ಚಾಮರಾಜನಗರ

ಹಕ್ಕಲಾಪುರದಲ್ಲಿ ಹುಲಿ ದಾಳಿಗೆ ಕರು ಬಲಿ
ಚಾಮರಾಜನಗರ

ಹಕ್ಕಲಾಪುರದಲ್ಲಿ ಹುಲಿ ದಾಳಿಗೆ ಕರು ಬಲಿ

June 29, 2018

ಗುಂಡ್ಲುಪೇಟೆ: ಕಾಡಿನಿಂದ ಆಹಾರ ಅರಸಿ ಬಂದ ಹುಲಿಯ ದಾಳಿಗೆ ಕರುವೊಂದು ಬಲಿ ಯಾಗಿರುವ ಘಟನೆ ತಾಲೂಕಿನ ಹಕ್ಕ ಲಾಪುರ ಗ್ರಾಮದಲ್ಲಿ ನಡೆದಿದೆ. ಬಂಡೀಪುರ ಹುಲಿ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಓಂಕಾರ್ ಅರಣ್ಯ ವಲಯದಿಂದ ಹೊರಬಂದ ಹುಲಿ ಯೊಂದು ಹಕ್ಕಲಾಪುರ ಗ್ರಾಮದ ಸುರೇಶ್ ಎಂಬುವರ ಜಮೀನಿನಿಂದ ಗುರುವಾರ ಬೆಳಿಗ್ಗೆ ಕರುವನ್ನು ಸಮೀಪದ ಹಳ್ಳಕ್ಕೆ ಎಳೆದೊಯ್ದು ತಿಂದು ಹಾಕಿದೆ. ಹಕ್ಕಲಾಪುರದ ಸುರೇಶ್ ಜಮೀನಿನ ಮನೆಯ ಆವರಣದಲ್ಲಿ ಹಸುಗಳನ್ನು ಕಟ್ಟಿ ಹಾಕಲಾಗಿತ್ತು ಬೆಳಿಗ್ಗೆ ಸುಮಾರು 8.30ರ ವೇಳೆಯಲ್ಲಿ ಸುರೇಶ್ ಹಾಗೂ ಅವರ…

ರಂಗಪ್ಪನ ಸನ್ನಿಧಿಯಲ್ಲಿ ಜೂಜಾಟ
ಚಾಮರಾಜನಗರ

ರಂಗಪ್ಪನ ಸನ್ನಿಧಿಯಲ್ಲಿ ಜೂಜಾಟ

June 28, 2018

18 ಜೂಜುಕೋರರ ಸೆರೆ 51,200 ನಗದು, 2 ಕಾರು ವಶ ಯಳಂದೂರು: ಪ್ರಸಿದ್ಧ ಯಾತ್ರಾ ಸ್ಥಳವಾದ ಬಿಳಿಗಿರಿರಂಗನ ಬೆಟ್ಟದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದಲ್ಲಿ ಜೂಜಾಟದಲ್ಲಿ ತೊಡಗಿದ್ದ 18 ಮಂದಿ ಜೂಜುಕೋರರನ್ನು ಬಂಧಿಸಿ 51,200 ರೂ. ಹಾಗೂ 2 ಕಾರುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಳಂದೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಿಳಿಗಿರಿರಂಗನಬೆಟ್ಟದ ಲೋಕೋಪ ಯೋಗಿ ಇಲಾಖೆಯ ಅತಿಥಿ ಗೃಹದಲ್ಲಿ ಪ್ರಭಾವಿಗಳ ಗುಂಪೊಂದು ಮೋಜುಮಸ್ತಿ ಯಲ್ಲಿ ತೊಡಗಿದೆ ಎಂಬ ಮಾಹಿತಿ ಹಿನ್ನೆ ಲೆಯಲ್ಲಿ ಯಳಂದೂರು ಸರ್ಕಲ್ ಇನ್ಸ್ ಪೆಕ್ಟರ್ ರಾಜೇಶ್ ಅವರು ಸಬ್‍ಇನ್ಸ್…

ಜನಪರ ಕಾರ್ಯಗಳಿಂದ ಪುಣ್ಯ ಪುರುಷರಿಗೆ ಗೌರವ ಸಲ್ಲಿಸಿ
ಚಾಮರಾಜನಗರ

ಜನಪರ ಕಾರ್ಯಗಳಿಂದ ಪುಣ್ಯ ಪುರುಷರಿಗೆ ಗೌರವ ಸಲ್ಲಿಸಿ

June 28, 2018

ಕೊಳ್ಳೇಗಾಲ:  ಜನ ಸಾಮಾ ಪುಣ್ಯ ಪುರುಷರಿಗೆ ಗೌರವ ಸಲ್ಲಿಸಲು ಪಣ ತೊಡಬೇಕಿದೆ ಎಂದು ಪ್ರಾಥ ಮಿಕ ಶಿಕ್ಷಣ ಸಚಿವ ಮಹೇಶ್ ಹೇಳಿದರು. ಅವರು ಪಟ್ಟಣದ ವಸಂತಕುಮಾರಿ ಸರ್ಕಾರಿ ಕಾಲೇಜಿನಲ್ಲಿ ಅಯೋಜಿಸಲಾ ಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತ ನಾಡಿ, ಎಲ್ಲಾ ಮಹಾ ಪುರುಷರ ಬಗ್ಗೆ ಮಾತ ನಾಡುತ್ತೇವೆ, ತಿಳಿದುಕೊಳ್ಳುತ್ತೇವೆ. ಆದರೆ ಅವರು ಮಾಡಿದ ಸಾಧನೆಯನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಆಲೋಚನೆಗೆ ಒಳಪಟ್ಟರೆ ನಾಡಿನ ಅಭಿವೃದ್ಧಿಗೆ ಎಲ್ಲರ ಕೊಡುಗೆ ಇರಲಿದೆ ಎಂದರು. ಗ್ರಾಮಾಂತರದ…

ಫಸಲ್ ವಿಮೆಗೆ ನೊಂದಾವಣಿಗೆ ಜಿಲ್ಲಾಧಿಕಾರಿ ಕಾವೇರಿ ಮನವಿ
ಚಾಮರಾಜನಗರ

ಫಸಲ್ ವಿಮೆಗೆ ನೊಂದಾವಣಿಗೆ ಜಿಲ್ಲಾಧಿಕಾರಿ ಕಾವೇರಿ ಮನವಿ

June 28, 2018

ಚಾಮರಾಜನಗರ: ಪ್ರಸ್ತುತ 2018ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಟಾನ ಗೊಳಿಸುತ್ತಿದ್ದು, ಪೂರ್ವ ಮುಂಗಾರು ಹಂಗಾಮಿನಲ್ಲಿ ಮಳೆಯಾಶ್ರಿತ ಜಮೀನುಗಳಲ್ಲಿ ಬೆಳೆಯಲಾಗಿರುವ ಹೆಸರು, ಉದ್ದು ಮತ್ತು ಎಳ್ಳು ಬೆಳೆಗಳಿಗೆ ಜೂನ್ 30ರೊಳಗೆ ವಿಮಾ ಕಂತು ಪಾವತಿಸಿ ನೊಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮನವಿ ಮಾಡಿದ್ದಾರೆ. ರೈತರು ಸಮೀಪದ ಸರ್ವಿಸ್ ಏರಿಯಾ ಬ್ಯಾಂಕ್‍ಗಳಲ್ಲಿ ಎಕರೆಗೆ ಹೆಸರು ಬೆಳೆಗೆ ರೂ. 235, ಉದ್ದು ಬೆಳೆಗೆ ರೂ. 227 ಮತ್ತು ಎಳ್ಳು ಬೆಳೆಗೆ…

ಬೈಕ್-ಲಾರಿ ಡಿಕ್ಕಿ: ಬೈಕ್ ಸವಾರ ಸಾವು
ಚಾಮರಾಜನಗರ

ಬೈಕ್-ಲಾರಿ ಡಿಕ್ಕಿ: ಬೈಕ್ ಸವಾರ ಸಾವು

June 28, 2018

ಚಾಮರಾಜನಗರ:  ತಾಲೂಕಿನ ಹರದನಹಳ್ಳಿ ಗ್ರಾಮದ ಬಳಿ ಬುಧವಾರ ಸಂಜೆ ಲಾರಿ-ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಸಂಭವಿಸಿದೆ. ಮೃತಪಟ್ಟ ವ್ಯಕ್ತಿಯನ್ನು ನಂಜನಗೂಡು ತಾಲೂಕು ಹಲ್ಲರೆ ಗ್ರಾಮದ ಶಿವರಾಜು (27) ಎಂದು ಗುರುತಿಸಲಾಗಿದೆ. ಕಾರ್ಯನಿಮಿತ್ತ ವೆಂಕಟಯ್ಯನ ಛತ್ರಕ್ಕೆ ತೆರಳಿದ್ದ ಶಿವರಾಜು ಚಾ.ನಗರದತ್ತ ಬರುತ್ತಿರುವಾಗ ಇವರ ಬೈಕ್‍ಗೆ ಲಾರಿ ಡಿಕ್ಕಿ ಹೊಡೆಯಿತೆನ್ನಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಶಿವರಾಜು ಅವರ ತಲೆಗೆ ತೀವ್ರ ಪೆಟ್ಟು ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾ.ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜನರ ಆರೋಗ್ಯ ಸಮಸ್ಯೆಗೆ ಸ್ಪಂದಿಸಲು ಶಾಸಕರ ತಾಕೀತು
ಚಾಮರಾಜನಗರ

ಜನರ ಆರೋಗ್ಯ ಸಮಸ್ಯೆಗೆ ಸ್ಪಂದಿಸಲು ಶಾಸಕರ ತಾಕೀತು

June 28, 2018

ಗುಂಡ್ಲುಪೇಟೆ:  ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಾಗೂ ಗ್ರಾಮಾಂತರ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಸಮರ್ಪಕ ಆರೋಗ್ಯ ಸೇವೆ ಕಡ್ಡಾಯ ವಾಗಿ ದೊರಕುವಂತಾಗಬೇಕು ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ತಾಲೂಕು ಆರೋಗ್ಯಾಧಿಕಾರಿಗಳಿಗೆ ತಾಕೀತು ಮಾಡಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋ ಜಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರೋಗ್ಯ ಇಲಾಖೆಯ ಕುಂದುಕೊರತೆಗಳ ಬಗ್ಗೆ ವಿವರ ಪಡೆದು ಅವರು ಮಾತನಾಡಿದರು. ತಾಲೂಕಿನ ಎಲ್ಲಾ ಆಸ್ಪತ್ರೆಗಳಲ್ಲಿಯೂ ಏನು ಸಮಸ್ಯೆ ಗಳಿವೆ ಎಂಬುದು ನನಗೆ ಗೊತ್ತಿದೆ. ಯಾವುದೇ ವೈದ್ಯರೂ ಸಕಾಲಕ್ಕೆ ಬಾರದೆ ರೋಗಿಗಳು…

ಅಮಾಯಕರ ಪ್ರಾಣಕ್ಕೆ ಎರವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಹಳ್ಳ
ಚಾಮರಾಜನಗರ

ಅಮಾಯಕರ ಪ್ರಾಣಕ್ಕೆ ಎರವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಹಳ್ಳ

June 27, 2018

ಚಾಮರಾಜನಗರ : ಚಾಮರಾಜನಗರದಿಂದ ಸಂತೇ ಮರಹಳ್ಳಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ-209 ರಸ್ತೆಯ ಕಾಡಹಳ್ಳಿ ಗೇಟ್ ಬಳಿ ಇರುವ ಬೃಹದಾಕಾರ ವಾದ ಹಳ್ಳ ಅಮಾಯಕ ವಾಹನ ಸವಾರರ ಪ್ರಾಣಕ್ಕೆ ಎರವಾಗುತ್ತಿದೆ. ಚಾಮರಾಜನಗರದಿಂದ ಕೇವಲ ಎರಡು ಕಿಮೀ ಅಂತರದಲ್ಲಿ ಕಾಡಹಳ್ಳಿ ಗೇಟ್ ಇದೆ. ಈ ಗೇಟ್‍ನ ಮುಂಭಾಗ ರಸ್ತೆಯ ಮಧ್ಯ ಭಾಗದಲ್ಲಿ ಭಾರೀ ಹಳ್ಳ ಇದೆ. ಈ ಹಳ್ಳವನ್ನು ಗಮನಿಸದ ಅನೇಕ ವಾಹನ ಸವಾರರು ಹಳ್ಳಕ್ಕೆ ವಾಹನ ಬಿಟ್ಟು ಪ್ರಾಣತೆತ್ತಿದ್ದಾರೆ. ಇದಕ್ಕೆ ಪುಷ್ಠಿ ನೀಡು ವಂತೆ ಭಾನುವಾರ ರಾತ್ರಿ ಚಾಮರಾಜ…

ಜಾಲಹಳ್ಳಿ ಹುಂಡಿಯಲ್ಲಿ ಕಂಡಾಯ ಉತ್ಸವ
ಚಾಮರಾಜನಗರ

ಜಾಲಹಳ್ಳಿ ಹುಂಡಿಯಲ್ಲಿ ಕಂಡಾಯ ಉತ್ಸವ

June 27, 2018

ಚಾಮರಾಜನಗರ:  ಚಾಮರಾಜನಗರದ ಜಾಲಹಳ್ಳಿ ಹುಂಡಿಯಲ್ಲಿ ನೂತನ ಕಂಡಾಯವನ್ನು ಗ್ರಾಮಕ್ಕೆ ತಂದು ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು. ನೂತನ ಕಂಡಾಯವನ್ನು ತರಲಾದ ಹಿನ್ನೆಲೆಯಲ್ಲಿ ಗ್ರಾಮದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮದ ಎಲ್ಲಾ ಬೀದಿಗಳಲ್ಲಿ ತಳಿರು ತೋರಣಗಳನ್ನು ಕಟ್ಟಿ ರಂಗೋಲಿ ಹಾಗೂ ಬಣ್ಣಗಳಿಂದ ಶೃಂಗರಿಸಲಾಗಿತ್ತು. ಗ್ರಾಮದ ಪ್ರತಿಯೊಬ್ಬರ ಮನೆ ಮುಂಭಾಗದಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ನಡೆಸಲಾಯಿತು. ಮಂಟೇಸ್ವಾಮಿಯ ಕಂಡಾಯವಾದ್ದರಿಂದ ಇಂದಿನಿಂದ 48 ದಿನಗಳ ಕಾಲ ಪೂಜೆ ಸಲ್ಲಿಸಲಾಗಿ ಈ ವೇಳೆ ಗ್ರಾಮದಲ್ಲಿ ಹಾಗೂ ಜಿಲ್ಲೆಯಾ ದ್ಯಂತ ಉತ್ತಮ ಮಳೆ ಬಿದ್ದು ಬೆಳೆ…

ಶೌಚಾಲಯ ಬಂದ್: ಪಪಂ ಕಚೇರಿ ಮುಂದೆ ರೈತರ ಪ್ರತಿಭಟನೆ
ಚಾಮರಾಜನಗರ

ಶೌಚಾಲಯ ಬಂದ್: ಪಪಂ ಕಚೇರಿ ಮುಂದೆ ರೈತರ ಪ್ರತಿಭಟನೆ

June 27, 2018

ಯಳಂದೂರು: ಕಳೆದ ಮೂರು ದಿನ ಗಳಿಂದ ಯಳಂದೂರು ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕರ ಶೌಚಾ ಲಯವನ್ನು ಬಂದ್ ಮಾಡಿರುವುದರಿಂದ ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ಅನಾನುಕೂಲವಾಗಿದೆ ಇಂದು ಪ.ಪಂ. ಆಡಳಿತದ ವಿರುದ್ಧ ತಾಲೂಕು ರೈತ ಸಂಘದ ಕಾರ್ಯಕರ್ತರು ಪ.ಪಂ. ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಪಟ್ಟಣದ ಹೃದಯ ಭಾಗದಲ್ಲಿರುವ ಸಾರ್ವಜನಿಕರ ಶೌಚಾಲಯ ಬಂದ್ ಮಾಡಿದ್ದರಿಂದ ದೂರದ ಊರುಗಳಿಂದ ಬರುವ ಸಾರ್ವಜನಿಕರು ಮತ್ತು ಬಿಳಿಗಿರಿ ರಂಗಸ್ವಾಮಿ ಬೆಟ್ಟಕ್ಕೆ ಹೋಗುವ ಭಕ್ತರು, ಪ್ರವಾಸಿಗರಿಗೆ ಅನಾನುಕೂಲವಾಗಿದೆ. ಶೌಚಾಲಯವಿಲ್ಲದೆ ಹೆಂಗಸರು, ಮಕ್ಕಳು, ಪುರುಷರ ಪಾಡು…

ವಿವಿಧೆಡೆ ರಸ್ತೆ ಕಾಮಗಾರಿ ಪರಿಶೀಲಿಸಿದ ಡಿಸಿ ಕಾವೇರಿ
ಚಾಮರಾಜನಗರ

ವಿವಿಧೆಡೆ ರಸ್ತೆ ಕಾಮಗಾರಿ ಪರಿಶೀಲಿಸಿದ ಡಿಸಿ ಕಾವೇರಿ

June 27, 2018

ಚಾಮರಾಜನಗರ:  ಚಾಮ ರಾಜನಗರ ಪಟ್ಟಣದ ವಿವಿಧೆಡೆ ಪ್ರಗತಿಯಲ್ಲಿ ರುವ ರಸ್ತೆ ಹಾಗೂ ಚರಂಡಿ ಕಾಮಗಾರಿ ಯನ್ನು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಇಂದು ಪರಿಶೀಲನೆ ನಡೆಸಿದರು. ಮೊದಲು ನಗರದ ಗಾಳೀಪುರ ಬಡಾವಣೆಯಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿಯನ್ನು ಪರಿವೀಕ್ಷಣೆ ಮಾಡಿದ ಜಿಲ್ಲಾಧಿಕಾರಿಯವರು ನಾಗರಿಕರಿಗೆ ಅನುಕೂಲವಾಗುವಂತೆ ಕಾಮಗಾರಿ ಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಂತರ ದೊಡ್ಡ ಅಂಗಡಿ ಬೀದಿ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ರಸ್ತೆ ಬಳಿ ನಡೆಯುತ್ತಿರುವ ಕಾಮಗಾರಿ ಹಾಗೂ ಅನ್ವರ್‍ಪಾಷ ಕಲ್ಯಾಣ ಮಂಟಪದ ರಸ್ತೆಗೆ ಭೇಟಿ…

1 117 118 119 120 121 141
Translate »