ಹಾಸನ, ಬೇಲೂರಿನಲ್ಲಿ ಬಿಜೆಪಿ ಅಭ್ಯರ್ಥಿ ಎ.ಮಂಜು ಪರ ಬೈಕ್ ರ್ಯಾಲಿ
ಹಾಸನ

ಹಾಸನ, ಬೇಲೂರಿನಲ್ಲಿ ಬಿಜೆಪಿ ಅಭ್ಯರ್ಥಿ ಎ.ಮಂಜು ಪರ ಬೈಕ್ ರ್ಯಾಲಿ

April 16, 2019

ಹಾಸನ: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಎ.ಮಂಜು ಪರ ಕ್ಷೇತ್ರದ ಶಾಸಕ ಪ್ರೀತಮ್ ಜೆ.ಗೌಡ ನೇತೃತ್ವದಲ್ಲಿ ಸೋಮವಾರ ಬೃಹತ್ ಬೈಕ್ ರ್ಯಾಲಿ ನಡೆಯಿತು.

ನಗರದ ಸಾಲಗಾಮೆರಸ್ತೆ, ರಿಂಗ್ ರಸ್ತೆಯ ವೃತ್ತದಲ್ಲಿ ಜಮಾಯಿಸಿದ ಒಂದು ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಬೈಕ್ ರ್ಯಾಲಿ ಮೂಲಕ ತೆರಳಿ ನಗರದ ವಿವಿಧ ಭಾಗಗಳಲ್ಲಿ ಸಂಚ ರಿಸಿ, ಬಿಜೆಪಿ ಅಭ್ಯರ್ಥಿ ಪರ ಮತ ಹಾಕು ವಂತೆ ಘೋಷಣೆ ಕೂಗಿದರು.

ಈ ವೇಳೆ ಹಲವರು ಪ್ರಧಾನಿ ನರೇಂದ್ರ ಮೋದಿರವರ ಭಾವಚಿತ್ರ ಉಳ್ಳ ಮುಖ ವಾಡ ಧರಿಸಿ ಬೈಕ್ ಚಾಲನೆ ಮಾಡಿ ಗಮನ ಸೆಳೆದರು. ತೆರದ ವಾಹನದಲ್ಲಿ ಶಾಸಕ ಪ್ರೀತಮ್ ಜೆ.ಗೌಡ ಮೆರವಣಿಗೆ ನಡೆಸಿ ಮತದಾರರಿಗೆ ಕೈ ಬೀಸುವ ಮೂಲಕ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದರು.

ಬೇಲೂರು ವರದಿ: ಬಿಜೆಪಿ ತಾಲೂಕು ಘಟಕದ ವತಿಯಿಂದ ಅಭ್ಯರ್ಥಿ ಎ. ಮಂಜು ಪರ ಪಟ್ಟಣದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಸುವ ಮೂಲಕ ಮತದಾರರ ಗಮನ ಸೆಳೆಯಿತು.

ರ್ಯಾಲಿಯುದ್ದಕ್ಕೂ ಕಾರ್ಯಕರ್ತರು ಪಕ್ಷದ ಧ್ವಜವನ್ನು ಕೈಯಲ್ಲಿ ಹಿಡಿದು ಮೋದಿ… ಮೋದಿ… ಎನ್ನುತ್ತಲೇ ರ್ಯಾಲಿ ಯಲ್ಲಿ ಪಾಲ್ಗೊಂಡರು. ತಾಲೂಕು ಬಿಜೆಪಿ ಅಧ್ಯಕ್ಷ ಕೊರಟಗೆರೆ ಪ್ರಕಾಶ್ ಮಾತನಾಡಿ, ಇಡೀ ದೇಶವೇ ಮೋದಿಯತ್ತ ನೋಡು ತ್ತಿದೆ. ಮೋದಿ ಹೆಸರು ಕೇಳಿದ ತಕ್ಷಣ ಪ್ರತಿಯೊಬ್ಬರಲ್ಲೂ ಉತ್ಸಾಹ ಚಿಮ್ಮುತ್ತಿದೆ. ಈ ಬಾರಿ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.

ಸಕಲೇಶಪುರದ ಮಾಜಿ ಶಾಸಕ ಎಚ್. ಎಂ.ವಿಶ್ವನಾಥ್ ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಬೆಣ್ಣೂರು ರೇಣುಕುಮಾರ್, ಬಿ.ಎಲ್. ಲಕ್ಷ್ಮಣ್, ಮುಖಂಡರು ಹಾಜರಿದ್ದರು.

Translate »