ವಿವಿಧ ಪ್ರಶಸ್ತಿಗೆ ಪತ್ರಕರ್ತರ ಆಯ್ಕೆ
ಚಾಮರಾಜನಗರ

ವಿವಿಧ ಪ್ರಶಸ್ತಿಗೆ ಪತ್ರಕರ್ತರ ಆಯ್ಕೆ

July 11, 2018

ಚಾಮರಾಜನಗರ: ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಸ್ಥಾಪಿಸಿರುವ ವಿವಿಧ ಪ್ರಶಸ್ತಿಗಳಿಗೆ ಪತ್ರಕರ್ತರನ್ನು ಆಯ್ಕೆ ಮಾಡ ಲಾಗಿದೆ.

ಪತ್ರಿಕಾ ರಂಗದಲ್ಲಿ ಸಲ್ಲಿಸಿರುವ ಗಣನೀಯ ಸೇವೆಗಾಗಿ ನೀಡಲಾಗುವ ಪತ್ರಕರ್ತರಾಗಿದ್ದ ದಿ.ಹೆಚ್.ವಿ. ಸತ್ಯನಾರಾಯಣ ಪ್ರಶಸ್ತಿಗೆ ಕೊಳ್ಳೇಗಾಲದ ಹಿರಿಯ ಪತ್ರಕರ್ತ ಎಸ್.ರಾಜು ಭಾಜನರಾಗಿದ್ದಾರೆ. ಛಾಯಾಗ್ರಾಹಕ ಕ್ಷೇತ್ರದಲ್ಲಿ ಸಲ್ಲಿಸಿ ರುವ ಗಣನೀಯ ಸೇವೆಗಾಗಿ ನೀಡಲಾ ಗುವ ಸಿದ್ಧಲಿಂಗ ದೇವರು ಛಾಯಾಗ್ರಹಣ ಪ್ರಶಸ್ತಿಗೆ ಚಾಮರಾಜನಗರದ ಸುವರ್ಣ ನ್ಯೂಸ್ ವಿಡಿಯೋ ಜರ್ನಲಿಸ್ಟ್ ಆರ್.ಸಿ.ಪುಟ್ಟರಾಜು ಆಯ್ಕೆ ಆಗಿದ್ದಾರೆ.

ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪಿ. ರೇವಣ್ಣ ಅವರ ಹೆಸರಿನಲ್ಲಿ ನೀಡುವ ಪರಿಸರ ವರದಿ ಪ್ರಶಸ್ತಿಗೆ ಹನೂರಿನ ಪ್ರಜಾವಾಣಿ ವರದಿಗಾರ ಬಿ.ಬಸವರಾಜು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಇದೇ ತಿಂಗಳ 15 ರಂದು ಪತ್ರಿಕಾ ದಿನಾಚರಣೆ ಆಚರಿಸು ತ್ತಿದೆ. ಅದೇ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎಂ.ನಂದೀಶ್ ತಿಳಿಸಿದ್ದಾರೆ.

Translate »