ಚಾಮರಾಜನಗರ

ಆಲೂರಿನಲ್ಲಿ ವಚನ ಮಾಂಗಲ್ಯ ಮದುವೆ
ಚಾಮರಾಜನಗರ

ಆಲೂರಿನಲ್ಲಿ ವಚನ ಮಾಂಗಲ್ಯ ಮದುವೆ

July 11, 2018

ಆಲೂರು: ಯಾವುದೇ ಆಡಂಬರ, ಮದುವೆ ಮಂಟಪ ಹಾಗು ವಾದ್ಯಗೋಷ್ಠಿ ಇಲ್ಲದೇ ಸರಳವಾಗಿ ವಚನ ಮಾಂಗಲ್ಯದ ಮೂಲಕ ಜೋಡಿಯೊಂದು ಸತಿಪತಿಗಳಾದರು. ತಾಲೂಕಿನ ಆಲೂರು ಗ್ರಾಮದ ದಿ. ಎ.ಎಂ. ಚನ್ನಂಜಪ್ಪ ಮತ್ತು ಪುಟ್ಟತಾಯಮ್ಮ ಅವರ ಪುತ್ರಿ ಎ.ಸಿ. ಮಹೇಶ್‍ಕುಮಾರಿ ಹಾಗೂ ನಂಜನ ಗೂಡು ತಾಲೂಕು ಹೆಜ್ಜಿಗೆ ಗ್ರಾಮದ ದಿ.ಸುಬ್ರಹ್ಮಣ್ಯ ಮತ್ತು ಪ್ರೇಮ ದಂಪತಿ ಪುತ್ರ ಎಚ್.ಎಸ್.ಮಹದೇವಕುಮಾರ್ ಅವರು ಆಲೂರಿನ ಬಸವ ಭವನದಲ್ಲಿ ವಚನ ಮಾಂಗಲ್ಯ ಮೂಲಕ ದಾಂಪತ್ಯಕ್ಕೆ ಕಾಲಿಟ್ಟರು. ನವದೆಹಲಿ ತೋಂಟದಾರ್ಯ ಶಾಖಾ ಮಠದ ಶ್ರೀ ಮಹಾಂತದೇವರು ಬಸವಣ್ಣನವರ ವಚನ…

ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಲೈನ್‍ಮನ್ ಮೇಲೆ ಹಲ್ಲೆ
ಚಾಮರಾಜನಗರ

ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಲೈನ್‍ಮನ್ ಮೇಲೆ ಹಲ್ಲೆ

July 11, 2018

ಚಾಮರಾಜನಗರ: ಮನೆಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದರಿಂದ ಅದನ್ನು ಕಡಿತಗೊಳಿಸಿದ ಲೈನ್‍ಮನ್ ಮೇಲೆ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ನಲ್ಲೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಲೈನ್‍ಮನ್ ಆನಂದ ರಾಜು ಮೇಲೆ ಹಲ್ಲೆ ನಡೆಸಿದ್ದು, ಗಾಯಗೊಂಡಿರುವ ಅವರು ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಲ್ಲೂರು ಗ್ರಾಮದ ಪರಶಿವ ಮೂರ್ತಿ ಮತ್ತು ಶಿವಣ್ಣ ಎಂಬು ವರು ತಮ್ಮ ಮನೆಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದರು ಎನ್ನಲಾಗಿದೆ. ಇದನ್ನು ತಿಳಿದ ಗ್ರಾಮದ ಲೈನ್‍ಮನ್ ಆಗಿರುವ ಆನಂದರಾಜು ಅವರ ಮನೆಗಳಿಗೆ…

ಹನೂರು ಚೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ
ಚಾಮರಾಜನಗರ

ಹನೂರು ಚೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ

July 11, 2018

ಹನೂರು: ಚಾಮುಂ ಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಹನೂರು ಉಪ ವಿಭಾಗದ ಕಾರ್ಯವೈಖರಿಯನ್ನು ಸರಿಪಡಿಸುವಂತೆ ಆಗ್ರಹಿಸಿ ಹನೂರು ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ವತಿಯಿಂದ ಪಟ್ಟಣದ ಚೆಸ್ಕಾಂ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಅಧ್ಯಕ್ಷ ವಿನೋದ್, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಸುಮಾರು 8 ವರ್ಷಗಳ ಹಿಂದೆ ರೈತರೊ ಬ್ಬರು ನಿಗಮಕ್ಕೆ ನಿಗದಿತ ಶುಲ್ಕವನ್ನು ಪಾವತಿಸಿ ದ್ದರು…

ವಿವಿಧ ಪ್ರಶಸ್ತಿಗೆ ಪತ್ರಕರ್ತರ ಆಯ್ಕೆ
ಚಾಮರಾಜನಗರ

ವಿವಿಧ ಪ್ರಶಸ್ತಿಗೆ ಪತ್ರಕರ್ತರ ಆಯ್ಕೆ

July 11, 2018

ಚಾಮರಾಜನಗರ: ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಸ್ಥಾಪಿಸಿರುವ ವಿವಿಧ ಪ್ರಶಸ್ತಿಗಳಿಗೆ ಪತ್ರಕರ್ತರನ್ನು ಆಯ್ಕೆ ಮಾಡ ಲಾಗಿದೆ. ಪತ್ರಿಕಾ ರಂಗದಲ್ಲಿ ಸಲ್ಲಿಸಿರುವ ಗಣನೀಯ ಸೇವೆಗಾಗಿ ನೀಡಲಾಗುವ ಪತ್ರಕರ್ತರಾಗಿದ್ದ ದಿ.ಹೆಚ್.ವಿ. ಸತ್ಯನಾರಾಯಣ ಪ್ರಶಸ್ತಿಗೆ ಕೊಳ್ಳೇಗಾಲದ ಹಿರಿಯ ಪತ್ರಕರ್ತ ಎಸ್.ರಾಜು ಭಾಜನರಾಗಿದ್ದಾರೆ. ಛಾಯಾಗ್ರಾಹಕ ಕ್ಷೇತ್ರದಲ್ಲಿ ಸಲ್ಲಿಸಿ ರುವ ಗಣನೀಯ ಸೇವೆಗಾಗಿ ನೀಡಲಾ ಗುವ ಸಿದ್ಧಲಿಂಗ ದೇವರು ಛಾಯಾಗ್ರಹಣ ಪ್ರಶಸ್ತಿಗೆ ಚಾಮರಾಜನಗರದ ಸುವರ್ಣ ನ್ಯೂಸ್ ವಿಡಿಯೋ ಜರ್ನಲಿಸ್ಟ್ ಆರ್.ಸಿ.ಪುಟ್ಟರಾಜು ಆಯ್ಕೆ ಆಗಿದ್ದಾರೆ. ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪಿ. ರೇವಣ್ಣ ಅವರ…

ಕೃಷಿ ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್
ಚಾಮರಾಜನಗರ

ಕೃಷಿ ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್

July 10, 2018

ಜಿಲ್ಲೆಯಲ್ಲಿ ಜನರ ಬಹುದಿನಗಳ ಬೇಡಿಕೆ ಈಡೇರಿಕೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಾಲೇಜು ಆರಂಭ ಚಾಮರಾಜನಗರ: ಜಿಲ್ಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಕೃಷಿ ವಿಜ್ಞಾನ ಕಾಲೇಜು ಪ್ರಾರಂಭಿಸಲು ಸರ್ಕಾರದ ಮಟ್ಟದಲ್ಲಿ ಎಲ್ಲಾ ಪ್ರಯತ್ನಗಳು ಸದ್ದಿಲ್ಲದೇ ಸಾಗಿದೆ. ಈ ಮೂಲಕ ಗಡಿ ಜಿಲ್ಲೆಯ ಜನರ ಬಹುದಿನದ ಬೇಡಿಕೆ ಕೊನೆಗೂ ಈಡೇರುವ ಕಾಲ ಸನಿಹವಾಗಿದೆ. ಜಿಲ್ಲೆಯಲ್ಲಿ ಕೃಷಿ ಕಾಲೇಜು ಪ್ರಾರಂಭಿ ಸುವ ಬಗ್ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಈಗಾಗಲೇ ಗ್ರೀನ್‍ಸಿಗ್ನಲ್ ನೀಡಿದ್ದಾರೆ. ಇದಕ್ಕೆ ಸಹಿಯನ್ನು ಸಹ ಹಾಕಿದ್ದಾರೆ. ಸರ್ಕಾರ ಆರ್ಥಿಕ…

ಜುಲೈ 26, ಗುಂಡ್ಲುಪೇಟೆಯಲ್ಲಿ ಪತ್ರಿಕಾ ದಿನಾಚರಣೆ
ಚಾಮರಾಜನಗರ

ಜುಲೈ 26, ಗುಂಡ್ಲುಪೇಟೆಯಲ್ಲಿ ಪತ್ರಿಕಾ ದಿನಾಚರಣೆ

July 10, 2018

ಗುಂಡ್ಲುಪೇಟೆ: ಇಲ್ಲಿನ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜುಲೈ 26ರಂದು ಪತ್ರಿಕಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನ ಕೈಗೊಳ್ಳಲಾಯಿತು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ದಿನಾಚರಣೆಯ ಅಂಗವಾಗಿ ಸಂಘದ ಅಧ್ಯಕ್ಷ ರಾ. ಬಾಬು ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾ ಯಿತು. ಜು.26ರ ಗುರುವಾರದಂದು ಪಟ್ಟಣದಲ್ಲಿ ಪತ್ರಿಕಾ ದಿನಾಚರಣೆ ಮತ್ತು ರಕ್ತದಾನ ಶಿಬಿರ ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ನಡೆಸು ವುದರೊಂದಿಗೆ ಈ ಬಾರಿಯ ಪತ್ರಿಕಾ ದಿನಾಚರಣೆ ಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡು ವಂತೆ…

ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಲು ಸಲಹೆ
ಚಾಮರಾಜನಗರ

ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಲು ಸಲಹೆ

July 10, 2018

ಬೇಗೂರು:  ‘ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡಬೇಕಿದ್ದು, ಪಕ್ಷದ ಕಾರ್ಯಕರ್ತರು ಇದಕ್ಕೆ ಸಹಕಾರ ನೀಡಬೇಕು’ ಎಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಹೇಳಿದರು. ಸಮೀಪದ ಕುರುಬರಹುಂಡಿ ಗ್ರಾಮ ದಲ್ಲಿ ಸೋಮವಾರ ಬಿಜೆಪಿ ಕಾರ್ಯ ಕರ್ತರು ಏರ್ಪಡಿಸಿದ್ದ ಅಭಿನಂದನಾ ಸಮಾ ರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಇನ್ನೂ ಮೂಲ ಸೌಲಭ್ಯಗಳ ಕೊರತೆಯಿದೆ. ಇದನ್ನು ಕಲ್ಪಿಸಲು ಪ್ರಯತ್ನಿಸುತ್ತೇನೆ. ಕ್ಷೇತ್ರದಲ್ಲಿ ಹಲವು ಗ್ರಾಮಗಳಿಗೆ ಭೇಟಿ ನೀಡಿ ನನ್ನನ್ನು ಗೆಲ್ಲಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಹೋದಾಗ ಆಯಾಯ ಗ್ರಾಮಗಳ ಸಮಸ್ಯೆಯನ್ನು ಪಟ್ಟಿ ಮಾಡಿ…

ದುಗ್ಗಹಟ್ಟಿ, ಯರಗಂಬಳ್ಳಿ ಗ್ರಾಪಂಗಳ ವಸತಿ ಹಂಚಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಆರೋಪ
ಚಾಮರಾಜನಗರ

ದುಗ್ಗಹಟ್ಟಿ, ಯರಗಂಬಳ್ಳಿ ಗ್ರಾಪಂಗಳ ವಸತಿ ಹಂಚಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಆರೋಪ

July 10, 2018

ಯಳಂದೂರು: ‘ತಾಲೂಕಿನ ವ್ಯಾಪ್ತಿಯ ದುಗ್ಗ ಹಟ್ಟಿ, ಯರಗಂಬಳ್ಳಿ ಗ್ರಾಮ ಪಂಚಾಯಿತಿ ಗಳಲ್ಲಿ ಆಶ್ರಯ ಅಂಬೇಡ್ಕರ್ ಮತ್ತು ಇಂದಿರಾ ಆವಾಸ್ ವಸತಿ ಯೋಜನೆಯಡಿ ಹಂಚಿಕೆ ಯಾಗಿರುವ ವಸತಿಗಳಲ್ಲಿ ಅಕ್ರಮ ನಡೆದಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು’ ಎಂದು ವಿವಿಧ ಪ್ರಗತಿಪರ ಸಂಘಟನೆಗಳು ಒತ್ತಾಯಿಸಿತು. ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಗೆ ಸೋಮವಾರ ಭೇಟಿ ನೀಡಿದ ದಸಂಸ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜು ಅವರಿಗೆ ಮನವಿ ಸಲ್ಲಿಸಿದರು….

ಕಾಯಕ, ದಾಸೋಹ ಪರಂಪರೆ ಕಟ್ಟಿದ ಗುರುಮಲ್ಲೇಶ್ವರರು
ಚಾಮರಾಜನಗರ

ಕಾಯಕ, ದಾಸೋಹ ಪರಂಪರೆ ಕಟ್ಟಿದ ಗುರುಮಲ್ಲೇಶ್ವರರು

July 10, 2018

ಚಾಮರಾಜನಗರ:  ‘ಉತ್ತರ ಕರ್ನಾಟಕ ದಿಂದ ದಕ್ಷಿಣದ ಮೈಸೂರು ಪ್ರಾಂತ್ಯಕ್ಕೆ ಬಂದ ಗುರುಮಲ್ಲೇಶ್ವರರು ದೇವಾಲಯ ಕಟ್ಟುವ ಬದಲು ಕಾಯಕ ಮತ್ತು ದಾಸೋಹ ಪರಂಪರೆಯ ಮನಸ್ಸನ್ನು ಕಟ್ಟಿದರು’ ಎಂದು ನವದೆಹಲಿ ಬಸವ ಆಶ್ರಮದ ಮಹಾಂತ ಸ್ವಾಮೀಜಿ ಹೇಳಿದರು. ನಗರದ ಸಿದ್ದಮಲ್ಲೇಶ್ವರ ವಿರಕ್ತಮಠದ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಭಾನುವಾರ ಗುರುಮಲ್ಲೇಶ್ವರ ಸೇವಾ ಸಮಿತಿ ವತಿಯಿಂದ ನಡೆದ ಗುರು ಮಲ್ಲೇಶ್ವರರ 119ನೇ ಸಂಸ್ಮರಣಾ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು. ಶಿವಮೊಗ್ಗ ಜಿಲ್ಲೆಯ ಸವುಳಂಗ ಗ್ರಾಮದಲ್ಲಿ ಜನಿಸಿದ ಗುರುಮಲ್ಲೇಶ್ವರರು 72ವರ್ಷಗಳ ಜೀವನದಲ್ಲಿ ರಾಜ್ಯದ ಹಲವೆಡೆ…

ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ಒತ್ತಾಯಿಸಿ ಪ್ರತ್ಯೇಕ ಪ್ರತಿಭಟನೆ
ಚಾಮರಾಜನಗರ

ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ಒತ್ತಾಯಿಸಿ ಪ್ರತ್ಯೇಕ ಪ್ರತಿಭಟನೆ

July 10, 2018

 ಕುಮಾರಸ್ವಾಮಿ, ಪರಮೇಶ್ವರ ಅವರ ಪ್ರತಿಕೃತಿ ದಹನ ಚಾ.ನಗರ- ಗುಂಡ್ಲುಪೇಟೆಯಲ್ಲಿ ರಸ್ತೆ ತಡೆ ಬೇಡಿಕೆ ಈಡೇರಿಕೆಗೆ ರೈತರ ಆಗ್ರಹ ಗುಂಡ್ಲುಪೇಟೆ: ರೈತರ ಎಲ್ಲಾ ರೀತಿಯ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಸೋಮವಾರ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯ ಕರ್ತರು ಪ್ರತಿಭಟನೆ ನಡೆಸಿದರು. ಪ್ರವಾಸಿ ಮಂದಿರದ ಮುಂಭಾಗ ಸಮಾವೇಶಗೊಂಡ ರೈತರು, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ, ಬಸ್ ನಿಲ್ದಾಣದ ಮುಂಭಾಗ ಮಾನವ ಸರಪಳಿ ರಚಿಸಿ…

1 110 111 112 113 114 141
Translate »