ಹಾಸನ

ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳ: ಅರಕಲಗೂಡು, ರಾಮನಾಥಪುರ ವಿವಿಧೆಡೆ ಜಲಾವೃತ
ಹಾಸನ

ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳ: ಅರಕಲಗೂಡು, ರಾಮನಾಥಪುರ ವಿವಿಧೆಡೆ ಜಲಾವೃತ

August 17, 2018

 ಪ್ರವಾಹ ಪೀಡಿತ ಪ್ರದೇಶಗಳಿಗೆ ಡಿಸಿ, ಶಾಸಕರ ಭೇಟಿ ಸುರಕ್ಷಿತ ಸ್ಥಳಗಳಿಗೆ ಜನರನ್ನು ರವಾನಿಸಲು ಸೂಚನೆ 4 ಗಂಜಿ ಕೇಂದ್ರ ತೆರೆಯುವಂತೆ ಡಿಸಿ ಸಲಹೆ ಹಾಸನ: – ನಿರಂತರ ಮಳೆ ಹಾಗೂ ಕಾವೇರಿ ನದಿಯಲ್ಲಿ ಹೆಚ್ಚಿದ ನೀರಿನ ಪ್ರಮಾಣದಿಂದ ಅರಕಲಗೂಡು, ರಾಮನಾಥಪುರ ವ್ಯಾಪ್ತಿಯ ವಿವಿಧೆಡೆ ಉಂಟಾಗಿರುವ ಪ್ರವಾಹ ಪೀಡಿತ ಪ್ರದೇಶಗಳಿಗೆ ಗುರುವಾರ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಶಾಸಕ ಎ.ಟಿ.ರಾಮಸ್ವಾಮಿ ಅವರು, ಸಕಲೇಶಪುರ ಉಪ ವಿಭಾಗಾಧಿಕಾರಿ ಲಕ್ಷ್ಮಿಕಾಂತ್ ರೆಡ್ಡಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು….

ಪ್ರಪಾತಕ್ಕೆ ಉರುಳಿದ ಟ್ಯಾಂಕರ್: ಕ್ಲೀನರ್ ಸಾವು, ಚಾಲಕನಿಗಾಗಿ ಶೋಧ
ಹಾಸನ

ಪ್ರಪಾತಕ್ಕೆ ಉರುಳಿದ ಟ್ಯಾಂಕರ್: ಕ್ಲೀನರ್ ಸಾವು, ಚಾಲಕನಿಗಾಗಿ ಶೋಧ

August 17, 2018

ಸಕಲೇಶಪುರ: ತಾಲೂಕಿನ ದೊಡ್ಡತಪ್ಪಲೆ ಗ್ರಾಮದ ಬೆಂಗಳೂರು-ಮಂಗಳೂರು (ಎನ್‍ಎಚ್-75) ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಲಾರಿ ರಸ್ತೆ ಬದಿಯ ಪ್ರಪಾತಕ್ಕೆ ಮಗುಚಿ ಕ್ಲೀನರ್ ಸಾವನ್ನಪ್ಪಿದ್ದು, ಚಾಲಕನಿಗಾಗಿ ಶೋಧ ನಡೆದಿದೆ. ರಾಯಚೂರು ಮೂಲದ ಕ್ಲೀನರ್ ವೆಂಕಟೇಶ್ ಮೃತರು. ಕೆ.ಆರ್.ಪೇಟೆ ತಾಲೂಕು ಕಿಕ್ಕೇರಿ ಹೋಬಳಿಯ ಆನೆಗೊಳ ಮೂಲದ ಟ್ಯಾಂಕರ್ ಚಾಲಕ ಸಂತೋಷ್(32) ಗಾಗಿ ಶೋಧ ನಡೆದಿದೆ. ರಾತ್ರಿ 9ರ ಸಮಯದಲ್ಲಿ ದೊಡ್ಡತಪ್ಪಲೆ ಗ್ರಾಮದಲ್ಲಿ ಕಾಫಿ ತೋಟ ವೊಂದರಿಂದ ಭಾರಿ ಪ್ರಮಾಣದ ಮಣ್ಣು ಹಾಗೂ ಮರಗಳು ರಸ್ತೆಗೆ ಜಾರಿ ಬಂದ ಪರಿಣಾಮ, ಮಂಗಳೂರು…

ಜಿಲ್ಲಾದ್ಯಂತ ಸಂಭ್ರಮ-ಸಡಗರದ 72ನೇ ಸ್ವಾತಂತ್ರ್ಯ ದಿನಾಚರಣೆ
ಹಾಸನ

ಜಿಲ್ಲಾದ್ಯಂತ ಸಂಭ್ರಮ-ಸಡಗರದ 72ನೇ ಸ್ವಾತಂತ್ರ್ಯ ದಿನಾಚರಣೆ

August 17, 2018

ಧ್ವಜಾರೋಹಣ ನೆರವೇರಿಸಿದ ಸಚಿವ ಹೆಚ್.ಡಿ.ರೇವಣ್ಣ, ಎಲ್ಲೆಡೆ ರಾರಾಜಿಸಿದ ತ್ರಿವರ್ಣ ಧ್ವಜ ಹಾಸನ:  ನಗರ ಸೇರಿದಂತೆ ಜಿಲ್ಲಾದ್ಯಂತ ಬುಧವಾರ 72ನೇ ವರ್ಷದ ಸ್ವಾತಂತ್ರ್ಯ ದಿನವನ್ನು ಸಂಭ್ರಮ- ಸಡಗರ ದಿಂದ ಆಚರಿಸಲಾಯಿತು. ಎಲ್ಲೆಡೆ ತ್ರಿವರ್ಣ ಧ್ವಜ ರಾರಾಜಿಸಿತ್ತು. ಮಕ್ಕಳು, ಅಧಿಕಾರಿ ಗಳು, ಸಂಘ-ಸಂಸ್ಥೆಗಳ ಪದಾಧಿಕಾರಿ ಗಳು ಸೇರಿದಂತೆ ಜನಪ್ರತಿನಿಧಿಗಳು ರಾಷ್ಟ್ರ ಧ್ವಜಕ್ಕೆ ಗೌರವ ಸಲ್ಲಿಸಿದರು. ಹಾಸನ ವರದಿ: ನಗರದ ಜಿಲ್ಲಾ ಕ್ರೀಡಾಂ ಗಣದಲ್ಲಿ ಜಿಲ್ಲಾಡಳಿತ ವತಿಯಿಂದ 72ನೇ ವರ್ಷದ ಸ್ವಾತಂತ್ರ್ಯ ದಿನವನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವರು…

ನಗರಸಭೆ ಪೌರಕಾರ್ಮಿಕರ ಪ್ರತಿಭಟನೆ
ಹಾಸನ

ನಗರಸಭೆ ಪೌರಕಾರ್ಮಿಕರ ಪ್ರತಿಭಟನೆ

August 15, 2018

ಹಾಸನ: ಕಿರುಕುಳ ನೀಡುತ್ತಿರುವ ನಗರಸಭೆ ಆರೋಗ್ಯ ನಿರೀಕ್ಷಕ ಸ್ಟೀಫನ್ ಪ್ರಕಾಶ್ ರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ನಗರಸಭೆ ಪೌರ ಕಾರ್ಮಿಕರು ಕರ್ತವ್ಯ ಬಹಿಷ್ಕರಿಸಿ ನಗರಸಭೆ ಆವರಣದಲ್ಲಿಂದು ದಿಢೀರ್ ಪ್ರತಿಭಟನೆ ನಡೆಸಿದರು. ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ನೇತೃತ್ವದಲ್ಲಿ ಪ್ರತಿಭಟಿಸಿದ ಪೌರ ಕಾರ್ಮಿಕರು ಸ್ಟೀಫನ್ ಪ್ರಕಾಶ್ ವಿರುದ್ಧ ಘೋಷಣೆ ಕೂಗಿ ಅವರನ್ನು ಆಕ್ರೋಶ ವ್ಯಕ್ತ ಪಡಿಸಿದರಲ್ಲದೆ, ಸ್ಥಳಕ್ಕೆ ಆಯುಕ್ತರು ಬರಬೇಕೆಂದು ಪಟ್ಟು ಹಿಡಿದದರು. ಸ್ಥಳಕ್ಕೆ ಆಗಮಿಸಿದ ನಗರಸಭೆ ಆಯುಕ್ತ ಬಿ.ಎ. ಪರಮೇಶ್…

ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ, ರಸ್ತೆ-ರೈಲು ಸಂಚಾರ ಸ್ಥಗಿತ
ಹಾಸನ

ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ, ರಸ್ತೆ-ರೈಲು ಸಂಚಾರ ಸ್ಥಗಿತ

August 15, 2018

ಹಾಸನ: ಜಿಲ್ಲೆಯ ಹಲವೆಡೆ ಎಡಬಿಡದೆ ಧಾರಾಕಾರ ಸುರಿಯು ತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಗುಡ್ಡ ಕುಸಿದು ರಸ್ತೆ-ರೈಲು ಸಂಚಾರ ಸ್ಥಗಿತವಾಗಿದೆ. ವಿವಿಧೆಡೆ ಮನೆ, ಮರಗಳು, ವಿದ್ಯುತ್ ಕಂಬಗಳು ಧರೆಗುರಿಳಿವೆ. ಶಿರಾಡಿಘಾಟ್‍ನ ಹೆದ್ದಾರಿಯಲ್ಲಿ ಮತ್ತೆ ಗುಡ್ಡ ಕುಸಿದಿದ್ದು, ವಾಹನ ಸಂಚಾರ ರದ್ದುಗೊಳಿಸಲಾಗಿದೆ. ಯಡಕುಮರಿ ಮತ್ತು ಶಿರವಾಗಿಲು 73ನೇ ಮೈಲಿಯ ರೈಲ್ವೇ ಹಳಿ ಮೇಲೂ ಗುಡ್ಡ ಕುಸಿದ ಪರಿಣಾಮ ರೈಲು ಸಂಚಾರ ಸ್ಥಗಿತ ಗೊಳಿಸಲಾಗಿದ್ದು, ಮಣ್ಣು ತೆರವುಗೊಳಿಸುವಲ್ಲಿ ರೈಲ್ವೇ ಇಲಾಖಾ ಸಿಬ್ಬಂದಿ ನಿರತರಾಗಿದ್ದಾರೆ. ಇದರಿಂದ ಮಂಗಳೂರು-ಬೆಂಗಳೂರು ನಡುವೆ ರೈಲು ಸಂಚಾರ…

ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ, ಸಾಧಕರಿಗೆ ಸನ್ಮಾನ
ಹಾಸನ

ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ, ಸಾಧಕರಿಗೆ ಸನ್ಮಾನ

August 15, 2018

ಹಾಸನ: ಜಿಲ್ಲಾಡಳಿತದಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಆ.15ರಂದು ಬೆಳಗ್ಗೆ 9 ಗಂಟೆಗೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಉಪಸ್ಥಿತಿ ಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯೋ ತ್ಸವ ಸಂದೇಶ ನೀಡುವರು. ಶಾಸಕ ಪ್ರೀತಮ್ ಜೆ.ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು, ಜಿಪಂ ಅಧ್ಯಕ್ಷ, ಬಿ.ಎಸ್.ಶ್ವೇತಾ ದೇವರಾಜ್, ಶಾಸಕ ರಾದ, ಎ.ಟಿ.ರಾಮಸ್ವಾಮಿ, ಹೆಚ್.ಕೆ.ಕುಮಾರಸ್ವಾಮಿ, ಕೆ.ಎಂ.ಶಿವಲಿಂಗೇಗೌಡ, ಕೆ.ಎಸ್.ಲಿಂಗೇಶ್, ಸಿ.ಎನ್. ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಮರಿ ತಿಬ್ಬೇಗೌಡ, ಎಂ.ಎ.ಗೋಪಾಲಸ್ವಾಮಿ, ಕೆ.ಟಿ. ಶ್ರೀಕಂಠೇಗೌಡ, ಮತ್ತಿತರರು…

ಲೋಕಸಭಾ ಚುನಾವಣೆಯಲ್ಲಿ ಹಾಸನದಿಂದ ಪ್ರಜ್ವಲ್ ಸ್ಪರ್ಧೆ
ಮೈಸೂರು, ಹಾಸನ

ಲೋಕಸಭಾ ಚುನಾವಣೆಯಲ್ಲಿ ಹಾಸನದಿಂದ ಪ್ರಜ್ವಲ್ ಸ್ಪರ್ಧೆ

August 14, 2018

ಹಾಸನ:  `ನಾನು ಪ್ರಧಾನಿ ಅಭ್ಯರ್ಥಿಯಲ್ಲ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದೂ ಇಲ್ಲ. ಪ್ರಜ್ವಲ್ ರೇವಣ್ಣ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಾಸನದಿಂದ ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ ಎಂದು ಹೇಳುವ ಮೂಲಕ ಜೆಡಿಎಸ್ ರಾಷ್ಟ್ರಾಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಮ್ಮ ಉತ್ತರಾಧಿಕಾರಿಯನ್ನು ಘೋಷಿಸಿದ್ದಾರೆ. ಹಾಸನದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ(ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮೊಮ್ಮಗ, ಸಚಿವ ಹೆಚ್.ಡಿ. ರೇವಣ್ಣರ ಮಗ)ರನ್ನು ಕಣಕ್ಕಿಳಿಸಲಿದ್ದೇವೆ. ಈ ಹಿಂದೆಯೇ…

ಕರುಳಕುಡಿ ನೋಡಲು ಉಸಿರು ಬಿಗಿ ಹಿಡಿದ ತಾಯಿ
ಹಾಸನ

ಕರುಳಕುಡಿ ನೋಡಲು ಉಸಿರು ಬಿಗಿ ಹಿಡಿದ ತಾಯಿ

August 13, 2018

ಹಾಸನ: ಕಿಡ್ನಿ ವೈಫಲ್ಯದಿಂದ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಪತ್ನಿಯನ್ನು ಬಿಟ್ಟು ಮಗುವಿನೊಂದಿಗೆ ಪತಿ ಪರಾರಿಯಾಗಿದ್ದು, ಉಸಿರು ಬಿಡುವ ಮುನ್ನ ಕಂದನ ಮುಖ ನೋಡಲು ತಾಯಿ ಜೀವವನ್ನು ಭದ್ರವಾಗಿ ಹಿಡಿದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ತಾಲೂಕಿನ ಕೋರಳ್ಳಿ ಗ್ರಾಮದಲ್ಲಿರುವ ಗಂಗಾ ಅವರ ಪುತ್ರಿ ರೂಪಶ್ರೀ(24) ಕಿಡ್ನಿ ವೈಫಲ್ಯಕ್ಕೆ ತುತ್ತಾದ ತಾಯಿ. ಈಕೆನ್ನು 2 ವರ್ಷಗಳ ಹಿಂದೆ ಆಲೂರು ತಾಲೂಕು ರಾಜನಹಳ್ಳಿ ನಿವಾಸಿ ಭುವನೇಶ್(ಮಹೇಶ್) ನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಲಿಕ್ಕರ್ಸ್ ಶಾಪೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ ನಗರದ ಸಮೀಪ…

ಬೀದಿ ನಾಯಿಗಳ ದಾಳಿ; ಮಕ್ಕಳು ಸೇರಿ 11 ಜನರಿಗೆ ಗಾಯ
ಹಾಸನ

ಬೀದಿ ನಾಯಿಗಳ ದಾಳಿ; ಮಕ್ಕಳು ಸೇರಿ 11 ಜನರಿಗೆ ಗಾಯ

August 13, 2018

ಅರಕಲಗೂಡು: ಬೀದಿ ನಾಯಿಗಳ ಹಾವಳಿಯಿಂದ 6 ಮಕ್ಕಳು ಸೇರಿದಂತೆ 11 ಮಂದಿ ಗಾಯ ಗೊಂಡಿರುವ ಘಟನೆ ತಾಲೂಕಿನ ಹೆಂಟಗೆರೆ ಕೊಪ್ಪಲಿನಲ್ಲಿ ನಡೆದಿದೆ. ರಚನಾ(4), ಧೃತೀಶ್ (4), ಪುನೀತ್(11), ಕಾವೇರಿ (14) ಅರ್ಜುನ (11), ತಾಯಮ್ಮ(60), ಸೈಯದ್(12) ಸೇರಿದಂತೆ ಇತರರು ಗಾಯಗೊಂಡಿದ್ದು, ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ. ಬೀದಿ ನಾಯಿಗಳ ಹಾವಳಿ ಯಿಂದ ಗ್ರಾಮದ ಜನತೆ ನಲುಗಿದ್ದು, ಬಹುಬೇಗ ಬೀದಿ ನಾಯಿಗಳನ್ನು ಸೆರೆ ಹಿಡಿದು ಸ್ಥಳಾಂ ತರಿಸುವಂತೆ ಒತ್ತಾಯಿಸಿದ್ದಾರೆ.

ಕಲಾಮಂದಿರದಂತಾಯ್ತು ಬೇಲೂರು ಕ್ಷೇತ್ರ ಸಂಪನ್ಮೂಲ ಕೇಂದ್ರ
ಹಾಸನ

ಕಲಾಮಂದಿರದಂತಾಯ್ತು ಬೇಲೂರು ಕ್ಷೇತ್ರ ಸಂಪನ್ಮೂಲ ಕೇಂದ್ರ

August 12, 2018

ಬೇಲೂರು: ಕಲೆ ಅರಳಲು, ಪ್ರತಿಭೆ ಅನಾವರಣಗೊಳಿಸಲು ಯಾವ ಸ್ಥಳವಾದರೇನು? ಯಾವ ವಸ್ತುವಾದರೇನು? ಇಲ್ಲಿ ಅಗತ್ಯವಿರುವುದು ಆಸಕ್ತಿ ಮತ್ತು ಶಿಸ್ತು ಮಾತ್ರ. ಇದಕ್ಕೆ ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಸಂಪನ್ಮೂಲ ಕೇಂದ್ರ ಸಾಕ್ಷಿಯಾಗಿದ್ದು, ಈ ಕೇಂದ್ರವಿಂದು ಚಿತ್ರಕಲಾ ಶಿಕ್ಷಕರ ಕುಂಚದಿಂದ ಕಲಾರಾಧನೆ ಗೊಂಡು ಕಂಗೊಳಿಸುತ್ತಿದೆ. ಇದನ್ನು ನೋಡಿದವರಿಗೆ ಇದೇನು ಶಿಕ್ಷಣ ಇಲಾ ಖೆಗೆ ಸೇರಿದ ಕಚೇರಿ ಕಟ್ಟಡವೊ ಅಥವಾ ಕಲಾ ರಂಗಮಂದಿರವೊ ಎಂಬಂತೆ ಭಾಸವಾಗುತ್ತಿದ್ದು, ಉದ್ಘಾಟನೆ ಮೂಲಕ ಸೇವೆಗೆ ಮುಕ್ತವಾಗಿದೆ. ಅನೇಕರಲ್ಲಿ ಸರ್ಕಾರಿ ಕಚೇರಿ ಕಟ್ಟಡಗಳು ಎಂದಾಗ…

1 99 100 101 102 103 133
Translate »