ಕಾನೂನಿನ ಬಗ್ಗೆ ಅರಿವಿದ್ದರೆ ಒಳಿತು: ನ್ಯಾಯಾಧೀಶ ಚಂದ್ರಶೇಖರ ಪಿ.ದಿಡ್ಡಿ ಅಭಿಮತ
ಚಾಮರಾಜನಗರ

ಕಾನೂನಿನ ಬಗ್ಗೆ ಅರಿವಿದ್ದರೆ ಒಳಿತು: ನ್ಯಾಯಾಧೀಶ ಚಂದ್ರಶೇಖರ ಪಿ.ದಿಡ್ಡಿ ಅಭಿಮತ

July 4, 2018

ಗುಂಡ್ಲುಪೇಟೆ: ಪ್ರತಿನಿತ್ಯದ ವ್ಯವಹಾರಗಳಿಗೆ ಶ್ರೀಸಾಮಾ ನ್ಯನು ಕಾನೂನುಗಳ ಬಗ್ಗೆ ಕನಿಷ್ಟ ಅರಿವು ಹೊಂದುವ ಮೂಲಕ ಪ್ರತಿಯೊಬ್ಬರಿಗೂ ಎದುರಾಗುವ ತೊಂದರೆಗಳನ್ನು ತಪ್ಪಿಸಿ ಕೊಳ್ಳಬಹುದು ಎಂದು ಪಟ್ಟಣದ ಹಿರಿಯ ಸಿವಿಲ್ ಹಾಗೂ ಜೆಎಂಎಫ್‍ಸಿ ನ್ಯಾಯಾ ಧೀಶ ಚಂದ್ರಶೇಖರ ಪಿ.ದಿಡ್ಡಿ ಹೇಳಿದರು.

ತಾಲೂಕಿನ ಬನ್ನಿತಾಳಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘವು ಆಯೋಜಿಸಿದ್ದ ಮೂಲ ಕಾನೂನುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಗು ಹುಟ್ಟಿದಾಗ ಜನನ ಹಾಗೂ ಕುಟುಂಬದ ಸದಸ್ಯರು ಸಾವಿಗೀಡಾದಾಗ ಮರಣ ನೋಂದಣಿ ಮಾಡುವ ಜತೆಗೆ ಕಡ್ಡಾಯವಾಗಿ ಪ್ರಮಾಣ ಪತ್ರ ಪಡೆದು ಕೊಳ್ಳಬೇಕು. ಇಲ್ಲದಿದ್ದರೆ ಮಕ್ಕಳ ವಿದ್ಯಾ ಬ್ಯಾಸ, ಉದ್ಯೋಗ ಹಾಗೂ ಆಸ್ತಿ ಹಂಚಿಕೆ ಸಂದರ್ಭದಲ್ಲಿ ತೊಂದರೆಯಾಗಲಿದೆ. ಅಲ್ಲದೆ ತಮ್ಮ ಆಸ್ತಿಪಾಸ್ತಿಗಳ ರಕ್ಷಣೆ ಹಾಗೂ ತಮ್ಮ ರಕ್ಷಣೆಗೆ ಏನು ಮಾಡ ಬೇಕು ಎಂಬ ಬಗ್ಗೆ ಕನಿಷ್ಟ ಕಾನೂನುಗಳ ಅರಿವು ಪಡೆದುಕೊಳ್ಳಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷ ಜಿ.ಬಿ. ನಂಜಪ್ಪ ಮಾತನಾಡಿ, ಸಮಾಜದ ಸ್ವಾಸ್ಥ ಕಾಪಾಡುವ ಹಾಗೂ ಶ್ರೀಸಾಮಾನ್ಯರ ಹಕ್ಕು ಗಳ ರಕ್ಷಣೆಗಾಗಿ ಸಂವಿಧಾನವು ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದ್ದು, ಇವುಗಳ ರಕ್ಷಣೆಗೆ ಕಾಲಕಾಲದಲ್ಲಿ ಉಂಟಾಗುವ ದುಷ್ಕೃತ್ಯಗಳ ತಡೆಗೆ ಕಾನೂನುಗಳನ್ನು ಮಾಡಲಾಗಿದೆ. ಎಲ್ಲರೂ ಇವುಗಳನ್ನು ಪಾಲಿಸಿದರೆ ಉತ್ತಮ ಸಮಾಜ ನಿರ್ಮಾಣ ವಾಗಲಿದೆ. ಆದ್ದರಿಂದ ಈ ಬಗ್ಗೆ ವಿದ್ಯಾರ್ಥಿ ಹಾಗೂ ಪೋಷಕರಲ್ಲಿ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಎಪಿಪಿ ಎ.ಎನ್.ರಾಜಣ್ಣ ಮಾತನಾಡಿ, ದೇಶದಲ್ಲಿ 1800ಕ್ಕೂ ಹೆಚ್ಚಿನ ಕಾನೂನು ಗಳಿವೆ. ಆದರೆ ಬಾಲ್ಯವಿವಾಹ, ಮಹಿಳಾ ದೌರ್ಜನ್ಯ, ಜನನ ಮರಣ, ಮೋಟಾರು ವಾಹನ, ಬಾಲ ಕಾರ್ಮಿಕ ಪದ್ಧತಿ ತಡೆ ಮುಂತಾದ ಬಗ್ಗೆ ಜಾಗೃತಿ ಪಡೆದುಕೊಂಡರೆ ಕಾನೂನುಗಳ ಬಗ್ಗೆ ಅರಿವಿಲ್ಲದೆಯೇ ಮಾಡುವ ತಪ್ಪುಗಳನ್ನು ತಡೆಗಟ್ಟಬಹು ದಾಗಿದೆ ಎಂದರು.

ಸ್ವಯಂ ಸೇವಾ ಸಂಸ್ಥೆಗಳ ಮುಖಂಡ ರಾದ ಗಂಗಾಧರಸ್ವಾಮಿ, ವೃಷಭೇಂದ್ರ ಹಾಗೂ ನಾರಾಯಣಸ್ವಾಮಿ ಬಾಲ್ಯ ವಿವಾಹ ತಡೆ, ಬಾಲಕಾರ್ಮಿಕ ಪದ್ಧತಿ ಮುಂತಾದ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ನಾಗಸುಂದರಪ್ಪ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಕಮರಶೆಟ್ಟಿ, ವಕೀಲರಾದ ಪುಟ್ಟಸ್ವಾಮಿ, ವೆಂಕಟೇಶ್, ಸಹಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Translate »