ಲೈನ್‍ಮೆನ್ ಮೇಲೆ ಹಲ್ಲೆ ಪ್ರಕರಣ: ಓರ್ವನ ಬಂಧನ
ಚಾಮರಾಜನಗರ

ಲೈನ್‍ಮೆನ್ ಮೇಲೆ ಹಲ್ಲೆ ಪ್ರಕರಣ: ಓರ್ವನ ಬಂಧನ

July 14, 2018

ಚಾಮರಾಜನಗರ:  ಮನೆಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದರಿಂದ ಅದನ್ನು ಕಡಿತಗೊಳಿಸಿದ ಲೈನ್‍ಮೆನ್ ಮೇಲೆ ಹಲ್ಲೆ ನಡೆಸಿದ್ದ ಇಬ್ಬರು ಆರೋಪಿತರ ಪೈಕಿ ಓರ್ವನನ್ನು ಬಂಧಿಸುವಲ್ಲಿ ರಾಮಸಮುದ್ರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಾಮರಾಜನಗರ ತಾಲೂಕಿನ ನಲ್ಲೂರು ಗ್ರಾಮದ ಶಿವಣ್ಣ ಬಂಧಿತ. ನಲ್ಲೂರು ಗ್ರಾಮದ ಲೈನ್‍ಮೆನ್ ಆನಂದರಾಜು ಮೇಲೆ ಅದೇ ಗ್ರಾಮದ ಶಿವಣ್ಣ ಮತ್ತು ಪರಶಿವ ಮೂರ್ತಿ ಮಂಗಳವಾರ ಹಲ್ಲೆ ನಡೆ ಸಿದ್ದರು. ಈ ಬಗ್ಗೆ ರಾಮಸಮುದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಆರೋಪಿತರ ಪೈಕಿ ಶಿವಣ್ಣ ಮೈಸೂರಿನಲ್ಲಿ ಇದ್ದಾನೆ ಎಂಬ ಖಚಿತ ಮಾಹಿತಿ ದೊರೆಯಿತು. ಅಲ್ಲಿಗೆ ತೆರಳಿ ಬಂಧಿಸಲಾಯಿತು. ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧ ನಕ್ಕೆ ಒಪ್ಪಿಸಲಾಗಿದೆ ಎಂದು ರಾಮಸ ಮುದ್ರ ಪೊಲೀಸ್ ಠಾಣೆಯ ಸಬ್‍ಇನ್ಸ್ ಪೆಕ್ಟರ್ ಆನಂದೇಗೌಡ ತಿಳಿಸಿದ್ದಾರೆ. ಮತ್ತೋರ್ವ ಆರೋಪಿ ಅದೇ ಗ್ರಾಮದ ಪರಶಿವಮೂರ್ತಿ ನಾಪತ್ತೆ ಆಗಿದ್ದಾನೆ. ಈತನ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

Translate »