- 7.5 ಎಕರೆ ಪ್ರದೇಶದಲ್ಲಿ 15 ಕೋಟಿ ವೆಚ್ಚದಡಿ ಕಟ್ಟಡ ನಿರ್ಮಾಣ
- ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರಿಗೆ ಸಂತಸ
ಚಾಮರಾಜನಗರ: ನಗರದ ಕೇಂದ್ರಿಯ ವಿದ್ಯಾಲಯ ಶಾಲೆಯ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರ ಆಸೆ ಈಡೇರುವ ಕಾಲ ಕೂಡಿ ಬಂದಿದ್ದು, ಈ ತಿಂಗಳ ಅಂತ್ಯದೊಳಗೆ ನೂತನ ಕಟ್ಟಡ ಉದ್ಘಾಟನೆಯಾಗುವ ಸಾಧ್ಯತೆಯಿದೆ.
ಚಾಮರಾಜನಗರ ತಾಲೂಕಿನ ಮಾದಾಪುರ ಗ್ರಾಮದ ಬಳಿ 15 ಕೋಟಿ ವೆಚ್ಚದಡಿ ಉತ್ತಮ ಪರಿಸರದಲ್ಲಿ ಕೇಂದ್ರೀಯ ವಿದ್ಯಾಲಯ ಕಟ್ಟಡ ನಿರ್ಮಿಸಲಾಗಿದೆ. 7.5 ಎಕರೆ ಪ್ರದೇಶದಲ್ಲಿ ಶಾಲೆಯ ಬೃಹತ್ ಕಟ್ಟಡ ನಿರ್ಮಾವಾಗಿದ್ದು, ಪ್ರಾಂಶುಪಾಲರು ಹಾಗೂ ಶಿಕ್ಷಕರ ವಸತಿ ಗೃಹ, ಶಾಲೆ ಮುಂಭಾಗ ಪ್ರಾರ್ಥನೆ ಸಲ್ಲಿಸುವ ವೇದಿಕೆ, ದ್ವಿಚಕ್ರ ವಾಹನ ನಿಲುಗಡೆ ಸ್ಥಳ, ಕ್ರೀಡಾ ಮೈದಾನ ಸೇರಿದಂತೆ ಅಗತ್ಯ ಸೌಲಭ್ಯವನ್ನು ಹೊಂದಿದೆ.
ಮಾದಾಪುರ ಗ್ರಾಮದ ಮುಖ್ಯ ರಸ್ತೆಯಿಂದ ಶಾಲೆಯವರೆಗೆ 60ಲಕ್ಷ ರೂ. ವೆಚ್ಚದಡಿ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲಾಗಿದೆ. ಇದೇ ಮಾರ್ಗದಲ್ಲಿ ಜಿಲ್ಲಾ ಕೇಂದ್ರಕ್ಕೆ ಹೋಗಿರುವ ಕಾವೇರಿ ಕುಡಿ ಯುವ ನೀರಿನ ಪೈಪ್‍ಲೈನ್‍ನಿಂದ 10ಲಕ್ಷ ರೂ. ವೆಚ್ಚದಡಿ ಶಾಲೆಗೆ ನೀರಿನ ಸಂಪರ್ಕ ಕಲ್ಪಿಸಲಾಗಿದ್ದು, ಶಾಲೆಯ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿದೆ. ಶಾಲಾವರಣದಲ್ಲಿ ವಿವಿಧ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದ್ದು, ಹಸಿರಿನ ವಾತಾವರಣ ಕಂಗೊಳಿಸುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗಾಗಿ ಶಾಲೆಯು ಸಂಪೂರ್ಣ ವಾಗಿ ಸಜ್ಜುಗೊಂಡು ಕಾಯುತ್ತಿದೆ.
ಜಿಲ್ಲಾ ಕೇಂದ್ರಕ್ಕೆ ಕೇಂದ್ರ ಸರ್ಕಾರದ ಒಡೆತನದ ಕೇಂದ್ರೀಯ ವಿದ್ಯಾಲಯ ತರಬೇಕು. ಜಿಲ್ಲೆಯ ಶೈಕ್ಷಣ ಕ ಪ್ರಗತಿಯನ್ನು ಮತ್ತಷ್ಟು ಹೆಚ್ಚಿಸಬೇಕು ಎಂಬ ಉದ್ದೇಶದಿಂದ ಸಂಸದ ಆರ್.ಧ್ರುವನಾರಾಯಣ ಅವರು 3 ವರ್ಷಗಳ ಹಿಂದೆಯೇ ಶಾಲೆ ಯನ್ನು ತರುವಲ್ಲಿ ಯಶಸ್ವಿಯಾಗಿದ್ದರು. ಅದರಂತೆಯೇ ನಗರದ ಸಂತೇಮರಹಳ್ಳಿ ವೃತ್ತದ ಬಳಿಯ ರೇಷ್ಮೆ ಇಲಾಖೆಗೆ ಸೇರಿದ ರೇಷ್ಮೆ ಮಾರು ಕಟ್ಟೆಯ ಕಟ್ಟಡದಲ್ಲಿ ಶಾಲೆ ನಡೆಸಲಾಗುತ್ತಿದೆ.
ಆದರೆ, ಶಾಲೆಗೆ ಸ್ವಂತ ಕಟ್ಟಡ ದೊರೆತ್ತಿಲ್ಲ ಎಂಬ ಕೊರಗು ಕಾಡುತ್ತಿತ್ತು. ಇದನ್ನು ನಿವಾರಿಸಲು ಸಂಸದ ಧ್ರುವನಾರಾಯಣ ಅವರು ಕೇಂದ್ರ ಸರ್ಕಾರ ದಿಂದ ಅಗತ್ಯ ಅನುದಾನ ಮಂಜೂರು ಮಾಡಿಸಿ ಮಾದಾಪುರದ ಬಳಿ 15 ಕೋಟಿ ವೆಚ್ಚದಡಿ ಬೃಹತ್ ಶಾಲಾ ಕಟ್ಟಡ ನಿರ್ಮಾಣವಾಗಲು ಕಾರಣಕರ್ತ ರಾದರು. ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದಿದ್ದ ಭಾರತ ಸರ್ಕಾರದ ಅಂಗ ಸಂಸ್ಥೆಯಾದ ಹೆಚ್‍ಎಸ್ ಸಿಎಲ್ ಸಂಸ್ಥೆಯು ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿದೆ.
ಪ್ರಸ್ತುತ ಕಟ್ಟಡ ಉದ್ಘಾಟನೆಗೆ ಸಂಪೂರ್ಣ ವಾಗಿ ಸಿದ್ಧಗೊಂಡಿದೆ. ಶಾಲಾ ಆರಂಭಕ್ಕೆ ಅನು ಮತಿ ನೀಡುವಂತೆ ಈಗಾಗಲೇ ಸಂಸದ ಧ್ರುವನಾರಾಯಣ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅನುಮತಿ ದೊರೆತರೆ ಈ ತಿಂಗಳಿನಲ್ಲಿಯೇ ಕಟ್ಟಡ ಉದ್ಘಾಟನೆಗೊಳ್ಳಲಿದ್ದು, ವಿದ್ಯಾರ್ಥಿಗಳು ಪ್ರಸ್ತಕ ವರ್ಷ ದಿಂದಲೇ ನೂತನ ಕಟ್ಟಡದಲ್ಲಿ ಶಿಕ್ಷಣ ಪಡೆಯಲಿದ್ದಾರೆ.
ಚಾಮರಾಜನಗರದ ಕೇಂದ್ರೀಯ ವಿದ್ಯಾಲಯಕ್ಕೆ ಸ್ವಂತ ಕಟ್ಟಡ ಕಟ್ಟಲೇಬೇಕು ಎಂಬ ನನ್ನ ಆಸೆ ಕೊನೆಗೂ ಈಡೇರಿದೆ. ಮಾದಾಪುರ ಬಳಿ 7.5 ಎಕರೆ ಪ್ರದೇಶದಲ್ಲಿ ಉತ್ತಮ ವಾತಾವರಣದಲ್ಲಿ ಶಾಲಾ ಕಟ್ಟಡ ನಿರ್ಮಾಣವಾಗಿದ್ದು, ಶಾಲಾ ಕಟ್ಟಡ ಉದ್ಘಾಟನೆಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಈ ತಿಂಗಳಿನಲ್ಲಿಯೇ ಕಟ್ಟಡ ಉದ್ಘಾಟಿಸಲಾಗುವುದು. -ಆರ್.ಧ್ರುವನಾರಾಯಣ, ಸಂಸದ
ಶಾಲೆಯ ಕಟ್ಟಡ ಕಾಮಗಾರಿಯು ಸಂಪೂರ್ಣವಾಗಿ ಪೂರ್ಣವಾಗಿದೆ. ಆದರೆ, ಉದ್ಘಾಟನೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ನಾವು ಸಹ ಕಟ್ಟಡ ಉದ್ಘಾಟನೆಯ ದಿನಾಂಕವನ್ನು ಎದುರು ನೋಡುತ್ತಿದ್ದೇವೆ -ಡಿ.ಕೆ.ಮಿಶ್ರ, ಪ್ರಾಂಶುಪಾಲರು, ಕೇಂದ್ರೀಯ ವಿದ್ಯಾಲಯ, ಚಾಮರಾಜನಗರ