ಕೇಂದ್ರದಿಂದ ಐಟಿ, ಚುನಾವಣಾ ಆಯೋಗ ದುರ್ಬಳಕೆ: ಸಚಿವ ಹೆಚ್.ಡಿ.ರೇವಣ್ಣ ಆರೋಪ
ಹಾಸನ

ಕೇಂದ್ರದಿಂದ ಐಟಿ, ಚುನಾವಣಾ ಆಯೋಗ ದುರ್ಬಳಕೆ: ಸಚಿವ ಹೆಚ್.ಡಿ.ರೇವಣ್ಣ ಆರೋಪ

April 16, 2019

ಹಾಸನ: ಕೇಂದ್ರ ಸರ್ಕಾರ ರಾಜಕೀಯ ದುರುದ್ದೇಶಕ್ಕೆ ಐಟಿ ದಾಳಿ ಹಾಗೂ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು ಚುನಾವಣಾಧಿಕಾರಿ ಮೈತ್ರಿ ಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ನೋಟಿಸ್ ನೀಡುತ್ತಿದ್ದಾರೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಆರೋಪಿಸಿದರು.

ನಗರದ ಖಾಸಗಿ ಹೋಟೆಲೊಂದರಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಮ್ಮೆ ನಾಮಪತ್ರ ಅಂಗೀಕಾರವಾದ ನಂತರ ಅದನ್ನು ಪ್ರಶ್ನೆ ಮಾಡಲು ಆಗುವುದಿಲ್ಲ. ಏನಿದ್ದರೂ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಬಹುದು. ನನ್ನ ಮಗ ದೇವೇಗೌಡ ಎಂಬುವರ ಬಳಿ 10ಲಕ್ಷ ರೂ. ಸಾಲ ಪಡೆದಿದ್ದಾನೆ. ಅದ ರಲ್ಲಿ ಹೆಚ್.ಡಿ.ದೇವೇಗೌಡ ಅಂತ ಇದಿಯಾ. ಆದರೂ ಜಿಲ್ಲಾಧಿಕಾರಿ ಸ್ಪಷ್ಟನೆ ಕೇಳಿ ಮಗ ನಿಗೆ ನೋಟಿಸ್ ನೀಡಿದ್ದಾರೆ. ಬಿಜೆಪಿ ಪರ ವಾಗಿ ಜಿಲ್ಲಾಧಿಕಾರಿ ಕೆಲಸ ಮಾಡಬಾ ರದು. ನಾವು ಚುನಾವಣೆ ಮಾಡಬೇಕೋ, ಬೆಳಿಗ್ಗೆಯಾದರೆ ನೋಟಿಸ್‍ಗೆ ಉತ್ತರ ಕೊಡಲು ಓಡಾಡಬೇಕೋ? ಎಂದು ಪ್ರಶ್ನಿಸಿದರು.

ಹರದನಹಳ್ಳಿ ಈಶ್ವರ ದೇಗುಲದ ಅರ್ಚಕರ ಮನೆ ಮೇಲೆ ಐಟಿ ದಾಳಿ ನಡೆದಿರುವುದು ಸತ್ಯ. ಹಾಸನ ಹಾಲು ಒಕ್ಕೂಟದಲ್ಲಿರುವ ಗುಮಾಸ್ತ ಬೋರೇಗೌಡನ ಮನೆ ಮೇಲೂ ಐಟಿ ದಾಳಿ ನಡೆದಿದ್ದು, ಅವರಿಗೆ 10ರೂ. ಸಿಕ್ಕಿದೆ. ಬಿಜೆಪಿ ನಾಯಕರ ಬಳಿ ಹಣ ಇದ್ದರೂ ದಾಳಿ ಮಾಡುವುದಿಲ್ಲ? ಎಂದು ಹೇಳಿದರು.

ಮುಖ್ಯಮಂತ್ರಿ ಸೇರಿ ಎಲ್ಲರ ಬಗ್ಗೆ ನಾಲಿಗೆ ಹರಿಯ ಬಿಡುತ್ತಿರುವ ಈಶ್ವರಪ್ಪ ವಿರುದ್ಧ ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖ ಲಿಸಬೇಕು. ನಿಖಿಲ್ ಕುಟುಂಬದ ವಿರುದ್ಧ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಕೆಲವರು ಮೊಬೈಲ್ ಸಂಭಾಷಣೆ ರೆಕಾರ್ಡ್ ಮಾಡಿ, ಪಕ್ಷದ ತೇಜೋವಧೆ ಮಾಡು ತ್ತಿದ್ದಾರೆ. ಇಂತಹುದಕ್ಕೆಲ್ಲಾ ಚುನಾವಣಾ ಆಯೋಗ ಬ್ರೇಕ್ ಹಾಕಬೇಕು ಎಂದು ಒತ್ತಾಯಿಸಿದರು.

ನಮ್ಮ ಕುಟುಂಬದ ಯಾರೂ ಪರ್ಸೆಂ ಟೇಜ್ ತೆಗೆದುಕೊಳ್ಳುವ ಪಾಪದ ಕೆಲಸಕ್ಕೆ ಕೈ ಹಾಕಿಲ್ಲ. ಪರ್ಸೆಂಟೆಜ್ ತೆಗೆದುಕೊಳ್ಳು ವವರು ಬಿಜೆಪಿಯವರು. ಜೈಲಿಗೆ ಹೋಗಿ ಬಂದವರ ಪರ ಪ್ರಧಾನಿ ನರೇಂದ್ರ ಪ್ರಚಾರ ಮಾಡುತ್ತಿದ್ದಾರೆ ಎಂದು ಗುಡುಗಿದರು.
ಬಿಜೆಪಿ ವಿರುದ್ಧ ವಾಗ್ದಾಳಿ: ಜನರು ಅಧಿಕಾರ ಕೊಟ್ಟರೇ ಕೆಲಸ ಮಾಡುತ್ತೇವೆ, ಇಲ್ಲವಾ ದರೇ ಪಡುವಲಹಿಪ್ಪೆಯಲ್ಲಿ ರಾಗಿ ಮುದ್ದೆ ತಿನ್ಕೊಂಡು ಇರೋಕು ಸೈ ಎಂದು ಸಚಿವ ಹೆಚ್.ಡಿ.ರೇವಣ್ಣ ಹೇಳಿದರು.

ಏ. 18ರಂದು ನಡೆಯಲಿರುವ ಮೊದಲ ಹಂತದ ಲೋಕಸಭೆ ಚುನಾವಣೆಯಲ್ಲಿ ಎಲ್ಲಾ ಮೈತ್ರಿ ಅಭ್ಯರ್ಥಿಗಳಿಗೆ ಮತ ನೀಡ ಬೇಕು ಎಂದು ಮನವಿ ಮಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಅಭಿ ವೃದ್ಧಿ ವಿಚಾರದ ಬಗ್ಗೆ ಯಾವ ಚಕಾರ ಎತ್ತುತಿಲ್ಲ. ಕೇವಲ ವೈಯಕ್ತಿಕವಾಗಿ ಟೀಕೆ ಮಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು 25 ಕೋಟಿ ರೂ.ಗಳ ಕಾಮಗಾರಿ ಪಡೆದಿದ್ದಾರೆ. ಮೋದಿ ಹೇಳಿಕೆಯಂತೆ ಅವರು ಪರ್ಸೆಂಟೇಜ್ ಪಡೆ ದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮೋದಿಯವರು ಮಹಾರಾಷ್ಟ್ರಕ್ಕೆ ಎಷ್ಟು ಅನುದಾನ ನೀಡಿದ್ದಾರೆ. ಹಾಗೇ ಕರ್ನಾ ಟಕ ಏಕೆ ಅನುದಾನ ನೀಡುತ್ತಿಲ್ಲ. ಇದೇನೂ ಪಾಕಿಸ್ತಾನವಾ? ಎಂದು ಪ್ರಶ್ನೆ ಮಾಡಿದ ಅವರು, ಮೋದಿ ಯಾವ ಮುಖ ಇಟ್ಟು ಕೊಂಡು ಜನರ ಬಳಿ ಮತ ಕೇಳುತ್ತಾರೆ ಎಂದು ಟೀಕಿಸಿದರು.

2020ಕ್ಕೆ ಹಾಸನ ಮೆಡಿಕಲ್ ಕಾಲೇಜು ಮುಚ್ಚುವಂತೆ ಮಾಡುತ್ತಾರಂತೆ. ತುಮ ಕೂರಿಗೆ ನೀರು ಹರಿಸಲು ನಾಲೆ ವಿಸ್ತರಣೆ ಏಕೆ ಮಾಡಲಿಲ್ಲ? ಎಂದು ಬಿಜೆಪಿ ಸರ್ಕಾ ರಕ್ಕೆ ಪ್ರಶ್ನೆ ಮಾಡಿದ ಅವರು, 2014ರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ ತುಮಕೂರಿಗೆ ನಾಲೆ ಮಾಡಿಸಿದ್ದರು. ಈ ಬಾರಿ ತುಮಕೂರಿಗೆ 26 ಟಿಎಂಸಿ ನೀರು ಹರಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಕೊಡುಗೆ ಏನು ಇದೆ? ಇವರಿಂದ ನಾವು ಕಲಿಯಬೇಕಾಗಿಲ್ಲ ಎಂದು ಕಿಡಿಕಾರಿದರು.

ಬಿಜೆಪಿ ತೊಲಗಿಸಿ ದೇಶ ಉಳಿಸಿ. ಐಟಿ ಮತ್ತು ಚುನಾವಣಾ ಆಯೋಗದ ಮೂಲಕ ದಾಳಿ ಮಾಡುವ ಮೂಲಕ ಕೇಂದ್ರ ಸರ್ಕಾರ ತುರ್ತು ಪರಿಸ್ಥಿತಿ ಹೇರಿದೆ ಎಂದು ಕೇಂದ್ರದ ವಿರುದ್ಧ ಗಂಭೀರ ಆರೋಪ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಬಿ.ಆರ್.ಸತ್ಯನಾರಾಯಣ್, ಹೆಚ್ ಡಿಸಿಸಿ ಬ್ಯಾಂಕ್‍ನ ಚಂದ್ರೇಗೌಡ, ಎಪಿ ಎಂಸಿಯ ಲಕ್ಷ್ಮಣ್, ಹುಡಾ ಅಧ್ಯಕ್ಷ ಕೆ.ಎಂ. ರಾಜೇಗೌಡ, ಮುಖಂಡ ಕುಮಾರ್ ಇತರರು ಪಾಲ್ಗೊಂಡಿದ್ದರು.

Translate »