ಮೂಡಲಹಿಪ್ಪೆ(ಹಾಸನ): ಕಣ್ಣೀರಧಾರೆಯ ನಡುವೆಯೇ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ತಮ್ಮ ಅಭಿಮಾನದ ಹಾಸನ ಲೋಕಸಭಾ ಕ್ಷೇತ್ರದ ಪ್ರತಿನಿಧಿತ್ವವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬುಧವಾರ ಧಾರೆ ಎರೆದರು. ಈ ಸಂದರ್ಭ ಪ್ರಜ್ವಲ್ ಅವರ ತಂದೆ ಹೆಚ್.ಡಿ.ರೇವಣ್ಣ, ತಾಯಿ ಭವಾನಿ, ಸಂಬಂಧಿಯಾದ ಚನ್ನರಾಯಪಟ್ಟಣ ಶಾಸಕ ಬಾಲಕೃಷ್ಣ ಅವರೂ ಕಣ್ಣೀರು ಸುರಿಸಿದರು. ಹಾಸನ ಲೋಕಸಭಾ ಕ್ಷೇತ್ರದಿಂದ ನಾನು ಸ್ಪರ್ಧಿಸಲ್ಲ ಎಂದು ಈ ಮೊದಲೇ ಹೇಳಿದ್ದ ಹೆಚ್.ಡಿ.ದೇವೇಗೌಡ ಇಲ್ಲಿಂದ ಮೊಮ್ಮಗ ಪ್ರಜ್ವಲ್ ರೇವಣ್ಣ ಸ್ಪರ್ಧೆಗೆ ಹಸಿರು ನಿಶಾನೆ ತೋರಿದರು….
ಲೋಕಸಭೆ ಚುನಾವಣೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
March 12, 2019ಮಾರ್ಚ್.10 ರಿಂದ ಮೇ. 27ರವರೆಗೂ ನೀತಿ ಸಂಹಿತೆ ಚಾಲ್ತಿಯಲ್ಲಿ: ಜಿಲ್ಲಾಧಿಕಾರಿ ಅಕ್ರಂ ಪಾಷ ಹಾಸನ: ಜಿಲ್ಲಾಡಳಿತ ಲೋಕ ಸಭೆ ಚುನಾವಣೆಯ ಸಕಲ ಸಿದ್ಧತೆಯನ್ನು ಕೈಗೊಂಡಿದ್ದು, ನೀತಿ ಸಂಹಿತೆ ಈಗಾಗಲೇ ಜಾರಿಯಾಗಿ ಮೇ. 27ರ ವರೆಗೂ ಚಾಲ್ತಿ ಯಲ್ಲಿ ಇರುತ್ತದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ತಿಳಿಸಿದರು. ಜಿಲ್ಲಾ ಪಂಚಾಯತ್ ಹೇಮಾವತಿ ಹೊಯ್ಸಳ ಸಭಾಂಗಣದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿ, ಲೋಕಸಭೆ ಚುನಾವಣೆಯ ಸಿದ್ಧತೆ ಬಗ್ಗೆ ವಿವರಿಸಿದ ಅವರು, ಲೋಕಸಭಾ ಕ್ಷೇತ್ರದಲ್ಲಿ 16.30 ಲಕ್ಷ ಮತದಾರರು ಮತದಾನಕ್ಕೆ ಅರ್ಹರಾ ಗಿದ್ದು,…
ದೇವೇಗೌಡರಿಗೆ ನಾನು, ಹನುಮೇಗೌಡರು ರಾಜಕೀಯ ಪುನರ್‍ಜನ್ಮ ನೀಡಿದ್ದೆವು
March 12, 2019ಮೊಮ್ಮಗನಿಗೆ ಅಭ್ಯರ್ಥಿ ಪಟ್ಟ ಕೈಬಿಟ್ಟು ನಮ್ಮಂತವರಿಗೆ ಆಶೀರ್ವದಿಸಲಿ: ಮಾಜಿ ಸಚಿವ ಎ.ಮಂಜು ಹಾಸನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ರಿಗೆ ರಾಜಕೀಯದಲ್ಲಿ ಪುನರ್ ಜನ್ಮ ಕೊಟ್ಟವರು ನಾನು ಮತ್ತು ಹನುಮೇಗೌಡರು ಎಂಬುದನ್ನು ಮರೆತು ಈಗ ತಮ್ಮ ಮೊಮ್ಮಗನಿಗೆ ಲೋಕಸಭೆ ಚುನಾವಣೆ ಅಭ್ಯರ್ಥಿ ಪಟ್ಟ ಕಟ್ಟುತ್ತಿದ್ದು, ಕೂಡಲೇ ಕೈಬಿಟ್ಟು ನಮ್ಮಂತವರಿಗೆ ಆಶೀರ್ವದಿಸಲಿ ಎಂದು ಮಾಜಿ ಸಚಿವ ಎ.ಮಂಜು ಹಳೆಯ ನೆನಪನ್ನು ನೆನಪಿಸಿದರು. ನಗರದ ದೇವಿಗೆರೆ ಬಳಿ ಇರುವ ನೀರು ಬಾಗಿಲು ಶ್ರೀ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ…
ಜನ ಕ್ರಾಂತಿಗೆ ಸಜ್ಜಾಗುವಂತೆ ಎಸಿ ಡಾ.ಹೆಚ್.ಎಲ್.ನಾಗರಾಜ್ ಕರೆ
March 12, 2019ಹಾಸನ: ಕೆರೆ, ಕಟ್ಟೆ, ಕಲ್ಯಾಣಿ ಗಳ ಪುನಶ್ಚೇತನ, ವ್ಯಾಪಕ ಹಸಿರೀಕರಣ ಹಾಗೂ ನೀರಿನ ಮಿತ ಬಳಕೆಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯಾ ದ್ಯಂತ ಸರ್ಕಾರಿ ಶಕ್ತಿ ಹಾಗೂ ಜನಶಕ್ತಿ ಯನ್ನು ಒಟ್ಟುಗೂಡಿಸಿ ಜನಾಂದೋಲನ ವನ್ನು ರೂಪಿಸಲು ರಾಜ್ಯ ಸರ್ಕಾರ ನಿರ್ಧ ರಿಸಿದ್ದು, ‘ಜಲಾಮೃತ’ ಹೆಸರಿನ ಈ ಯೋಜನೆಗೆ ರಾಜ್ಯ ಸರ್ಕಾರ 500 ಕೋಟಿ ರೂ.ಗಳನ್ನು ತೆಗೆದಿರಿಸಿದ್ದು, ಹಾಸನ ಜಿಲ್ಲೆಯ ಜನರು ಜಲಕ್ರಾಂತಿಗೆ ಸಜ್ಜಾಗಬೇಕೆಂದು ಉಪ ವಿಭಾಗಾಧಿಕಾರಿ ಹಾಗೂ ಹಸಿರುಭೂಮಿ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ.ಹೆಚ್. ಎಲ್.ನಾಗರಾಜ್ ಕರೆ…
ರೋಗಿ ಕಡೆಯವರಿಂದ ‘ಡಿ’ ಗ್ರೂಪ್ ನೌಕರನ ಮೇಲೆ ಹಲ್ಲೆ ಆಸ್ಪತ್ರೆ ಸಿಬ್ಬಂದಿಯಿಂದ ಪ್ರತಿಭಟನೆ
March 12, 2019ಬೇಲೂರು: ಸರ್ಕಾರಿ ಆಸ್ಪತ್ರೆ ಯಲ್ಲಿ ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುವ ನೌಕರರ ಮೇಲೆ ದೌರ್ಜನ್ಯ ನಡೆಸುವವರ ವಿರುದ್ಧ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿ ಅಲ್ಲಿನ ನೌಕರ ವರ್ಗದವರು ಕರ್ತವ್ಯ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಬೇಲೂರು ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ‘ಡಿ’ ಗ್ರೂಪ್ ನೌಕರರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಇಂದು ಬೆಳಿಗ್ಗೆ ಸರ್ಕಾರಿ ಆಸ್ಪತ್ರೆ ಮುಂಭಾಗ ವೈದ್ಯಾಧಿ ಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಕರ್ತವ್ಯ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭ ‘ಡಿ’ ಗ್ರೂಪ್…
ನಗರದ ವಿವಿಧೆಡೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
March 10, 2019ಹಾಸನ: ನಗರದ ವಿವಿಧೆಡೆಗೆ ಶನಿವಾರ ಜಿಲ್ಲಾಧಿಕಾರಿ ಅಕ್ರಂಪಾಷ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ನಗರದ ಜಿಲ್ಲಾ ಆಸ್ಪತ್ರೆ ಎದುರಿರುವ ಇಂದಿರಾ ಕ್ಯಾಂಟೀನ್‍ಗೆ ದಿಢೀರ್ ಭೇಟಿ ನೀಡಿದ ಅವರು, ಕ್ಯಾಂಟೀನ್ ವ್ಯವಸ್ಥೆ, ಆಹಾರ ಪೂರೈಕೆ, ಸ್ವಚ್ಛತೆ ಹಾಗೂ ಆಹಾರ ಗುಣಮಟ್ಟ ಪರಿಶೀಲಿಸಿದರು. ಬೆಳಿಗಿನ ಉಪಹಾರವಾದ ಇಡ್ಲಿ ಮತ್ತು ಪಲಾವ್ ಸವಿದು, ಗುಣಮಟ್ಟವನ್ನು ಕಾಪಾಡಿಕೊಳ್ಳುವಂತೆ ಸೂಚನೆ ನೀಡಿ ದರು. ಸಾರ್ವಜನಿಕರೊಂದಿಗೆ ಸಮಾ ಲೋಚನೆ ನಡೆಸಿದ ಜಿಲ್ಲಾಧಿಕಾರಿ, ಸಾರ್ವ ಜನಿಕರಿಂದ ಅಭಿಪ್ರಾಯ ಪಡೆದು ಕೊಂಡು ಯಾವುದೇ ಲೋಪ ಇದ್ದಲ್ಲಿ ತಿಳಿಸಬೇಕು…
ಹಲ್ಮಿಡಿ ಗ್ರಾಮದ ಅಭಿವೃದ್ಧಿಗೆ ಒತ್ತಾಯ
March 10, 2019ಬೇಲೂರು: ಕನ್ನಡದ ಪ್ರಥಮ ಶಿಲಾಶಾಸನ ಸಿಕ್ಕಿದಂತಹ ಹಲ್ಮಿಡಿ ಗ್ರಾಮ ವನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ನಿತ್ಯೋತ್ಸವ ಕವಿ ಡಾ.ಕೆ.ಎಸ್.ನಿಸಾರ್ ಅಹ್ಮದ್ ಹೇಳಿದರು. ಸಮೀಪದ ಹಲ್ಮಿಡಿ ಗ್ರಾಮಕ್ಕೆ ಭೇಟಿ ನೀಡಿ ಶಿಲಾಶಾಸನಕ್ಕೆ ನಮಸ್ಕರಿಸಿ ಮಾತ ನಾಡಿದ ಅವರು, ಹಿಂದಿನ ಕಸಾಪ ಅಧ್ಯಕ್ಷ ಹೆಚ್.ಬಿ.ಮದನ್ ಹಾಗೂ ವಿನ್ಯಾಸಕ, ಖ್ಯಾತ ಸಂಶೋಧನಾ ಸಾಹಿತಿ ಡಾ.ಶ್ರೀವತ್ಸ ಎಸ್.ವಟಿ ಅವರ ಶ್ರಮದಿಂದ ಗ್ರಾಮದಲ್ಲಿ ಹಲ್ಮಿಡಿ ಶಾಸನ ಮಂಟಪ ನಿರ್ಮಾಣ ವಾಗಿದೆ. ಇದು ದೇಶಕ್ಕೆ ಒಂದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ, ಪ್ರಸ್ತುತದ…
ಲೋಕಸಭಾ ಚುನಾವಣೆ: ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ
March 10, 20196,000 ಯುವ ಮತದಾರರು 8,000 ವಿಕಲಚೇತನ ಮತದಾರರ ನೋಂದಣಿ ಬಾಕಿ ಜಿಲ್ಲೆಯಲ್ಲಿ 20 ಕಡೆ ಚೆಕ್‍ಪೋಸ್ಟ್ ಸ್ಥಾಪನೆ ಹಾಸನ: ಮುಂಬರುವ ಲೋಕಸಭಾ ಚುನಾವಣೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸಬೇಕಾಗಿದ್ದು ಇಡೀ ಜಿಲ್ಲಾಡಳಿತ ಒಂದು ತಂಡವಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಇದಕ್ಕಾಗಿ ಅಧಿಕಾರಿಗಳು ವ್ಯವಸ್ಥಿತ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಮತದಾರರ ನೋಂದಣಿ ಮತ್ತು ಜಾಗೃತಿ ಚಟುವಟಿಕೆಗಳನ್ನು ಚುರುಕು ಗೊಳಿಸುವುದು ಹಾಗೂ ಮತಗಟ್ಟೆಗಳ ಸುಸ್ಥಿತಿ ಸೇರಿದಂತೆ ಪರಿಶೀಲನೆ ಚುನಾವಣೆ ಪೂರ್ವ…
ಯುವ ಮತದಾರರ ನೋಂದಣಿ, ಮತದಾರರ ಜಾಗೃತಿ ಅಭಿಯಾನ ಮತದಾನ ಮಾಡಿ, ಮತದಾನಕ್ಕೆ ಪ್ರೇರೇಪಿಸಿ: ಡಿಸಿ
March 7, 2019ಹಾಸನ: ಪ್ರತಿಯೊಬ್ಬರೂ ಮತದಾನ ಮಾಡಿ, ಮತದಾನಕ್ಕೆ ಪ್ರೇರೇ ಪಿಸಬೇಕು. ಈ ಮೂಲಕ ರಾಜ್ಯದಲ್ಲಿಯೇ ಜಿಲ್ಲೆಯು ಮುಂಬರುವ ಲೋಕಸಭಾ ಚುನಾವಣೆ ಅತಿಹೆಚ್ಚು ಮತದಾನವಾದ ಜಿಲ್ಲೆಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನಕ್ಕೆ ಬರುವಂತೆ ಎಲ್ಲರೂ ಸಹಕರಿಸಿ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಕ್ರಂಪಾಷ ಹೇಳಿದರು. ನಗರದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸ್ವೀಪ್ ಸಮಿತಿಯಿಂದ ಆಯೋಜಿಸಿದ್ದ ಯುವ ಮತದಾರರ ನೋಂದಣಿ ಹಾಗೂ ಮತದಾರರ ಜಾಗೃತಿ ಅಭಿಯಾನ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿರುವ…
ಅಭಿನಂದನ್ ಎಲ್ಲರಿಗೂ ಸ್ಫೂರ್ತಿ: ರವೀಂದ್ರಮುನಿ
March 7, 2019ಅರಸೀಕೆರೆ: ಭಾರತೀಯ ವಾಯು ಸೈನ್ಯದ ವಿಂಗ್ ಕಮಾಂಡರ್ ಅಭಿನಂದನ್ ಎಲ್ಲರಿಗೂ ಸ್ಫೂರ್ತಿಯಾಗಿ ದ್ದಾರೆ ಎಂದು ಜೈನ್ ಸಮುದಾಯದ ಗುರುಗಳಾದ ರವೀಂದ್ರಮುನಿ ಹೇಳಿದರು. ನಗರದ ಪೇಟೆ ಬೀದಿಯಲ್ಲಿರುವ ಜೈನ್ ಸ್ಥಾನಿಕ್‍ನಲ್ಲಿ ಸಮಾಜದಿಂದ ನಡೆದ ಅಭಿ ನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಹಿಂಸವಾದಿ ಜೈನ ಧರ್ಮದಲ್ಲಿ ಹುಟ್ಟಿ ಬೆಳೆÀದ ಅಭಿನಂದನ್ ಇಂದು ಎಲ್ಲರಿಗೂ ಮಾದರಿಯಾಗಿ ಭಾರತಾಂಬೆÉಯ ಹೆಮ್ಮೆಯ ಪುತ್ರರಾಗಿದ್ದಾರೆ ಎಂದು ತಿಳಿಸಿದರು. ಗುರುಗಳಾದ ರಮಣೀಕ ಮುನಿ ಮಾತ ನಾಡಿ, ಇಂದಿನ ದಿನಗಳಲ್ಲಿ ಧಾರ್ಮಿಕ ಜೀವನದಲ್ಲಿ ಎಲ್ಲರೂ ಆಸಕ್ತಿ ತೋರಿಸದೇ ಬೋಗದ…