ಸಾವಯವ ಗೊಬ್ಬರ ಬಳಸಲು ಸಲಹೆ
ಚಾಮರಾಜನಗರ

ಸಾವಯವ ಗೊಬ್ಬರ ಬಳಸಲು ಸಲಹೆ

July 3, 2018

ಚಾಮರಾಜನಗರ:  ‘ರೈತರು ಜಮೀನಿನಲ್ಲಿ ಸಾವಯವ ಗೊಬ್ಬರ ಬಳಕೆ ಮಾಡುವುದರಿಂದ ಭೂಮಿಯ ಫಲವತ್ತತೆ ಹೆಚ್ಚಳವಾಗುವ ಜೊತೆಗೆ ಅಧಿಕ ಇಳುವರಿ ದೊರೆಯಲಿದೆ’ ಎಂದು ವಲಯ ಕೃಷಿ ತಜ್ಞ ಎನ್.ಕೇಶವನ್ ಸಲಹೆ ನೀಡಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ದೆಹಲಿಯ ಇಂಟರ್ ನ್ಯಾಷನಲ್ ಫೈನಾಷಿಯಾ ಲಿಮಿಟೆಡ್ ಹಾಗೂ ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಿಂದ ನಡೆದ ಬಾಳೆ ಮತ್ತು ಅರಿಶಿನ ಬೆಳೆಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶುಂಠಿ ಮತ್ತು ಅರಿಶಿಣ ಬೆಳೆಯಲ್ಲಿ ಐಪಿಎಲ್ ಕಂಪೆನಿಯ ಪ್ರತಿಜ್ಞೆ ಸುರಕ್ಷಿತ ಭೂಮಿಗೆ ಅಧಿಕ ಇಳುವರಿ ನೀಡುತ್ತದೆ. ಇದರಿಂದ ಕಡಿಮೆ ಖರ್ಚು ಅಧಿಕ ಲಾಭಗಳಿಸಬಹುದು. ರಾಸಾಯನಿಕ ಗೊಬ್ಬರಗಳನ್ನು ಭೂಮಿಗೆ ಹಾಕುವುದರಿಂದ ಫಲವತ್ತತೆಯನ್ನು ವರ್ಷದಿಂದ ವರ್ಷಕ್ಕೆ ಕಳೆದುಕೊಳ್ಳುತ್ತದೆ. ಹಾಗಾಗಿ, ರೈತರು ಜೈವಿಕಾ ಗೊಬ್ಬರ ಬಳಸಬೇಕು ಎಂದು ತಿಳಿಸಿದರು. ಕೆ.ವಿ.ಕೆ ಹರದನಹಳ್ಳಿ ಸಸ್ಯ ಸಂರಕ್ಷಣೆ ವಿಭಾಗದ ವಿಷಯ ತಜ್ಞ ಡಾ. ಶಿವರಾಯ್‍ನಾವಿ ಮಾತನಾಡಿ, ಶುಂಠಿ ಮತ್ತು ಬಾಳೆಗಳಿಗೆ ಹರಡುವ ರೋಗಗಳ ನಿವಾರಣೆಯ ಬಗ್ಗೆ ಮಾಹಿತಿ ನೀಡಿದರು.

ಮೈಸೂರು ಮತ್ತು ಚಾಮರಾಜನಗರದ ಕೃಷಿ ಸಲಹೆಗಾರ ಮಾರುತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಭಾಗಿ ಕೃಷಿ ತಜ್ಞ ಟಿ.ಆರ್.ಬಸವರಾಜು, ರಾಜ್ಯ ಕೃಷಿ ತಜ್ಞ ಎಂ.ಆರ್. ಬಸವರೆಡ್ಡಿ, ವಿಭಾಗಿ ಕೃಷಿ ತಜ್ಞ ಟಿ.ಆರ್.ಬಸವರಾಜು, ಮೈಸೂರು ಮತ್ತು ಚಾಮರಾಜನಗರದ ಕೃಷಿ ಸಲಹೆಗಾರ ಪ್ರಸಾದ್ ಎಂ.ಕಣ್ಣನ್, ಕೃಷಿಕ ನಾಸೀರ್ ಅಹ್ಮದ್ ಹಾಜರಿದ್ದರು.

Translate »