ಹನೂರು ಚೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ
ಚಾಮರಾಜನಗರ

ಹನೂರು ಚೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ

July 11, 2018

ಹನೂರು: ಚಾಮುಂ ಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಹನೂರು ಉಪ ವಿಭಾಗದ ಕಾರ್ಯವೈಖರಿಯನ್ನು ಸರಿಪಡಿಸುವಂತೆ ಆಗ್ರಹಿಸಿ ಹನೂರು ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ವತಿಯಿಂದ ಪಟ್ಟಣದ ಚೆಸ್ಕಾಂ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಅಧ್ಯಕ್ಷ ವಿನೋದ್, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಸುಮಾರು 8 ವರ್ಷಗಳ ಹಿಂದೆ ರೈತರೊ ಬ್ಬರು ನಿಗಮಕ್ಕೆ ನಿಗದಿತ ಶುಲ್ಕವನ್ನು ಪಾವತಿಸಿ ದ್ದರು ಇಲ್ಲಿಯವರೆಗೆ ರೈತನ ಜಮೀನಿಗೆ ವಿದ್ಯುತ್ ಕಂಬ ಹಾಗೂ ವಿದ್ಯುತ್ ಪರಿವ ರ್ತಕಗಳನ್ನು ಅಳವಡಿಸಲು ಕ್ರಮ ವಹಿಸಿಲ್ಲ ಎಂದು ಆರೋಪಿಸಿದರು.

ಹನೂರು ಚೆಸ್ಕಾಂ ಉಪ ವಿಭಾಗದ ಕಛೇರಿ ವ್ಯಾಪ್ತಿಯಲ್ಲಿ ಲಂಚ ಕೊಟ್ಟವರಿಗೆ ಮಾತ್ರ ಕೆಲಸ ಮಾಡಿಕೊಡಲಾಗುತ್ತಿದೆ. ಪ್ರತಿ ಜನ ಸಂಪರ್ಕ ಸಭೆಯಲ್ಲಿ ಇಲ್ಲಿನ ಅಧಿಕಾರಿಗಳ ಭ್ರಷ್ಟಾಚಾರದ ಬಗ್ಗೆ ದೂರಿದ್ದರೂ ಯಾವ ಕ್ರಮ ವನ್ನು ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ ಅವರು, ಹನೂರು ಉಪ ವಿಭಾಗದ 5 ಶಾಖೆ ಗಳಲ್ಲಿ ಸುಮಾರು ಎರಡು ಮೂರು ವರ್ಷ ದಿಂದಲೂ ಅರ್ಹ ತಾಂತ್ರಿಕ ಇಂಜಿನಿಯರ್ ಗಳನ್ನು ನೇಮಿಸಿ ಎಂದು ಆಪಾದಿಸಿದರು. ಓದು ಗರನ್ನು ನೇಮಿಸಿಕೊಂಡು ಕೆಲಸ ಮಾಡಿಸುತ್ತಿ ರುವುದು ಸರಿಯಲ್ಲ.

ಈ ಸಂದರ್ಭದಲ್ಲಿ ಹನೂರು ಚೆಸ್ಕಾಂ ಉಪ ವಿಭಾಗದ ಎಇಇ ಅನಿಲ್ ಪ್ರತಿಭಟನಾ ನಿರತರ ಸಮಸ್ಯೆ ಹಾಗೂ ಅಹವಾಲುಗಳನ್ನು ಸ್ವೀಕರಿಸಲು ಮುಂದಾದರೂ ಕರವೇ ಅಧ್ಯಕ್ಷ ವಿನೋದ್ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ನಂತರ ಕೊಳ್ಳೇ ಗಾಲ ಚೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಅಧಿಕಾರಿ ಪ್ರದೀಪ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ನಿರತರ ಸಮಸ್ಯೆ ಗಳನ್ನು ಆಲಿಸಿ, ಶೀಘ್ರ ಸಮಸ್ಯೆಗಳನ್ನು ಬಗೆ ಹರಿಸುವಂತೆ ಹನೂರು ಉಪ ವಿಭಾಗದ ಚೆಸ್ಕಾಂ ಅಧಿಕಾರಿಗಳಿಗೆ ತಾಕೀತು ಮಾಡಿ, ನೆನೆಗುದಿಗೆ ಬಿದ್ದಿರುವ ಎಲ್ಲ ಸಮಸ್ಯೆಗಳನ್ನು 45 ದಿನಗಳಲ್ಲಿ ಹಂತ ಹಂತವಾಗಿ ಬಗೆಹರಿ ಸುವ ಭರವಸೆಯ ನೀಡಿದರು.
ನಿಗದಿತ ಸಮಯಕ್ಕೆ ಸಮಸ್ಯೆಗಳನ್ನು ಬಗೆ ಹರಿಸದಿದ್ದಲ್ಲಿ 50ನೇ ದಿನ ಚೆಸ್ಕಾಂ ಕಛೇರಿ ಮುಂಭಾಗ ಅಧಿಕಾರಿಗಳ ವಿರುದ್ಧ ಉಗ್ರ ವಾದ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

Translate »