ದ್ವಿತೀಯ ಪಿಯುಸಿ: ಜಿಲ್ಲೆಗೆ 6ನೇ ಸ್ಥಾನ
ಹಾಸನ

ದ್ವಿತೀಯ ಪಿಯುಸಿ: ಜಿಲ್ಲೆಗೆ 6ನೇ ಸ್ಥಾನ

April 16, 2019

ಶೇ. 75.19 ಫಲಿತಾಂಶ, ವಿದ್ಯಾರ್ಥಿನಿಯರೇ ಮೇಲುಗೈ

ಹಾಸನ: 2019ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯ 13,980 ವಿದ್ಯಾರ್ಥಿಗಳಲ್ಲಿ 10,511 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜಿಲ್ಲೆಯ ಶೇಕಡಾವಾರು ಫಲಿತಾಂಶವು ಪ್ರತಿಶತ ಶೇ.75.19 ರೊಂದಿಗೆ ರಾಜ್ಯದಲ್ಲಿ ಜಿಲ್ಲೆಯು 6ನೇ ಸ್ಥಾನದಲ್ಲಿದೆ.

2018ನೇ ಸಾಲಿನಲ್ಲಿ ಶೇ. 73.87 ರೊಂದಿಗೆ 8ನೇ ಸ್ಥಾನ ಹಾಗೂ 2017ನೇ ಸಾಲಿನಲ್ಲಿ ಶೇ.59.88 ಫಲಿತಾಂಶ ದೊಂದಿಗೆ ರಾಜ್ಯದಲ್ಲಿ 11ನೇ ಸ್ಥಾನ ದಲ್ಲಿತ್ತು. ಈ ಬಾರಿ ಶೇ.75.19 ಫಲಿ ತಾಂಶದೊಂದಿಗೆ 6ನೇ ಸ್ಥಾನಕ್ಕೇರಿದೆ.

ಬಾಲಕಿಯರು ಶೇಕಡಾ 74.14 ಹಾಗೂ ಬಾಲಕರು ಶೇಕಡಾ 63.17 ರಷ್ಟು ಫಲಿ ತಾಂಶ ಪಡೆದುಕೊಂಡಿದ್ದಾರೆ. ಪರೀಕ್ಷೆ ಬರೆದ 13,980 ವಿದ್ಯಾರ್ಥಿಗಳ ಪೈಕಿ 10,511 ಜನರು ತೇರ್ಗಡೆ ಹೊಂದಿದ್ದಾರೆ.

ಕಲಾ ವಿಭಾಗದಲ್ಲಿ 3,951 ವಿದ್ಯಾರ್ಥಿ ಗಳ ಪೈಕಿ 2,797 ವಿದ್ಯಾರ್ಥಿಗಳು ಉತ್ತೀರ್ಣ ರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 5,639 ವಿದ್ಯಾರ್ಥಿಗಳ ಪೈಕಿ 4,386 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 4,390 ವಿದ್ಯಾರ್ಥಿ ಗಳ ಪೈಕಿ 3,331 ಜನರು ಪಾಸಾಗಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಶೇಕಡಾ 72.36 ರಷ್ಟು ಮತ್ತು ಕನ್ನಡ ಮಾಧ್ಯಮದಲ್ಲಿ ಶೇಕಡಾ 66.89ರಷ್ಟು ಫಲಿತಾಂಶ ಸಿಕ್ಕಿದೆ.

ಶೇಕಡಾ 100 ಫಲಿತಾಂಶ: ಹಾಸನದ ಮಾಸ್ಟರ್ಸ್ ಪಿಯು ಕಾಲೇಜು, ಸೆಂಟ್ರಲ್ ಪಿಯು ಕಾಲೇಜು, ವಿದ್ಯಾನಿಕೇತನ ಪಿಯು ಕಾಲೇಜು, ಬೂವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಬೈಲಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಚನ್ನರಾಯ ಪಟ್ಟಣ ತಾಲ್ಲೂಕಿನ ಕ್ರೈಸ್ತ ಕಿಂಗ್ ಪಿಯು ಕಾಲೇಜು, ಸಕಲೇಶಪುರ ತಾಲ್ಲೂಕಿನ ಯಸಳೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಶೇಕಡಾ 100ರಷ್ಟು ಫಲಿತಾಂಶ ಪಡೆದುಕೊಂಡಿವೆ.

ನಿಕೇತನ್‍ಗೌಡ ರಾಜ್ಯಕ್ಕೆ 3ನೇ ಸ್ಥಾನ

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಮಾಸ್ಟರ್ಸ್ ಪಿಯು ಕಾಲೇಜಿನ ವಿದ್ಯಾರ್ಥಿ ಡಿ.ನಿಕೇತನ್‍ಗೌಡ ರಾಜ್ಯಕ್ಕೆ 3ನೇ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದ ವಿದ್ಯಾರ್ಥಿ ನಿಕೇತನ್ 600ಕ್ಕೆ 592 (ಶೇಕಡಾ 98.66) ಅಂಕಗಳನ್ನು ಪಡೆದಿದ್ದು, ರಾಜ್ಯದ ಇನ್ನಿಬ್ಬರು ವಿದ್ಯಾರ್ಥಿಗಳೊಂದಿಗೆ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ.

ಕನ್ನಡದಲ್ಲಿ 98, ಇಂಗ್ಲಿಷ್ 94 ಅಂಕ ಪಡೆ ದಿರುವ ನಿಕೇತನ್, ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತ ಹಾಗೂ ಜೀವವಿಜ್ಞಾನ ವಿಷಯಗಳಲ್ಲಿ ಶೇಕಡಾ 100 ಅಂಕ ಗಳಿಸಿದ್ದಾರೆ. ಅವರು ನಗರದ ವಕೀಲ ದೇವರಾಜೇ ಗೌಡ ಹಾಗೂ ರೂಪಾ ದಂಪತಿಯ ಪುತ್ರ. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ತನ್ನ ತಾಯಿ ರೂಪಾ ಅವರೊಂದಿಗೆ ಕಾಲೇಜಿಗೆ ಬಂದ ನಿಕೇತನ್ ಅವರನ್ನು ಕಿರಿಯ ವಿದ್ಯಾರ್ಥಿಗಳು ಸಂಭ್ರಮದಿಂದ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ಅಭಿನಂದಿಸಿ ಸಿಹಿ ತಿನ್ನಿಸಿದರು.

Translate »