ನಾಪತ್ತೆಯಾಗಿದ್ದ ಬಾಲಕಿ ಮೈಸೂರಿನಲ್ಲಿ ಪತ್ತೆ
ಚಾಮರಾಜನಗರ

ನಾಪತ್ತೆಯಾಗಿದ್ದ ಬಾಲಕಿ ಮೈಸೂರಿನಲ್ಲಿ ಪತ್ತೆ

July 4, 2018

ಹನೂರು: ತಾಲೂಕಿನ ಚಿಗತಾಪುರ ಗ್ರಾಮದಿಂದ ಜೂ. 30ರಂದು ಕಾಣೆಯಾಗಿದ್ದ ಬಾಲಕಿ ಮಂಗಳವಾರ ಮೈಸೂರಿನಲ್ಲಿ ಪತ್ತೆಯಾಗಿದ್ದಾಳೆ.

ಸಮೀಪದ ಬಸಪ್ಪನದೊಡ್ಡಿ ಗ್ರಾಮದ ತನ್ವೀರ್‍ಪಾಷಾ ಹಾಗೂ ಚಿಗತಾಪುರ ಗ್ರಾಮ ಬಾಲಕಿಯೊಬ್ಬಳು ಒಟ್ಟಿಗೆ ಕಾಣೆಯಾಗಿದ್ದರು.
ಈ ಸಂಬಂಧ ಬಾಲಕಿ ತಂದೆ ರಾಮಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಅಪಹರಣ ಪ್ರಕರಣದಡಿ ದೂರು ದಾಖಲಿಸಿಕೊಂಡಿದ್ದರು. ಕಾಣೆ ಯಾಗಿದ್ದ ಬಾಲಕಿ ಸಂಬಂಧಿಕರೊಬ್ಬರ ಮನೆಯಲ್ಲಿರುವುದು ಕಂಡು ಬಂದಿದೆ. ಈ ಸಂದರ್ಭದಲ್ಲಿ ತನ್ವೀರ್‍ಪಾಷಾ ಪರಾರಿಯಾಗಿದ್ದಾನೆ. ಬಾಲಕಿಯನ್ನು ವಶಕ್ಕೆ ಪಡೆದ ಪೊಲೀಸರು ಫೋಕ್ಸೋ ಪ್ರಕರಣ ದಾಖಲಿಸಿಕೊಂಡು ಬಾಲಮಂದಿರಕ್ಕೆ ಕಳುಹಿಸಿದ್ದಾರೆ.

Translate »