ಹಾಸನ

ಹಾಸನದ ಉತ್ತರ ಬಡಾವಣೆಗೆ ಶಾಸಕ ಪ್ರೀತಮ್ ಭೇಟಿ ಶತಮಾನದ ಸರ್ಕಾರಿ ಶಾಲೆ ವೀಕ್ಷಣೆ
ಹಾಸನ

ಹಾಸನದ ಉತ್ತರ ಬಡಾವಣೆಗೆ ಶಾಸಕ ಪ್ರೀತಮ್ ಭೇಟಿ ಶತಮಾನದ ಸರ್ಕಾರಿ ಶಾಲೆ ವೀಕ್ಷಣೆ

June 20, 2018

ಹಾಸನ: ನಗರದ ಉತ್ತರ ಬಡಾವಣೆಯಲ್ಲಿರುವ ಶತಮಾನ ಪೂರೈ ಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಸಕ ಪ್ರೀತಂ ಜೆ.ಗೌಡ ಅವರಿಂದು ಭೇಟಿ ನೀಡಿ, ವೀಕ್ಷಿಸಿ ದರಲ್ಲದೆ, ಸಮಸ್ಯೆ ಆಲಿಸಿದರು. ಇಂದು ಬೆಳಿಗ್ಗೆ ಶಾಲೆಗೆ ಭೇಟಿ ನೀಡಿದ ಅವರು, ಮೊದಲು ಇಲ್ಲಿನ ಶಿಕ್ಷಕರಿಂದ ಮಾಹಿತಿ ಪಡೆದುಕೊಂಡರು. ಉತ್ತರ ಬಡಾವಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂದೇ ಹೆಸರಾಗಿರುವ ಈ ಶಾಲೆ ಈಗ ನೂರು ವರ್ಷ ದಾಟಿ ಶಾಲಾ ಕಟ್ಟಡ ಶಿಥಿಲಗೊಂಡಿದೆ. ಮಳೆ ಬಂದರೆ ತರಗತಿ ಗಳ ಮೇಲ್ಛಾವಣಿ ಸೋರುತ್ತದೆ….

ಲಾರಿ-ಮಿನಿ ಲಾರಿ ಮುಖಾಮುಖಿ ಡಿಕ್ಕಿ ತಾಯಿ, ಮಗಳು ಸ್ಥಳದಲ್ಲೇ ಸಾವು
ಹಾಸನ

ಲಾರಿ-ಮಿನಿ ಲಾರಿ ಮುಖಾಮುಖಿ ಡಿಕ್ಕಿ ತಾಯಿ, ಮಗಳು ಸ್ಥಳದಲ್ಲೇ ಸಾವು

June 20, 2018

ಹಾಸನ: ಪೈಪ್ ತುಂಬಿದ್ದ ಲಾರಿಗೆ ಟಿಟಿ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ತಾಯಿ, ಮಗಳು ಮೃತಪಟ್ಟಿದ್ದು, ಐವರು ಘಟನೆ ಚನ್ನರಾಯಪಟ್ಟಣದ ಶೆಟ್ಟಿಹಳ್ಳಿ ಬಳಿ ನಡೆದಿದೆ. ಬೆಂಗಳೂರಿನ ಗೌರಿ ಪಾಳ್ಯ ನಿವಾಸಿ ಷಹಜಾತ್(35), ಪುತ್ರಿ ಉಮರ್(3) ಮೃತರು. ಇವರು ತಮ್ಮ ಕುಟುಂಬದವರೊಂದಿಗೆ ಟಿಟಿ ವಾಹನದಲ್ಲಿ ಹಾಸನದ ದರ್ಗಾವೊಂದಕ್ಕೆ ಹೊರಟಿದ್ದರು ಎನ್ನಲಾಗಿದೆ. ಚನ್ನರಾಯಪಟ್ಟಣದ ಶೆಟ್ಟಿಹಳ್ಳಿ ಬಳಿ ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಟಿಟಿ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಟಿಟಿಯಲ್ಲಿದ್ದ ತಾಯಿ, ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಟಿಟಿಯಲ್ಲಿದ್ದವರು ಗಾಯ ಗೊಂಡಿದ್ದಾರೆ….

30 ಕೋಟಿ ರೂ.ವೆಚ್ಚದಲ್ಲಿ ಬೇಲೂರು-ಹಳೇಬೀಡು ಅಭಿವೃದ್ಧಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಮಾಹಿತಿ
ಹಾಸನ

30 ಕೋಟಿ ರೂ.ವೆಚ್ಚದಲ್ಲಿ ಬೇಲೂರು-ಹಳೇಬೀಡು ಅಭಿವೃದ್ಧಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಮಾಹಿತಿ

June 19, 2018

ಬೇಲೂರು: ವಿಶ್ವದಲ್ಲೇ ಶಿಲ್ಪ ಕಲೆಗೆ ಹೆಸರಾದ ಬೇಲೂರು, ಹಳೇಬೀಡಿಗೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ 30 ಕೋಟಿ ರೂ. ವೆಚ್ಚದಲ್ಲಿ ಹಲವು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದು ರಾಜ್ಯ ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್ ಮಾಹಿತಿ ನೀಡಿದರು. ಪಟ್ಟಣಕ್ಕೆ ಆಗಮಿಸಿ ಶ್ರೀಚನ್ನಕೇಶವಸ್ವಾಮಿ ದರ್ಶನ ಪಡೆದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಎರಡು ಪಟ್ಟಣಗಳಿಗೆ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುತ್ತಾರೆ. ಇಲ್ಲಿಗೆ ಆಗಮಿಸುವವರಿಗೆ ಮೂಲಸೌಕರ್ಯ ಕಲ್ಪಿಸುವ ಜೊತೆಗೆ ಸ್ಥಳೀಯವಾಗಿಯೂ ಅನೇಕ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುವ ಅಗತ್ಯವಿದೆ…

ಹುಣಸಿನಕೆರೆ ಭರ್ತಿ: ಶಾಸಕ ಪ್ರೀತಮ್‍ರಿಂದ ಬಾಗಿನ
ಹಾಸನ

ಹುಣಸಿನಕೆರೆ ಭರ್ತಿ: ಶಾಸಕ ಪ್ರೀತಮ್‍ರಿಂದ ಬಾಗಿನ

June 19, 2018

ಹಾಸನ: ಕೆಲ ದಿನಗಳಿಂದ ಸುರಿದ ಮಳೆಯಿಂದ ನಗರ ಸಮೀಪದ ಐತಿಹಾಸಿಕ ಹುಣಸಿನಕೆರೆ ಸಂಪೂರ್ಣ ಭರ್ತಿಯಾಗಿದ್ದು, ಶಾಸಕ ಪ್ರೀತಮ್ ಜೆ.ಗೌಡ ಇಂದು ಬೆಳಿಗ್ಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಇದೇ ವೇಳೆ ಸುತ್ತ ಮುತ್ತಲ ಅನೇಕರು ಹುಣಸಿನಕೆರೆ ಅಭಿವೃದ್ಧಿ ಕುರಿತು ಶಾಸಕರಲ್ಲಿ ಮನವಿ ಮಾಡಿದರು ಕೆರೆ ಸುತ್ತ ಭೂಮಿ ಒತ್ತುವರಿಯಾಗಿದ್ದು, ಕರೆ ಅಭಿವೃದ್ಧಿ ಗೊಳಿಸಿ, ಬೋಟಿಂಗ್ ವ್ಯವಸ್ಥೆ ಮಾಡು ವಂತೆ ಒತ್ತಾಯಿಸಿದರು. ಮನವಿ ಆಲಿಸಿದ ಶಾಸಕ ಪ್ರೀತಮ್ ಜೆ.ಗೌಡ, ಐತಿಹಾಸಿಕ ಹುಣಸಿನಕೆರೆ ಅಭಿವೃದ್ಧಿ ಕಡೆ ಹೆಚ್ಚಿನ ಗಮನ ಹರಿಸಲಾಗು…

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಮನೆಗಳ್ಳನ ಬಂಧನ
ಹಾಸನ

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಮನೆಗಳ್ಳನ ಬಂಧನ

June 19, 2018

ಹೊಳೆನರಸೀಪುರ: ಎರಡು ವರ್ಷಗಳಿಂದ ಮನೆಗಳ್ಳತನ ಮಾಡುತ್ತಿದ್ದ ಖದೀಮನನ್ನು ಬಂಧಿಸುವಲ್ಲಿ ಹಳ್ಳಿಮೈಸೂರು ಹೊಳೆನರಸೀಪುರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಟ್ಟದಪುರ ಮೂಲದ ಹಳಿಯೂರು ಜಗ ಎಂಬಾತ ಬಂಧಿತ ಖದೀಮ. ಕಳೆದ 2ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆ ಮರೆಸಿಕೊಂದಿದ್ದ. ಹಳ್ಳಿಮೈಸೂರು ಹೋಬಳಿ ಮತ್ತು ಅರಕಲಗೂಡು ಸುತ್ತ ಮುತ್ತ ತನ್ನ ಕೈಚಳಕ ತೋರಿದ್ದು, ಈತನ ವಿರುದ್ಧ 11 ಪ್ರಕರಣಗಳು ದಾಖಲಾಗಿದ್ದವು. ಬಂಧಿತನಿಂದ ಸರಗಳ್ಳತನದಿಂದ 273 ಗ್ರಾಂ. ಚಿನ್ನಾಭರಣ, 2 ಪಲ್ಸರ್ ಬೈಕ್, 5 ತಾಳಿ, ನೀರಿನ ಹಂಡೆಗಳನ್ನು ವಶಪಡಿಸಿಕೊಳ್ಳ ಲಾಗಿದೆ. ಡಿವೈಎಸ್‍ಪಿ…

ವಿವಿಧ ಬೇಡಿಕೆ ಈಡೇರಿಸುವಂತೆ ರೈತರ ಪ್ರತಿಭಟನೆ
ಹಾಸನ

ವಿವಿಧ ಬೇಡಿಕೆ ಈಡೇರಿಸುವಂತೆ ರೈತರ ಪ್ರತಿಭಟನೆ

June 19, 2018

ಹಾಸನ: ರೈತರ ಸಂಪೂರ್ಣ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು.ನಗರದ ಅಂಬೇಡ್ಕರ್ ಪ್ರತಿಮೆ ಬಳಿ ಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾ ರರು, ಡಿಸಿ ಕಚೇರಿ ಆವರಣ ತಲುಪಿ ಬೇಡಿಕೆ ಈಡೇರಿಕೆಗೆ ಘೋಷಣೆ ಕೂಗಿ ಆಗ್ರಹಿಸಿದರು. ರಾಜ್ಯದ ನೂತನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೃಷಿ ಕ್ಷೇತ್ರದ ತೊಂದರೆಗಳನ್ನು ಅರಿತು ಸಂಕಷ್ಟದಲ್ಲಿ ರುವ ಕೃಷಿ ಕ್ಷೇತ್ರಕ್ಕೆ ಕೊಂಚ…

ಬಾಣಾವರ ಜಿಲ್ಲಾ ಪಂಚಾಯತ್ ಉಪಚುನಾವಣೆ ಜೆಡಿಎಸ್‍ನ ಬಿಳಿಚೌಡಯ್ಯ ಗೆಲುವು
ಹಾಸನ

ಬಾಣಾವರ ಜಿಲ್ಲಾ ಪಂಚಾಯತ್ ಉಪಚುನಾವಣೆ ಜೆಡಿಎಸ್‍ನ ಬಿಳಿಚೌಡಯ್ಯ ಗೆಲುವು

June 18, 2018

ಅರಸೀಕೆರೆ: ತಾಲೂಕಿನ ಬಾಣಾವರ ಜಿಪಂ ಚುನಾವಣೆ ಫಲಿತಾಂಶದಲ್ಲಿ ನಿರೀಕ್ಷೆಯಂತೆ ಜೆಡಿಎಸ್ ಅಭ್ಯರ್ಥಿ ಬಿಳಿಚೌಡಯ್ಯ ಗೆಲುವು ಸಾಧಿಸಿದ್ದು, ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ ಅರಸೀಕೆರೆ ಕ್ಷೇತ್ರ ಭದ್ರ ಕೋಟೆಯಾಗಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಕಳೆದ ವಿಧಾನ ಸಭಾ ಚುನಾವಣೆ ಪೂರ್ವ ದಲ್ಲಿ ನಡೆದ ನಾಟಕೀಯ ಬೆಳವಣ ಗೆಯಲ್ಲಿ ಹಾಸನ ಜಿಪಂನ ಬಾಣಾವರ ಕ್ಷೇತ್ರದ ಸದಸ್ಯರಾಗಿದ್ದ ಬಿ.ಎಸ್. ಅಶೋಕ್ ಕಾಂಗ್ರೆಸ್ `ಬಿ’ ಫಾರಂ ಬಹುತೇಕ ಖಚಿತ ಎಂಬ ಆಸೆಯೊಂದಿಗೆ ಶಾಸಕ ಶಿವಲಿಂಗೇಗೌಡರಿಗೆ ಸೆಡ್ಡು ಹೊಡೆದು ಜೆಡಿಎಸ್‍ನ ಪ್ರಾಥಮಿಕ ಸದಸ್ಯತ್ವ ಹಾಗೂ ಜಿಪಂ ಸದಸ್ಯತ್ವ…

ಅನುಘಟ್ಟ ತಾಪಂ ಚುನಾವಣೆ ಬಿಜೆಪಿ ಶಶಿಕುಮಾರ್‍ಗೆ ಜಯ
ಹಾಸನ

ಅನುಘಟ್ಟ ತಾಪಂ ಚುನಾವಣೆ ಬಿಜೆಪಿ ಶಶಿಕುಮಾರ್‍ಗೆ ಜಯ

June 18, 2018

ಬೇಲೂರು: ಅನುಘಟ್ಟ ತಾಪಂಗೆ ನಡೆದ ಉಪಚುನಾವಣೆ ಫಲಿತಾಂಶ ಹೊರ ಬಿದ್ದು, ಬಿಜೆಪಿ ಅಭ್ಯರ್ಥಿ ಶಶಿಕುಮಾರ್ ಜಯಗಳಿಸಿದ್ದಾರೆ. ಬಿಜೆಪಿ ಸದಸ್ಯ ನವಿಲಹಳ್ಳಿ ಕಿಟ್ಟಿ ಅವರ ನಿಧನದಿಂದ ಸ್ಥಾನ ತೆರವಾಗಿತ್ತು. ಕಳೆದ ಗುರುವಾರ ಚುನಾವಣೆ ನಡೆದಿತ್ತು. ಇಂದು ನಡೆದ ಮತ ಎಣಿಕೆಯಲ್ಲಿ ಅಭ್ಯರ್ಥಿ ಶಶಿಕುಮಾರ್ 2,311 ಮತಗಳನ್ನು ಪಡೆದು 147 ಮತಗಳ ಅಂತರದಿಂದ ಜಯಶಾಲಿಯಾದರು. ಇವರ ಪ್ರತಿಸ್ಪರ್ಧಿ ಜೆಡಿಎಸ್ ಎಂ.ಚೇತನಕುಮಾರ್ 2,164 ಮತಗಳನ್ನು ಪಡೆದು ಪರಾಭವಗೊಂಡರು. ಕಾಂಗ್ರೆಸ್ ಅಭ್ಯರ್ಥಿ ಅರುಣ 257 ಮತಗಳಿಗಷ್ಟೇ ತೃಪ್ತಿಪಟ್ಟುಕೊಳ್ಳಬೇಕಾಯಿತು. ವಿಜಯೋತ್ಸವ: ಇಂದು ಜಯಗಳಿಸಿದ ಬಿಜೆಪಿ…

ಜೈನಕಾಶಿಯಲ್ಲಿ ಅಷ್ಟಾವಧಾನ ಸಹಿತ ಶ್ರುತಪೂಜಾ ಮಹೋತ್ಸವ
ಹಾಸನ

ಜೈನಕಾಶಿಯಲ್ಲಿ ಅಷ್ಟಾವಧಾನ ಸಹಿತ ಶ್ರುತಪೂಜಾ ಮಹೋತ್ಸವ

June 18, 2018

ಶ್ರವಣಬೆಳಗೊಳ: ಶಾಸ್ತ್ರಗಳ ಪೂಜೆ ಎಂದರೆ ಗ್ರಂಥಗಳನ್ನು ಸ್ವಅಧ್ಯಯ ಮಾಡುವುದು ಹಾಗೂ ಅದರಲ್ಲಿನ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳು ವುದು ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಜೈನಕಾಶಿ ಶ್ರವಣಬೆಳಗೊಳದ ಚಾವುಂಡರಾಯ ಮಂಟಪದಲ್ಲಿ ಶ್ರುತ ಪಂಚಮಿ ಮಹೋತ್ಸವ-18ರ ಪ್ರಯುಕ್ತ ನಡೆದ ಅಷ್ಟಾವಧಾನ ಸಹಿತ ಶ್ರುತಪೂಜಾ ಮಹೋತ್ಸವದಲ್ಲಿ ಮಾತನಾಡಿದ ಅವರು, ತೀರ್ಥಂಕರರನ್ನು ಪೂಜಿಸುವುದಷ್ಟೇ ಅಲ್ಲದೆ, ಅವರ ಬೋಧನೆಗಳನ್ನು ಅಧ್ಯಯನ ಮಾಡಬೇಕು. ಇದುವರೆಗೂ ಪ್ರಾಕೃತ ಭಾಷೆಯಲ್ಲಿದ್ದ ಗ್ರಂಥಗಳನ್ನು ಕನ್ನಡಕ್ಕೆ ಅನುವಾದ ಮಾಡಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಎಲ್ಲಾ ಆಗಮ ಗ್ರಂಥಗಳಿಗೆ…

ಜಿಲ್ಲೆಯೆಲ್ಲೆಡೆ ರಂಜಾನ್ ಸಡಗರ, ಸಾಮೂಹಿಕ ಪ್ರಾರ್ಥನೆ
ಹಾಸನ

ಜಿಲ್ಲೆಯೆಲ್ಲೆಡೆ ರಂಜಾನ್ ಸಡಗರ, ಸಾಮೂಹಿಕ ಪ್ರಾರ್ಥನೆ

June 17, 2018

ಹಾಸನ: ನಗರ ಸೇರಿದಂತೆ ಜಿಲ್ಲೆಯಲ್ಲೆಡೆ ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ರಂಜಾನ್ ಆಚರಿಸಿದರು. ಹಾಸನ ನಗರ: ರಂಜಾನ್ ಅಂಗವಾಗಿ ನಗರದ ಹುಣಸಿನಕೆರೆ ಬಳಿ ಇರುವ ಹೊಸ ಈದ್ಗಾ ಮೈದಾನದಲ್ಲಿ ಸಾವಿರಾರು ಜನ ಮುಸ್ಲಿಂ ಬಾಂಧವರು ಒಟ್ಟಾಗಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಕಳೆದ 1ತಿಂಗಳಿನಿಂದ ಶ್ರದ್ಧಾ-ಭಕ್ತಿಯಿಂದ ಉಪವಾಸದಲ್ಲಿದ್ದು ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ದಿನದಂದು ಹೊಸ ಬಟ್ಟೆ ಧರಿಸಿ ಸಡಗರದಿಂದ ಪಾಲ್ಗೊಂಡು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಪ್ರಾರ್ಥನೆ ಹಿನ್ನೆಲೆ ಹೊಸ ಈದ್ಗಾ…

1 118 119 120 121 122 133
Translate »