ಮಾನವ ಹಕ್ಕುಗಳ ಆಯೋಗದಿಂದ ಮಹಿಳೆಯರಿಗೆ ಬ್ರಹ್ಮಗಿರಿಬೆಟ್ಟ ಪ್ರವೇಶ ನಿಷೇಧ ಪ್ರಕರಣ ವಜಾ
ಕೊಡಗು

ಮಾನವ ಹಕ್ಕುಗಳ ಆಯೋಗದಿಂದ ಮಹಿಳೆಯರಿಗೆ ಬ್ರಹ್ಮಗಿರಿಬೆಟ್ಟ ಪ್ರವೇಶ ನಿಷೇಧ ಪ್ರಕರಣ ವಜಾ

July 4, 2018

ಮಡಿಕೇರಿ: ತಲಕಾವೇರಿಯಲ್ಲಿ ಮೇ. 23 ರಂದು ಕೇರಳದ ನಾರಾಯಣ ಪೊದುವಾಳ್ ಜೋತಿಷಿಗಳ ನೇತೃತ್ವದಲ್ಲಿ ನಡೆದ ಅಷ್ಟಮಂಗಲ ಕಾರ್ಯಕ್ರಮದಲ್ಲಿ ‘ಬ್ರಹ್ಮಗಿರಿ ಬೆಟ್ಟಕ್ಕೆ ಮಹಿಳೆಯರ ಪ್ರವೇಶ ನಿಷೇಧ’ ಕುರಿತ ಚರ್ಚೆಯನ್ನು ಆಧರಿಸಿ, ರಾಜ್ಯ ಮಾನವ ಹಕ್ಕು ಆಯೋಗ ಜಿಲ್ಲಾಧಿಕಾರಿ ಶ್ರೀವಿದ್ಯಾ ಮತ್ತು ತ¯ಕಾವೇರಿ ಭಾಗಮಂಡಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ ಅವರ ವಿರುದ್ಧ ದಾಖಲಿಸಿ ಕೊಂಡಿದ್ದ ಅರ್ಜಿಯನ್ನು ವಜಾ ಮಾಡಿದೆ.

ಜಿಲ್ಲಾಧಿಕಾರಿ ಮತ್ತು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಗೆ, ಜೂನ್.25 ರಂದು ಆಯೋಗದ ಮುಂದೆ ಹಾಜರಾಗಿ ತಮ್ಮ ಸಮಜಾಯಿಸಿಕೆಯನ್ನು ತಿಳಿಸುವಂತೆ ಸೂಚಿಸಿತ್ತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ ಆಯೋಗಕ್ಕೆ ತಮ್ಮ ವಕೀಲರ ಮೂಲಕ ಅಷ್ಟಮಂಗಲ ಪ್ರಶ್ನೆಯಲ್ಲಿ ನಡೆದ ಚರ್ಚೆಯ ವಾಸ್ತವಾಂಶವನ್ನು ವಿವರಿಸಿದ್ದರು.

ಯಾವುದೇ ಲೋಪವಿದ್ದಲ್ಲಿ ಅದನ್ನು ವ್ಯವಸ್ಥಾಪನಾ ಸಮಿತಿಯು ಕ್ಷೇತ್ರದ ತಂತ್ರಿ ಮತ್ತು ಜಿಲ್ಲಾಧಿಕಾರಿಗಳ ಒಪ್ಪಿಗೆ ಮೂಲಕವೇ ಅನುಷ್ಠಾನಗೊಳಿಸಲಾಗುವುದೆಂದು ವಿವರಣೆ ನೀಡಿದ್ದರು. ತಕ್ಷಣವೇ ಯಾವುದೇ ಕಾರ್ಯವನ್ನು ಅನುಷ್ಠಾನಗೊಳಿಸಿಲ್ಲವೆಂದು ಆಯೋಗಕ್ಕೆ ವರದಿ ಸಲ್ಲಿಸಿದ್ದರು. ರಾಜ್ಯ ಮಾನವ ಹಕ್ಕುಗಳ ಆಯೋಗವು ವ್ಯವಸ್ಥಾಪನಾ ಸಮಿತಿಯ ವರದಿಯ ಆಧಾರದ ಮೇಲೆ ಅಧ್ಯಕ್ಷ ಬಿದ್ದಾಟಂಡ ತಮ್ಮಯ ಮತ್ತು ಜಿಲ್ಲಾಧಿಕಾರಿ ಮೇಲಿನ ಪ್ರಕರಣವನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ.

Translate »