ಕಾಡಾನೆ ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ
ಕೊಡಗು

ಕಾಡಾನೆ ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ

July 4, 2018

ಮಡಿಕೇರಿ:  ಮೇಕೇರಿ ವ್ಯಾಪ್ತಿಯ ಕಾಫಿ ತೋಟಗಳಿಗೆ ದಾಂಗುಡಿ ಇಟ್ಟು ಫಸಲು ನಷ್ಟ ಮತ್ತು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿರುವ 2 ಕಾಡಾನೆಗಳನ್ನು ಕಾಡಿ ಗಟ್ಟಲು ಅರಣ್ಯ ಇಲಾಖೆ ಮಂಗಳ ವಾರವೂ ಕಾರ್ಯಾಚರಣೆ ನಡೆಸಿತು.

ಕುಶಾಲನಗರದ ನುರಿತ ರ್ಯಾಪಿಡ್ ರೆಸ್ಪಾನ್ಸ್ ತಂಡ ಮತ್ತು ಮಡಿಕೇರಿ ಅರಣ್ಯ ಇಲಾಖಾ ಸಿಬ್ಬಂದಿಗಳು ಮಂಗಳವಾರ ಬೆಳಗ್ಗೆ ಯಿಂದಲೇ ಕಾಫಿ ತೋಟದ ಒಳಗೆ ಕಾಡಾ ನೆಗಳು ಅಲೆದಾಡಿರುವ ಹೆಜ್ಜೆ ಗುರುತುಗಳ ಜಾಡು ಅರಸಿ ಹೊರಟು, 2 ಕಾಡಾನೆ ಗಳು ಮೇಕೇರಿ ಕಡೆಯಿಂದ ತಾಳತ್ತಮನೆ ಬಳಿ ತೆರಳಿರುವ ಮಾಹಿತಿ ಸಂಗ್ರಹಿಸಿದರು.

ಮೇಕೇರಿ-ತಾಳತ್ತಮನೆ ಸಂಪರ್ಕ ರಸ್ತೆಯಲ್ಲಿ ಕಾಡಾನೆಗಳು ರಸ್ತೆ ದಾಟಿ, ಗ್ರಾಮ ಗಳ ಕಡೆ ನುಸುಳದಂತೆ ನಾಕಾಬಂಧಿ ಹಾಕಿದ ಅರಣ್ಯ ಇಲಾಖೆ ಸಿಬ್ಬಂದಿಗಳು, ಪಟಾಕಿ ಸಿಡಿಸಿ, ಗಾಳಿಯಲ್ಲಿ ಗುಂಡು ಹಾರಿಸುತ್ತ 2 ದಷ್ಟಪುಷ್ಟ ಕಾಡಾನೆಗಳನ್ನು ಮೇಕೇರಿ ಕಾಫಿ ತೋಟಗಳ ವ್ಯಾಪ್ತಿಯಲ್ಲಿ ಠಿಕಾಣಿ ಹೂಡಿಸಲು ಯಶಸ್ವಿಯಾದರು. ಬಳಿಕ 4 ತಂಡಗಳಾಗಿ ವಿಭಜನೆಯಾದ ಅರಣ್ಯ ಇಲಾಖೆ ಸಿಬ್ಬಂದಿಗಳು, 2 ಕಾಡಾನೆ ಗಳು ಬೇರ್ಪಡದಂತೆ ಜಾಗೃತಿ ವಹಿಸುತ್ತಾ ಅವು ತೋಟದೊಳಗೆ ಇಳಿದು ಬಂದ ದಾರಿಯತ್ತ ಓಡಿಸುವಲ್ಲಿ ಯಶಸ್ವಿಯಾದರು.

ಮೇಕೇರಿ ಬಳಿಯಿಂದ ಕಾಫಿ ತೋಟ ಗಳ ಒಳಗಡೆ ನಿಧಾನವಾಗಿಯೇ ಹೆಜ್ಜೆ ಹಾಕುತ್ತಾ ಸಾಗಿದ ಕಾಡಾನೆಗಳು, ಮೂರ್ನಾಡು ರಸ್ತೆಯ ರಮ್ಯ ಸರ್ವಿಸ್ ಸ್ಟೇಷನ್‍ನ ಬಳಿ ಪಾಳು ಬಿದ್ದಿರುವ ತೋಟದ ಕಡೆ ಮುಖ ಮಾಡಿದವು. ಆದರೆ, ಈ ಕಡೆಯಿಂದ ಆನೆ ಗಳನ್ನು ಕಾಡಿಗಟ್ಟಲು ಪ್ರಯತ್ನಿಸಿದರೆ ಅನಾಹುತಗಳಾಗುವ ಸಂಭವವನ್ನು ಗ್ರಹಿಸಿದ ಆರ್.ಆರ್.ಟಿ ತಂಡದ ಅರಣ್ಯ ಇಲಾಖೆ ಸಿಬ್ಬಂದಿಗಳು, ಮತ್ತೆ ಕಾಡಾನೆ ಗಳನ್ನು ಶಾಂತಿಗಿರಿ ಎಸ್ಟೇಟ್ ಕಡೆ ಓಡಿಸಲು ಸಫಲರಾದರು.

ಆದರೆ, ಶಾಂತಿಗಿರಿ ಎಸ್ಟೇಟ್ ಮುಖ್ಯ ಗೇಟಿನವರೆಗೂ ಬಂದ 2 ಆನೆಗಳ ಪೈಕಿ ಕಿರಿಯ ಆನೆ ತೆರೆದ ಕಾಫಿ ತೋಟ ಕಂಡೊಡನೆ ರಸ್ತೆ ದಾಟಿ ಕಾಡಿನ ಕಡೆ ತೆರಳಲು ಹಿಂದೇಟು ಹಾಕಿ ಮತ್ತೆ ಕಾಫಿ ತೋಟದ ಒಳಗೆ ಓಡಿ ಮರೆಯಾದರೆ, ಮತ್ತೊಂದು ಕಾಡಾನೆ ಕೂಡಾ ಕಿರಿಯ ಆನೆಯನ್ನು ಹಿಂಬಾಲಿಸಿ ತೋಟದ ಒಳಗೆ ಮರೆಯಾಯಿತು.

ಸೋಮವಾರ ರಾತ್ರಿ ತಾಳತ್ತಮನೆ, ಮಂಗಳೂರು ರಸ್ತೆ, ಮೇಕೇರಿ ಮತ್ತಿತರ ಕಡೆಗಳಲ್ಲಿ ಅಲೆದಾಡಿರುವ ಕಾಡಾನೆಗಳು ಬಾಳೆ, ಹಲಸು, ಬಿದಿರು ಮತ್ತು ಸೀಮೆ ಹುಲ್ಲು ಸೇರಿದಂತೆ ಕೃಷಿ ಫಸಲನ್ನು ಧ್ವಂಸಮಾಡಿವೆ. ಮಂಗಳವಾರ ಕಾಡಾನೆ ಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸುವ ಸಂದರ್ಭ ಮಡಿಕೇರಿ-ಮುರ್ನಾಡು, ತಾಳತ್ತಮನೆ-ಮೇಕೇರಿ ರಸ್ತೆಗಳನ್ನು ಕೆಲಕಾಲ ವಾಹನ ಸಂಚಾರಕ್ಕೆ ನಿರ್ಬಂಧಿಸಲಾಗಿತ್ತು. ಮಡಿಕೇರಿ ವಲಯ ಅರಣ್ಯ ಅಧಿಕಾರಿ ನೆಹರು ನೇತೃತ್ವದಲ್ಲಿ 30ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮಡಿಕೇರಿ-ಮುರ್ನಾಡು ರಸ್ತೆಯ ಕೆಳಭಾಗ ಕಾಫಿತೋಟ ಮತ್ತು ತೋಟದ ಒಳಗೆ ಮನೆ ಇರುವುದು ಹಾಗೂ ರಸ್ತೆಯ ಮತ್ತೊಂದು ಭಾಗದಲ್ಲಿ ಅರಣ್ಯವಿದ್ದರೂ ಅದು ಬೆಟ್ಟಗುಡ್ಡಗಳಿಂದ ಕೂಡಿರುವುದು ಕಾಡಾನೆಗಳನ್ನು ಕಾಡಿಗಟ್ಟಲು ದೊಡ್ಡ ಸವಾಲಾಗಿ ಪರಿಣಮಿಸಿದೆ. ಅದರೊಂದಿಗೆ ಮಡಿಕೇರಿ-ಮೂರ್ನಾಡು ರಸ್ತೆಯಲ್ಲಿ ಹಲವು ತಿರುವುಗಳಿದ್ದು, ವಾಹನಗಳÀ ಹಾರ್ನ್ ಶಬ್ದ ಕೂಡಾ ಕಾಡಾನೆಗಳಲ್ಲಿ ಗಾಬರಿ ಮೂಡಿ ಸಿದೆ. ಹೀಗಾಗಿ ರಸ್ತೆಯವರೆಗೂ ಬರುವ ಕಾಡಾನೆಗಳು ರಸ್ತೆ ಕಂಡೊಡನೆ ಮತ್ತೆ ತೋಟದೊಳಗೆ ನುಸುಳಿಕೊಳ್ಳುತ್ತಿವೆ.

ರಾತ್ರಿ ವೇಳೆಯಲ್ಲಿ ಕಾರ್ಯಾಚರಣೆ ನಡೆ ಸುವುದು ಭಾರಿ ಅಪಾಯ ತಂದೊಡ್ಡುವ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಹಗಲು ವೇಳೆಯಲ್ಲಿ ಕಾರ್ಯಾಚರಣೆ ಕೈಗೊಂಡಿತ್ತು.

ಕಾರ್ಯಾಚರಣೆ ನಡೆಯುತ್ತಿದ್ದ ಮಾರ್ಗ ವಾಗಿ ಆಗಮಿಸಿದ್ದ ಜಿಲ್ಲಾಧಿಕಾರಿ ಪಿ.ಐ ಶ್ರೀ ವಿದ್ಯಾ, ಅರಣ್ಯ ಅಧಿಕಾರಿ ನೆಹರು ಅವರಿಂದ ಕಾಡಾನೆಗಳ ಚಲನ ವಲನಗಳ ಕುರಿತು ಮಾಹಿತಿ ಪಡೆದುಕೊಂಡರು. ಕಾರ್ಯಾಚರಣೆ ನಡೆಸುವ ಸಂದರ್ಭ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗ ದಂತೆ ರಸ್ತೆ ಸಂಚಾರ ಬಂದ್ ಮಾಡಿ ಕಾಡಾನೆಗಳನ್ನು ಕಾಡಿಗಟ್ಟುವಂತೆ ಅವರು ಸಲಹೆ-ಸೂಚನೆ ನೀಡಿದರು. ರಸ್ತೆ ಸಂಚಾರ ಬಂದ್ ಮಾಡಿಸಲು ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಶ್ರೀವಿದ್ಯಾ ತಿಳಿಸಿದರು.

ಆದರೆ, ಮಂಗಳವಾರ ಸಂಜೆವರೆಗೂ ಕಾಡಾನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿಗಳು ಹರಸಾಹಸ ಪಟ್ಟರಾದರೂ ಯಶಸ್ಸು ದೊರೆಯಲಿಲ್ಲ. ಬುಧವಾರ ಬೆಳಗ್ಗಿನಿಂದಲೇ ಕಾರ್ಯಾ ಚರಣೆ ನಡೆಸಲು ಅರಣ್ಯ ಇಲಾಖೆ ನಿರ್ಧರಿ ಸಿದ್ದು, ಕಾಡಾನೆಗಳು ವಾಸ್ತವ್ಯ ಹೂಡಿ ರುವ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಬೀಡು ಬಿಟ್ಟಿದ್ದಾರೆ.

Translate »