ಆರೋಗ್ಯ ಸೌಲಭ್ಯ ಉತ್ತಮಗೊಳಿಸಲು ಸೂಚನೆ
ಹಾಸನ

ಆರೋಗ್ಯ ಸೌಲಭ್ಯ ಉತ್ತಮಗೊಳಿಸಲು ಸೂಚನೆ

April 16, 2019

ಹಾಸನ: ತಾಲೂಕು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿನ ಆರೋಗ್ಯ ಚಿಕಿತ್ಸಾ ಸೌಲಭ್ಯ ಇನ್ನಷ್ಟು ಉತ್ತಮ ಗೊಳಿಸುವ ನಿಟ್ಟಿನಲ್ಲಿ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯ ಅರ್ಪಣಾ ಮನೋ ಭಾವದ ಸೇವೆ ಅಗತ್ಯ ಎಂದು ಜಿಪಂ ಸಿಇಓ ಡಾ.ಕೆ.ಎನ್.ವಿಜಯಪ್ರಕಾಶ್ ತಿಳಿಸಿದರು.

ಹೊಳೆನರಸೀಪುರ ತಾಲೂಕು ಆಸ್ಪತ್ರೆ ಹಾಗೂ ಮೊಸಳೆ ಹೊಸಳ್ಳಿ, ಪಡುವಲ ಹಿಪ್ಪೆ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಭೇಟಿ ಮಾಡಿ ನೀಡಲಾಗುತ್ತಿರುವ ಚಿಕಿತ್ಸಾ ಸೌಲಭ್ಯಗಳು, ವೈದ್ಯರ ಹಾಜರಾತಿಗಳ ಬಗ್ಗೆ ಪರಿಶೀಲಿಸಿದ ಅವರು ಸಾರ್ವಜನಿಕರ ಅನು ಕೂಲಕ್ಕಾಗಿ ನಿರ್ಮಿಸಲಾಗಿರುವ ಸುಸರ್ಜಿತ ಆಸ್ಪತ್ರೆ ಹಾಗೂ ಇತರ ಪೂರಕ ಸೌಲಭ್ಯ ಗಳು ಅದರ ನಿರೀಕ್ಷಿತ ಉದ್ದೇಶ ಈಡೇರಿ ಸಲು ವೈದ್ಯರು, ಸಿಬ್ಬಂದಿಗಳ ಹೊಣೆಗಾ ರಿಕೆ ಹೆಚ್ಚು ಎಂದು ಸೂಚನೆ ನೀಡಿದರು.

ತಮ್ಮ ಆಸ್ಪತ್ರೆ ಭೇಟಿ ಸಂದರ್ಭ ಕೆಲವು ವೈದ್ಯರು ಗೈರಿ ಹಾಜರಿ ಗಮನಿಸಿದ ಅವರು ದೂರವಾಣಿ ಮೂಲಕವೇ ಸಂಪರ್ಕಿಸಿ ಇದು ಮರುಕಳಿಸದಿರಲಿ ಎಂದು ಎಚ್ಚರಿಕೆ ನೀಡಿದರು. ಅಲ್ಲದೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ರೋಗಿಗಳನ್ನು ನೇರವಾಗಿ ಮಾತ ನಾಡಿಸಿ ಹಾಗೂ ಕೆಲವರನ್ನು ದೂರ ವಾಣಿ ಮೂಲಕ ಸಂಪರ್ಕಿಸಿ ಅವರಿಂ ದಲೂ ಮಾಹಿತಿ ಪಡೆದ ಡಾ.ಕೆ.ಎನ್. ವಿಜಯಪ್ರಕಾಶ್ ಶ್ರದ್ಧೆಯಿಂದ ಕೆಲಸ ನಿರ್ವ ಹಿಸಲು ಆರೋಗ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.

ಚಿಕಿತ್ಸಾ ಸೌಲಭ್ಯಗಳ ಕೌನ್ಸಿಲಿಂಗ್‍ಗಾಗಿ ಇರುವ ಕೇಂದ್ರವು ಇನ್ನಷ್ಟು ಪರಿಣಾಮ ಕಾರಿಯಾಗಿ ಕೆಲಸಮಾಡಿ ಸಾರ್ವಜನಿ ಕರಿಗೆ ಉಪಯುಕ್ತವಾಗಿ ಮಾಹಿತಿ, ಸಲಹೆ ಗಳನ್ನು ನೀಡಬೇಕು ಎಂದು ಸಲಹೆ ನೀಡಿದರು.

ಪ್ರತಿಯೊಂದು ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಹಾವು ಕಡಿತ, ರ್ಯಾಬೀಸ್ ಹಾಗೂ ಗರ್ಭಿಣಿಯರಿಗೆ ನೀಡುವ ಚುಚ್ಚು ಮದ್ದುಗಳು ಕಡ್ಡಾಯವಾಗಿ ಇರಬೇಕು. ಈ ಬಗ್ಗೆ ಎಲ್ಲಾ ತಾಲೂಕು ವೈದ್ಯಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮೇಲ್ವಿ ಚಾರಣೆ ವಹಿಸಬೇಕು ಎಂದು ಹೇಳಿದರು.

ಈ ವೇಳೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿವಿಧ ಅಂಗನ ವಾಡಿ ಕೇಂದ್ರಗಳಿಗೂ ಭೇಟಿ ನೀಡಿ ಅಲ್ಲಿ ನೀಡಲಾಗುತ್ತಿರುವ ಆಹಾರ ಸ್ವಚ್ಛತೆ, ಶೈಕ್ಷ ಣಿಕ ಚಟುವಟಿಕೆಗಳನ್ನು ಗಮನಿಸಿ ಸಲಹೆ ಸೂಚನೆಗಳನ್ನು ನೀಡಿದರು. ಅಲ್ಲದೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಅನುದಾನ ಸಮರ್ಪಕತೆ ಪರಿಶೀಲಿಸಿದರು.

Translate »