ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ರೋಡ್ ಶೋ
ಹಾಸನ

ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ರೋಡ್ ಶೋ

April 16, 2019

ಅರಸೀಕೆರೆ: ನಗರದಲ್ಲಿ ಭಾನು ವಾರ ರಾತ್ರಿ ಶಾಸಕ ಕೆ.ಎಂ.ಶಿವಲಿಂಗೇ ಗೌಡ ಹಾಗೂ ಜೆಡಿಎಸ್-ಕಾಂಗ್ರೆಸ್ ನಾಯ ಕರ ನೇತೃತ್ವದಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ರೋಡ್ ಶೋ ನಡೆಸುವ ಮೂಲಕ ಮತಯಾಚನೆ ಮಾಡಿದರು.

ನಗರದ ಅಯ್ಯಪ್ಪಸ್ವಾಮಿ ದೇವಾಲಯ ದಿಂದ ರೋಡ್ ಶೋ ಆರಂಭಿಸಿದ ಅವರು, ಹಾಸನ ರಸ್ತೆ ಮಾರ್ಗವಾಗಿ ಅಂಬೇಡ್ಕರ್ ವೃತ್ತ ಮೂಲಕ ರಾಷ್ಟ್ರೀಯ ಹೆದ್ದಾರಿ 206, ಬಿ.ಹೆಚ್.ರಸ್ತೆಯಲ್ಲಿ ಸಾಗಿ ಪಿ.ಪಿ. ವೃತ್ತದಲ್ಲಿ ಸಮಾವೇಶಗೊಂಡರು.

ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿ, ಜಿಲ್ಲೆಯ ಜನತೆ ನನ್ನ ತಾತಾ ಹಾಗೂ ನಮ್ಮ ಕುಟುಂಬದ ಮೇಲೆ ವಿಶ್ವಾಸವಿಟ್ಟು ಆಶೀ ರ್ವದಿಸುವ ಮೂಲಕ ರಾಜಕೀಯವಾಗಿ ನಮ್ಮ ಕುಟುಂಬ ಸದಸ್ಯರು ಉನ್ನತ ಸ್ಥಾನ ಗಳನ್ನು ಅಲಂಕರಿಸಿದ್ದಾರೆ. ನಾವೆಲ್ಲರೂ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇವೆ. ಅದೇ ರೀತಿ ನಾನು ಕೂಡ ನನ್ನ ಮನೆತನ ಹಾಗೂ ನಿಮ್ಮಗಳ ನಂಬಿಕೆ, ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿ ನಿಮ್ಮೆಲ್ಲರ ಪ್ರತಿನಿಧಿಯಾಗಿ ಲೋಕಸಭೆ ಪ್ರವೇಶಿಸಿ ಜಿಲ್ಲೆಯ ಜನತೆಯ ಋಣ ತೀರಿಸುತ್ತೇನೆ ಎಂದು ಹೇಳಿದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತ ನಾಡಿ, ರೈತರು, ದೀನದಲಿತರು, ದುರ್ಬಲರ ಬಗ್ಗೆ ಕಾಳಜಿ ಇಲ್ಲದ ನರೇಂದ್ರ ಮೋದಿ ನೇತೃ ತ್ವದ ಬಿಜೆಪಿ ಸರ್ಕಾರ ಸುಳ್ಳು ಆಶ್ವಾಸನೆಗಳು ಪೊಳ್ಳು ಭರವಸೆ ನೀಡುತ್ತಾ ದೇಶದ ಜನತೆ ಯನ್ನು ನಂಬಿಸಿ ಕಳೆದ ಲೋಕಸಭೆ ಚುನಾ ವಣೆಯಲ್ಲಿ ಅಧಿಕಾರಕ್ಕೆ ಬಂದಿತ್ತು ಎಂದರು.

ನರೇಂದ್ರ ಮೋದಿ ಅವರು ನುಡಿದಂತೆ ನಡೆಯಲಿಲ್ಲ. ಸ್ವಿಸ್ ಬ್ಯಾಂಕ್‍ನಿಂದ ಕಪ್ಪು ಹಣ ಬರಲಿಲ್ಲ. ನಿರುದ್ಯೋಗಿ ವಿದ್ಯಾವಂತ ಯುವಕರಿಗೆ ಕೆಲಸ ನೀಡಲಿಲ್ಲ. ನೋಟು ನಿಷೇಧಿಸುವ ಮೂಲಕ ಬಡ ಹಾಗೂ ಮಧ್ಯಮ ವರ್ಗದ ಜನತೆಯ ಬದುಕನ್ನು ಅತಂತ್ರ ಮಾಡಿರುವುದು ಬಿಟ್ಟರೆ ಬಿಜೆಪಿಯವರ ಕೊಡುಗೆ ದೇಶಕ್ಕೆ ಏನೂ ಇಲ್ಲದಿರುವುದು ಅರಿಯಬೇಕು ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಹಾಸನ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಎಲ್ಲಾ ನಾಯಕರು ಮತ್ತು ಕಾರ್ಯಕರ್ತರು ಒಗ್ಗಟ್ಟಿನಿಂದ ಪ್ರಜ್ವಲ್ ರೇವಣ್ಣರವರ ಗೆಲುವಿಗೆ ಶ್ರಮಿಸಿದ್ದೇವೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಅರಸೀಕೆರೆ ವಿಧಾಸಭೆ ಕ್ಷೇತ್ರದ ವ್ಯಾಪ್ತಿ ಯಲ್ಲೇ ನಮ್ಮ ಪ್ರತಿಪಕ್ಷ ಸ್ಪರ್ಧಿ ವಿರುದ್ಧ 50 ಸಾವಿರಕ್ಕೂ ಹೆಚ್ಚಿನ ಮುನ್ನಡೆ ಕಾಯ್ದು ಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ ಅವರು ಕನಿಷ್ಠ ಮೂರು ಲಕ್ಷದ ಅಂತರದಲ್ಲಿ ಪ್ರಜ್ವಲ್ ರೇವಣ್ಣರವರು ಗೆಲುವು ಸಾಧಿಸಲಿ ದ್ದಾರೆ ಎಂದು ಹೇಳಿದರು.

ರ್ಯಾಲಿ ಉದ್ದಕ್ಕೂ ತಮ್ಮ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ತಮ್ಮ ನೆಚ್ಚಿನ ನಾಯಕರ ಪರ ಘೋಷಣೆ ಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಬಿಳಿ ಚೌಡಯ್ಯ, ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋ ಬಾಬು, ಜಿಪಂ ಸದಸ್ಯ ಪಟೇಲ್ ಶಿವಣ್ಣ, ನಗರಸಭೆ ಮಾಜಿ ಅಧ್ಯಕ್ಷ ಎಂ.ಸಮೀವುಲ್ಲಾ, ಬಿ.ಎನ್. ವಿದ್ಯಾದರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅರುಣ್‍ಕುಮಾರ್, ಜಿಪಂ ಸದಸ್ಯ ಸ್ವಾಮಿ, ಜೆಡಿಎಸ್ ಘಟಕದ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಬಾಬು, ಮನು ಕುಮಾರ್, ವಕೀಲ ಲೋಕೇಶ್, ಜಿ.ಟಿ. ಮಹದೇವ್, ಟಿ.ಆರ್.ನಾಗರಾಜ್ ಸೇರಿ ದಂತೆ ಜೆಡಿಎಸ್ ಹಾಗೂ ಕಾಂಗ್ರೆಸ್ ಎರಡು ಪಕ್ಷಗಳ ಚುನಾಯಿತ ಜನಪ್ರತಿನಿಧಿಗಳು ಮತ್ತು ಮುಖಂಡರು ಹಾಜರಿದ್ದರು.

Translate »