅಧ್ಯಕ್ಷೆ ಶೋಭಾ, ಉಪಾಧ್ಯಕ್ಷ ರಾಜಪ್ಪ, ಸದಸ್ಯ ಚೆಂಗುಮಣಿ, ಮುಖಂಡ ಪುಟ್ಟಸ್ವಾಮಿ ಅವರು ರಾಜಣ್ಣ ಅವರಿಗೆ ಹೂಗುಚ್ಛ ನೀಡಿ ಅಭಿ ನಂದಿಸಿದರು. ಭ್ರಷ್ಟಾಚಾರದ ಆರೋಪ ದಡಿ 2017ರ ನವೆಂಬರ್ 23ರಂದು ಬೆಂಗಳೂರು ಪೌರಾಡಳಿತ ನಿರ್ದೇಶನಾ ಲಯ ರಾಜಣ್ಣ ಅವರನ್ನು ಸೇವೆಯಿಂದ ವಜಾಗೊಳಿಸಿತ್ತು. ಆ ಬಳಿಕ, ಸರ್ಕಾರ ಖಾಯಂ ಪೌರಾಯುಕ್ತರನ್ನು…

ಸಾವಯವ ಗೊಬ್ಬರ ಬಳಸಲು ಸಲಹೆ
ಚಾಮರಾಜನಗರ

ಸಾವಯವ ಗೊಬ್ಬರ ಬಳಸಲು ಸಲಹೆ

July 3, 2018

ಚಾಮರಾಜನಗರ:  ‘ರೈತರು ಜಮೀನಿನಲ್ಲಿ ಸಾವಯವ ಗೊಬ್ಬರ ಬಳಕೆ ಮಾಡುವುದರಿಂದ ಭೂಮಿಯ ಫಲವತ್ತತೆ ಹೆಚ್ಚಳವಾಗುವ ಜೊತೆಗೆ ಅಧಿಕ ಇಳುವರಿ ದೊರೆಯಲಿದೆ’ ಎಂದು ವಲಯ ಕೃಷಿ ತಜ್ಞ ಎನ್.ಕೇಶವನ್ ಸಲಹೆ ನೀಡಿದರು. ನಗರದ ಖಾಸಗಿ ಹೋಟೆಲ್‍ನಲ್ಲಿ ದೆಹಲಿಯ ಇಂಟರ್ ನ್ಯಾಷನಲ್ ಫೈನಾಷಿಯಾ ಲಿಮಿಟೆಡ್ ಹಾಗೂ ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಿಂದ ನಡೆದ ಬಾಳೆ ಮತ್ತು ಅರಿಶಿನ ಬೆಳೆಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶುಂಠಿ ಮತ್ತು ಅರಿಶಿಣ ಬೆಳೆಯಲ್ಲಿ ಐಪಿಎಲ್ ಕಂಪೆನಿಯ ಪ್ರತಿಜ್ಞೆ ಸುರಕ್ಷಿತ ಭೂಮಿಗೆ ಅಧಿಕ ಇಳುವರಿ…

ಅಪರಿಚಿತ ವಾಹನ ಡಿಕ್ಕಿ, ಪುನುಗು ಬೆಕ್ಕು ಸಾವು
ಚಾಮರಾಜನಗರ

ಅಪರಿಚಿತ ವಾಹನ ಡಿಕ್ಕಿ, ಪುನುಗು ಬೆಕ್ಕು ಸಾವು

July 3, 2018

ಯಳಂದೂರು: ತಾಲೂಕಿನ ಮೆಳ್ಳಹಳ್ಳಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಅಪರೂಪದ ಪುನುಗು ಬೆಕ್ಕು ಸಾವನ್ನಪ್ಪಿರುವ ಘಟನೆ ನಡೆದಿದೆ. ನಿಶಾಚಾರಿ ಜೀವಿಯಾಗಿರುವ ಪುನುಗು ಬೆಕ್ಕು ರಾತ್ರಿ ವೇಳೆ ತನ್ನ ಆಹಾರ ಅರಸಿ ಹೋಗುತ್ತದೆ. ಅಂಬಳೆ, ಹೊಮ್ಮ, ಕಂದಹಳ್ಳಿ ಸೇರಿದಂತೆ ಸುವರ್ಣಾವತಿ ನದಿಯ ದಡದಲ್ಲಿ ಹೆಚ್ಚಾಗಿ ಇವು ಕಾಣಸಿಗುತ್ತದೆ. ಜೊತೆಗೆ, ಇಲ್ಲಿ ನವಿಲು, ಚುಕ್ಕೆ ಜಿಂಕೆಗಳು, ಮೊಲ, ಕಾಡು ಅಳಿಲು, ಹಾವು ಸೇರಿದಂತೆ ವಿರಳ ಪ್ರಬೇಧದ ಸರಿಸೃಪಗಳು ಹಾಗೂ ಹಲವು ಕಾಡು ಪ್ರಾಣಿಗಳು…

1 114 115 116 117 118 141
Translate »