ನಗರಸಭೆ ಪೌರಾಯುಕ್ತರಾಗಿ ರಾಜಣ್ಣ ಮರು ನೇಮಕ
ಚಾಮರಾಜನಗರ

ನಗರಸಭೆ ಪೌರಾಯುಕ್ತರಾಗಿ ರಾಜಣ್ಣ ಮರು ನೇಮಕ

July 3, 2018

ಚಾಮರಾಜನಗರ:  ಚಾಮರಾಜ ನಗರ ನಗರಸಭೆಯ ಪೌರಾಯುಕ್ತರಾಗಿ ಎಂ. ರಾಜಣ್ಣ ಮತ್ತೇ ಅಧಿಕಾರ ಸ್ವೀಕರಿಸಿದರು.

ನಗರದ ನಗರಸಭೆ ಕಚೇರಿಯಲ್ಲಿ ಸೋಮವಾರ ಅವರು ಅಧಿಕಾರ ವಹಿಸಿ ಕೊಂಡರು. ಈ ವೇಳೆ ನಗರಸಭೆ ಅಧ್ಯಕ್ಷೆ ಶೋಭಾ, ಉಪಾಧ್ಯಕ್ಷ ರಾಜಪ್ಪ, ಸದಸ್ಯ ಚೆಂಗುಮಣಿ, ಮುಖಂಡ ಪುಟ್ಟಸ್ವಾಮಿ ಅವರು ರಾಜಣ್ಣ ಅವರಿಗೆ ಹೂಗುಚ್ಛ ನೀಡಿ ಅಭಿ ನಂದಿಸಿದರು. ಭ್ರಷ್ಟಾಚಾರದ ಆರೋಪ ದಡಿ 2017ರ ನವೆಂಬರ್ 23ರಂದು ಬೆಂಗಳೂರು ಪೌರಾಡಳಿತ ನಿರ್ದೇಶನಾ ಲಯ ರಾಜಣ್ಣ ಅವರನ್ನು ಸೇವೆಯಿಂದ ವಜಾಗೊಳಿಸಿತ್ತು. ಆ ಬಳಿಕ, ಸರ್ಕಾರ ಖಾಯಂ ಪೌರಾಯುಕ್ತರನ್ನು ನೇಮಕ ಮಾಡದೆ ಉಪವಿಭಾಗಾಧಿಕಾರಿ ಬಿ. ಫೌಜಿಯ ತರನ್ನಮ್ ಅವರನ್ನು ಪ್ರಭಾರ ಪೌರಾಯುಕ್ತರು ನೇಮಿಸಿತು. ಆದರೆ, ನಗರದ ಅಭಿವೃದ್ಧಿಗಾಗಿ ಹಲವು ಸಂಘ, ಸಂಸ್ಥೆಗಳು ಹಾಗೂ ನಗರಸಭೆ ಸದಸ್ಯರು ಖಾಯಂ ಪೌರಾಯುಕ್ತರನ್ನು ನೇಮಕ ಮಾಡಬೇಕು ಎಂದು ಹಲವು ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಪ್ರಸ್ತುತ ಸರ್ಕಾರ ರಾಜಣ್ಣ ಅವರನ್ನೇ ಮತ್ತೇ ನಗರಸಭೆ ಪೌರಾಯುಕ್ತರಾಗಿ ನೇಮಕ ಮಾಡಿದೆ.

ಏನಿದು ಪ್ರಕರಣ?: ರಾಜಣ್ಣ ಅವರು 2008-09 ರಿಂದ 2011-12ರವರೆಗೆ ಮೈಸೂರು ಮಹಾನಗರ ಪಾಲಿಕೆಯಲ್ಲಿ ಸಮುದಾಯ ಸಂಘಟನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ 39.98ಕೋಟಿ ರೂ. ಎಸ್‍ಸಿಎಫ್‍ಸಿ ಅನುದಾನದಲ್ಲಿ ಹೊಲಿಗೆ ಯಂತ್ರ ಖರೀದಿ ಮಾಡಿ ಎಲ್ಲಾ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಅವರ ಬಂಧುಗಳಿಗೆ ವಿತರಣೆ ಮಾಡಿದ್ದರು. ಅಷ್ಟೇ ಅಲ್ಲದೆ 96ಲಕ್ಷ ರೂ. ವೆಚ್ಚದಡಿ ಸೋಲಾರ್ ಲೈಟ್ ಗಳನ್ನು ಖರೀದಿ ಮಾಡಿ ಫಲಾನುಭವಿಗೆ ನೀಡಿದ ದಾಖಲೆ ನೀಡಿರಲಿಲ್ಲ. ಜೊತೆಗೆ 2010-11ನೇ ಸಾಲಿನಿಂದ 2012-13ನೇ ಸಾಲಿನ ವರೆಗಿನ ಕ್ರಿಯಾ ಯೋಜನೆಗೆ ಜಿಲ್ಲಾ ಧಿಕಾರಿಗಳಿಂದ ಅನುಮೋದನೆ ಪಡೆಯದೇ 1.57 ಕೋಟಿ ಹಣ ದುರುಪಯೋಗ ಪಡಿಸಿ ಕೊಂಡಿದ್ದರು ಎಂದು ಆರೋಪಿಸಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತರು ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲ ಯದ ನಿರ್ದೆಶಕರಿಗೆ ಪತ್ರ ಬರೆದಿದ್ದರು.

ಈ ಪತ್ರದ ಆಧಾರ ಮೇಲೆ ತನಿಖೆ ನಡೆಸಿದ ಬೆಂಗಳೂರು ಪೌರಾಡಳಿತ ನಿರ್ದೇ ಶನಾಲಯದ ನಿರ್ದೇಶಕ ಡಾ.ಆರ್. ವಿಶಾಲ್‍ಕುಮಾರ್ ಅವರು ಆರೋಪದಡಿ ಎಂ.ರಾಜಣ್ಣ ಅವರನ್ನು ಸೇವೆಯಿಂದ ವಜಾ ಗೊಳಿಸಿದರು. ಪ್ರಸ್ತುತ ಮತ್ತೇ ಅವರನ್ನು ಚಾಮ ರಾಜನಗರದ ನಗರಸಭೆ ಪೌರಾ ಯುಕ್ತರಾಗಿ ನೇಮಕ ಮಾಡಲಾಗಿದೆ.

ಅವ್ಯವಹಾರ ನಡೆಸಿದ್ದೇನೆ ಎಂದು ಬೆಂಗಳೂರು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಡಾ.ಆರ್.ವಿಶಾಲ್‍ಕುಮಾರ್ ಅವರು ನನ್ನನ್ನು ಕೆಲಸದಿಂದ ವಜಾಗೊಳಿಸಿ ಆದೇಶಿಸಿದ್ದರು. ಈ ಆದೇಶದ ವಿರುದ್ಧ ನಾನು ಸರ್ಕಾರದ ಕಾರ್ಯದರ್ಶಿ ಅವರಿಗೆ ಮೇಲ್ಮನವಿ ಸಲ್ಲಿಸಿದೆ. ಈ ಸಂಬಂಧ ತನಿಖೆ ನಡೆಸಿದ ಅವರು ಬೆಂಗಳೂರು ಪೌರಾಡ ಳಿತ ನಿರ್ದೇಶನಾಲಯದ ನಿರ್ದೇಶಕ ಆದೇಶವನ್ನು ರದ್ದುಪಡಿಸಿ ನನ್ನನ್ನು ಮರು ನೇಮಕ ಮಾಡಿದ್ದಾರೆ. ಹಾಗಾಗಿ, ಇಂದು ಪೌರಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದೇನೆ. -ಎಂ. ರಾಜಣ್ಣ, ಪೌರಾಯುಕ್ತರು, ಚಾಮರಾಜನಗರ ನಗರಸಭೆ

Translate »