ಹಾಸನದ ಉತ್ತರ ಬಡಾವಣೆಗೆ ಶಾಸಕ ಪ್ರೀತಮ್ ಭೇಟಿ ಶತಮಾನದ ಸರ್ಕಾರಿ ಶಾಲೆ ವೀಕ್ಷಣೆ
ಹಾಸನ

ಹಾಸನದ ಉತ್ತರ ಬಡಾವಣೆಗೆ ಶಾಸಕ ಪ್ರೀತಮ್ ಭೇಟಿ ಶತಮಾನದ ಸರ್ಕಾರಿ ಶಾಲೆ ವೀಕ್ಷಣೆ

June 20, 2018

ಹಾಸನ: ನಗರದ ಉತ್ತರ ಬಡಾವಣೆಯಲ್ಲಿರುವ ಶತಮಾನ ಪೂರೈ ಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಾಸಕ ಪ್ರೀತಂ ಜೆ.ಗೌಡ ಅವರಿಂದು ಭೇಟಿ ನೀಡಿ, ವೀಕ್ಷಿಸಿ ದರಲ್ಲದೆ, ಸಮಸ್ಯೆ ಆಲಿಸಿದರು.

ಇಂದು ಬೆಳಿಗ್ಗೆ ಶಾಲೆಗೆ ಭೇಟಿ ನೀಡಿದ ಅವರು, ಮೊದಲು ಇಲ್ಲಿನ ಶಿಕ್ಷಕರಿಂದ ಮಾಹಿತಿ ಪಡೆದುಕೊಂಡರು. ಉತ್ತರ ಬಡಾವಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂದೇ ಹೆಸರಾಗಿರುವ ಈ ಶಾಲೆ ಈಗ ನೂರು ವರ್ಷ ದಾಟಿ ಶಾಲಾ ಕಟ್ಟಡ ಶಿಥಿಲಗೊಂಡಿದೆ. ಮಳೆ ಬಂದರೆ ತರಗತಿ ಗಳ ಮೇಲ್ಛಾವಣಿ ಸೋರುತ್ತದೆ. ಕಿಟಕೆ-ಬಾಗಿಲುಗಳು ಮುರಿದಿದೆ. ಸಮರ್ಪಕವಾಗಿ ಕುಡಿಯಲು ನೀರಿನ ಪೂರೈಕೆ ಇಲ್ಲ. ಇಂತಹ ಸ್ಥಿತಿಯಿಂದ ಮಕ್ಕಳ ಸಂಖ್ಯೆ ಪ್ರತಿ ವರ್ಷ ಕಡಿಮೆ ಆಗುತ್ತಿದೆ ಎಂದು ಶಾಸಕರೆದುರು ಶಾಲಾ ಸಿಬ್ಬಂದಿ ನಾನಾ ಸಮಸ್ಯೆಗಳು ಬಿಚ್ಚಿಟ್ಟರು.

ಸಮಸ್ಯೆಗಳನ್ನು ಆಲಿಸಿದ ಶಾಸಕರು, ಬಳಿಕ ಮಾತನಾಡಿ, ನಗರದ ಹೃದಯಭಾಗ ದಲ್ಲಿರುವ ಸರ್ಕಾರಿ ಶಾಲೆಯು ಮೂಲ ಸೌಕರ್ಯದಿಂದ ವಂಚಿತವಾಗಿದೆ. ಶಾಲೆಯ ಮೇಲ್ಛಾವಣಿ ಹೆಂಚುಗಳು ಒಡೆದಿದ್ದು, ಮಳೆ ಬಂದರೆ ಸೋರುವು ದರಿಂದ ಮಕ್ಕಳು ವಿದ್ಯಾಭ್ಯಾಸ ಮಾಡಲು ತೊಂದರೆಯಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮುಖ್ಯಶಿಕ್ಷಕರು ಮನವರಿಕೆ ಮಾಡಿಕೊಟ್ಟಿದ್ದಾರೆ. ಶೀಘ್ರವೇ ಸಮಸ್ಯೆ ಬಗೆಹರಿಸಿ ಮೂಲ ಸೌಕರ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ಶೋಭನ್ ಬಾಬು, ಗಾಣಿಗರ ಸಮಾಜದ ಅರುಣ್, ಮಣ ಇತರರಿದ್ದರು.

Translate »