ಹಾಸನ: ಜಿಲ್ಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 2ರಂತೆ 14 ಕಡೆಗಳಲ್ಲಿ ಮಹಿಳಾ ಸಿಬ್ಬಂದಿಗಳೇ ಕಾರ್ಯನಿರ್ವಹಿಸುವ ‘ಸಖಿ’ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅರಸೀಕೆರೆ ನಗರದ ಹೊಯ್ಸಳ ನಗರದಲ್ಲಿರುವ ಗೌರಮ್ಮ ಪ್ರೌಢಶಾಲೆ ಮತಗಟ್ಟೆ ಸಂಖ್ಯೆ 131ನ್ನು ಸಖಿ ಮತಗಟ್ಟೆ ಎಂದು ಹೆಸರಿಸಲಾಗಿದೆ. ಈ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯಗಳನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸಲಿದ್ದಾರೆ. ಈ ಮತಗಟ್ಟೆಯಲ್ಲಿ ಮತ ಚಲಾಯಿಸುವವರು, ಹಾಸನ ಜಿಲ್ಲಾ ಚುನಾವಣಾ ರಾಯಭಾರಿಯಾದ ಚಂದನ್ ಶೆಟ್ಟಿ ರವರ ಭಾವಚಿತ್ರದ ಜೊತೆ ಸೆಲ್ಫಿ ತೆಗೆದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಅದಲ್ಲದೆ ‘ವಿಶೇಷ ಚೇತನರು’ ಕಾರ್ಯ…
ಲೋಕಸಭಾ ಚುನಾವಣೆ: ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ
April 17, 2019ಹಾಸನ: ಲೋಕಸಭಾ ಚುನಾ ವಣೆ ಹಿನ್ನೆಲೆ ಜಿಲ್ಲೆಯಾದ್ಯಂತ ಏ. 16ರ ಸಂಜೆ 6ರಿಂದಲೇ 144 ಸೆಕ್ಷನ್ ಜಾರಿಯಾ ಗಿದ್ದು, ಜಿಲ್ಲಾದ್ಯಂತ ಯಾವುದೇ ಪಕ್ಷ ಬಹಿ ರಂಗ ಪ್ರಚಾರ ನಡೆಸುವಂತಿಲ್ಲ. ಸಂಪೂರ್ಣ ವಾಗಿ ಒಣ ದಿನ ಘೋಷಣೆಯಾಗಿದೆ ಎಂದು ಜಿಲ್ಲಾಧಿಕಾರಿಯೂ ಆದ ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಚೇತನ್ ಸಿಂಗ್ ರಾಥೋಡ್ ಅವರ ಉಪಸ್ಥಿತಿಯಲ್ಲಿ ಸೆಕ್ಟರ್ ಅಧಿಕಾರಿಗಳೊಂ ದಿಗೆ ವೀಡಿಯೋ ಸಂವಾದ ನಡೆಸಿ ಮಾತ…
ಟೀಮ್ ಮೋದಿಯಿಂದ ಬೃಹತ್ ರ್ಯಾಲಿ, ಬಿಜೆಪಿ ಪರ ಮತ ಯಾಚನೆ
April 17, 2019ಅರಸೀಕೆರೆ: ಟೀಮ್ ಮೋದಿಯಿಂದ ನಗರದಲ್ಲಿ ಮಂಗಳ ವಾರ ನಡೆದ ಬೃಹತ್ ರ್ಯಾಲಿಯಲ್ಲಿ ಸಾವಿರಾರು ಯುವಕರು ಭಾಗವಹಿಸುವುದರ ಮೂಲಕ ಮೋದಿ, ಬಿಜೆಪಿ ಪರವಾಗಿ ಮತ ಕೇಳಿದರು. ನಗರದ ಎಪಿಎಂಸಿ ಮಹಾ ದ್ವಾರದಿಂದ ಪ್ರಾರಂಭಗೊಂಡ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಟೀಮ್ ಮೋದಿ ತಾಲೂಕು ಘಟಕದ ಸಂಚಾಲಕ ಕಣಕಟ್ಟೆ ಮಂಜು ನಾಥ್ ಮಾತನಾಡಿ, ದೇಶದಲ್ಲಿ ಉಂಟಾ ಗಿರುವ ಪ್ರಧಾನಿ ನರೇಂದ್ರ ಮೋದಿ ಅಲೆ ಯಿಂದ ಕಾಂಗ್ರೆಸ್ ಮುಖಂಡರು ಥರಗು ಟ್ಟುತ್ತಿದ್ದರೆ. ಜೆಡಿಎಸ್ ಅತಂತ್ರ ಸ್ಥಿತಿಯನ್ನು ಅನುಭವಿಸುತ್ತಿದೆ ಎಂದರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್…
ಶಿಲ್ಪಕಲೆಗಳ ತವರೂರಿನಲ್ಲಿ ಚೆನ್ನಕೇಶವಸ್ವಾಮಿ ರಥೋತ್ಸವ
April 17, 2019ಬೇಲೂರು: ವಿಶ್ವ ವಿಖ್ಯಾತ ಬೇಲೂರು ಶ್ರೀ ಚೆನ್ನಕೇಶವಸ್ವಾಮಿ ಯವರ ದಿವ್ಯ ರಥೋತ್ಸವವು ಮಂಗಳ ವಾರ ಬೆಳಿಗ್ಗೆ ದೇವಾಲಯದ ಮುಂಭಾಗ ಸೇರಿದ್ದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಜರುಗಿತು. ಬೆಳಿಗ್ಗೆ ಚೆನ್ನಕೇಶವಸ್ವಾಮಿ ದೇಗುಲದಲ್ಲಿ ಪೂಜಾ ವಿಧಿವಿಧಾನಗಳನ್ನು ಪೂರೈಸಿ ಯಾತ್ರಾದಾನ ಸೇವೆಯ ನಂತರ ಶ್ರೀ ಯವರ ಉತ್ಸವ ಮೂರ್ತಿಯನ್ನು ಅಲಂ ಕಾರಗೊಂಡ ದಿವ್ಯ ರಥದಲ್ಲಿ ಕೂರಿಸಲಾ ಯಿತು. ರಥಕ್ಕೆ ಪೂಜೆಯನ್ನು ಸಲ್ಲಿಸಿದ ನಂತರ ಬಾಳೆಕಂದನ್ನು ಕತ್ತರಿಸಿ ಬಲಿ ಯನ್ನು ಕೊಡಲಾಯಿತು. ಚಿಕ್ಕಮೇದೂರಿನ ಮೌಲ್ವಿ ರಥದ ಮುಂದೆ ಕುರಾನ್ ಗ್ರಂಥದ…
ಸೋಲುವ ಭೀತಿಯಿಂದ ನನ್ನನ್ನು ಡಾನ್ ಎಂದಿದ್ದಾರೆ: ಎ.ಮಂಜು
April 17, 2019ಹಾಸನ: ಲೋಕಸಭೆ ಚುನಾ ವಣೆಯಲ್ಲಿ ತನ್ನ ಪುತ್ರ ಪ್ರಜ್ವಲ್ ಸೋಲುವ ಭೀತಿಯಲ್ಲಿ ಹತಾಶರಾಗಿ ನನ್ನನ್ನು ಡಾನ್ ಎಂದಿದ್ದು, ಇದು ರಾಜಕೀಯ ಯುದ್ಧ, ಇಲ್ಲಿ ಅವರ ಸಾಮಥ್ರ್ಯದಲ್ಲಿ ಗೆಲ್ಲಬೇಕೇ ಹೊರತು ಇಲ್ಲ ಸಲ್ಲದ ಸುಳ್ಳು ಆರೋಪ ಮಾಡುವುದರ ಮೂಲಕ ಗೆಲ್ಲಲು ಸಾಧ್ಯ ವಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಎ. ಮಂಜು ತಿರುಗೇಟು ನೀಡಿದರು. ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 1991ರಲ್ಲಿ ಹೆಚ್.ಡಿ.ದೇವೇಗೌಡರು ಸೋತು ಮನೆಯಲ್ಲಿ ಇದ್ದಾಗ ಕೆ.ಹೆಚ್. ಹನುಮೇಗೌಡ ಮತ್ತು ನನ್ನ ಸಹಕಾರ ಪಡೆದು, ಕ್ಷೇತ್ರದಲ್ಲಿ…
ಐಟಿ ದಾಳಿಯಿಂದ ನಮ್ಮನ್ನು ಕುಗ್ಗಿಸಲು ಸಾಧ್ಯವಿಲ್ಲ: ಹೆಚ್.ಡಿ.ರೇವಣ್ಣ
April 17, 2019ಹಾಸನ: ಜೆಡಿಎಸ್ ಮುಖಂಡರ ಮತ್ತು ಕಾರ್ಯಕರ್ತರ ಮನೆ ಮೇಲೆ ಐಟಿ ದಾಳಿ ನಡೆಸುವ ಮೂಲಕ ನಮ್ಮನ್ನು ಕುಗ್ಗಿಸುವ ಪ್ರಯತ್ನ ಮಾಡಲಾಗುತ್ತಿದ್ದು, ಇಂತಹ ಗೊಡ್ಡು ಬೆದರಿಕೆಗೆಲ್ಲ ನಾವು ಹೆದರುವುದಿಲ್ಲ ಎಂದು ಜಿಲ್ಲಾ ಉಸ್ತು ವಾರಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು. ನಗರದ ಖಾಸಗಿ ಹೋಟೆಲೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ನೋವು ಕೊಟ್ಟವರು ಯಾರೂ ಉಳಿಯುವುದಿಲ್ಲ. ಬಿಜೆಪಿಯವರು ಕಳೆದ ಹಲವು ದಿನಗಳಿಂದ ಆದಾಯ ತೆರಿಗೆ ಅಧಿಕಾರಿಗಳ ಮೂಲಕ ತಮ್ಮ ಮುಖಂಡರು ಹಾಗೂ ಕಾರ್ಯಕರ್ತರ ಮನೆ ಮೇಲೆ…
ದ್ವಿತೀಯ ಪಿಯುಸಿ: ಜಿಲ್ಲೆಗೆ 6ನೇ ಸ್ಥಾನ
April 16, 2019ಶೇ. 75.19 ಫಲಿತಾಂಶ, ವಿದ್ಯಾರ್ಥಿನಿಯರೇ ಮೇಲುಗೈ ಹಾಸನ: 2019ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯ 13,980 ವಿದ್ಯಾರ್ಥಿಗಳಲ್ಲಿ 10,511 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜಿಲ್ಲೆಯ ಶೇಕಡಾವಾರು ಫಲಿತಾಂಶವು ಪ್ರತಿಶತ ಶೇ.75.19 ರೊಂದಿಗೆ ರಾಜ್ಯದಲ್ಲಿ ಜಿಲ್ಲೆಯು 6ನೇ ಸ್ಥಾನದಲ್ಲಿದೆ. 2018ನೇ ಸಾಲಿನಲ್ಲಿ ಶೇ. 73.87 ರೊಂದಿಗೆ 8ನೇ ಸ್ಥಾನ ಹಾಗೂ 2017ನೇ ಸಾಲಿನಲ್ಲಿ ಶೇ.59.88 ಫಲಿತಾಂಶ ದೊಂದಿಗೆ ರಾಜ್ಯದಲ್ಲಿ 11ನೇ ಸ್ಥಾನ ದಲ್ಲಿತ್ತು. ಈ ಬಾರಿ ಶೇ.75.19 ಫಲಿ ತಾಂಶದೊಂದಿಗೆ 6ನೇ ಸ್ಥಾನಕ್ಕೇರಿದೆ. ಬಾಲಕಿಯರು ಶೇಕಡಾ…
ಹಾಸನ, ಬೇಲೂರಿನಲ್ಲಿ ಬಿಜೆಪಿ ಅಭ್ಯರ್ಥಿ ಎ.ಮಂಜು ಪರ ಬೈಕ್ ರ್ಯಾಲಿ
April 16, 2019ಹಾಸನ: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಎ.ಮಂಜು ಪರ ಕ್ಷೇತ್ರದ ಶಾಸಕ ಪ್ರೀತಮ್ ಜೆ.ಗೌಡ ನೇತೃತ್ವದಲ್ಲಿ ಸೋಮವಾರ ಬೃಹತ್ ಬೈಕ್ ರ್ಯಾಲಿ ನಡೆಯಿತು. ನಗರದ ಸಾಲಗಾಮೆರಸ್ತೆ, ರಿಂಗ್ ರಸ್ತೆಯ ವೃತ್ತದಲ್ಲಿ ಜಮಾಯಿಸಿದ ಒಂದು ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಬೈಕ್ ರ್ಯಾಲಿ ಮೂಲಕ ತೆರಳಿ ನಗರದ ವಿವಿಧ ಭಾಗಗಳಲ್ಲಿ ಸಂಚ ರಿಸಿ, ಬಿಜೆಪಿ ಅಭ್ಯರ್ಥಿ ಪರ ಮತ ಹಾಕು ವಂತೆ ಘೋಷಣೆ ಕೂಗಿದರು. ಈ ವೇಳೆ ಹಲವರು ಪ್ರಧಾನಿ ನರೇಂದ್ರ ಮೋದಿರವರ…
ಕೇಂದ್ರದಿಂದ ಐಟಿ, ಚುನಾವಣಾ ಆಯೋಗ ದುರ್ಬಳಕೆ: ಸಚಿವ ಹೆಚ್.ಡಿ.ರೇವಣ್ಣ ಆರೋಪ
April 16, 2019ಹಾಸನ: ಕೇಂದ್ರ ಸರ್ಕಾರ ರಾಜಕೀಯ ದುರುದ್ದೇಶಕ್ಕೆ ಐಟಿ ದಾಳಿ ಹಾಗೂ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು ಚುನಾವಣಾಧಿಕಾರಿ ಮೈತ್ರಿ ಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ನೋಟಿಸ್ ನೀಡುತ್ತಿದ್ದಾರೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಆರೋಪಿಸಿದರು. ನಗರದ ಖಾಸಗಿ ಹೋಟೆಲೊಂದರಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಮ್ಮೆ ನಾಮಪತ್ರ ಅಂಗೀಕಾರವಾದ ನಂತರ ಅದನ್ನು ಪ್ರಶ್ನೆ ಮಾಡಲು ಆಗುವುದಿಲ್ಲ. ಏನಿದ್ದರೂ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಬಹುದು. ನನ್ನ ಮಗ ದೇವೇಗೌಡ ಎಂಬುವರ ಬಳಿ 10ಲಕ್ಷ…
ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ರೋಡ್ ಶೋ
April 16, 2019ಅರಸೀಕೆರೆ: ನಗರದಲ್ಲಿ ಭಾನು ವಾರ ರಾತ್ರಿ ಶಾಸಕ ಕೆ.ಎಂ.ಶಿವಲಿಂಗೇ ಗೌಡ ಹಾಗೂ ಜೆಡಿಎಸ್-ಕಾಂಗ್ರೆಸ್ ನಾಯ ಕರ ನೇತೃತ್ವದಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ರೋಡ್ ಶೋ ನಡೆಸುವ ಮೂಲಕ ಮತಯಾಚನೆ ಮಾಡಿದರು. ನಗರದ ಅಯ್ಯಪ್ಪಸ್ವಾಮಿ ದೇವಾಲಯ ದಿಂದ ರೋಡ್ ಶೋ ಆರಂಭಿಸಿದ ಅವರು, ಹಾಸನ ರಸ್ತೆ ಮಾರ್ಗವಾಗಿ ಅಂಬೇಡ್ಕರ್ ವೃತ್ತ ಮೂಲಕ ರಾಷ್ಟ್ರೀಯ ಹೆದ್ದಾರಿ 206, ಬಿ.ಹೆಚ್.ರಸ್ತೆಯಲ್ಲಿ ಸಾಗಿ ಪಿ.ಪಿ. ವೃತ್ತದಲ್ಲಿ ಸಮಾವೇಶಗೊಂಡರು. ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿ, ಜಿಲ್ಲೆಯ…